ಸ್ವಾಮಿ ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ, ಉಡುಪಿ : ಕೊರಗಜ್ಜನ ನೇಮೋತ್ಸವ
ಉಡುಪಿ : ಉಡುಪಿಯ ಕುಕ್ಕೆಹಳ್ಳಿ ಸ್ವಾಮಿ ಕೊರಗಜ್ಜ ದೇವಸ್ಥಾನದಲ್ಲಿ ಸ್ವಾಮಿ ಕೊರಗಜ್ಜನ ನೇಮೋತ್ಸವವು ಮಾರ್ಚ್ 27, ಶನಿವಾರದಂದು ರಾತ್ರಿ 9ಕ್ಕೆ ಸರಿಯಾಗಿ ನಡೆಯಲಿದೆ.
ಸಂಜೆ 6 ರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಸ್ವರ ನಿನಾದ ಬಿರುದಾಂಕಿತ ಪಾಂಡುರಂಗ ಎಸ್. ಪಡ್ಡಾಂ ಮತ್ತು ಕಲರ್ಸ್ ಕನ್ನಡದ ಮಜಾ ಟಾಕಿಸಿನ ವಿಭಿನ್ನ ಶೈಲಿಯ ಖ್ಯಾತ ಗಾಯಕ ಚಂದ್ರಕಾಂತ ಭಟ್, ಪಡುಬಿದ್ರಿ ಭಾಗವಹಿಸಲಿದ್ದಾರೆ.
ಸಂಜೆ 6ರಿಂದ 9ರವರೆಗೆ ಅನ್ನಸಂತರ್ಪಣೆಯೂ ನಡೆಯಲಿದೆ.
ಮಾರ್ಚ್ 30, ಮಂಗಳವಾರದಂದು ಸಂಜೆ 7 ಕ್ಕೆ ಹರಕೆಯ ಅಗೇಲು ಸೇವೆಯು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
