ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲು ವಾಹನಗಳ ಗುಪ್ತ ಸರ್ವೆ : ಸಾರ್ವಜನಿಕರಿಂದ ಆಕ್ರೋಶ
ಕಾಪು : ಪಡುಬಿದ್ರಿ ಸಮೀಪದ ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಸಮೀಪ ಟೋಲ್ ಗೇಟ್ ನಿರ್ಮಾಣ ಮಾಡಲು ವಾಹನಗಳ ಸರ್ವೆ ಮಾಡುತ್ತಿದ್ದ ತಂಡವೊಂದನ್ನು ಸಾರ್ವಜನಿಕರು ತಡೆದ ಘಟನೆ ನಡೆದಿದೆ.
ಗುಪ್ತವಾಗಿ ವಾಹನಗಳ ಸರ್ವೆ ನಡೆಸುತ್ತಿದ್ದ ತಂಡದ ಬಗ್ಗೆ ಸಂಶಯಗೊಂಡ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಅವರನ್ನು ವಿಚಾರಿಸಿದಾಗ ಸತ್ಯ ವಿಚಾರ ಬಾಯ್ಬಿಟ್ಟಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸರು ತಂಡವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರಾಜ್ಯ ಹೆದ್ದಾರಿಯ ಟೋಲ್ಗೇಟ್ ನಿರ್ಮಾಣದ ಬಗ್ಗೆ ಮತ್ತು ಗುಪ್ತವಾಗಿ ಸರ್ವೆ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
