ಕಾಪು : ಸೂರಜ್ ಮತ್ತು ವಿವೇಕ್ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ ತರಬೇತಿಗೆ ಆಯ್ಕೆ
ಕಾಪು : ಭಾರತೀಯ ಸಿ ಆರ್ ಪಿ ಎಫ್ (ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್) ತರಬೇತಿಗೆ ಕಾಪುವಿನ ಯುವಕರಾದ ಸೂರಜ್ ಮತ್ತು ವಿವೇಕ್ ಆಯ್ಕೆಯಾಗಿ, ತರಬೇತಿಗೆ ತೆರಳಿರುತ್ತಾರೆ.
ಕಾಪು ತಾಲೂಕಿನ ಮಲ್ಲಾರ್ ನಿವಾಸಿ ರಾಧಾಕೃಷ್ಣ ಮತ್ತು ಜಯಂತಿಯವರ ಮಗ ಸೂರಜ್ ಹಾಗೂ ಕಳತ್ತೂರಿನ ಜಯರಾಮ್ ರಾವ್ ಮತ್ತು ಲೀಲಾವತಿಯವರ ಪುತ್ರ ವಿವೇಕ್ ಭಾರತ ಮಾತೆಯ ಸೇವೆ ಮಾಡಲು ಆಯ್ಕೆಯಾಗಿರುವುದು ಹೆತ್ತವರು ಮತ್ತು ಊರಿನವರಿಗೆ ಸಂತಸ ತಂದಿದೆ.
