ಶಂಕರಪುರ : ಸ್ವಯಂಪ್ರೇರಿತ ರಕ್ತದಾನ ಶಿಬಿರ
Thumbnail
ಕಾಪು, ಮಾ.28 : ಸ್ವಾಸ್ಥ್ಯ ಆಯೋಗ ( ಹೆಲ್ತ್ ಕಮಿಷನ್) ಶಂಕರಪುರ ಚಚ್೯, ಕೆಥೊಲಿಕ್ ಸಭಾ ಶಂಕರ ಪುರ ಚರ್ಚ್ ಘಟಕ, ಐಸಿವೈಎಮ್ ಶಂಕರಪುರ ಚಚ್೯ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಮಣಿಪಾಲ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಶಂಕರಪುರದ ಚಚ್೯ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಿತು. ಶಂಕರಪುರ ಚರ್ಚಿನ ಧರ್ಮಗುರುಗಳಾದ ವಂದನೀಯ ರೆ ವ ಫಾದರ್ ಫರ್ಡಿನಾಂಡ್ ಗೊನ್ಸಾಲಿಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಶಾಕ ಜಿ.ಶೆಟ್ಟಿ, ಜೆರಿ ರೊಡ್ರಿಗಸ್, ಡಾ. ಫಾತಿಮ, ಜೋನ್ ರೊಡ್ರಿಗಸ್ ಅನಿತ ಡಿಸೋಜ, ಗ್ರೆಗೋರಿ ಡಿಸೋಜ ,ಮಾರ್ಗರೆಟ್ ಸಿಮಾ ಡಿಸೋಜ , ರಾಕೇಶ್ ಫೆರ್ನಾಂಡಿಸ್, ಮುಂತಾದವರು ಉಪಸ್ಥಿತರಿದ್ದರು. 55 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಡೊಮಿಯನ್ ನೊರೊನ್ನಾ ಕಾರ್ಯಕ್ರಮ ನಿರ್ವಹಿಸಿದರು.
Additional image Additional image Additional image
28 Mar 2021, 05:13 PM
Category: Kaup
Tags: