Updated News From Kaup

ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ - ನಮಾಮಿ ರಾಮ ಭಜಕಮ್ ; ಕರಸೇವಕರಿಗೆ ಗೌರವಾರ್ಪಣೆ

Thumbnail
Posted On: 06 Jan 2024, 07:32 PM

ಕಟಪಾಡಿ : ನಮಾಮಿ ರಾಮ ಭಜಕಮ್ ಕಾರ್ಯಕ್ರಮದಡಿ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ, ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ವತಿಯಿಂದ ಕಾಪು ತಾಲೂಕಿನ ಅಯೋಧ್ಯೆ ರಾಮ ಮಂದಿರದ ಕರಸೇವೆಯಲ್ಲಿ ಭಾಗಿಯಾದ ಕರಸೇವಕರನ್ನು ಗೌರವಿಸಿದರು. ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರು ನಾರಾಯಣ ಕಾಮತ್, ಕೋಡುಗುಡ್ಡೆ, ಶ್ರೀಧರ ಶೆಟ್ಟಿ ಕೋಡು, ಸುಂದರ ಪ್ರಭು ಶಿರ್ವ , ಶ್ರೀಪತಿ ಕಾಮತ್ ಶಿರ್ವ, ದಿನೇಶ್ ಪಾಟ್ಕರ್ ಮಟ್ಟಾರು, ರಮೇಶ್ ಪ್ರಭು ಬೆಳಂಜಾಲೆಗೆ ತೆರಳಿ ಕರಸೇವಕರಿಗೆ ಅಭಿವಂದಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲೆ ಅಧ್ಯಕ್ಷೆ ವೀಣಾ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಸಂಘದ ಅಧ್ಯಕ್ಷ ಜಯಪ್ರಕಾಶ್ ಪ್ರಭು, ಸಂಘದ ಸ್ವಯಂ ಸೇವಕ ಸುಬ್ರಹ್ಮಣ್ಯ ವಾಗ್ಳೆ, ಶಿರ್ವ ವ್ಯವಸಾಯಿಕ ಸೇವಾ ಸಹಕಾರಿ ನಿ. ಉಪಾಧ್ಯಕ್ಷೆ ವಾರಿಜ ಪೂಜಾರಿ, ವಿಶ್ವ ಹಿಂದೂ ಪರಿಷದ್ ಮಟ್ಟಾರು ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಶಿವಪ್ರಸಾದ್ ನಾಯ್ಕ, ಮಾತೃ ಶಕ್ತಿ ಕಾಪು ತಾಲೂಕು ಸಹ ಪ್ರಮುಖ್ ಉಷಾ ಪಾಟ್ಕರ್, ಮಾತೃ ಶಕ್ತಿ ಮಟ್ಟಾರು ಪ್ರಮುಖ್ ಸುಮತಿ ಸಾಲ್ಯಾನ್, ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ, ವಿಜಯ ಕುಂದರ್ ಕಿದಿಯೂರು, ಮಮತ ರಾವ್, ಸತೀಶ್ ದೇವಾಡಿಗ ಕಾಪು, ನಿಲೇಶ್ ಕಿದಿಯೂರು, ಗೋಪಾಲ ಆಚಾರ್ಯ ಮಟ್ಟಾರು, ಗಿರಿಧರ ಪ್ರಭು, ಶ್ರೀಕಾಂತ ಆಚಾರ್ಯ ಉಪಸ್ಥಿತರಿದ್ದರು.

