Updated News From Kaup
ಹೆಜಮಾಡಿ ಗಡಿಭಾಗದಲ್ಲಿ ಸಿ.ಎಂ.ಗೆ ಸ್ವಾಗತ
Posted On: 28-10-2023 02:39PM
ಹೆಜಮಾಡಿ : ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿ ಚೆಕ್ ಪೋಸ್ಟ್ ಬಳಿ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಶನಿವಾರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸ್ವಾಗತಿಸಲಾಯಿತು.
ಕಾಪು : ಯುವ ನ್ಯಾಯವಾದಿ ನಾಗಾರ್ಜುನ ಕಾಪುರವರ ನೂತನ ಕಚೇರಿ ಉದ್ಘಾಟನೆ
Posted On: 26-10-2023 07:32PM
ಕಾಪು : ಇಲ್ಲಿನ ತೃಪ್ತಿ ಹೊಟೇಲ್ ನ ಜನಾರ್ಧನ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಯುವ ನ್ಯಾಯವಾದಿ ನಾಗಾರ್ಜುನ ಕಾಪು ತಮ್ಮ ನೂತನ ಕಚೇರಿಯನ್ನು ಆದಿತ್ಯವಾರದಂದು ಶುಭಾರಂಭಗೊಳಿಸಿದರು.
ಕಾಪು : ತಾಲೂಕಿನ 16 ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸಾ ಅಭಿಯಾನ
Posted On: 25-10-2023 07:48PM
ಕಾಪು : ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾಪು ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕಾಪು ಇವರುಗಳ ಜಂಟಿ ಆಶ್ರಯದಲ್ಲಿ ಗ್ರೀನ್ ಪುಟ್ ಪ್ರಿಂಟ್ ಸಂಸ್ಥೆ ಚಿಕ್ಕಮಗಳೂರು ಇವರ ನೇತ್ರತ್ವದಲ್ಲಿ ಕಾಪು ತಾಲೂಕಿನ ಎಲ್ಲಾ 16 ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸ್ಥಳೀಯ ಪಂಚಾಯತ್ ಗಳ ಅನುದಾನದಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸಾ ಅಭಿಯಾನ ಹಮ್ಮಿಕೊಳ್ಳಲಾಗದೆ.
ಕಾರ್ಕಳ ಶಾಸಕ ಸುನೀಲ್ ಕುಮಾರ್ : ಕಾಪು ಮಾರಿಗುಡಿ ಭೇಟಿ - ಕಾಮಗಾರಿ ವೀಕ್ಷಣೆ
Posted On: 25-10-2023 07:35PM
ಕಾಪು : ಕರ್ನಾಟಕ ಸರಕಾರದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಮಾಜಿ ಸಚಿವರು ಮತ್ತು ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ದಂಪತಿ ಸೋಮವಾರ ಸಂಜೆ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಳಕ್ಕೆ ಆಗಮಿಸಿ ಶ್ರೀದೇವಿಯ ದರುಶನವನ್ನು ಪಡೆದು, ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.
ಉಚ್ಚಿಲ : ದಸರಾ ನಿರ್ವಿಘ್ನವಾಗಿ ನೆರವೇರಲು ಸಮುದ್ರ ರಾಜನಿಗೆ ವಿಶೇಷ ಪೂಜೆ
Posted On: 24-10-2023 12:59PM
ಉಚ್ಚಿಲ : ಶ್ರೀ ಕ್ಷೇತ್ರ ಉಚ್ಚಿಲದ ಆಶ್ರಯದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ 2023ರ ನವದುರ್ಗೆಯರ ಶೋಭಾಯಾತ್ರೆ ಹಾಗೂ ಜಲಸ್ತಂಭನದ ಪೂರ್ವಭಾವಿಯಾಗಿ ಇಂದು ಕಾರ್ಯಕ್ರಮವು ನಿರ್ವಿಘ್ನವಾಗಿ ನೇರವೇರುವಂತೆ ಪ್ರಾರ್ಥಿಸಿ ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಶಿರ್ವ : ಚಂದ್ರನಗರದಲ್ಲಿ ಆರೋಗ್ಯ ಮಾಹಿತಿ ಶಿಬಿರ
Posted On: 23-10-2023 01:04PM
ಶಿರ್ವ : ರೋಟರಿ ಕ್ಲಬ್ ಶಿರ್ವ ಆಶ್ರಯದಲ್ಲಿ ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಸಭಾಂಗಣದಲ್ಲಿ ಆರೋಗ್ಯ ಮಾಹಿತಿ ಶಿಬಿರವನ್ನು ಶಿರ್ವ ರೋಟರಿ ಕ್ಲಬ್ ಅಧ್ಯಕ್ಷರಾದ ಫಾರೂಕ್ ಚಂದ್ರನಗರ ಉದ್ಘಾಟಿಸಿದರು.
ಕಾಪು : ಮಟ್ಟಾರುವಿನಲ್ಲಿ ದುರ್ಗಾಷ್ಟಮಿ ಉತ್ಸವ ಕಾರ್ಯಕ್ರಮ
Posted On: 23-10-2023 11:25AM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದುರ್ಗಾಷ್ಟಮಿ ಉತ್ಸವ ಕಾರ್ಯಕ್ರಮ ಮಟ್ಟಾರು ಬಯಲು ರಂಗಮಂದಿರದಲ್ಲಿ ಜರಗಿತು.
ಕಾಪು : ದೇವಾಡಿಗರ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ
Posted On: 22-10-2023 01:14PM
ಕಾಪು : ದೇವಾಡಿಗರ ಸೇವಾ ಸಂಘ (ರಿ.) ಕಾಪು ಇದರ ನೂತನ ಕಟ್ಟಡದ ಗುದ್ದಲಿ ಪೂಜೆಯು ಭಾನುವಾರ ಜರಗಿತು.
ಕಾಪು : ಸವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಭೇಟಿ
Posted On: 21-10-2023 07:46PM
ಕಾಪು : ಸವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಶಿವಮಾಲಾ ದಂಪತಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರು ಶನಿವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರುಶನಗೈದು ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು.
ಉಡುಪಿ : ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವುದು, ಮರುಬಳಕೆ, ಮರು ಉತ್ಪಾದನೆ ಬಗ್ಗೆ ಜಾಗೃತಿ ಅಭಿಯಾನ
Posted On: 20-10-2023 02:38PM
ಉಡುಪಿ : ಆಕಾಶ್ ಬೈಜೂಸ್ ನ ಜಂಕ್ ದಿ ಪ್ಲಾಸ್ಟಿಕ್ ಅಭಿಯಾನ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವುದು, ಮರುಬಳಕೆ ಮತ್ತು ಮರು ಉತ್ಪಾದನೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಉಡುಪಿಯಲ್ಲಿ ಜರಗಿತು.
