ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾದ ಸೆನ್ ಅಪರಾಧ ಪೋಲಿಸ್ ಠಾಣೆ ಉಡುಪಿಯ ರಾಮಚಂದ್ರ ನಾಯಕ್
Thumbnail
ಕಾಪು : ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆ ಉಡುಪಿಯ ಪೊಲೀಸ್ ನಿರೀಕ್ಷಕರಾಗಿರುವ ರಾಮಚಂದ್ರ ನಾಯಕ್ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾಗಿದ್ದಾರೆ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಹಲವಾರು ಅಪರಾಧ ಕೃತ್ಯಗಳನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಹೆಗ್ಗಳಿಕೆ ಇವರದು. ಬ್ರಹ್ಮಾವರ ತಾಲೂಕಿನ ಬಾರಕೂರಿನ ನಿವಾಸಿಯಾಗಿರುವ ಇವರು 1993 ಕೆಲಸಕ್ಕೆ ಸೇರಿ, 2003ರಲ್ಲಿ ಪೊಲೀಸ್ ಉಪ ನಿರೀಕ್ಷಕರಾಗಿ, 2011ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಶಿವಮೊಗ್ಗ, ಮೂಡಬಿದ್ರೆ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಮತ್ತು ಕಾರವಾರ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ.
Additional image
02 Apr 2021, 04:43 PM
Category: Kaup
Tags: