ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಬಾವ ಚಿತ್ರ ದೊಂದಿಗೆ ಅಸಂವಿಧಾನಾತ್ಮಕ ಪದ ಬಳಸಿ ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಂಖ್ಯಾತ ಬಿಲ್ಲವ ಸಮಾಜದ ಅವರ ಅನುಯಾಯಿಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ವಿಷಯವಾಗಿ ಕುಂಭಾಶಿಯ ಪತ್ರಿಕಾ ಸಂಪಾದಕರೋರ್ವರ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ-ಕರ್ನಾಟಕದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ. ಮಹಾಲಕ್ಷ್ಮಿ ಲೇಔಟ್ ಬೆಂಗಳೂರು ಅಧ್ಯಕ್ಷರಾದ ಎಸ್. ಮುರಳಿ ಬೆಂಗಳೂರಿನ ಬಸವೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾರಾಯಣಗುರುಗಳು ಒಂದೇ ಜಾತಿ, ಒಂದೇ ಮತ, ದೇವರೊಬ್ಬನೇ ಅನ್ನೋ ತತ್ವ ಸಿದ್ಧಾಂತ ಪ್ರತಿಪಾದಕರಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಅವರ ಜೀವಿತಾವಧಿಯಲ್ಲಿ ಸಮಾಜದಲ್ಲಿದ್ದ ಮೇಲು ಕೀಳೆಂಬ ಜಾತಿ ಪದ್ಧತಿ ವಿರುದ್ಧ ಹೋರಾಡಿ,ಜನಜಾಗ್ರತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತಂದ ಮಹಾನ್ ಚೇತನರಾಗಿದ್ದಾರೆ. ಅವರ ಗೌರವಾರ್ಥವಾಗಿ ಕೇರಳ ರಾಜ್ಯ ಸರಕಾರ ಅಗೋಸ್ಟ್ 23ರಂದು ನಾರಾಯಣ ಗುರುಗಳ ಜಯಂತಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿ ಸರಕಾರಿ ಮಟ್ಟದಲ್ಲಿ ಗೌರವ ಸೂಚಿಸಿದೆ. ಅಲ್ಲದೇ ಕರ್ನಾಟಕ ಸರಕಾರ ಸಹ ಸೆಪ್ಟೆಂಬರ್ 16ರಂದು ನಾರಾಯಣಗುರು ಜಯಂತಿಯನ್ನು ಸರಕಾರಿ ಮಟ್ಟದಲ್ಲಿ ಆಚರಣೆಯನ್ನು ಮಾಡುವುದರ ಮೂಲಕ ಅವರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಿದೆ.
ಭಾರತ ದೇಶದಾದ್ಯಂತ ಅವರ ತತ್ವ ಆದರ್ಶವನ್ನು ಒಪ್ಪಿ ಬಿಲ್ಲವ ಸಮುದಾಯ ಅವರಿಗೆ ದೇವಸ್ಥಾನ ನಿರ್ಮಿಸಿ ದಿನನಿತ್ಯ ಪೂಜೆ ಸಲ್ಲಿಸುವ ಮೂಲಕ ಅವರನ್ನು ಗೌರವಿಸಲಾಗುತ್ತಿದೆ ಅಂತಹ ಮಹಾನ್ ಸುಧಾರಕರ ಭಾವಚಿತ್ರದೊಂದಿಗೆ ಓರ್ವ ಪ್ರಜ್ಞಾವಂತ ಪತ್ರ ಕರ್ತ ಅಸಭ್ಯ ಭಾಷೆ ಬಳಸಿ ಗುರು ಜಯಂತಿಗೆ ಫೇಸ್ ಬುಕ್ ಸಾಮಾಜಿಕ ಜಾಲ ತಾಣದಲ್ಲಿ ಸಾರ್ವಜನಿಕವಾಗಿ ಪೋಸ್ಟ್ ಹಾಕಿದ್ದು ಖಂಡಿಸುತ್ತೇವೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.