Updated News From Kaup

ಉಡುಪಿ : ಆರ್.ಎಸ್.ಬಿ ಸಮಾಜದಿಂದ ಚಾತುಮಾ೯ಸ್ಯದಲ್ಲಿರುವ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಶ್ರೀಗಳ ಭೇಟಿ

Posted On: 22-08-2023 08:36PM

ಉಡುಪಿ : ಗೋವಾ ಬಾಂಧಿವಾಡೆ ಶ್ರೀ ಮಹಾಲಕ್ಮೀ ದೇವಾಲಯದಲ್ಲಿ ಚಾತುಮಾ೯ಸ್ಯ ಕೈಗೊಂಡಿರುವ ಕೈವಲ್ಯ ಗೌಡಪಾದಚಾಯ೯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಶ್ರೀಗಳ ಭೇಟಿ ಮತ್ತು ಕುಲದೇವಾಲಯ ಸಂದಶ೯ನ ಆರ್.ಎಸ್.ಬಿ ಸಮಾಜದ ವತಿಯಿಂದ ಆ.20 ಆದಿತ್ಯವಾರ ನಡೆಯಿತು.

ಶಿರ್ವ : ಹಿಂದೂ ಜೂನಿಯರ್ ಕಾಲೇಜು - ವಿದ್ಯಾರ್ಥಿಗಳ ದತ್ತು ಸ್ವೀಕಾರ ; ವಿದ್ಯಾರ್ಥಿ ವೇತನ ಕಾರ್ಯಕ್ರಮ

Posted On: 22-08-2023 08:29PM

ಶಿರ್ವ : ಸ್ಥಳೀಯ ಹಿಂದೂ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಜರಗಿತು.

ಆಗಸ್ಟ್ ‌25 : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ - 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Posted On: 22-08-2023 07:43PM

ಶಿರ್ವ : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ ವತಿಯಿಂದ ಆಗಸ್ಟ್ 25, ಶುಕ್ರವಾರ ಗಾಂಧಿನಗರ ಕಲಾವೃಂದದ ವೇದಿಕೆಯಲ್ಲಿ 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಲಿದೆ.

ಕಟಪಾಡಿ ಗ್ರಾಮ ಪಂಚಾಯತ್‌ : ಅಧ್ಯಕ್ಷರಾಗಿ ಪ್ರಭಾ ಶೆಟ್ಟಿ, ಉಪಾಧ್ಯಕ್ಷರಾಗಿ ಸುಗುಣ ಆಯ್ಕೆ

Posted On: 22-08-2023 07:22PM

ಕಟಪಾಡಿ : ಇಲ್ಲಿನ ಗ್ರಾಮ ಪಂಚಾಯತಿಯ ಎರಡನೇ ಸಾಲಿನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮಂಗಳವಾರ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ ಬೆಂಬಲಿತ ಪ್ರಭಾ ಶೆಟ್ಟಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸುಗುಣ ಆಯ್ಕೆ ಆಗಿದ್ದಾರೆ.

ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸಮಾರಿಗುಡಿ ದೇವಳದ ಕರಸೇವೆಯಲ್ಲಿ ಇನ್ನಂಜೆ ಗ್ರಾಮಸ್ಥರು

Posted On: 22-08-2023 11:33AM

ಕಾಪು : ಪ್ರಥಮ ಹಂತದಲ್ಲಿ ಸುಮಾರು 30ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಳದಲ್ಲಿ ಈಗಾಗಲೇ ಕರಸೇವೆಯನ್ನು ಮಾಡಿರುವ ಇನ್ನಂಜೆ ಗ್ರಾಮಸ್ಥರು ದೇವಳದ ಪ್ರದಕ್ಷಿಣಾ ಪಥದ ಸುತ್ತಲೂ ಸ್ವಚ್ಛತೆಯನ್ನು ಮಾಡುವ ಮೂಲಕ ಕರಸೇವೆಯನ್ನು ಮಾಡಿರುತ್ತಾರೆ.

ಉಡುಪಿ : ಜಿಲ್ಲಾ ಲಯನ್ಸ್ 317C ಸಂಪುಟ - ಪದಪ್ರದಾನ 'ಬೆಳಕು' ಸಮಾರಂಭ ಸಂಪನ್ನ

Posted On: 21-08-2023 08:37PM

ಉಡುಪಿ : ಜಿಲ್ಲಾ ಲಯನ್ಸ್ 317C ಸಂಪುಟ - ಪದಪ್ರದಾನ 'ಬೆಳಕು' ಸಮಾರಂಭ ಶನಿವಾರ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ನಡೆಯಿತು. ಹಿಂದಿನ ಅಂತಾರಾಷ್ಟ್ರೀಯ ನಿರ್ದೇಶಕ ಕೆ.ಜಿ. ರಾಮಕೃಷ್ಣಮೂರ್ತಿ ನೂತನ ಸಂಪುಟ ಪದಪ್ರದಾನ ನೆರವೇರಿಸಿದರು. ಲಯನ್ಸ್ ಜಿಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು.

