Updated News From Kaup
ಎರ್ಮಾಳು ಬರ್ಪಾಣಿ ಮೂಡಬೆಟ್ಟುವಿನಲ್ಲಿ ಪಿಪಿಸಿ ವಿದ್ಯಾರ್ಥಿಗಳಿಗೆ ಕಂಡಡೊಂಜಿ ದಿನ ಕಾರ್ಯಕ್ರಮ

Posted On: 22-07-2023 06:02PM
ಎರ್ಮಾಳು : ಆದರ್ಶ ಸಂಘಗಳ ಒಕ್ಕೂಟ ಅದಮಾರು, ರಾಷ್ಟ್ರೀಯ ಸೇವಾ ಯೋಜನೆ, ಪೂರ್ಣ ಪ್ರಜ್ಞಾ ಪದವಿಪೂರ್ವ ಕಾಲೇಜು ಅದಮಾರು ಇವರ ಸಂಯುಕ್ತ ಆಶ್ರಯದಲ್ಲಿ ಎರ್ಮಾಳು ಬರ್ಪಾಣಿ ಮೂಡಬೆಟ್ಟುವಿನ ಜಗನ್ನಾಥ ಶೆಟ್ಟಿಯವರ ಗದ್ದೆಯಲ್ಲಿ ಕಂಡಡೊಂಜಿ ದಿನ ಕಾರ್ಯ ಕ್ರಮ ಶನಿವಾರ ಜರಗಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾಯೋಜನೆಯ ವಿಭಾಗಾಧಿಕಾರಿ ಸವಿತಾ ಎರ್ಮಾಳು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಇಂದಿನ ಕಂಡಡೊಂಜಿ ದಿನ ಕಾರ್ಯಕ್ರಮ ಇಂದಿಗೆ ಮಾತ್ರವೇ ಸೀಮಿತ ಆಗದೆ, ಎಂದಿಗೂ ಇದೊಂದು ಪ್ರೇರಣೆಯಾಗಲಿ. ತೆನೆ ಎಷ್ಟು ತುಂಬಿದ್ದರೂ, ಅದು ಬಾಗುತ್ತದೆ. ನಾವು ಕೂಡಾ ಪ್ರಕೃತಿಗೆ, ಭೂಮಿಗೆ ತಲೆ ಬಾಗಲೇಬೇಕೆಂದರು.
ಸನ್ಮಾನ : ದೈಹಿಕ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಪತ್ರಕರ್ತ ಹರೀಶ್ ಹೆಜ್ಮಾಡಿ ಮತ್ತು ಸವಿತಾ ಎರ್ಮಾಳುರವರನ್ನು ಸನ್ಮಾನಿಸಲಾಯಿತು.
ಪೂರ್ಣ ಪ್ರಜ್ಞ ಕಾಲೇಜಿನ ಕೋಶಾಧಿಕಾರಿ ಗಣೇಶ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯ ಸುಮಾರು 500 ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದರು.
ಮುಖ್ಯ ಅತಿಥಿಗಳಾಗಿ ಸವಿತಾ ಎರ್ಮಾಳು, ಉದ್ಯಮಿ ಬಾಲಚಂದ್ರ ಎಲ್.ಶೆಟ್ಟಿ, ಎರ್ಮಾಳು ನಾರಾಯಣ ಶೆಟ್ಟಿ, ಸಂತೋಷ್ ಶೆಟ್ಟಿ ಇನ್ನ, ಸಂತೋಷ್ ಶೆಟ್ಟಿ ಬರ್ಪಾಣಿ, ಡಾ. ಜಯಶಂಕರ್ ಕಂಗಣ್ಣಾರು, ಸಂಜೀವ ನಾ̧ಯ್ಕ್, ಕಾಪು ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜಮಾಡಿ ಮುಂತಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಸಂಜೀವ ನಾಯ್ಕ್ ಸ್ವಾಗತಿಸಿದರು. ಶಿಕ್ಷಕ ದೇವಿಪ್ರಸಾದ್ ಬೆಳ್ಳಿಬೆಟ್ಟು ನಿರೂಪಿಸಿದರು. ಡಾ. ಜಯಶಂಕರ್ ಕಂಗಣ್ಣಾರು ವಂದಿಸಿದರು.
