ಉಡುಪಿ ಜಿಲ್ಲಾ ರಂಗಮಂಟಪದ ಮೈದಾನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ
Thumbnail
ಉಡುಪಿ ಬೀಡಿನಗುಡ್ಡೆ ಜಿಲ್ಲಾ ರಂಗ ಮಂದಿರ ರ ಆವರಣ ಗೋಡೆ ಕುಸಿದು 3 ತಿಂಗಳಾದರೂ ಇನ್ನೂ ದುರಸ್ತಿಯಾಗದ ಕಾರಣ ರಂಗಮಂದಿರ ಆವರಣದಲ್ಲಿ ಕುಡುಕರು, ಅಲೆಮಾರಿಗಳು ತನ್ನ ಆಶ್ರಯತಾಣವಾಗಿ ಮಾಡಿರುತ್ತಾರೆ.ಮೈದಾನದಲ್ಲಿ ಅಲ್ಲಲ್ಲಿ ಬಿದ್ದಿರುವ ಮಧ್ಯದ ಬಾಟಲಿಗಳು ಇದನ್ನು ಪುಷ್ಠಿಕರೀಸಿವೆ. ರಂಗ ಮಂದಿರದ ಎದುರಿನ ಅವರಣ ಗೋಡೆ ಅಲ್ಲದೆ ರಂಗ ಮಂಟಪದ ಎಡ ಭಾಗದ ಅವರಣ ಗೋಡೆ ಸಂಪೂಣ೯ ಕುಸಿದಿದೆ. ಇದರಿಂದ ಕುಡುಕರಿಗೆ ಒಳಗೆ ತೆರಳಲು ಸುಲಭ ಸಾಧ್ಯವಾಗಿದೆ.ರಂಗ ಮಂಟಪದಲ್ಲಿರುವ ಕೊಠಡಿಯ ಎದುರು ನೈಮ೯ಲ್ಯ ದೂರದ ಮಾತಾಗಿದೆ. ಸಕಾ೯ರ ಲಕ್ಷಾಂತರ ರೂಪಾಯಿ ವ್ಯಯಿಸಿ ನಿಮಾ೯ಣಗೊಂಡ ಈ ಜಿಲ್ಲಾ ಮೈದಾನ ರಂಗ ಮಂಟಪದಲ್ಲಿ ಸಕಾ೯ರ ದ ಅಧಿಕೃತ ಕಾಯ೯ಕ್ರಮಗಳು ಹಾಗೂ ಸಾವ೯ಜನಿಕ ಸಭೆ ಸಮಾರಂಭ ನಡೆಯುತ್ತಿದ್ದವು.ಇದೀಗ ಕರೋನಾ ಹಾವಳಿಯಿಂದ ಯಾವುದೇ ಕಾಯ೯ಕ್ರಮ ನಡೆಯದೇ 4 - 5 ತಿಂಗಳುಗಳು ಕಳೆದಿವೆ. ಈ ಆವರಣಗೋಡೆ ಮರು ನಿಮಾ೯ಣ ಮಾಡಬೇಕು ಅದೇ ರೀತಿ ಇದರ ನಿವ೯ಹಣೆಯನ್ನು ಸರಿಯಾಗಿ ನಿವ೯ಹಿಸಲು ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದು ನಾಗರೀಕರ ಪರವಾಗಿ ವಿನಂತಿ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ
14 Jul 2020, 07:45 AM
Category: Kaup
Tags: