ಉಡುಪಿಯ ಲಕ್ಷೀ ನಗರದ ಬಳಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಲಕ್ಷ್ಮೀ ನಗರ ಶಾಲೆಯ ಹಿಂಭಾಗದಲ್ಲಿ ಹತ್ಯೆಯಾದ ಯುವಕನ ಶವ ಪತ್ತೆಯಾಗಿದೆ.
ಕೊಲೆಯಾದ ಯುವಕ ಮಲ್ಪೆ ಮೀನುಗಾರಿಕೆ ಬೊಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯೋಗಿಶ್ ಎನ್ನುವವನಾಗಿದ್ದು.ಹಣಕಾಸಿನ ವಿಚಾರದಿಂದ ಕೊಲೆ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ರೌಡಿ ಶೀಟರ್ ವಕ್ವಾಡಿ ಪ್ರವೀಣ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಜೀತ್ ಪಿಂಟೋ ಈ ಯುವಕನ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಸುಜೀತ್ ಪಿಂಟೋ ಹಾಗೂ ಅತನ ಅಣ್ಣ ಬಡ್ಡಿ ವ್ಯವಹಾರ ನಡೆಸುತ್ತಿದ್ದು ,ಯೋಗಿಶನಿಗೆ ಹಣ ನೀಡಿದ್ದರು ಎನ್ನಲಾಗಿದೆ. ಹಣ ವಾಪಸ್ಸು ಕೇಳಲು ಇವರಿಬ್ಬರು ಸಂತೇಕಟ್ಟೆಯ ಬಾರ್ ಒಂದರಲ್ಲಿ ಕುಳಿತಿದ್ದ ಯೋಗಿಶನನ್ನು ಭೇಟಿಯಾಗಿದ್ದರು.ಅಲ್ಲಿ ಕೊಲೆಯಾದ ಯುವಕ ಹಾಗೂ ಸುಜಿತ್ ಪಿಂಟೋ ಗುಂಪು ಗಲಾಟೆ ನಡೆಸಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ.
ಬಳಿಕ ಲಕ್ಷ್ಮೀನಗರದ ಶಾಲೆ ಬಳಿ ಬಂದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಹತ್ಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.