Updated News From Kaup
ರಾಮನ ಆಲಯಕ್ಕೆ ಕಾಯುತ್ತಿದೆ ರಾಂಪುರ
Posted On: 17 Jan 2024, 09:36 AM
ಅಯೋಧ್ಯೆ ಭವ್ಯ ರಾಮಮಂದಿರ ಲೋಕಾರ್ಪಣೆಗೊಳ್ಳುವ ಈ ಸುಸಂದರ್ಭದಲ್ಲಿ ಎಲ್ಲೆಡೆ ರಾಮನ ಧ್ಯಾನ ನಡೆಯುತ್ತಿದೆ. ಇಡೀ ಭಾರತ ದೇಶವೇ ಶ್ರೀ ರಾಮನ ಅಯೋಧ್ಯಾ ಆಗಮನಕ್ಕೆ ಕಾಯುತ್ತಿದೆ. ಉಡುಪಿ ತಾಲೂಕಿನ ಅಲೆವೂರು ಗ್ರಾಮದ ರಾಂಪುರ ಎಂಬ ಸಣ್ಣ ಪ್ರದೇಶ ರಾಮನ ಭವ್ಯ ಆಲಯಕ್ಕಾಗಿ ಕಾಯುತ್ತಿದೆ. ಇಲ್ಲಿಯೇ ಪಕ್ಕದಲ್ಲಿರುವ ರಾಮಮಂದಿರ ಶಿಥಿಲಗೊಂಡು ಸಂಪೂರ್ಣವಾಗಿ ಜೀರ್ಣವಾಗಿದೆ. ಆದರೆ ಈ ಆಲಯದಲ್ಲಿರುವ ಸೀತಾ ಸಹಿತ ರಾಮದೇವರ ಮೂರ್ತಿ ನೋಡಲು ಆಕರ್ಷಕವಾಗಿದೆ. ಒಂದು ಕಡೆಯಲ್ಲಿ ಉಬ್ಬಿದ ಶೈಲಿಯ ರಾಮದೇವರ ಮೂರ್ತಿ ಇದೆ ರೀತಿ ಅದರ ಕೆಳಗಡೆ ಮೂರು ಹಿತ್ತಾಳೆಯ ಪುರಾತನ ಮೂತಿ೯ಗಳು ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ದೇವಾಲಯ ಖಾಸಗಿ ಪ್ರದೇಶದಲ್ಲಿದ್ದು, ಕಾಲಂತರದಲ್ಲಿ ಇದು ವಿವಿಧ ಕಾರಣಗಳಿಂದ ಜೀರ್ಣವಾಗಿದೆ ಇದೇ ದೇವಾಲಯದ ಹೆಸರಿನಿಂದ ಈ ಪ್ರದೇಶಕ್ಕೆ ರಾಮಪುರ ಅಥವಾ ರಾಂಪುರ ಎಂಬ ಹೆಸರು ಬಂದಿತ್ತು. ಇಡೀ ಗ್ರಾಮಕ್ಕೆ ಈ ಒಂದು ದೇವಾಲಯ ಮುಕುಟ ಪ್ರಾಯವಾಗಿತ್ತು. ಇದೀಗ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಒತ್ತಾಯಗಳು ಕೇಳಿಬರುತ್ತಿವೆ. ಪ್ರತಿ ದಿನ ಇಲ್ಲಿ ಆಸಕ್ತ ಜನರು ಭೇಟಿ ಕೊಡುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ಯಾವ ರೀತಿ ಪ್ರಾಮುಖ್ಯತೆಯನ್ನು ಪಡೆದಿದೆಯೋ ಅದೇ ರೀತಿ ಈ ರಾಮಪುರ ರಾಮದೇವಲಯ ಪ್ರಖ್ಯಾತಿಯನ್ನು ಪಡೆದಿತ್ತು ಇಲ್ಲಿನ ದೇವಾಲಯದ ಕಂಬಗಳು ಸುತ್ತು ಪೌಳಿ ನಶಿಸಿಹೋಗಿದೆ. ಕಂಬಗಳು ಧರೆಗುರುಳಿ ನಿಂತರೆ, ದೇವಾಲಯದ ಒಳಗಡೆ ಗೋಡೆಗಳಲ್ಲಿ ಗೆದ್ದಲು ಹಿಡಿದಿವೆ. ಇದೀಗ ಈ ದೇವಾಲಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಪ್ರಚಾರ ಸಿಕ್ಕಿದ ಪರಿಣಾಮ ಇದರ ಹಲವಾರು ಜನರಲ್ಲಿ ಚರ್ಚಿಗಳು ಪ್ರಾರಂಭವಾಗಿವೆ. ಆದರೆ ಖಾಸಗಿ ಸ್ಥಳದಲ್ಲಿರುವ ಕಾರಣ ಈ ದೇವಾಲಯದ ಅಭಿವೃದ್ಧಿ ಈವರೆಗೂ ನಡೆದಿಲ್ಲ ಎಂಬ ಮಾಹಿತಿ ಇದೆ . ಇಡೀ ಗ್ರಾಮಕ್ಕೆ ಹೆಸರುವಾಸಿಯಾದ ಮತ್ತು ಗ್ರಾಮದ ಹೆಸರಿಗೆ ಕಾರಣವಾದ ಈ ಮಂದಿರ ತನ್ನ ಹಿಂದಿನ ಗತವೈಭವವನ್ನು ಮತ್ತೆ ಸಾರಬೇಕಾಗಿದೆ ಇದೀಗ ಈ ದೇವಾಲಯದ ನಿರ್ಮಾಣಕ್ಕೆ ಕೂಗು ಕೇಳಿ ಬರುತ್ತದೆ ಏನೇ ಆಗಲಿ ಈ ದೇವಾಲಯ ಮತ್ತೊಮ್ಮೆ ತನ್ನ ಗತ ವೈಭವ ಭಕ್ತರಿಗೆ ತೋರಿಸಬೇಕಾಗಿದೆ. ಜನರು ಈ ಬಗ್ಗೆ ಗಮನ ನೀಡಿದರೆ ಅದೇ ರೀತಿ ಈ ಸ್ಥಳದ ಸಂಬಂಧಿಕರು ಮನಸ್ಸು ಮಾಡಿದರೆ ಮಂದಿರದ ಜೀರ್ಣೋದ್ದಾರ ಕಷ್ಟದ ಮಾತಲ್ಲ. ಏನೇ ಆಗಲಿ ರಾಮಮಂದಿರವಾಗಲಿ. ಬರಹ : ರಾಘವೇಂದ್ರ ಪ್ರಭು, ಕವಾ೯ಲು
ಜನವರಿ 21 : ದೇವರ ಚಿತ್ರ ಬಿಡಿಸುವ ಸ್ಪರ್ಧೆ
Posted On: 16 Jan 2024, 05:40 PM
ಪಡುಬಿದ್ರಿ : ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಮಂದಿರ ಉದ್ಘಾಟನೆ ಮತ್ತು ಶ್ರೀ ರಾಮನ ವಿಗ್ರಹದ ಪ್ರತಿಷ್ಠಾಪನೆಯ ನಿಮಿತ್ತ ದಿ| ಉಗ್ಗು ದೇವಿ ನಾರಾಯಣ ಇವರ ಮಕ್ಕಳು ಮತ್ತು ಗೆಳೆಯರ ಬಳಗ, ಮುಂಬಯಿ ಇವರ ಜಂಟಿ ಆಶ್ರಯದಲ್ಲಿ ಜನವರಿ 21, ಆದಿತ್ಯವಾರ ಬೆಳಿಗ್ಗೆ ಗಂಟೆ 10ರಿಂದ ಪಡುಬಿದ್ರಿ ಬೀಚ್ ರೋಡ್ ನಲ್ಲಿರುವ ಸಾಗರ ವಿದ್ಯಾಮಂದಿರ ಸಭಾಗೃಹದಲ್ಲಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಮಲ್ಪೆಯಿಂದ ಹೆಜಮಾಡಿ ವರೆಗಿನ ಮೊಗವೀರರು ಮತ್ತು ಸಾಗರ ವಿದ್ಯಾ ಮಂದಿರದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬಹುದು. 5ರಿಂದ 10, 11ರಿಂದ 15, 16ರಿಂದ ಮೇಲ್ಪಟ್ಟ ವಯಸ್ಸಿನವರಿಗೆ ಭಾಗವಹಿಸುವ ಅವಕಾಶವಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವವರು ಬರುವಾಗ ವಿಳಾಸದ ದಾಖಲೆ ಮತ್ತು ವಯಸ್ಸಿನ ದಾಖಲೆ ತರಬೇಕೆಂದು ವಿನಂತಿಸಿದ್ದಾರೆ. ಡ್ರಾಯಿಂಗ್ ಪೇಪರ್ ಸ್ಥಳದಲ್ಲಿ ನೀಡಲಾಗುವುದು. ಉಳಿದಂತೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಸ್ಪರ್ಧಾರ್ಥಿಗಳೇ ತರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 96995 36571 7022194379
ಕಟಪಾಡಿ : ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ
Posted On: 16 Jan 2024, 05:02 PM
ಕಟಪಾಡಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯೊಂದಿಗೆ ಭಾರತದಾದ್ಯಂತ ನವೆಂಬರ್ 15 ರಿಂದ ಜನವರಿ 26ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಮಂಗಳವಾರದಂದು ಕಟಪಾಡಿ ಗ್ರಾಮ ಪಂಚಾಯತ್ ಬಳಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕರು ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುವುದು, ಈ ಯೋಜನೆಗಳನ್ನು ಕೊನೆಯ ಮೈಲಿಯವರೆಗೂ ಮುಟ್ಟಿಸುವುದು, ಈವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದ್ದು, ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್ಇಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು ಎಂದರು. ಈ ಸಂದರ್ಭ ದೀನ್ ದಯಾಳ್ ಅಂತ್ಯೋದಯ ಯೋಜನೆ ಅಡಿಯಲ್ಲಿ ಸ್ವಸಹಾಯ ಸಂಘಗಳಿಗೆ ಮಂಜೂರಾದ ಸಹಾಯಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾವತಿ, ನಬಾರ್ಡ್ ನ ಸಂಗೀತಾ ಕರ್ತ, ವಿಕಸಿತ ಭಾರತ ಸಂಕಲ್ಪ ಯಾತ್ರೆ ನೊಡಲ್ ಅಧಿಕಾರಿಗಳಾದ ಸಂತೋಷ್, ಕೆನರಾ ಬ್ಯಾಂಕ್ ನ ಎಫ್.ಎಲ್.ಸಿ ಪ್ರದೀಪ್, ಅಂಚೆ ಇಲಾಖೆಯ ಸಂತೋಷ್ ಮಧ್ಯಸ್ಥ, ಕೃಷಿ ಇಲಾಖೆಯ ಅರುಣ್ ಕುಮಾರ್, ವೆಂಕಟೇಶ್, ಜಿಲ್ಲಾ ಆಸ್ಪತ್ರೆಯ ಆರೋಗ್ಯ ಮಿತ್ರದ ಹರೀಶ್, ಕಟಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶುೃತಿ, ಗ್ರಾಮ ಆಡಳಿತಾಧಿಕಾರಿಗಳಾದ ಡ್ಯಾನಿಯಲ್ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪುತ್ತಿಗೆ ಮಠಾಧೀಶರ ಭೇಟಿ
Posted On: 15 Jan 2024, 07:51 PM
ಉಚ್ಚಿಲ : ಇತ್ತೀಚೆಗೆ ನವೀಕೃತಗೊಂಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿಯವರು ಆಗಮಿಸಿ, ಶ್ರೀ ಮಹಾಲಕ್ಷ್ಮಿಗೆ ಮತ್ತು ಸ್ವಾಮೀಜಿಯವರ ಪಟ್ಟದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಉಚ್ಚಿಲ ಮಹಾಲಕ್ಷ್ಮಿ ದೇವಳದ ವತಿಯಿಂದ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ದೇವಳದ ಪ್ರಧಾನ ಅರ್ಚಕ ಕೆ ವಿ ರಾಘವೇಂದ್ರ ಉಪಾಧ್ಯಾಯರವರು ಶ್ರೀ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಮೋಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ದೇವಸ್ಥಾನದ ಪ್ರಧಾನ ಮೆನೇಜರ್ ಸತೀಶ್ ಅಮೀನ್ ಪಡುಕೆರೆ, ಕಾರ್ಯದರ್ಶಿ ಸುಧಾಕರ್ ಕುಂದರ್ ಸಹಿತ ಭಕ್ತಾದಿಗಳು ಉಪಸ್ಥಿತರಿದ್ದರು.