ಪಲಿಮಾರು : ಪ್ರೌಢ ಶಾಲೆ, ಕಾಲೇಜು ವಿಭಾಗದ ವಾರ್ಷಿಕೋತ್ಸವ ; ಪ್ರತಿಭಾ ಪುರಸ್ಕಾರ

Thumbnail
Posted On: 06 Jan 2024, 05:16 PM

ಪಲಿಮಾರು : ಮಕ್ಕಳಲ್ಲಿರುವ ಅದ್ಭುತ ಶಕ್ತಿಯನ್ನು ಹೊರತರುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಣದ ಮೂಲಕ ಸಂಸ್ಕೃತಿಯ ಅರಿವು ಮೂಡುತ್ತದೆ. ಸಂಸ್ಕಾರದ ಕೊರತೆಯಿಂದ ಕ್ರೌರ್ಯ ಬೆಳೆಯುತ್ತದೆ. ಈಗ ಮಾರ್ಕ್ ಮತ್ತು ರ‍್ಯಾಂಕ್‌ನ ಕಡೆಗೆ ಹೋಗುತ್ತಿದ್ದೇವೆ. ವಿದ್ಯಾರ್ಥಿಗಳನ್ನು ಸದಾ ಜಾಗೃತ ಮನಸ್ಸಿನಲ್ಲಿಡುವ ಕಾರ್ಯ ನಡೆಯಬೇಕು. ಶಿಕ್ಷಣ ಮತ್ತು ಪರಿಸರ ದಿಂದ ಬದುಕುವ ಕಲೆಯ ಜಾಗೃತಿಯಾಗುತ್ತದೆ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನುಡಿದರು. ಅವರು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸನ್ಮಾನ : ಈ ಸಂದರ್ಭದಲ್ಲಿ ಶಾಲಾ ಹಳೆವಿದ್ಯಾರ್ಥಿಗಳು, ದಾನಿಗಳಾದ ಎಬಿಸಿಡಿ ಮತ್ತು ಇ ಟ್ರಸ್ಟ್ ಇನ್ನಾ ಇದರ ಅಧ್ಯಕ್ಷರಾದ ಇನ್ನಾ ಚಂದ್ರಕಾಂತ್ ರಾವ್ ಮತ್ತು ಹಳೆವಿದ್ಯಾರ್ಥಿ, ಬೆಂಗಳೂರಿನ ಉದ್ಯಮಿಗಳು, ಆದಿತ್ಯ ಟ್ರಾವೆಲ್ಸ್ ಸಂಸ್ಥೆಯ ಮುಖ್ಯಸ್ಥರಾದ ಗೋಕುಲ್ ಪಲಿಮಾರು, ಬಹುಮುಖ ಪ್ರತಿಭಾ ಸಂಪನ್ನೆ ಹಳೆ ವಿದ್ಯಾರ್ಥಿನಿ ಕು.ಸಯ್ಯಮಿ ಮತ್ತು ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಹಾಗೂ ಕನ್ನಡದಲ್ಲಿ ೧೦೦ ಅಂಕ ಗಳಿಸಿದ ಕು.ಸುಮಯ್ಯ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಳೆವಿದ್ಯಾರ್ಥಿನಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷರಾದ ರಾಯೇಶ್ವರ ಪೈ, ನಿಕಟಪೂರ್ವ ಗ್ರಾ,ಪಂ. ಅಧ್ಯಕ್ಷೆ ಗಾಯತ್ರಿ ಡಿ.ಪ್ರಭು, ಸದಸ್ಯರುಗಳಾದ ಪ್ರವೀಣ್ ಕುಮಾರ್, ರಶ್ಮಿ ಪೂಜಾರಿ, ಸುಜಾತಾ, ಹಳೆವಿದ್ಯಾರ್ಥಿ, ಉದ್ಯಮಿ ರವೀಂದ್ರ ಪ್ರಭು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶೋಭಾ, ವಿದ್ಯಾರ್ಥಿ ನಾಯಕರುಗಳಾದ ಅನನ್ಯಾ, ಯಶಸ್ ವೇದಿಕೆಯಲ್ಲಿದ್ದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಸನ್ಮಾನಿತರನ್ನು ಪರಿಚಯಿಸಿ, ಸ್ವಾಗತಿಸಿದರು. ಪ್ರಾಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಸುನೀತಾ ವರದಿ ಓದಿದರು. ಶಿಕ್ಷಕರಾದ ಪಿ.ಸುಧಾಕರ ಶೆಣೈ, ದೈಹಿಕ ಶಿಕ್ಷಣ ಶಿಕ್ಷಕಿ ಅಮೃತಾ, ಶಿಕ್ಷಕರಾದ ಶಿವಾನಂದ್, ನಿಶಾ ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಜ್ಯೋತಿ ನಿರೂಪಿಸಿದರು. ಶಿಕ್ಷಕರಾದ ಪ್ರಸನ್ನ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಿರ್ವ : ಪಾಂಬೂರಿನ ಮಾನಸ ವಸತಿ ಶಾಲೆಯಲ್ಲಿ 69ನೇ ಹುಟ್ಟು ಹಬ್ಬ ಆಚರಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

