ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ನಿತ್ಯ - ನಿರಂತರವಾಗಿ ಶಿಲಾಸೇವೆ ನೀಡಲು ಅವಕಾಶ
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಉಪ ಸಮಿತಿಯಾದ ಆರ್ಥಿಕ ಸಮಿತಿಯಲ್ಲಿ 9 ತಂಡಗಳಿದ್ದು ಒಂಬತ್ತು ತಂಡಗಳಲ್ಲಿ ಒಂದಾದ ಶೈಲಪುತ್ರಿ ತಂಡವು ಇಂದಿನಿಂದ ಒಂದು ವಾರದವರೆಗೆ ಕಾರ್ಯಚರಿಸಲಿದ್ದು ಶಿಲಾಸೇವಾ ಕೌಂಟರ್ ಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶ್ರೀ ರಮೇಶ್ ಹೆಗ್ಡೆ ಕಲ್ಯಾ ಹಾಗೂ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ಶ್ರೀ ವಿದ್ಯಾಧರ ಪುರಾಣಿಕ್ ಉಪಸ್ಥಿತರಿದ್ದರು.
ಇಂದಿನಿಂದ ಶಿಲಾಸೇವಾ ಕೌಂಟರ್ ನಲ್ಲಿ ಕಾರ್ಯ ನಿರ್ವಹಿಸಲಿರುವ ತಂಡಗಳ ವಿವರ ಇಂತಿದೆ
(ಸಮಯ ಪೂರ್ವಾಹ್ನ ಗಂಟೆ 09:00 ರಿಂದ ಅಪರಾಹ್ನ ಗಂಟೆ 07:00ರ ವರೆಗೆ)
01-04-2021 : 06-04-2021 ಶೈಲಪುತ್ರಿ
07-04-2021 : 13-04-2021 ಬ್ರಹ್ಮಚಾರಿಣಿ
14-04-2021 : 20-04-2021 ಚಂದ್ರಘಂಟಾ
21-04-2021 : 27-04-2021 ಕುಷ್ಮಾಂಡ
28-04-2021 : 04-05-2021 ಸ್ಕಂದಮಾತಾ
05-05-2021 : 11-05-2021 ಕತ್ಯಾಯಿನಿ
12-05-2021 : 18-05-2021 ಕಾಲರಾತ್ರಿ
19-05-2021 : 25-05-2021 ಮಹಾಗೌರಿ
26-05-2021 : 01-06-2021 ಸಿದ್ದಿದಾತ್ರಿ
ಪ್ರತಿ ದಿನವೂ ಭಕ್ತರಿಗಾಗಿ ಆರ್ಥಿಕ ಸಮಿತಿಯ ಸೇವಾ ಕೌಂಟರ್ ತೆರೆದಿರುವುದರಿಂದ ಭಕ್ತರು ನಿತ್ಯ ನಿರಂತರವಾಗಿ ಶಿಲಾ ಸೇವೆಯನ್ನು ನೀಡಲು ಕ್ಷೇತ್ರಕ್ಕೆ ಬರಬಹುದು ದೇವಳದ ಅಭಿವೃದ್ಧಿ ಕಾರ್ಯದ ಆರ್ಥಿಕ ಕ್ರೋಡಿಕರಣಕ್ಕೆ ವಾರಕ್ಕೊಂದು ತಂಡವು ದೇವಸ್ಥಾನದ ಮುಂಭಾಗದಲ್ಲಿರುವ ಕೌಂಟರ್ ನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