ಎರ್ಮಾಳು : 1694ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ

Posted On: 21-07-2023 06:46PM
ಎರ್ಮಾಳು : ಇಲ್ಲಿನ ಜನಾರ್ದನ ಜನ ಕಲ್ಯಾಣ ಸೇವಾ ಸಮಿತಿ ಸಭಾಂಗಣದಲ್ಲಿ ಮುಂದಿನ ಶುಕ್ರವಾರದವರೆಗೆ ನಡೆಯಲಿರುವ 1694ನೇ ಮದ್ಯವರ್ಜನ ಶಿಬಿರವನ್ನು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರು ಮದ್ಯವರ್ಜನ ಶಿಬಿರ ಆಯೋಜಿಸುವಲ್ಲಿ ಹೆಚ್ಚು ಶ್ರಮ ತೆಗೆದುಕೊಂಡಿದ್ದ ಯೋಜನೆಯಾಗಿದೆ. ಮದ್ಯ ವ್ಯಸನಿಗಳಿಂದ ಕುಟುಂಬವು ವಿನಾಶದಂಚಿಗೆ ವಾಲುತ್ತದೆ. ಮದ್ಯದ ಚಟವನ್ನು ಬಿಡುವ ಉತ್ಕಟ ಇಚ್ಛಾ ಶಕ್ತಿಯನ್ನು ವ್ಯಸನಿಯು ತಳೆದಲ್ಲಿ ತನ್ನ ಹಾಗೂ ಮನೆ ಮಂದಿಯಿಂದ ಪ್ರೀತ್ಯಾದರದ ಜೊತೆಗೆ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
1694ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಉಚ್ಚಿಲ ಇದರ ಅಧ್ಯಕ್ಷ ಕೇಶವ ಮೊಯ್ಲಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಯೋಜನೆಯ ಬಿ.ಸಿ. ಟ್ರಸ್ಟಿನ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ತೆಂಕ ಗ್ರಾ.ಪಂ. ಅದ್ಯಕ್ಷೆ ಕಸ್ತೂರಿ ಪ್ರವೀಣ್, ರಾಜ್ಯ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ನವೀನ್ ಅಮೀನ್, ಕಾಪು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್, ಶಂಕರ ಕುಂದರ್ ಸೂಡ ವೇದಿಕೆಯಲ್ಲಿದ್ದರು.
ಅಮಣಿ ಪ್ರಾರ್ಥಿಸಿದರು. ಶಿಬಿರದ ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಸ್ವಾಗತಿಸಿದರು. ಯೋಜನೆಯ ಉಚ್ಚಿಲ ವಲಯ ಮೇಲ್ವಿಚಾರಕಿ ವಿಜಯಾ ವಂದಿಸಿದರು. ಕಾಪು ತಾಲೂಕು ಯೋಜನಾಧಿಕಾರಿ ಜಯಂತಿ ನಿರೂಪಿಸಿದರು. 1694ನೇ ಮದ್ಯವರ್ಜನ ಶಿಬಿರದಲ್ಲಿ 60 ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಪುತ್ತಿಗೆ ಮಠಾಧೀಶರನ್ನು ಭೇಟಿಯಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Posted On: 21-07-2023 04:56PM
ಕಾಪು : ಪುತ್ತಿಗೆ ಮಠದ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕೆಂಗೇರಿ ಉಪನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಭೇಟಿಯಾಗಿ ಆಶೀರ್ವಾದ ಪಡೆದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಉಪಸ್ಥಿತರಿದ್ದರು.
ಉಡುಪಿ : ಫಲಿಸಿದ ಹೋರಾಟ ; ನಿಖಿತಾ ಕುಟುಂಬಕ್ಕೆ ಸಾಂತ್ವಾನ ಧನ

Posted On: 20-07-2023 07:35PM
ಉಡುಪಿ : ನಿಖಿತಾ ಪರ ಜರುಗಿದ ನ್ಯಾಯಯುತ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಜೋರು ಮಳೆಯನ್ನು ಲೆಕ್ಕಿಸಿದೆ ನ್ಯಾಯದ ಕೂಗನ್ನು ಎಬ್ಬಿಸಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು, ಪ್ರಜ್ಞಾವಂತ ಹೋರಾಟದ ಮನಸ್ಸುಗಳ ನಿರಂತರ ಹೋರಾಟದ ಫಲಶ್ರುತಿಯಾಗಿ ಉಡುಪಿಯ ಖಾಸಗಿ ಅಸ್ಪತ್ರೆ ನಿಖಿತಾ ಕುಟುಂಬಕ್ಕೆ ಪರಿಹಾರ ಧನವನ್ನು ನೀಡಿದೆ.
ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು ಹೋರಾಟದ ಕಾವನ್ನು ಜೀವಂತವಾಗಿ ಇರಿಸಿದವು. ಹಲವು ಮನವಿಗಳು ಜೊತೆಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆಗೆ ಕುಲಾಲ ಸಮುದಾಯ ಸಂಘಟನೆಯ ನಾಯಕರು/ಸಾಮಾಜಿಕ ಹೋರಾಟಗಾರರು ನಿರಂತರ ಮಾತುಕಥೆಯನ್ನು ನಡೆಸಿದುದರ ಪ್ರಯತ್ನವಾಗಿ ಫಲ ದೊರೆಯಿತು. ವೈದ್ಯೊ ನಾರಾಯಣೀ ಹರಿ: ಸೇವಾ ನ್ಯೂನತೆಗಳಿರದೆ, ಗ ರಿಷ್ಠ ಪ್ರಯತ್ನಗಳ ಹೊರತಾಗಿಯೂ ನಿಖಿತಾಳನ್ನು ಉಳಿಸಿಕೊಳ್ಳಲಾಗಿಲ್ಲ ಎಂಬ ನೋವಿನಲ್ಲಿ ಮಾನವೀಯ ನೆಲೆಯಲ್ಲಿ ಇಪ್ಪತ್ತು ಲಕ್ಷ ಸಾಂತ್ವನ ಧನವನ್ನು ನಿಖಿತಾ ಕುಟುಂಬಕ್ಕೆ ಇಂದು ನೀಡಿದ ಉಡುಪಿ ಖಾಸಗಿ ಆಸ್ಪತ್ರೆಗೆ ಸಂಘಟನೆ ಕೃತಜ್ಞತೆ ಸಲ್ಲಿಸಿದೆ.
ಖಂಡಿತಾ ನಿಖಿತಾ ತಂದೆ-ತಾಯಿಗೆ ಈ ಪರಿಹಾರ ಹಣ ಮಗಳ ಸಾವಿಗೆ ಸಮಾಧಾನ ನೀಡದು. ಆದರೆ ಮಗಳಿಗಾಗಿ ಕಟ್ಟಿದ ಹೊಸಮನೆಯ ಸಾಲತೀರಿಸಲು, ಬೇರೆ ಮಕ್ಕಳಿಲ್ಲದ ಅವರ ನಾಳೆಯ ಬದುಕಿಗೆ ಪುಟ್ಟ ಆಸರೆಯಂತೂ ಖಂಡಿತಾ ಆದೀತು. ಒಂದು ನ್ಯಾಯಪರ ಹೋರಾಟ,ಸಮುದಾಯ ಸಂಘಟನೆಗಳ ಮನವಿಗಳಿಗೆ ಸಿಕ್ಕ ಜಯ. ನಿಖಿತಾ ಪರ ದನಿಮೂಡಿಸಿದ ಎಲ್ಲ ಮಾನವೀಯ ಮನಸ್ಸುಗಳಿಗೆ, ಸಂಘಟನೆಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
"ಕಾಪುವಿನ ನಿಖಿತಾ ಕುಟುಂಬದ ನೋವಿಗೆ ಸಕಾಲದಲ್ಲಿ ಸ್ಪಂದಿಸಿದ ಎಲ್ಲರಿಗೂ ಆಭಾರಿ. ಖಂಡಿತಾ ತೀರಿಹೋದ ಮಗಳನ್ನು ಮತ್ತೆ ನಮಗೆ ಮರಳಿಸಿಕೊಡಲು ಸಾಧ್ಯವಿಲ್ಲ. ಆದರೆ ಕನಿಷ್ಟ ನಿಖಿತಾ ತಂದೆ- ತಾಯಿಯ ಮುಂದಿನ ಜೀವನ ನಿರ್ವಹಣೆಗೆ ಈ ಹಣ ಸದ್ವಿನಿಯೋಗವಾಗಲಿ. ಕೈಜೋಡಿಸಿದ ವಿದ್ಯಾರ್ಥಿ ತಂಡಗಳಿಗೆ, ಜಿಲ್ಲಾ ಕುಲಾಲ ನಾಯಕರಿಗೆ, ಕೊನೆಗಾದರೂ ಸ್ಪಂದಿಸಿದ ಆಸ್ಪತ್ರೆಯವರಿಗೆ ನನ್ನ ಕೃತಜ್ಞತೆಗಳು." ಉದಯ್ ಕುಲಾಲ್ ಕಳತ್ತೂರು ನಿಕಟ ಪೂರ್ವ ಅಧ್ಯಕ್ಷರು ಕಾಪು ಕುಲಾಲ ಯುವ ವೇದಿಕೆ
ಕಾರ್ಕಳ : ಕರಾಟೆಯಲ್ಲಿ ನಿಟ್ಟೆಯ ಅನುಷ್ ಮತ್ತು ಆಯುಷ್ ಸಾಧನೆ

Posted On: 20-07-2023 05:25PM
ಕಾರ್ಕಳ : ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ನಿಟ್ಟೆಯ ಅನುಷ್ ಅರುಣ್ ಕುಮಾರ್, ಆಯುಷ್ ಅರುಣ್ ಕುಮಾರ್ ಸಾಧನೆಗೈದಿದ್ದಾರೆ.
