ಕಾಪು : ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏಪ್ರಿಲ್ 4 ರಂದು ಬಲೆ ತುಲು ಲಿಪಿ ಕಲ್ಪುಗ ಶಿಬಿರ
ಕಾಪು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.), ಜೇಸಿಐ ಕಾಪು, ಯುವವಾಹಿನಿ (ರಿ.) ಕಾಪು ಘಟಕ, ನಮ್ಮ ಕಾಪು ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ ಬಲೆ ತುಲು ಲಿಪಿ ಕಲ್ಪುಗ ಶಿಬಿರವು ಏಪ್ರಿಲ್ 4, ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕಾಪು ಸಿ.ಎ ಬ್ಯಾಂಕ್ ಕನ್ನಡ ಭಾಸ್ಕರ ಸೌಧ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮವನ್ನು ಕಾಪು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಕಾಪು ಇದರ ಅಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಆಕಾಶ್ ರಾಜ್ ಜೈನ್ ಮತ್ತು ತಾರಾ ಉಮೇಶ್ ಆಚಾರ್ಯ, ಜೇಸಿಐ ವಲಯ 15ರ ಉಪಾಧ್ಯಕ್ಷರಾದ ಜೇಸಿ ಗಿರೀಶ್ ಎಸ್. ಪಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು ಭಾಗವಹಿಸಲಿದ್ದಾರೆ.
ತುಳು ಶಿಕ್ಷಕರಾದ ರಾಜೇಶ್ ತುಳುವೆ, ಅಕ್ಷತಾ ಕುಲಾಲ್, ಪೂರ್ಣಿಮಾ ದಕ್ಷ, ನೀತಾ ಕೆಮ್ತೂರು ಮಾರ್ಗದರ್ಶನದಲ್ಲಿ ಏಪ್ರಿಲ್ ತಿಂಗಳ ಪ್ರತಿ ಆದಿತ್ಯವಾರದಂದು ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ತರಗತಿಗಳು ನಡೆಯಲಿದ್ದು, ವಾರದ ನಿರ್ಧಿಷ್ಟ ದಿನಗಳಲ್ಲಿ ಆನ್ಲೈನ್ ಮೂಲಕ ಪುನರಾವಲೋಕನ ನಡೆಯಲಿದೆ. ಶಿಬಿರದಲ್ಲಿ ಪಾಲ್ಗೊಂಡು ತೇರ್ಗಡೆಯಾದವರಿಗೆ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸರ್ಟಿಫಿಕೆಟ್ ನೀಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9448501172