ಕಟಪಾಡಿ‌ : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ - ವಿಶ್ವಕರ್ಮ ಧ್ವಜದ ಬಗ್ಗೆ ಚಿಂತನಾ ಸಭೆ

Posted On: 21-08-2023 04:52PM

ಕಟಪಾಡಿ : ವಿಶ್ವ ಬ್ರಾಹ್ಮಣ ಸಮಾಜದ ಸಂಸ್ಕೃತಿಯ, ಸಂಘಟನೆಯ, ಐಕ್ಯತೆಯ ದ್ಯೋತಕವಾಗಿರುವ ವಿಶ್ವಕರ್ಮ ಧ್ವಜದ ಬಣ್ಣ, ಪ್ರಮಾಣ, ಆಕಾರ, ಲಾಂಛನ, ವಿನ್ಯಾಸದ ಬಗ್ಗೆ ಸಮಾಜದ ಸಂಘಟನೆಗಳಲ್ಲಿ, ಸಮಾಜದ ಸದಸ್ಯರಲ್ಲಿ ಒಮ್ಮತ ಅಭಿಪ್ರಾಯ ಮೂಡಿಸಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಹಾಸಂಸ್ಥಾನದ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನವು ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಸಮಾಜದ ದೇವಸ್ಥಾನಗಳ ಧರ್ಮದರ್ಶಿಗಳು, ಸಂಘಟನೆಗಳ ಪ್ರಮುಖರು, ವೈದಿಕ ಮುಖಂಡರು, ಸಮಾಜದ ಗಣ್ಯರು ಪ್ರಮುಖರ ಪಾಲ್ಗೊಳ್ಳುವಿಕೆಯೊಂದಿಗೆ ಆಗಸ್ಟ್ 20 ರಂದು ಪ್ರಥಮ ಚಿಂತನಾ ಸಭೆ ನಡೆಯಿತು.

ಕಾಪು : ತಾಲೂಕಿನಾದ್ಯಂತ ನಾಗರಪಂಚಮಿ ಆಚರಣೆ

Posted On: 21-08-2023 01:05PM

ಕಾಪು : ತಾಲೂಕಿನಾದ್ಯಂತ ನಾಗರಪಂಚಮಿಯನ್ನು ಇಂದು ಆಚರಿಸಲಾಯಿತು. ಎಲ್ಲೆಲ್ಲೂ ನಾಗಸನ್ನಿಧಿಯಲ್ಲಿ ಭಕ್ತ ವರ್ಗ ನಾಗದೇವರಿಗೆ ವರ್ಷಂಪ್ರತಿಯ ಸೇವೆಯನ್ನು ನೀಡಿದರು.

ಶಿರ್ವ : ಕುತ್ಯಾರು ಯುವಕ ಮಂಡಲ ಅಧ್ಯಕ್ಷರಾಗಿ ಸುಶಾಂತ್ ಶೆಟ್ಟಿ ಆಯ್ಕೆ

Posted On: 20-08-2023 05:55PM

ಶಿರ್ವ : ಇಲ್ಲಿನ ಕುತ್ಯಾರು ಯುವಕ ಮಂಡಲದ 2023-2025 ನೇ ಸಾಲಿನ ಅಧ್ಯಕ್ಷರಾಗಿ ಸುಶಾಂತ್ ಶೆಟ್ಟಿ ಆಯ್ಕೆ ಆಗಿರುತ್ತಾರೆ.

'ಲೋಕಪ್ರಿಯ' ನಾಗನ ಆರಾಧನಾ ಪರ್ವ : 'ನಾಗರ ಪಂಚಮಿ'