ಅನುಷ್ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಕುಮಿಟೆಯಲ್ಲಿ ಪ್ರಥಮ ಸ್ಥಾನ ಹಾಗೂ ಕಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆಯುಷ್ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಕುಮಿಟೆಯಲ್ಲಿ ಧ್ವಿತೀಯ ಸ್ಥಾನ ಹಾಗೂ ಕಟದಲ್ಲಿ ತೃತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಂದಿರರ ರಾಜಾಂಗಣದಲ್ಲಿ ಜುಲೈ 15, 16ರಂದು ಎರಡು ದಿನಗಳ ಕಾಲ ನಡೆದ ಮೊದಲ ಆವೃತ್ತಿಯ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ ಚಾಂಪಿಯನ್ ಶಿಪ್ ನಲ್ಲಿ ಅವರು ಈ ಸಾಧನೆಗೈದಿದ್ದಾರೆ.
ಕಾರ್ಕಳ : ಕ್ರಿಯೇಟಿವ್ ಪಿ ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್.ಇ.ಇ.ಟಿ ಮಾಹಿತಿ ಕಾರ್ಯಗಾರ

Posted On: 20-07-2023 05:11PM
ಕಾರ್ಕಳ : ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್.ಇ.ಇ.ಟಿ ಮಾಹಿತಿ ಕಾರ್ಯಗಾರವನ್ನು ಜುಲೈ 17 ಮತ್ತು 19 ರಂದು ಹಮ್ಮಿಕೊಳ್ಳಲಾಗಿತ್ತು.

ಸಿ.ಎ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊಫೆಸರ್ ರಾಜ್ ಗಣೇಶ್ ಕಾಮತ್ ಆಗಮಿಸಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್ ಅಕೌಂಟ್ ಕೋರ್ಸ್ ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಕಾಲೇಜುನಲ್ಲಿ ಒದಗಿಸುವ ಈ ಕೋರ್ಸ್ ನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಿ.ಎಸ್.ಇ.ಇ.ಟಿ ಬಗ್ಗೆ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೇಟಿಯ ಕಾರ್ಯವೈಖರಿ ಹಾಗೂ ಅಗತ್ಯತೆಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಸ್ಥಾಪಕರದ ಅಶ್ವತ್ ಎಸ್.ಎಲ್ ಹಾಗೂ ಗಣಪತಿ ಭಟ್ ಕೆ.ಎಸ್ ವಿದ್ಯಾರ್ಥಿಗಳಿಗೆ ಕೋರ್ಸ್ ನ ಮಹತ್ವವನ್ನು ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಘವೇಂದ್ರ ಬಿ.ರಾವ್, ಉಮೇಶ್, ಚಂದ್ರಕಾಂತ್ , ಜ್ಞಾನೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಾನ್ವಿ ಎಸ್.ರಾವ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ನಮನ್ ವಂದಿಸಿದರು.