Thumbnail
Posted On: 05 Jan 2024, 07:46 PM

ಶಿರ್ವ : ಪ್ರೀತಿ ನೀಡುವ ಮೂಲಕ ವಿಶೇಷ ಮಕ್ಕಳನ್ನು ಸಮಾಜದ ಇತರರಂತೆ ಕಾಣಲು ಸಾಧ್ಯ. ಇಂತಹ ಮಕ್ಕಳೊಂದಿಗೆ ಹುಟ್ಟು ಹಬ್ಬದ ಆಚರಣೆ ಅವಿಸ್ಮರಣೀಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಕಾಪು ಬ್ಲಾಕ್ ಕಾಂಗ್ರೆಸ್ ಮಾನಸ ವಸತಿ ಶಾಲೆ ಪಾಂಬೂರಿನಲ್ಲಿ ಆಯೋಜಿಸಿದ್ದ ತಮ್ಮ 69ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ಸಂದರ್ಭ ವಿಶೇಷ ಮಕ್ಕಳಿಗಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಮಾನಸ ಸಂಸ್ಥೆಯ ಪ್ರಮುಖರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಶಿವಾಜಿ ಸುವರ್ಣ ಶಿರ್ವ, ಅಶೋಕ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಿಲ : ವೇ.ಮೂ. ರಾಘವೇಂದ್ರ ಉಪಾಧ್ಯಾಯ ದಂಪತಿಗಳ ಷಷ್ಠ್ಯಬ್ಧಪೂರ್ತಿ ಸಮಾರಂಭ

Thumbnail
Posted On: 05 Jan 2024, 06:29 PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಮತ್ತು ಸುಗುಣ ಉಪಾಧ್ಯಾಯರ ಷಷ್ಠ್ಯಬ್ಧ ಪೂರ್ತಿ ಮತ್ತು ಮೊಗವೀರ ಮುಂದಾಳು ನಾಡೋಜ ಜಿ ಶಂಕರ್ ಸೇರಿದಂತೆ ವಿವಿಧ ಸಾಧಕರಿಗೆ ಸಹಕಾರ ರತ್ನ ಬಿರುದನ್ನು ನೀಡುವ ಕಾರ್ಯಕ್ರಮ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದಲ್ಲಿ ಜರಗಿತು. ಇದರ ಪ್ರಯುಕ್ತ ಶ್ರೀ ದೇವರಿಗೆ ನವಕ ಕಲಶ, ಧಾರ್ಮಿಕ ಉಪನ್ಯಾಸ, ಮಹಾರಂಗಪೂಜೆ, ಉತ್ಸವ ಬಲಿ, ಯಜುರ್ವೇದಿಯ ಬೋಧಾಯನ ಶಾಂತಿ ಸಂಗ್ರಹ ಪುಸ್ತಕ ಬಿಡುಗಡೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು. ಸಾಧಕರಿಗೆ ಪ್ರಶಸ್ತಿ : ಈ ಸಂದರ್ಭ ಅದಮಾರು ಹಿರಿಯ ಸ್ವಾಮೀಜಿ ಶ್ರೀ ವಿಶ್ವ ಪ್ರಸನ್ನ ಮತ್ತು ಪೇಜಾವರ ಶ್ರೀ ವಿಶ್ವ ಪ್ರಿಯರು ಬೆಳಪು ಡಾl ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಸಮಾಜ ರತ್ನ, ಡಾl ಗಂಗಾಧರ್ ಅವರಿಗೆ ವೈದ್ಯ ರತ್ನ, ಪಾಂಗಳ ನಾಗೇಶ್ ರಾವ್ ಅವರಿಗೆ ನಳ ಪಾಕಜ್ಞ, ಬೈಲೂರು ಮುರಳೀಧರ ತಂತ್ರಿ ಅವರಿಗೆ ಜ್ಯೋತಿ ಮಾರ್ತಾಂಡ, ಕುಕ್ಕಿ ಕಟ್ಟಿ ರಾಘವೇಂದ್ರ ತಂತ್ರಿ ಅವರಿಗೆ ತಂತ್ರ ರತ್ನ, ಇರುವತ್ತೂರು ವಾಸುದೇವ ಭಟ್ ಅವರಿಗೆ ಮಂತ್ರ ಮಾರ್ತಾಂಡ, ಬಪ್ಪನಾಡು ನಾಗೇಶ್ ಅವರಿಗೆ ಸ್ವರ ಮಾರ್ತಾಂಡ, ನಂದಳಿಕೆ ವಿಠ್ಠಲ್ ಭಟ್ ಅವರಿಗೆ ಪುರೋಹಿತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅದಾನಿ ಸಂಸ್ಥೆಯ ಮುಖ್ಯಸ್ಥ ಕಿಶೋರ್ ಆಳ್ವ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ವಾಸುದೇವ ಸಾಲಿಯಾನ್, ಉದಯಕುಮಾರ್ ಶೆಟ್ಟಿ ಯುವ ಮೆರಿಡಿಯನ್ ಕುಂದಾಪುರ, ಜಯಶೀಲ ಶೆಟ್ಟಿ ಕುಂದಾಪುರ, ಆನಂದ ಸಿ ಕುಂದರ್, ವೆಂಕಟ್ರಮಣ ಅಸ್ರಣ್ಣ, ಶ್ರೀಪತಿ ಭಟ್ ಶಾಂತ ಎಲೆಕ್ಟ್ರಿಕಲ್ಸ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.