ಉಡುಪಿ : ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವಸಹಾಯ ಸಂಘ - ಉಚಿತ ಮಜ್ಜಿಗೆ ವಿತರಣೆ
Posted On: 15 Jan 2024, 07:32 PM
ಉಡುಪಿ : ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವಸಹಾಯ ಸಂಘ ಇದರ ವತಿಯಿಂದ ಬಾಲಾಜಿ ರಾಘವೇಂದ್ರ ಆಚಾರ್ಯ ಹೆಚ್.ಪಿ ಗ್ಯಾಸ್ ಇವರ ಪ್ರಾಯೋಜಕತ್ವದಲ್ಲಿ ಮಕರ ಸಂಕ್ರಾಂತಿಯ ಹಗಲು ಉತ್ಸವ ಕಾರ್ಯಕ್ರಮದಲ್ಲಿ ಉಚಿತ ಮಜ್ಜಿಗೆ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಆಚಾರ್ಯ, ಕಾರ್ಯದರ್ಶಿ ಕೇಶವ, ಸದಸ್ಯರು ಭಾಗವಹಿಸಿದ್ದರು.
ಕಾರ್ಕಳ : ಕರಾಟೆಯಲ್ಲಿ ನೊಬೆಲ್ ವಿಶ್ವದಾಖಲೆ ಬರೆದ ನಿಟ್ಟೆಯ ಅವಳಿ ಸಹೋದರರು
Posted On: 15 Jan 2024, 07:18 PM
ಕಾರ್ಕಳ : ನಿಟ್ಟೆಯ ಅವಳಿ ಸಹೋದರರಾದ ಅನುಷ್ ಮತ್ತು ಆಯುಷ್ ಕರಾಟೆಯಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಮೂಲಕ ನೊಬೆಲ್ ವರ್ಲ್ಡ್ ರೆಕಾಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮೂಡುಬಿದಿರೆ ಶೋರಿನ್ ರಿಯೋ ಕರಾಟೆ ಅಸೋಸಿಯೇಶನ್ (ರಿ.) ಆಶ್ರಯದಲ್ಲಿ ಮೂಡುಬಿದಿರೆಯ ಸಮಾಜಮಂದಿರದಲ್ಲಿ ನಡೆದ ಕರಾಟೆ ಕಾರ್ನಿವಲ್ (karate Carnival) ನಲ್ಲಿ ಅವರು ಈ ದಾಖಲೆ ಮಾಡಿದ್ದಾರೆ. ಆಯುಷ್ ಅರುಣ್ ಕೆ. ಒನ್ ಮಿನಿಟ್ 213 ಕಿಕ್ ಟು ಪಂಚಿಂಗ್ ಬ್ಯಾಗ್(1Minute 213kick To Punching Bag)ವಿಭಾಗದಲ್ಲಿ ದಾಖಲೆ ಹಾಗೂ ಅನುಷ್ ಅರುಣ್ ಕುಮಾರ್ ಕೆ. ಮೀಟರ್ ಡಿಸ್ಟೆನ್ಸ್ ಸೆಡ್ ಕಿಕ್ ಶಾರ್ಟೆಸ್ಟ್ ಡ್ಯುರೇಷನ್ (1000 Metere Distance Side Kick Shortest Duration) ವಿಭಾಗದಲ್ಲಿ ದಾಖಲೆ ಮಾಡಿದ್ದಾರೆ. ಎಳವೆಯಲ್ಲಿಯೇ ಕರಾಟೆಯಲ್ಲಿ ತೊಡಗಿಸಿಕೊಂಡಿರುವ ಅವಳಿ ಸಹೋದರರಾದ ಆಯುಷ್ ಅರುಣ್ ಕೆ. ಮತ್ತು ಅನುಷ್ ಅರುಣ್ ಕುಮಾರ್ ಕೆ. ಕರಾಟೆಯಲ್ಲಿ ಹಲವಾರು ರಾಜ್ಯ,ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅರುಣ್ ಕುಮಾರ್ ಮತ್ತು ಸಂಗೀತ ದಂಪತಿಗಳ ಪುತ್ರರಾದ ಇವರು ನಿಟ್ಟೆಯ ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇವರ ಸಾಧನೆಗೆ ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಕಾಪು : ನೂತನ ಇನ್ನಂಜೆ ಮಹಿಳಾ ಮಂಡಳಿಯ ಉದ್ಘಾಟನೆ
Posted On: 15 Jan 2024, 11:11 AM
ಕಾಪು : ನೂತನ ಇನ್ನಂಜೆ ಮಹಿಳಾ ಮಂಡಳಿಯನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಎಸ್‌ವಿಎಚ್ ಶಾಲೆಯ ದಾಸಭವನದಲ್ಲಿ ಜನವರಿ 13 ರಂದು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಾತೆಯರು ತಮ್ಮ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿ ಆದರ್ಶಗಳನ್ನು ಮೈಗೂಡಿಸುವಂತೆ ಮಾಡಿ ತಾಯಿಯ ಮಮತೆ ಸಮಾಜವನ್ನೇ ತಿದ್ದುವಂತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರುವ ಅವಕಾಶವಿದ್ದು ಸರಕಾರವು ಕೂಡ ಈ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರಯೋಜನವಾಗುವ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಇದರ ಸದುಪಯೋಗ ಎಲ್ಲಾ ಮಹಿಳೆಯರು ಪಡೆದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಿ ಮುಂದೆ ಬರಬೇಕೆಂದು ತಿಳಿಸಿದರು. ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು ಮಣಿಪಾಲ ಇಲ್ಲಿನ ಉಪನ್ಯಾಸಕರಾದ ಅರ್ಪಿತ ಪ್ರಶಾಂತ್ ಶೆಟ್ಟಿ ಮಾತನಾಡಿ ಮಹಿಳೆಯರು ಕುಟುಂಬದ ಯುವಜನತೆ ಹಾದಿ ತಪ್ಪುವುದನ್ನು ತಡೆಯಲು ಹಾಗೂ ಅವರ ವೈಯಕ್ತಿಕ ಸಮಸ್ಯೆಗಳು, ಸಮಾಜದಲ್ಲಿ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ಕ್ರಿಯಾಶೀಲರಾಗಬೇಕು. ಮನೆಯಲ್ಲಿ ಇರುವ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು, ಮಾಹಿತಿ ನೀಡಲು ಸಹಕರಿಸಬೇಕು ಎಂದು ಕರೆ ನೀಡಿದರು. ತಾಲೂಕು ಮಹಿಳಾ ಮಂಡಳಿಗಳ ಉಪಾಧ್ಯಕ್ಷರಾದ ಗೀತಾ ವಾಗ್ಳೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಸರಳ ಕಾಂಚನ್, ಎಸ್‌ವಿಎಚ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ ಸಂದರ್ಭೋಚಿತವಾಗಿ ಮಾತನಾಡಿದರು. ಎಸ್‌ವಿಎಚ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮಂಜುಳ ಎಸ್ ನಾಯಕ್, ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ, ಇನ್ನಂಜೆ ಯುವಕ ಮಂಡಲದ ಉಪಾಧ್ಯಕ್ಷರಾದ ಮಧುಸೂದನ ಆಚಾರ್ಯ, ಇನ್ನಂಜೆ ಯುವತಿ ಮಂಡಲದ ಅಧ್ಯಕ್ಷೆ ಲಕ್ಷ್ಮಿ ವೈ ನಾಯಕ್, ನೂತನ ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಶಕ್ಕು ಬಾಯಿ ನಂದನ್ ಕುಮಾರ್, ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಪೂರ್ಣಿಮಾ ಸುರೇಶ್, ಜೊತೆ ಕಾರ್ಯದರ್ಶಿ ಅನಿತಾ ಮಥಾಯಸ್, ಕ್ರೀಡಾ ಕಾರ್ಯದರ್ಶಿ ಈಶ್ವರಿ, ಜೊತೆ ಕಾರ್ಯದರ್ಶಿ ಜಾನಕಿ, ಸಾಂಸ್ಕೃತಿಕ ಕಾರ್ಯದರ್ಶಿ ಸಂಧ್ಯಾ ಬಾಲಕೃಷ್ಣ ಕೋಟ್ಯಾನ್, ಉಪಾಧ್ಯಕ್ಷರಾದ ವಸಂತಿ ಆಚಾರ್ಯ, ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂತನ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ವೇತ ಲಕ್ಷ್ಮಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸೀಮಾ ಮಾರ್ಗರೇಟ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಆಶಾ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ಮಂಡಳಿಯ ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಸುಮಲತಾ ಶೇಖರ್ ನಿರೂಪಿಸಿದರು. ಕಾರ್ಯದರ್ಶಿ ಸಿಲ್ವಿಯಾ ವಿನಫ್ರೆಡ್ ಕ್ಯಾಸ್ತಲಿನೋ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಮಂಡಳಿಯ ಸದಸ್ಯರಿಂದ ಮನೋರಂಜನ ಕಾರ್ಯಕ್ರಮ ಜರಗಿತು.