ಕಾಪು : ಹಡೀಲು ಭೂಮಿಗೆ ಕೃಷಿಯ ಜೀವಂತಿಕೆ ನೀಡಿದ ದಾರು ಶಿಲ್ಪಿ ವೈ. ಪ್ರಶಾಂತ್ ಆಚಾರ್ಯ

Posted On: 20-07-2023 05:04PM
ಕಾಪು : ಸ್ವಂತ ಕೃಷಿ ಭೂಮಿಯನ್ನು ಹೊಂದಿಲ್ಲದ ಕಾಪು ತಾಲೂಕಿನ ಎಲ್ಲೂರು ಗ್ರಾಮದ ದಾರು ಶಿಲ್ಪಿ ವೈ. ಪ್ರಶಾಂತ್ ಆಚಾರ್ಯ ಹಡೀಲು ಗದ್ದೆಯನ್ನು ಎರವಲು ಪಡೆದುಕೊಂಡು ಭತ್ತದ ಬೇಸಾಯವನ್ನು ಮಾಡುವ ಮೂಲಕ ಕೃಷಿ ಸಂಪತ್ತಿನ ಒಡೆಯನಾಗಿ ಬೆಳೆಯುತ್ತಿದ್ದಾರೆ.

ಯುವಕರು ಕೃಷಿಯಿಂದ ವಿಮುಕ್ತರಾಗುತ್ತಿರುವ ಈ ಕಾಲ ಘಟ್ಟದಲ್ಲಿ ಈ ಯುವಕನ ಕೃಷಿ ಕಾಯಕ ನಿಜಕ್ಕೂ ಮಾದರಿಯಾಗಿದ್ದು, ಈ ಬಾರಿ ಸುಮಾರು 4 ಎಕರೆಗೂ ಮಿಕ್ಕಿದ ಗದ್ದೆಯಲ್ಲಿ ಭತ್ತದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಎಂಒ4 ಭತ್ತದ ತಳಿ ಬಳಸುತ್ತಿದ್ದು ಸ್ಥಳೀಯ 26 ಮಹಿಳಾ ಕೃಷಿ ಕೂಲಿ ಕಾರ್ಮಿಕರಿಂದ ನಾಟಿ ಕಾರ್ಯ ನಡೆದಿದೆ. ತಾನು ಎರವಲು ಪಡೆದ ಗದ್ದೆಯಲ್ಲಿ ಎಂಒ 4 ಭತ್ತದ ತಳಿಯನ್ನು ಬಿತ್ತನೆ ಮಾಡಿ ಸ್ವತಃ ಭತ್ತದ ಸಸಿಯನ್ನು ಸಿದ್ಧಪಡಿಸಿಕೊಂಡು ಇದೀಗ 22 ದಿನಗಳ ನೇಜಿಯನ್ನು ನಾಟಿ ಮಾಡಲು ತೊಡಗಿಕೊಂಡಿರುವ ಯುವ ಕೃಷಿಕ ಪ್ರಶಾಂತ್ ಅವರು ಪಡುಬಿದ್ರಿಯ ಕಂಚಿನಡ್ಕ, ಎಲ್ಲೂರಿನ ಪೆಜತ್ತಕಟ್ಟೆ, ಬಂಡಸಾಲೆ, ಮುದರಂಗಡಿಯ ವಿದ್ಯಾನಗರ ಪ್ರದೇಶದ ಮಹಿಳೆಯರ ನಾಲ್ಕು ತಂಡಗಳನ್ನು ಬಳಸಿಕೊಂಡು ಒಟ್ಟು 26 ಕೃಷಿ ಕೂಲಿ ಮಹಿಳಾ ಕಾರ್ಮಿಕರು ನೇಜಿ ತೆಗೆದು ನಾಟಿ ಮಾಡುವ ಕೆಲಸ ಕಾರ್ಯದಲ್ಲಿ ಬಳಸಿಕೊಂಡಿರುತ್ತಾರೆ.