Posted On: 20-08-2023 05:46PM

ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಪ್ರಾಣಿ ನಾಗ.ಪ್ರಾಣಿ - ಮನುಷ್ಯ ಸಂಬಂಧವೂ ಪ್ರಾಚೀನವಾದುದು.ನಿಯಂತ್ರಣವನ್ನು ಮೀರಿ ತನಗೆ ಮಾರಕವಾಗಬಲ್ಲ ಶಕ್ತಿಯಾಗಿ ಸವಾಲೆಸೆಯಬಲ್ಲ ಪ್ರಾಣಿಗಳ ಕುರಿತಾಗಿ ಮನುಷ್ಯನಿಗಿದ್ದ ಭಯವು ಅಷ್ಟೇ ಪುರಾತನವಾದುದು, ಇಲ್ಲಿ ಅಡಗಿದೆ , ಭಯದಿಂದ ಭಕ್ತಿಯಾಗಿ ಆರಾಧನೆಯಾಗಿ ರೂಪಾಂತರಗೊಂಡ ಪ್ರಾಣಿಪೂಜೆಯ ಮೂಲ. ಪುರಾತನವಾದರೂ ಬಲಗುಂದದ ಆರಾಧನೆಯಾಗಿ ನಾಗಾರಾಧನೆ ಮಾನವ ವಿಕಾಸದೊಂದಿಗೆ ಸಾಗಿಬಂದಿದೆ. ನಿಸರ್ಗದ ರಮ್ಯಾದ್ಭುತ ,ಅಷ್ಟೇ ಭಯ ಆತಂಕಕಾರಿ ಪರಿತಾಪ ಮತ್ತು ಸುಪ್ರಸನ್ನ ಪರಿಣಾಮಗಳನ್ನು ಗಮನಿಸುತ್ತಾ ಬದುಕು ಕಟ್ಟಿದ ನಮ್ಮ ಪೂರ್ವಜರು‌ ಪ್ರಕೃತಿಯೊಂದಿಗೆ ಪ್ರಕೃತಿ ಜನ್ಯ ಪ್ರತ್ಯಕ್ಷ - ಪರೋಕ್ಷ ಚೈತನ್ಯಗಳನ್ನು ಭಯದಿಂದ ಒಪ್ಪಿದರು, ಉಪಕೃತರಾಗಿ ಪ್ರೀತಿಯಿಂದ ಸ್ವೀಕರಿಸಿದರು .ಇಲ್ಲಿ‌ ವಿನೀತಭಾವದೊಂದಿಗೆ ಶ್ರದ್ಧೆಯ ಒಪ್ಪಂದಗಳಿವೆ, ಪ್ರಕೃತಿಯೊಂದಿಗೆ ಹೊಂದಿಕೊಂಡು ಬಾಳಿದ ಮನುಕುಲದ ಇತಿಹಾಸವಿದೆ. ಜೀವನ ಪೂರ್ತಿ ಹಾಲುಕೊಡುವ ಭಾರತೀಯ ಸಂಸ್ಕೃತಿಯಯಲ್ಲಿ ಅತ್ಯುಚ್ಚವಾದ ದೈವೀ ಸಾನ್ನಿಧ್ಯವುಳ್ಳ ಹಾಗೂ ತಾಯಿ ಸಮಾನವಾದ ದನವೊಂದು ತೀರಿಕೊಂಡಾಗ ಅದಕ್ಕೆ ದಫನ ಮಾಡಿ ಕೊಡುತ್ತಿದ್ದ ಹಾಲಿನ ಪ್ರಮಾಣವನ್ನು ಹಾಗೂ‌ ದನದ ಗುಣ ವಿಶೇಷಗಳನ್ನು ಹೊಗಳುತ್ತಾ ಕೆಲವು ದಿನಗಳಲ್ಲಿ ಮರೆತು ಬಿಡುತ್ತೇವೆ.ಆದರೆ ನಾಗನ ಶವವೊಂದು ದಾರಿಯಲ್ಲಿ ಸಿಕ್ಕಿದರೂ ಎಂತಹ ಆತಂಕ,ಭಯ.ನಮ್ಮ ಹಿರಿಯರು ತೀರಿಕೊಂಡಾಗ ನೆರವೇರಿಸುವ ಅಂತ್ಯವಿಧಿ ನಿರ್ವಹಣೆ ಹಾಗೂ ಸೂತಕ ಆಚರಣೆ ,ಸಂಸ್ಕಾರಗಳನ್ನು ನಡೆಸುತ್ತೇವೆ. ಹಾಗಾದರೆ ನಾಗ ಯಾರು ? ನಮಗೂ ನಾಗನಿಗೂ ಏನು ಸಂಬಂಧ ? ನಾಗ ನಮ್ಮ ಪೂರ್ವಸೂರಿ ಅಥವಾ ನಮ್ಮವ ಎಂಬ ಸ್ವೀಕಾರ ಯಾಕೆ ರೂಢಿಗೆ ಬಂತು ? ( ಈ ಶ್ರದ್ಧೆ ವೈದಿಕ ಚಿಂತನೆಯಾದರೂ ಆಲೋಚಿಸಲೇ ಬೇಕಾದ ಸಂಗತಿ.ಸಂಪ್ರದಾಯವಾಗಿ ಅಷ್ಟೇ ಶ್ರದ್ಧೆಯದ್ದಾಗಿ ರೂಢಿಯಲ್ಲಿರುವುದು ಅಷ್ಟೇ ಸತ್ಯ.). ನಾಗ - ಮನುಷ್ಯ ಭಾವನಾತ್ಮಕ ಸಂಬಂಧವು , ನಾಗ ನಮ್ಮವ ,ನಮಗಿಂತ ಮೊದಲು ಈ ಭೂಭಾಗದಲ್ಲಿ ಸ್ವೇಚ್ಛೆಯಿಂದ ಓಡಾಡಿಕೊಂಡಿದ್ದವನು ,ಅವನು ಬಿಟ್ಟು ಕೊಟ್ಟ ಭೂಪ್ರದೇಶ ಇದು.ಆದುದರಿಂದ ನಾಗನಿಗೆ ನಾವು ಸದಾ ಕೃತಜ್ಞರಾಗಿಯೇ ಇದ್ದೇವೆ ,ಇರಬೇಕು.