ಜ. 6,8,10 : ನಮಾಮಿ ರಾಮ ಭಜಕಮ್ - ಕರಸೇವಕರ ಮನೆಗೆ ಭೇಟಿ ನೀಡಿ ಅಭಿನಂದನಾ ಕಾರ್ಯಕ್ರಮ

Thumbnail
Posted On: 05 Jan 2024, 06:13 PM

ಶಂಕರಪುರ : ನಮಾಮಿ ರಾಮ ಭಜಕಮ್ ಕಾರ್ಯಕ್ರಮದಡಿ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲೇಬೇಕು ಎಂಬ ಸಂಕಲ್ಪವನ್ನು ಮಾಡಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಮಾಡಿದ ಉಡುಪಿ ಜಿಲ್ಲೆಯ ಕರಸೇವಕರ ಮನೆ-ಮನೆಗೆ ಜನವರಿ 6,8,10 ರಂದು ಭೇಟಿ ನೀಡಿ ಅಭಿನಂದನೆ ನೀಡಲಿದ್ದಾರೆ ಎಂದು ಮಠದ ಪ್ರಕಟನೆ ತಿಳಿಸಿದೆ.

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇಗುಲಕ್ಕೆ ಬಾಲಿವುಡ್ ಚಿತ್ರನಟಿ ಪೂಜಾ ಹೆಗ್ಡೆ ಭೇಟಿ

Thumbnail
Posted On: 05 Jan 2024, 11:39 AM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇಗುಲಕ್ಕೆ ಬಾಲಿವುಡ್ ಚಲನಚಿತ್ರ ನಟಿ ಪೂಜಾ ಹೆಗ್ಡೆ ಭೇಟಿ ನೀಡಿದರು. ದೇವಳದ ವತಿಯಿಂದ ಶ್ರೀ ಮಹಾಲಕ್ಷ್ಮಿಯ ಪ್ರಸಾದ ನೀಡಿ ನಟಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಹಾಲಕ್ಷ್ಮಿ ದೇಗುಲದ ಅರ್ಚಕ ರಾದ ರಾಘವೇಂದ್ರ ಉಪಾಧ್ಯಾಯ, ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ, ಸಿಬ್ಬಂದಿ ವರ್ಗ, ಭಕ್ತಾದಿಗಳು ಉಪಸ್ಥಿತರಿದ್ದರು.

ಕಾಪು : ಎ.ಐ.ಸಿ.ಸಿ ದೆಹಲಿ ಅಲ್ಪಸಂಖ್ಯಾತ ಘಟಕದಿಂದ ಫಾರೂಕ್ ಚಂದ್ರನಗರರಿಗೆ ಸನ್ಮಾನ

Thumbnail
Posted On: 04 Jan 2024, 06:29 PM

ಕಾಪು : ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಸ್ತುವಾರಿಯವರಾದ ಜೀನಲ್ ಗಾಲರಿಂದ ಯೂತ್ ಐಕಾನ್ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಫಾರೂಕ್ ಚಂದ್ರನಗರರನ್ನು ಸನ್ಮಾನಿಸಿದರು. ಸನ್ಮಾನಿಸಿ ಮಾತನಾಡಿದ ಅವರು ಫಾರೂಕ್ ಚಂದ್ರನಗರ ಯೂತ್ ಐಕಾನ್ ಪ್ರಶಸ್ತಿ ಪಡೆದು ಯುವಕರಿಗೆ ರಾಜಕೀಯ ಹಾಗೂ ಸಾಮಾಜಿಕವಾಗಿ ರೋಲ್ ಮಾಡೆಲ್ ಆಗಿದ್ದಾರೆ ಮುಂದಕ್ಕೂ ಇವರಿಂದ ಸಮಾಜಕ್ಕೆ ಇನ್ನಷ್ಟು ಒಳ್ಳೆದಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಕೆ ಅಬ್ದುಲ್ ಜಬ್ಬಾರ್, ಕಾರ್ಯದರ್ಶಿ ಹಸನ್ ಶೇಕ್ ಮಣಿಪುರ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷರಾದ ಇಸ್ಮಾಯಿಲ್ ಅತ್ರಾಡಿ, ಕೆ.ಪಿ.ಸಿ.ಸಿ ವಕ್ತಾರರಾದ ಇರ್ಷಾದ್ ಅಹ್ಮದ್ ಬೆಂಗಳೂರು, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಕಳ : ಬ್ರೈಟ್ ಗ್ರೂಪ್ ಫ್ರೆಂಡ್ಸ್ ಸೂಡ - ಸಾಮೂಹಿಕ ಶ್ರೀ ಶನಿಪೂಜೆ ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