ದಿನವಹಿ ಊಟ ಚಹಾ ತಿಂಡಿ ವಾಹನದ ಸೌಕರ್ಯದೊಂದಿಗೆ ರೂ. 400 ಕೂಲಿಯನ್ನು ಪ್ರತಿಯೋರ್ವ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡುವ ಮೂಲಕ ಎರಡು ದಿನಗಳಲ್ಲಿ 4 ಎಕರೆ ಗದ್ದೆಯ ನಾಟಿಯನ್ನು ಪೂರೈಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೃಷಿ ಚಟುವಟಿಕೆಗೆ ನೆರೆ ಹೊರೆಯ ಹಿರಿಯ ನುರಿತ ಕೃಷಿಕರಾದ ಹರೀಶ್ ಪೂಜಾರಿ, ಶಂಕರ್ ಮತ್ತಿತರರ ಮಾರ್ಗದರ್ಶನದೊಂದಿಗೆ ಸಹೋದರರು ಸಹಿತ ಮನೆಮಂದಿಯೂ ಕೈ ಜೋಡಿಸುವ ಮೂಲಕ ಯಶಸ್ವಿ ಕೃಷಿಕನಾಗಿ ಬೆಳೆದು ಬಂದಿದ್ದಾರೆ. ಕಳೆದ 7 ವರ್ಷಗಳ ಹಿಂದೆ ಕೃಷಿಯ ಬೆನ್ನತ್ತಿದ್ದ ಈ ದಾರು ಶಿಲ್ಪಿ ಪ್ರಶಾಂತ್ ಆಚಾರ್ಯ ಅವರು ಈ ಬಾರಿ ಟ್ರಾಕ್ಟರ್ ಮೂಲಕ ಉಳುಮೆ ನಡೆಸಿದ್ದು, ಸುಮಾರು ರೂಪಾಯಿ ಐವತ್ತು ಸಾವಿರದಷ್ಟು ಖಚರ್ುವೆಚ್ಚ ಭರಿಸಿದ್ದು, ದುಪ್ಪಟ್ಟು ಲಾಭದ ನಿರೀಕ್ಷೆಯನ್ನು ಹೊಂದಿರುತ್ತಾರೆ. ಮಳೆಯನ್ನೇ ಅವಲಂಭಿಸಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದ್ದು, ಮಳೆ ನೀರು ಕಡಿಮೆಯಾದಲ್ಲಿ ಸಮೀಪದಲ್ಲಿ ಹರಿಯುವ ನೀರಿನ ತೋಡಿನಿಂದ ನೀರನ್ನು ಬಳಸುವುದಾಗಿ ಮಾಹಿತಿಯನ್ನು ಹೊಸದಿಗಂತಕ್ಕೆ ನೀಡಿದ್ದು, ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಗದ್ದೆಯ ಮಾಲಕರು, ಹಿರಿಯ ಕೃಷಿಕರು, ಮನೆಮಂದಿಯ ಸಹಕಾರವನ್ನು ಸ್ಮರಿಸುತ್ತಿದ್ದು, ಲಭ್ಯ ಅವಕಾಶದಡಿ ಮತ್ತಷ್ಟು ಹಡೀಲು ಭೂಮಿಯನ್ನು ಕೃಷಿಗೆ ಬಳಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಉಡುಪಿ : ಜಿಲ್ಲೆಯಿಂದ ಕೆಎಸ್ಆರ್ಟಿಸಿ ಬಸ್ಸುಗಳ ಹೆಚ್ಚಿನ ವ್ಯವಸ್ಥೆ ಸರಕಾರ ಮಾಡಬೇಕು : ಯೋಗೀಶ್ ವಿ ಶೆಟ್ಟಿ

Posted On: 20-07-2023 04:45PM
ಉಡುಪಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳು ಮಂಗಳೂರು ಮತ್ತು ಪುತ್ತೂರು ವಿಭಾಗಗಳಲ್ಲಿ ಮತ್ತು ಇತರೆಡೆ ಓಡಾಡುತ್ತಿದ್ದು, ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿರುತ್ತದೆ.
ಆದರೆ ಉಡುಪಿ ಜಿಲ್ಲೆಯಿಂದ ಕೆಲವೇ ಬಸ್ಸುಗಳು ಓಡಾಡುತ್ತಿದ್ದು ಉಡುಪಿ ಜಿಲ್ಲೆಯ ಪ್ರಯಾಣಿಕರು ಅವಕಾಶ ವಂಚಿತರಾಗಿದ್ದು, ಕೆ ಎಸ್ ಆರ್ ಟಿ ಸಿ ಬಸ್ ನಿಯಮಿತವಾಗಿ ಉಡುಪಿ ಮಂಗಳೂರು, ಮಂಗಳೂರು ಉಡುಪಿ ನೇರ ಲಿಮಿಟೆಡ್ ಸ್ಟಾಪುಗಳ ವ್ಯವಸ್ಥೆಯೊಂದಿಗೆ ಪ್ರಾರಂಭಿಸಿದರೆ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಸಾರ್ವಜನಿಕರಿಗೆ ಅತಿಯಾದ ಉಪಯೋಗವಾಗುತ್ತದೆ.
ಆದ್ದರಿಂದ ಉಡುಪಿ ಮಂಗಳೂರು, ವ್ಯವಸ್ಥೆಯನ್ನು ಉಡುಪಿ ವಲಯದಿಂದ ಕೆ ಎಸ್ ಆರ್ ಟಿ ಸಿ ನೇರ ಬಸ್ಸುಗಳ ಸಂಚಾರಗಳನ್ನು ಮತ್ತು ಇತರಡೆಗೆ ಸಂಚರಿಸುವ ವ್ಯವಸ್ಥೆ ಮಾಡುವರೆ ಸರಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದು ಉಡುಪಿ ಜಿಲ್ಲೆ ಜನತಾದಳ (ಜಾತ್ಯತೀತ) ಅಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಉಡುಪಿ : ಟ್ರಿನಿಟಿ ಸೆಂಟ್ರಲ್ ಸ್ಕೂಲ್ - ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಯುವ ಉದ್ಯಮಿ ಶ್ರೀನಿವಾಸ್ ಜಿ ಆಯ್ಕೆ

Posted On: 20-07-2023 04:41PM
ಉಡುಪಿ : ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಇದರ ನೂತನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಯುವ ಉದ್ಯಮಿ ಶ್ರೀನಿವಾಸ್ ಜಿ ಯವರು ಶಾಲೆಯಲ್ಲಿ ನಡೆದ ಮಹಾಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಬಹುಮತದಿಂದ ಚುನಾಯಿತರಾಗಿದ್ದಾರೆ.
ಕಾಯ೯ದಶಿ೯ಯಾಗಿ ಅಶ್ವಿತ ಪುಟಾ೯ಡೊ, ಜೊತೆ ಕಾಯ೯ದಶಿ೯ಯಾಗಿ ದೀಪ್ತಿ ಸುವಣ೯, ಕೋಶಾಧಿಕಾರಿಯಾಗಿ ಸುಧೀಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಡೊಮಿನಿಕ್ ಸುನಿಲ್ ಲೋಬೋ ನಡೆಸಿಕೊಟ್ಟರು. ಈ ಸಂದಭ೯ ಉಪ ಮುಖ್ಯ ಶಿಕ್ಷಕ ರವಿರಾಜೇಶ್ ಸೆರಾವೋ, ಅಕಾಡೆಮಿಕ್ ಕೋ. ಅಡಿ೯ನೇಟರ್ ಮ್ಯಾಗಿ ಲೂವೀಸ್ ಸಂಘದ ಪೂವಾ೯ಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಕಾಲೇಜಿನ ಪ್ರಣವ್ ಪಿ ಸಂಜಿ ನಾಟಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 28 ನೇ ರ್ಯಾಂಕ್

Posted On: 19-07-2023 07:51PM
ಕಾರ್ಕಳ : ದೇಶಾದಾದ್ಯಂತ ಆರ್ಕಿಟೆಕ್ಚರ್ ಕೋರ್ಸ್ ಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸಲಾದ ನಾಟಾ (NATA) ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಯಾದ ಪ್ರಣವ್ ಪಿ ಸಂಜಿ ಇವರಿಗೆ ರಾಜ್ಯ ಮಟ್ಟದ 28 ನೇ ರ್ಯಾಂಕ್, ದೀಕ್ಷಾ ಪಾಂಡು 42 ನೇ ರ್ಯಾಂಕ್, ವರುಣ್ ಜಿ ನಾಯಕ್ 67 ನೇ ರ್ಯಾಂಕ್ ಲಭಿಸಿದೆ.

ಉಳಿದಂತೆ ಸಹನಾ ಎನ್ ಸಿ 104 ನೇ ರ್ಯಾಂಕ್, ನಾಗಮನಸ್ವಿನಿ ಕೆ 134 ನೇ ರ್ಯಾಂಕ್, ಧರಿನಾಥ್ ಬಸವರಾಜ್ ಕುಂಬಾರ್ 138 ನೇ ರ್ಯಾಂಕ್, ದೀಪಕ್ ಕೆ ಎಸ್ 171 ನೇ ರ್ಯಾಂಕ್, ಸಂತೃಪ್ತಿ 209 ನೇ ರ್ಯಾಂಕ್, ಶ್ರವಣ್ ಎಸ್ 212 ನೇ ರ್ಯಾಂಕ್, ಅನ್ವಿತಾ ಕೆ 227 ನೇ ರ್ಯಾಂಕ್, ಹೇಮಂತ್ ಗೌಡ ಎಸ್ ಆರ್ 229 ನೇ ರ್ಯಾಂಕ್, ಸ್ಪರ್ಶ ಪಾರ್ಶ್ವನಾಥ್ 235 ನೇ ರ್ಯಾಂಕ್, ಅನುಷಾ ಐನಾಪುರ್ 254 ನೇ ರ್ಯಾಂಕ್, ಕುಶಾಲ್ ಸೂರ್ಯ ಹೆಚ್ ಎಂ 259 ನೇ ರ್ಯಾಂಕ್, ಸ್ವಸ್ತಿಕ್ ಕೃಷ್ಣಮೂರ್ತಿ ಭಟ್ 273 ನೇ ರ್ಯಾಂಕ್, ಪೂಜಾ ಟಿ ಎಸ್ 274 ನೇ ರ್ಯಾಂಕ್, ಕಶಿಶ್ ಎಸ್ ಪಿ 292 ನೇ ರ್ಯಾಂಕ್, ಗುರುಲಿಂಗಯ್ಯ ಸುರೇಶ್ ಕಂಬಲಿಮತ್ 300 ನೇ ರ್ಯಾಂಕ್, ಚಿರಾಗ್ ವಾಸು ಶೆಟ್ಟಿ 332 ನೇ ರ್ಯಾಂಕ್, ಸಂಜಯ್ ಎಸ್ 335 ನೇ ರ್ಯಾಂಕ್, ಮುಕ್ತಿ ಜಿ 376 ನೇ ರ್ಯಾಂಕ್, ಬೆನೇಶ್ ಗೌಡ ಕೆ ಎ 391 ನೇ ರ್ಯಾಂಕ್, ತನುಶ್ರೀ ಜೆ ವಿ 434 ನೇ ರ್ಯಾಂಕ್, ಪಂಕಜ್ ಜೈ ಪ್ರಸಾದ್ 447 ನೇ ರ್ಯಾಂಕ್, ರಕ್ಷಿತಾ ಹೆಚ್ ಎಸ್ 457 ನೇ ರ್ಯಾಂಕ್, ಹರಿಪ್ರಸಾದ್ ಡಿ ಎಂ 470 ನೇ ರ್ಯಾಂಕ್, ದೀಕ್ಷಾ ಹೆಚ್ ಬಿ 480 ನೇ ರ್ಯಾಂಕ್, ಪನ್ವಿತ್ ಜಿ ಎನ್ 549 ನೇ ರ್ಯಾಂಕ್, ನೇಹಾ ಮಯ್ಯಾ 553 ನೇ ರ್ಯಾಂಕ್, ಚಿನ್ಮಯ್ ಸುರೇಶ್ ಶೆಟ್ಟಿ 585 ನೇ ರ್ಯಾಂಕ್ ಮತ್ತು ಯಶವಂತ್ ಆರ್ ಗೌಡ 696 ನೇ ರ್ಯಾಂಕ್ ಗಳಿಸಿರುತ್ತಾರೆ.
NATA ಪರೀಕ್ಷೆಗೆ ಹಾಜರಾದ ಎಲ್ಲಾ 31 ವಿದ್ಯಾರ್ಥಿಗಳೂ ತೇರ್ಗಡೆಯಾಗುವುದರ ಜೊತೆಗೆ ರಾಜ್ಯ ಮಟ್ಟದ 700 ರ ಒಳಗಿನ ರ್ಯಾಂಕ್ ಗಳಿಸಿರುವುದು ವಿಶೇಷ. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಹಾಗೂ NATA ಸಂಯೋಜಕರಾದ ರಕ್ಷಿತ್, ಸುಮಂತ್ ದಾಮ್ಲೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.