ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿಯಲ್ಲಿ ಕೆಲಸ ಕಳೆದುಕೊಂಡು ಬಾಡಿಗೆ ಮನೆಯಲ್ಲಿರುವ ಕುಟುಂಬಕ್ಕೆ ನೆರವು

Posted On: 06-07-2020 10:41PM

ಉಡುಪಿ :- ಕೊರೋನಾ ಪ್ರಭಾವದಿಂದ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬನ್ನಂಜೆ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬವು ಸಹಾಯಕ್ಕಾಗಿ ಕರೋನಾ ವಾರಿಯರ್ಸ್ ಉಡುಪಿ ತಂಡವನ್ನು (21 ಭಾಷೆಗಳ ಅಡಿಯೋ ಕ್ಲಿಪ್ ಮೂಲಕ) ಸಂಪಕಿ೯ಸಿದ್ದರು.ತಂಡವು ವಿವಿಧ ದಾನಿಗಳ ಮೂಲಕ ಸಂಗ್ರಹಿಸಿದ ಸುಮಾರು 5 ಸಾವಿರ ರೂ ಮೌಲ್ಯದ ಜೀನಸಿ ಸಾಮಾಗ್ರಿ ಗಳನ್ನು ಅವರ ಮನೆಗೆ ಭೇಟಿ ನೀಡಿ ನೀಡಿತ್ತು.ಈ ಸಂದಭ೯ದಲ್ಲಿ ಸಂಯೋಜಕ ದೀಪಕ್ ಶೆಣ್ಯ್ ,ರಾಘವೇಂದ್ರ ಪ್ರಭು,ಕವಾ೯ಲು ಮುಂತಾದವರಿದ್ದರು.