ಪಡುಬಿದ್ರಿಯ ಶ್ರಾವ್ಯ ಗುರುರಾಜ್ ಪೂಜಾರಿ 2ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕಾಪು : ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಎರಡನೇ ಬಾರಿ ರಾಷ್ಟ್ರಮಟ್ಟಕ್ಕೆ ಪಡುಬಿದ್ರಿಯ ಶ್ರಾವ್ಯ ಗುರುರಾಜ್ ಆಯ್ಕೆಯಾಗಿರುತ್ತಾರೆ.
ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಆಡಲಿದ್ದಾರೆ. ಪಡುಬಿದ್ರಿಯ ಗುರುರಾಜ್ ಪೂಜಾರಿ ಹಾಗೂ ನೀತಾಗುರುರಾಜ್ ಪೂಜಾರಿ ಇವರ ಪುತ್ರಿ.
ಮುಖೇಶ್ ಇವರಿಂದ ಕ್ರೀಡಾ ತರಬೇತಿ ಪಡೆದಿದ್ದು, ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ದ್ವಿತೀಯ ಬಿ. ಕಾಂ ವಿದ್ಯಾರ್ಥಿನಿಯಾಗಿದ್ದಾರೆ.