Thumbnail
Posted On: 03 Jan 2024, 09:42 PM

ಕಾರ್ಕಳ : ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ.) ಸೂಡ ಇದರ 27 ನೇ ವಾರ್ಷಿಕೋತ್ಸವ 19 ನೇವರ್ಷದ ಸಾಮೂಹಿಕ ಶ್ರೀ ಶನಿ ಪೂಜೆ, ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಜನವರಿ 6, ಶನಿವಾರದಂದು ಸೂಡ ಕುಂಬ್ಳೆ ಪರಾರಿ ಕೀರ್ತಿಶೇಷ ಹರಿಣಾಕ್ಷ ಹೆಗ್ಡೆ ಸಾಂಸ್ಕೃತಿಕ ವೇದಿಕೆಯಲ್ಲಿ ಜರಗಲಿದೆ. ಎಳ್ಳುಗಂಟು ದೀಪೋತ್ಸವವು ಶನಿವಾರ ಸಂಜೆ 5 ಗಂಟೆಯಿಂದ ನಡೆಯಲಿದೆ. ರಾತ್ರಿ 7 ಗಂಟೆಗೆ ಅನ್ನಪ್ರಸಾದ, ಬಳಿಕ ಧಾರ್ಮಿಕ ಸಭೆ. ನಂತರ ಶಾರದಾ ಆಟ್ಸ್೯ ಕಲಾವಿದರು (ರಿ.) ಮಂಜೇಶ್ವರ ಇವರಿಂದ ಕಥೆ ಎಡ್ಡೆಂಡು ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಜನವರಿ ‌4 : ಉಡುಪಿ ಜಿಲ್ಲಾ ಕುಲಾಲ ಸಂಘಟನೆ ರಚನೆಯ ಪೂರ್ವಭಾವಿ ಸಭೆ

Thumbnail
Posted On: 03 Jan 2024, 08:57 PM

ಉಡುಪಿ : ಜಿಲ್ಲಾ ಕುಲಾಲ ಸಂಘಟನೆಗಳ ಒಕ್ಕೂಟ ರಚನೆಯ ಪೂರ್ವ ಸಿದ್ದತೆ ಸಭೆ ಹಾಗೂ ಉಡುಪಿ ಶ್ರೀ ಕೃಷ್ಣ ಮಠದ ಈ ಬಾರಿಯ ಪುತ್ತಿಗೆ ಪರ್ಯಾಯದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚಿಸುವುದಕ್ಕೆ ಜನವರಿ 4 ರಂದು ಸಂಜೆ 4 ಗಂಟೆಗೆ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ಹೋಟೆಲ್ನಲ್ಲಿ ಸಭೆ ಕರೆಯಲಾಗಿದೆ. ಉಡುಪಿ ಜಿಲ್ಲೆಯ ಎಲ್ಲಾ ಕುಲಾಲ ಸಂಘಟನೆಗಳ ಸಂಸ್ಥೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜೊತೆಗೆ ಹಿರಿಯ ಸದಸ್ಯರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಭೆ ಯಶಸ್ವಿಗೊಳಿಸಿ ಎಂದು ಕುಲಾಲ ಸಮುದಾಯದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.

