ಕಾಪು : ಶಿರ್ವದ ಹಿಂದೂ ಜೂನಿಯರ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದಿಂದ ಸತತ ಏಳನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ 8ನೆ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಸಮವಸ್ತ್ರ ವಿತರಿಸುವ ಸಲುವಾಗಿ ರೂಪಾಯಿ 50 ಸಾವಿರ ವನ್ನು ಮುಖ್ಯೋಪಾಧ್ಯಾಯಿನಿ ವಸಂತಿ ಬಾಯಿಯವರಿಗೆ ಹಸ್ತಾ0ತರಿಸಲಾಯಿತು.
ಪಿಯುಸಿಯಲ್ಲಿ ಕಲಿಯುತ್ತಿರುವ ಆಯ್ದ ವಿದ್ಯಾರ್ಥಿ ಗಳಿಗೆ ಸುಮಾರು 2.00 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಳೆದ ಸಾಲಿನ ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿರುವ ನಮ್ಮ ಶಾಲಾ ವಿದ್ಯಾರ್ಥಿನಿ ಕು.ಶ್ರಾವ್ಯ ಸಹಿತ 90℅ ಕ್ಕಿಂತ ಹೆಚ್ಚು ಗರಿಷ್ಠ ಅಂಕ ಗಳಿಸಿದ 10ನೇ ತರಗತಿ ಹಾಗೂ ಪಿ.ಯು.ಸಿ ಯ ಎಲ್ಲಾ ಮೂರು ವಿಭಾಗಗಳ ತಲಾ 3 ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಪ್ರೌಢಶಾಲೆಯಲ್ಲಿ ಸುಧೀರ್ಘ 35 ವರ್ಷಗಳ ಸೇವೆಯನ್ನು ಸಲ್ಲಿಸಿ ಈ ವರ್ಷ ನಿವೃತ್ತರಾಗಿರುವ ಶಕಿಲ ಟೀಚರ್ ಅವರಿಗೆ ಸನ್ಮಾನದ ಗೌರವವನ್ನು ಸಲ್ಲಿಸಲಾಯಿತು.
ನಿತ್ಯಾನಂದ ಹೆಗ್ಡೆ, ಪ್ರೊ. ವೈ.ಭಾಸ್ಕರ್ ಶೆಟ್ಟಿ
ಅಂಬರೀಷ್ ರಾವ್ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ,ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಪ್ರಸ್ತುತ ಬ್ಯಾ0ಕ್ ಅಧಿಕಾರಿಯಾಗಿರುವ ಹಳೆವಿದ್ಯಾರ್ಥಿ ಅಂಬರೀಷ್ ರಾವ್, ನಿವೃತ್ತ ಪ್ರಾಂಶುಪಾಲರೂ ಸಂಘದ ಮಾರ್ಗದರ್ಶಕರಾದ ರಾಜಗೋಪಾಲ್, ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಭಾಸ್ಕರ್, ಪೌಢಶಾಲಾ ಮುಖ್ಯೋಪಾಧ್ಯಾ ಯಿನಿ ವಸಂತಿ ಭಾಯಿ, ಸಂಘದ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಮತ್ತು ಅಧ್ಯಕ್ಷನಾಗಿ ಕುತ್ಯಾರು ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ನಿವೃತ್ತ ಅಧ್ಯಾಪಕರಾದ ಪ್ರಭಾಕರ್, ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ಗಂಗಾಧರ್ ಶೆಟ್ಟಿ ಪಿಲಾರು, ಸದಾನಂದ ಶೆಟ್ಟಿ ಕಳತ್ತೂರು, ಹಳೆವಿದ್ಯಾರ್ಥಿಗಳಾದ ವೀರೇಂದ್ರ ಶೆಟ್ಟಿ, ಸದಾನಂದ ಎಸ್, ನವೀನ್ ಶೆಟ್ಟಿ, ಉಮೇಶ್ ಆಚಾರ್ಯ, ಹರಿಣಾಕ್ಷ ಶೆಟ್ಟಿ, ಜಿನೇಶ್ ಬಲ್ಲಾಳ್, ರಾಜೇಶ್ ಶೆಟ್ಟಿ ಮತ್ತು ದೀಪಿಕಾ ಹೆಗ್ಡೆ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿ, ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ರಾಜಗೋಪಾಲ್ ಶುಭ ಹಾರೈಸಿ, ಲಕ್ಷ್ಮೀದೇವಿ ಮತ್ತು ಸುಪ್ರೀತ ಶೆಟ್ಟಿ ನಿರೂಪಿಸಿ, ಸದಾನಂದ ಎಸ್ ವಂದಿಸಿದರು.