ಸರಿಸುಮಾರು 400 ವರ್ಷ ಇತಿಹಾಸವಿರುವ ಉಡುಪಿಯ ಅಬ್ಬರದ ಬೊಬ್ಬರ್ಯ
Thumbnail
ಉಡುಪಿಯ ಕಾರಣಿಕದ ಕ್ಷೇತ್ರ 400 ವರ್ಷಗಳ ಇತಿಹಾಸವಿರುವ ದೈವಸ್ಥಾನ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ವುಡ್ ಲ್ಯಾಂಡ್ಸ್ ಹೋಟೆಲ್ ಹತ್ತಿರ ಉಡುಪಿಯ ನಗರದ ಹೃದಯ ಭಾಗದಲ್ಲಿದೆ. ಬೊಬ್ಬರ್ಯನ ಉಡುಪಿಗೆ ಆಗಮನದ ವಿಷಯ ತತ್ರ ಯುಗದಲ್ಲಿ ಚಂದ್ರನಿಗೆ ರಾಹು ವಿನಿಂದ ಶಾಪ ವಿಮೋಚನೆ ಗೊಳಿಸಲು ಉಡುಪಿಗೆ ಬಂದಿದ್ದು. ಕಲಿಯುಗದಲ್ಲಿ ಉಡುಪಿಗೆ ಬೊಬ್ಬರ್ಯನ ಆಗಮನ. ಬೊಬ್ಬರ್ಯನು ಇಂದ್ರಾಳಿಗೆ ಬಂದು ಪಂಚ ದುರ್ಗಿ ದೇವಿ ಜೊತೆ ನಿನ್ನ ಸನ್ನಿಧಾನದಲ್ಲಿ ನನಗೆ ನೆಲೆ ನಿಲ್ಲಲು ಜಾಗ ಕೊಡಬೇಕು ಎಂದು ಕೇಳಲು, ದೇವಿಯು ಇಲ್ಲಿ ಬೇಡ ಉಡುಪಿಯಲ್ಲಿ ಅನಂತೇಶ್ವರ ದೇವರ ರಥೋತ್ಸವ ನಡೆಯುತ್ತಿದೆ ಅಲ್ಲಿಗೆ ಹೋದರೆ ನಿನಗೆ ನಿಲ್ಲಲು ಜಾಗ ಸಿಗುವುದು ಎಂದು ದೇವಿಯ ವಾಣಿಯನ್ನು ತಿಳಿದು ಉಡುಪಿ ಅನಂತೇಶ್ವರ ದೇವರ ರಥ ಎಳೆಯುವಾಗ ರಥಕ್ಕೆ ಎದೆಕೊಟ್ಟು ನಿಲ್ಲಿಸಿದನು. ಜನರು ಎಷ್ಟೇ ಪ್ರಯತ್ನ ಪಟ್ಟು ರಥವನ್ನು ಎಳೆದರು ರಥ ಸ್ವಲ್ಪವೂ ಮುಂದೆ ಕದಲುವುದಿಲ್ಲ. ಆ ಸಮಯದಲ್ಲಿ ದೇವಸ್ಥಾನ ಮುಖ್ಯಸ್ಥರು ಚರ ಮಾಡಿ ಜ್ಯೋತಿಷ್ಯ ಪ್ರಶ್ನೆ ರೂಪದಲಿ ನೋಡಲು ಬೊಬ್ಬರ್ಯನ ನೆಂಬ ವಿರಾಟ ರೂಪದ ದೈವವು ರಥವನ್ನು ತಡೆ ಹಿಡಿದಿದೆ ಎಂದು ತಿಳಿಯಿತು ಮತ್ತು ದೈವಕ್ಕೆ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ನೆಲೆನಿಲ್ಲಲು ಜಾಗವನ್ನು ಒದಗಿಸಿಕೊಡಬೇಕು