ಉಡುಪಿ : ಜೇಸಿಐ ಉಡುಪಿ ಸಿಟಿ - ಸಂಚಲನ ಪ್ರೇರಣಾ ತರಬೇತಿ ಕಾಯಾ೯ಗಾರ
Posted On: 14 Jan 2024, 05:43 PM
ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ನೂತನ ಸದಸ್ಯರಿಗಾಗಿ ಸಂಚಲನ ಪ್ರೇರಣಾ ತರಬೇತಿ ಕಾಯಾ೯ಗಾರ ಜನವರಿ 14ರಂದು ಹಿಂದಿ ಭವನದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ರಾಷ್ಟ್ರೀಯ ತರಬೇತುದಾರ ಬಾಸುಮ ಕೊಡಗು ತರಬೇತಿ ನೀಡಿದರು. ಮುಖ್ಯ ಅತಿಥಿಯಾಗಿ ಪೂವಾ೯ಧ್ಯಕ್ಷ ರಫೀಕ್ ಖಾನ್ ಭಾಗವಹಿಸಿದ್ದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷೆ ಡಾI ಹರಿಣಾಕ್ಷಿ ಕಕೇ೯ರ ವಹಿಸಿದ್ದರು. ಈ ಸಂದಭ೯ದಲ್ಲಿ ಪೂವಾ೯ಧ್ಯಕ್ಷರುಗಳು, ಸದಸ್ಯರು ಭಾಗವಹಿಸಿದ್ದರು. ಕಾಯ೯ದಶಿ೯ ಸಂಧ್ಯಾ ಕುಂದರ್ ವಂದಿಸಿದರು.
ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ
Posted On: 14 Jan 2024, 05:38 PM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಸಂಸ್ಥೆಯ ವತಿಯಿಂದ ನಮ್ಮ ಪರಿಸರದ ಸಂರಕ್ಷಣೆ ನಮ್ಮದೇ ಹೊಣೆ ಎಂಬ ಕಾರ್ಯಕ್ರಮದಡಿ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆರಂದಿ ಕಟ್ಟ ಹೊಳೆಯಲ್ಲಿ ನಡೆಸಲಾಯಿತು. ಈ ಸ್ವಚ್ಛತಾ ಅಭಿಯಾನದಲ್ಲಿ ಪಲಿಮಾರು ಗ್ರಾಮಪಂಚಾಯತ್ ಅಧ್ಯಕ್ಷರಾದ ಸೌಮ್ಯಾಲತ ಶೆಟ್ಟಿ, ಪಿಲಾರ್ ಸುಧಾಕರ ಶೆಣೈ, SLRM ಪಲಿಮಾರು ಘಟಕದ ಉಸ್ತುವಾರಿ ರೇಖಾ, ಮಹೇಶ್, ಪಂಚಾಯತ್ ಸದಸ್ಯರಾದ ಗಾಯತ್ರಿ ಡಿ ಪ್ರಭು, ಸತೀಶ್ ದೇವಾಡಿಗ ಸುಜಾತಾ, ಹೊೖಗೆ ಫ್ರೆಂಡ್ಸ್ ಅಧ್ಯಕ್ಷರಾದ ರಿತೇಶ್ ದೇವಾಡಿಗ, ಕಾರ್ಯದರ್ಶಿ ಸತೀಶ ಕುಮಾರ್, ಉಪಾಧ್ಯಕ್ಷರಾದ ಸಂತೋಷ್ ದೇವಾಡಿಗ , ರಾಘವೇಂದ್ರ ಸುವರ್ಣ, ಜ್ಞಾನೇಶ್ ಕೋಟ್ಯಾನ್, ಶ್ರೀನಿತ್, ಶ್ರೀಜಿತ್, ರೋಷನ್ , ಸಂಪತ್, ಅಂಕಿತ್ ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ರಾಷ್ಟ್ರ ಚೇತನ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ
Posted On: 14 Jan 2024, 12:29 PM
ಕಾರ್ಕಳ : ಸ್ವಾಮಿ ವಿವೇಕಾನಂದರ ಚಿಂತನೆಗಳು ಭಾರತ ಮಾತ್ರವಲ್ಲ ವಿಶ್ವವ್ಯಾಪಿಯಾದುದು. ಯುವಕರು ದೇಶದ ಭವಿಷ್ಯ ಉಜ್ವಲಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆತ್ಮೋದ್ಧಾರ ಮಾರ್ಗವೇ ಜಗವನ್ನು ಹಾಗೂ ಮನುಷ್ಯರನ್ನು ಅರಿಯಲು ಇರುವ ದಾರಿ. ಯುವಕರ ಕಣ್ಮಣಿಯಾಗಿ, ಸಿಡಿಲ ಸಂತನಾಗಿ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಮಹಾತ್ಮ ಸ್ವಾಮಿ ವಿವೇಕಾನಂದರು. ಎಲ್ಲರಿಗೂ ಸ್ಪೂರ್ತಿಯ ಚಿಲುಮೆ ಎಂದು ಗಣಿತ ಉಪನ್ಯಾಸಕ ಪ್ರದೀಪ್ ಅಂಚನ್ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ʼಯುವ ಸಪ್ತಾಹʼದ ಅಂಗವಾಗಿ ನಡೆದ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಗತ್ತು ಭಾರತದ ಕಡೆಗೆ ಕೀಳಾಗಿ ಕಾಣುತ್ತಿರುವಾಗ ಭಾರತದ ಅಂತಃಶಕ್ತಿ, ಆತ್ಮಜ್ಞಾನ, ಆಧ್ಯಾತ್ಮ ಕೊಡುಗೆಗಳ ಕುರಿತು ಪಾಶ್ಚಿಮಾತ್ಯರ ಕಣ್ಣು ತೆರೆಸಿ, ಶ್ರೇಷ್ಠ ಜ್ಞಾನ ಪರಂಪರೆ, ಮೌಲ್ಯಗಳ ಭಂಡಾರ ಭಾರತ ಎಂಬುದನ್ನು ತಿಳಿಸಿಕೊಟ್ಟವರು ವಿವೇಕಾನಂದರು. ಪುಣ್ಯಭೂಮಿ ಭಾರತದ ಅಣು ಅಣುವಿನಲ್ಲೂ ದೈವತ್ವವಿದೆ. ಇಂತಹ ಉತ್ಕೃಷ್ಟ ಯೋಚನೆ ಹೊಂದಿದ್ದ. ಋಷಿ ಮುನಿಗಳ ತಪಸ್ಸಿನಿಂದ ಭರತಭೂಮಿ ಇನ್ನಷ್ಟು ಪವಿತ್ರಗೊಂಡಿತ್ತು. ಆದ್ದರಿಂದ ಭಾರತೀಯರಾದ ನಾವೆಲ್ಲರೂ ವಿವೇಕಾನಂದರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ನೈತಿಕ ಶಕ್ತಿ, ಉತ್ತಮ ವಿಚಾರಧಾರೆಗಳು, ಎಲ್ಲರೂ ಸಮಾನರು ಹಾಗೂ ಮನುಷ್ಯತ್ವದಲ್ಲಿ ದೇವರನ್ನು ಕಂಡವರು ವಿವೇಕಾನಂದರು. ಅವರ ಮಾತುಗಳು ನಮ್ಮ ನಡೆ-ನುಡಿಯಲ್ಲಿ ಪ್ರೇರಣೆ ಪಡೆದು ಹಾಗೆಯೇ ಜೀವಿಸುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ಚಂದ್ರಕಾಂತ್, ರಾಮಕೃಷ್ಣ ಹೆಗಡೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕು. ಸಂಹಿತಾ ಹೆಬ್ಬಾರ್ ವಂದಿಸಿದರು. ಕು. ಶೃದ್ಧಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.
