ಬೊಮ್ಮರಬೆಟ್ಟು ನಿವಾಸಿ ಕು.ರಕ್ಷಾಳಿಗೆ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ
ಸಾಧನೆ ಎನ್ನುವುದು ಉಳ್ಳವರ ಸೊತ್ತಲ್ಲ. ಸಾಧನೆ ಮಾಡುವ ಕನಸಿದ್ದರೆ ಏನಾದರೂ ಸಾಧಿಸಲು ಸಾಧ್ಯ ಮನುಷ್ಯ ಸಾಧನೆಗೆ ದೇವರ ಆಶೀರ್ವಾದ ಕೃಪೆ ಎರಡೂ ಇರುತ್ತದೆ.
ಇಲ್ಲೊಬ್ಬ ಸಾಧಕಿ ತನ್ನ ಅಂಗವೈಕಲ್ಯಕ್ಕೆ ನಾಚುವಂತಹ ಸಾಧನೆ ಮಾಡಿ ಮನೆ ಮಾತಾಗಿದ್ದಾರೆ.
ಉಡುಪಿ ತಾಲೂಕು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡುಜೆ ಶಾಲೆ ಬಳಿಯ ನಿವಾಸಿ ಕು. ರಕ್ಷಾ ಬಿನ್ ಉಮೇಶ್ ನಾಯಕ್ ಇವರೇ ಆ ಸಾಧಕಿ. ಈಕೆ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ 93% ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ. ಅದರಲ್ಲೇನು ವಿಶೇಷ ಇದಕ್ಕಿಂತ ಹೆಚ್ಚು ಅಂಕ ಗಳಿಸಿದವರೂ ಇಲ್ಲವೆ ಎನ್ನದಿರಿ. ಈಕೆಗೆ ಹುಟ್ಟಿನಿಂದ ಬಲ ಕಾಲು, ಬಲ ಕೈ ಸ್ವಾಧೀನ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ *ಎಡಗೈಯಲ್ಲಿ ಪರೀಕ್ಷೆ ಬರೆದು* ಅದ್ವಿತೀಯ ಸಾಧನೆ ಮಾಡಿ ಇಷ್ಟು ಅಂಕ ಗಳಿಸಿರುವುದು ಅಭಿನಂದನೀಯ ವಿಷಯ. ಎಲ್ಲಾ ರೀತಿಯ ವ್ಯವಸ್ಥೆಗಳು ಇದ್ದೂ ಸದೃಢರಾಗಿದ್ದರೂ ಕಲಿಯಲು ನುಣುಚಿಕೊಳ್ಳುವ ಹಲವಾರು ವಿದ್ಯಾರ್ಥಿಗಳ ನಡುವೆ ಕು. ರಕ್ಷಾರವರ ಈ ವಿಶೇಷ ಸಾಧನೆ ಎಲ್ಲರಿಗೂ ಮಾದರಿ.
ಬಡತನ, ಅಂಗವೈಕಲ್ಯ ಇದ್ದರೂ ನಿರಂತರ ಅಧ್ಯಯನ ಶೀಲತೆ ಸಾಧಿಸಬೇಕೆನ್ನುವ ಅದಮ್ಯ ಮನಸ್ಸು ಈ ಸಾಧನೆ ಮಾಡಲು ಸಾಧ್ಯವಾಗಿದೆ.
ಅಂಗವೈಕಲ್ಯ ಹೊರಗೆ ಮಾತ್ರ ಒಳಗಿನ ಸಾಧನೆಗೆ ಯಾವುದೇ ವೈಕಲ್ಯ ಇಲ್ಲ ನಾನು ಕೂಡ ಬೇರೆ ವಿದ್ಯಾಥಿ೯ಗಳಂತೆ ಸಮಾನ ಎಂಬುದನ್ನು ಮನಗಂಡು ನನ್ನ ಪಾಠಗಳನ್ನು ಓದುತ್ತಿದ್ದೆ ನನಗೆ ಖಂಡಿತವಾಗಿಯೂ ಉತ್ತಮ ಅಂಕಗಳು ಬರುತ್ತವೆ ಎಂಬ ನಂಬಿಕೆ ಇತ್ತು ಎಂಬುದನ್ನು ಮನತುಂಬಿ ಹೇಳುತ್ತಾರೆ ರಕ್ಷಾ.
ಮುಂದೆ ಉನ್ಯತ ವ್ಯಾಸಂಗ ಮಾಡುವ ಕನಸು ಅವರಲ್ಲಿದೆ.
ಈ ರೀತಿಯ ವಿದ್ಯಾಥಿ೯ ಎಲ್ಲರಿಗೂ ಮಾದರಿ . ಅವರ ಸಾಧನೆಯನ್ನು ಗಮನಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಈಸಬೇಕು ಇದ್ದು ಜಯಿಸಬೇಕು ಎಂಬ ಮಾತಿನಂತೆ ಬದುಕುತ್ತಿರುವ ಈ ಸಾಧಕಿಗೆ ಸಲಾಂ
ಸಕಾ೯ರ ಇವರ ಸಾಧನೆಗೆ ಪೂರಕವಾದ ಪ್ರೋತ್ಸಾಹ ನೀಡಬೇಕಕಾಗಿದೆ.
ರಾಘವೇಂದ್ರ ಪ್ರಭು,ಕವಾ೯ಲು
ಯುವ ಲೇಖಕ