ಎಂದು ತಿಳಿಯಿತು ಆ ಸಮಯದಲ್ಲಿ ದೇವಸ್ಥಾನ ಮುಖ್ಯಸ್ಥರು ಬೊಬ್ಬರ್ಯನನು ತಂಕು ಪೇಟೆಯಲ್ಲಿದ್ದ. ಜುಮಾದಿ ಮತ್ತು ಕಲ್ಕುಡ ದೈವದೊಂದಿಗೆ ಪ್ರತಿಷ್ಠೆ ಮಾಡಿ ನಂಬುದಾಗಿ ತೀರ್ಮಾನಿಸಿದರು, ನಂತರ ರಥವು ಕದಲಿತು. ಅನಂತರ ತೆಂಕು ಪೇಟೆಯಲ್ಲಿ ಜುಮಾದಿ ಮತ್ತು ಕಲ್ಕುದ ದೈವದ ಒಟ್ಟಿಗೆ ಸ್ಥಾನವನ್ನು ನಿರ್ಮಿಸಿ ಬೊಬ್ಬರ್ಯನನು ನೆಲೆಗೊಳಿಸಿದರು. ಈಗಲೂ ಅನಂತೇಶ್ವರ ದೇವಸ್ಥಾನದ ವತಿಯಿಂದ ಕೋಲಾ ಹೂವಿನ ಪೂಜೆ ವಿಶೇಷ ಪೂಜೆ ಮಾರಿಪೂಜೆ ಪೂಜಾದಿಗಳು ನಡೆಯುತ್ತಿದೆ. ಉಡುಪಿ ನಗರದ ಅಬ್ಬರದ ದೈವವಾಗಿ ಕಾರ್ಣಿಕ ವನ್ನು ಮೆರೆಯುತ್ತಿದೆ. ಈ ಪುಣ್ಯ ಕ್ಷೇತ್ರದ ದೈವಸ್ಥಾನದಲ್ಲಿ ಮೂರು ದಿವಸ ಹೊಸ ನೇಮೋತ್ಸವ ನಡೆಯುತ್ತದೆ. ಮೊದಲ ದಿವಸ ಬೊಬ್ಬರ್ಯನ ನೇಮೋತ್ಸವ ಹಾಗೂ ಸವಾರಿ ಎರಡನೇ ದಿವಸ ಕಾಂತೇರಿ ಜುಮಾದಿ ಹಾಗೂ ಬಂಟ ಪಿಲಿಚಂಡಿ ಹಾಗೂ ಬಂಟ ಆಗು ಪಂಜುರ್ಲಿ ದೈವದ ನೇಮ ನಡೆಯುತ್ತದೆ ಮೂರನೇ ದಿವಸ ಕಲ್ಕುಡ ಬೈಕಡ್ತಿ ಕೊರಗಜ್ಜ ದೈವದ ನೇಮೋತ್ಸವ ನಡೆಯುತ್ತದೆ. ಪ್ರತಿ ತಿಂಗಳು ಸಂಕ್ರಮಣ ಪೂಜೆ ನಡೆಯುತ್ತದೆ. ಸಾವಿರಾರು ಭಕ್ತಾದಿಗಳು ಗಂಧಪ್ರಸಾದ ಹಣ್ಣುಕಾಯಿ ಕಾಯಿ ಮಾಡಿ ಸನ್ನಿಧಾನಕ್ಕೆ ಭೇಟಿಕೊಡುತ್ತಾರೆ ತಮ್ಮ ಕಷ್ಟ ಸಮಸ್ಯೆಗಳನ್ನು ಹೇಳಿಕೊಂಡು ದೈವಕ್ಕೆ ಹರಕೆ ಹೇಳುತ್ತಾರೆ. ದೈವದ ಹೆಸರು ಅಬ್ಬರದ ಬಬ್ಬರ್ಯ ಎಂದೆ ಹೆಸರುವಾಸಿಯಾಗಿದೆ. ಬರಹ :ವಿನೋದ್ ಶೆಟ್ಟಿ ಶೆಟ್ಟಿ ಬೊಬ್ಬರ್ಯ ದೈವಸ್ಥಾನ ಉಡುಪಿ
11 Jul 2020, 08:57 AM
Category: Kaup
Tags: