ದೈವ ಚಾಕಿರಿಯವರಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ - ವಿನೋದ್ ಶೆಟ್ಟಿ
ಕರಾವಳಿಯಲ್ಲಿ ಪ್ರಪಂಚದ ಎಲ್ಲೆಡೆ ವ್ಯಾಪಿಸಿರುವ ಮಹಾ ಕೋರನದಿಂದ ಹೊಟ್ಟೆಪಾಡಿಗೆ ಪೆಟ್ಟು ಬಿದ್ದ ದೈವ ಚಾಕ್ರಿ ವರ್ಗದವರಿಗೆ. ದೈವ ಚಾಕ್ರಿ ಪಂಗಡದವರಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಜಿಲ್ಲಾಧಿಕಾರಿ ಅವರಿಂದ ಯಾವುದೇ ಮನವಿಗೆ ಸ್ಪಂದನೆ ಇಲ್ಲ ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಮಂತ್ರಿಗಳಿಂದ ಯಾವುದೇ ಸ್ಪಂದನೆ ಹಾಗೂ ಸಹಕಾರ ಇಲ್ಲ.
ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಧರ್ಮ ಅದರ್ಮ ಮಾರ್ಗದಲ್ಲಿ ನಡೆಯುತ್ತಿರುವಾಗ ಧರ್ಮರಕ್ಷಣೆಗೆ ಬೇಕಾಗಿ ಮಿಗಿ ಲೋಕದಲ್ಲಿ ಈಶ್ವರ ದೇವರ ಅನುಗ್ರಹದಲ್ಲಿ ಅನ್ಯಾಯವನ್ನು ನಿರ್ಮೂಲನೆ ಮಾಡಲು ಧರ್ಮರಕ್ಷಣೆಗೆ ಬೇಕಾಗಿ ಸಾವಿರಾರು ದೈವ-ದೇವರು ನೆಲೆಯಾದ ಪುಣ್ಯಭೂಮಿ ನಮ್ಮ ತುಳುವ ನಾಡು.
ಜನವರಿಯಿಂದ ಮೇ ತಿಂಗಳ ಕೊನೆಯ ತನಕ ದೈವಾರಾಧನೆ ಕ್ಷೇತ್ರದಲ್ಲಿ ಊರಿನ ಪ್ರಮುಖ ದೇವಸ್ಥಾನ ದೈವಸ್ಥಾನಗಳಲ್ಲಿ ಗರಡಿಗಳಲ್ಲಿ ಹಾಗೂ ಊರಿನ ಮನೆತನದಲ್ಲಿ ದೈವಗಳಿಗೆ ಹರಕೆ ವಾರ್ಷಿಕ ನೇಮೋತ್ಸವ, ತಂಬಿಲ ಸೇವೆ, ಮಾರಿಪೂಜೆ, ದರ್ಶನ ಸೇವೆ, ಹಾಗೂ ಇತರ ಹಲವಾರು ಸೇವೆಗಳು ನಡೆಯುವ ಸಂದರ್ಭ, ಈ ವರ್ಷ ವಿಶ್ವದೆಲ್ಲೆಡೆ ಹಬ್ಬಿರುವ ಕೋರನ ಎಂಬ ರೋಗದಿಂದ ಸರ್ಕಾರದ ಆದೇಶ ಮೇರೆಗೆ ಎಲ್ಲಾ ಸೇವೆಗಳು ಸ್ಥಗಿತಗೊಂಡಿದೆ.. ಇದರಿಂದ ದೈವ ಚಾಕ್ರಿ ವರ್ಗದವರು ತಮ್ಮ ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದಾರೆ ದೈವ ಆರಾಧನೆ ಕ್ಷೇತ್ರ ಅವರ ಮೂಲ ಕುಲ ಕಸುಬಾಗಿರುತ್ತದೆ. ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು 30 ಸಾವಿರ ಮಂದಿ ದೈವ ಚಾಕ್ರಿ ವರ್ಗದವರು ಇದ್ದಾರೆ.
ಈ ಕ್ಷೇತ್ರದಲ್ಲಿ ಸುಮಾರು 20ಕ್ಕೂ ಹೆಚ್ಚು ಪಂಗಡಗಳಿವೆ.
ಎರಡು ತಿಂಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೆ, ಹಾಗೂ ಮಾನ್ಯ ಸಂಸದರಿಗೆ ಅವರು ಸಿಗದ ಕಾರಣ ಅವರ ಕಚೇರಿಯ ಸಹಾಯಕರಿಗೆ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಿರುತ್ತೇವೇ.
ಆದರೆ ನಮ್ಮ ಸಮಸ್ಯೆಗೆ ಯಾವುದೇ ಪ್ರತಿಕ್ರಿಯೆ ಹಾಗೂ ಸ್ಪಂದನೆ ಸಿಕ್ಕಿರುವುದಿಲ್ಲ. ನಂತರ ತುಳುನಾಡ್ ದೈವರಾಧಕರ ಸಹಕಾರಿ ಒಕ್ಕೂಟದ ಸುಮಾರು 120 ಮಂದಿ ಸದಸ್ಯರು ಒಟ್ಟಾಗಿ ನಮಗೆ ಸಿಗಬೇಕಾದ ಪರಿಹಾರ ಹಾಗೂ ತಕ್ಕಮಟ್ಟಿಗೆ 150 ಜನರ ಒಳಗೆ ದೈವಸ್ಥಾನಗಳ ನಡೆಯುವ ನೇಮೋತ್ಸವ, ಮಾರಿಪೂಜೆ ದರ್ಶನ, ಸೇವೆಗಳಿಗೆ ಅನುಮತಿ ನೀಡಬೇಕಾಗಿ ಮನವಿ ಅಲ್ಲಿ ಕೇಳಿರುತ್ತೇವೆ.
ಅನುಮತಿ ಕೊಟ್ಟರೆ ತಕ್ಕಮಟ್ಟಿಗೆ ದೈವ ಚಾಕ್ರಿ ವರ್ಗದವರು ಅದರಲ್ಲಿ ಬರುವ ಸಂಭಾವನೆಯಿಂದ ಜೀವನ ನಡೆಸಬಹುದು ಎಂಬ ಚಿಂತನೆಯಿಂದ ನಾವು ಮಾನ್ಯ ಜಿಲ್ಲಾಧಿಕಾರಿ ಹಾಗೂ ಉಡುಪಿ ಶಾಸಕರಿಗೆ ನಮ್ಮ ಒಕ್ಕೂಟದ ಪರವಾಗಿ ಮನವಿ ಕೊಟ್ಟಿರುತ್ತೇವೆ. ಸುಮಾರು 25 ದಿನದಿಂದ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಆಗಲಿ ರಾಜಕಾರಣಿಗಳಿಂದ ಇದರ ಬಗ್ಗೆ ಭರವಸೆ ಬಂದಿರುವುದಿಲ್ಲ.
ಮುಂದಿನ ದಿನಗಳಲ್ಲಿ ದಯಮಾಡಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾಗಿ.
ತುಳುನಾಡಿನ ಸಮಸ್ತ ದೈವ ಚಾಕ್ರಿ ವರ್ಗದವರು ತುಳುನಾಡು ದೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲಾ ಹಾಗೂ ಎಲ್ಲಾ ಘಟಕದ ಪರವಾಗಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ವಿನೋದ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ
