ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮೂಡುಬೆಳ್ಳೆ : ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃ ಶಕ್ತಿ ಹಾಗೂ ದುರ್ಗವಾಹಿನಿ ಘಟಕದ ವತಿಯಿಂದ ವನಮಹೋತ್ಸವ, ಭಗವಧ್ವಜ ಸ್ಥಾಪನೆ

Posted On: 26-09-2021 09:14PM

ಕಾಪು : ವಿಶ್ವ ಹಿಂದೂ ಪರಿಷದ್, ಬಜರಂಗದಳ ಮತ್ತು ಮಾತೃ ಶಕ್ತಿ ಹಾಗೂ ದುರ್ಗವಾಹಿನಿ ಮೂಡುಬೆಳ್ಳೆ ಘಟಕ ವತಿಯಿಂದ ಕುಂತಳ ನಗರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಹಾಗೂ ಭಗವಧ್ವಜ ಸ್ಥಾಪಿಸಲಾಯಿತು.

ಈ ಸಂದರ್ಭದಲ್ಲಿ ಕಟ್ಟಿಂಗೇರಿ ದೇವಸ್ಥಾನದ ಧರ್ಮದರ್ಶಿಗಳಾದ ದೇವದಾಸ್ ಹೆಬ್ಬಾರ್ ಹಾಗೂ ಕಾಪು ತಾಲೂಕು ಕಾರ್ಯವಾಹ ಸಚಿನ್ ಶೆಟ್ಟಿ ವಿ.ಹಿಂ.ಪ ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು, ಕಾಪು ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ, ಶಿರ್ವ ವಿ.ಹಿಂ.ಪ ವಲಯ ಅಧ್ಯಕ್ಷರಾದ ವಿಖ್ಯಾತ್ ಭಟ್ ಮೂಡುಬೆಳ್ಳೆ ಹಾಗೂ ಬೆಳ್ಳೆ ಘಟಕದ ಅಧ್ಯಕ್ಷರಾದ ವಿಜೇತ್ ಭಟ್, ಸ್ಥಳೀಯ ಉದ್ಯಮಿ ಅಶೋಕ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.