ಕಾಪು : 92 ಹೇರೂರು ಫ್ರೆಂಡ್ಸ್ ಕ್ಲಬ್ ಪ್ರಥಮ ವಾರ್ಷಿಕೋತ್ಸವ ; ಸನ್ಮಾನ ‌

Thumbnail
Posted On: 03 Jan 2024, 08:50 PM

ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು ಫ್ರೆಂಡ್ಸ್ ಕ್ಲಬ್ ಇದರ ಪ್ರಥಮ ವಾರ್ಷಿಕೋತ್ಸವ ಸೋಮವಾರ ಹೇರೂರು ಭಜನಾ ಮಂದಿರದ ಸಾರ್ವಜನಿಕ ರಂಗ ಮಂಟಪದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ ಸ್ಥಳೀಯ ಸಂಘಟಿತ ಯುವಶಕ್ತಿಯನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಸಾಂಘಿಕಶಕ್ತಿ ಜಾಗೃತವಾಗಿ ಸ್ಥಳೀಯ ಅನೇಕ ಸಮಸ್ಯೆಗಳಿಗೆ ಪರಿಹಾರ, ಊರಿನ ಅಭಿವೃದ್ಧಿ, ಪ್ರತಿಭಾ ವಿಕಸನ, ಸಮರ್ಥ ನಾಯಕತ್ವ ಬೆಳೆಯುತ್ತದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ರಕ್ತದಾನ, ಬಡ ಕುಟುಂಬಕ್ಕೆ ಸೂರು ಒದಗಿಸಿರುವುದು ಈ ಸಂಘಟನೆಯ ಸೇವಾ ಮನೋಭಾವನೆಗೆ ಉತ್ತಮ ನಿರ್ದಶನವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸ್ಥಳೀಯ ಸಮಾಜ ಸೇವಕ ಮಾಧವ ಆಚಾರ್ಯ ಮಾತನಾಡಿ ಒಳ್ಳೆಯ ಕೆಲಸಗಳಿಗೆ ಅಡೆತಡೆಗಳು ಸಾಮಾನ್ಯ. ಅದನ್ನು ಮೀರಿ ಮುನ್ನಡೆಯುವ ದೃಢ ಸಂಕಲ್ಪ ಬೇಕು. ಸಮಾಜ ಸೇವೆ ದೇವರ ಸೇವೆಯಾಗಿದ್ದು, ಹಿರಿಯರ ಆದರ್ಶ, ಧಾರ್ಮಿಕ ಚಿಂತನೆಗಳಿಗೆ ಒತ್ತು ನೀಡಿ ಮುನ್ನಡೆಯುವಂತೆ ಯುವ ಸಮೂಹಕ್ಕೆ ಕರೆಯಿತ್ತರು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕಿ ಅನುಪಮಾ ಜೋಗಿ ಮಾತನಾಡಿ ಹುಟ್ಟೂರ ವೇದಿಕೆಯಲ್ಲಿ ಮಾತನಾಡುವ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿ, ದೇಶದ ಭವಿಷ್ಯ ಯುವ ಶಕ್ತಿಯ ಬುನಾದಿಯ ಮೇಲೆ ನಿಂತಿದೆ. ವ್ಯಕ್ತಿಯ ಉನ್ನತಿಗೆ, ಮಾನವೀಯ ಮಲ್ಯಾಧಾರಿತ ಪ್ರಾಥಮಿಕ ಶಿಕ್ಷಣವೇ ಮೂಲವಾಗಿದ್ದು, ಅಂತಹ ಗುರುಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ತಮ್ಮ ಜೀವದ ಹಂಗು ತೊರೆದು, ಆಕಸ್ಮಿಕ ಘಟನೆಗಳು ಯಾ ತುರ್ತು ಸಂದರ್ಭದಲ್ಲಿ ಸ್ಥಳೀಯರ ಪೋನ್ ಕರೆಗೆ ತಕ್ಷಣ ಸ್ಪಂದಿಸಿ ಉತ್ತಮ, ಮಾದರಿ ಸೇವೆಯನ್ನು ನೀಡಿ, ಪ್ರಾಮಾಣಿಕ ಕರ್ತವ್ಯ ನಿಷ್ಠೆಯಿಂದ ಗ್ರಾಮಸ್ಥರ ಪ್ರೀತಿ ವಿಶ್ವಾಸವನ್ನು ಗಳಿಸಿ ಜನಾನುರಾಗಿರುವ ಈ ಭಾಗದ ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ಸುನಿಲ್ ಶೆಟ್ಟಿ, ವಸಂತ ಕೊಟ್ಯಾನ್‌ರವರಿಗೆ "ಹೊಸ ವರ್ಷದ ಗೌರವ" ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಜೋಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಂಟಕಲ್ಲು ಮಾಧವ ಕಾಮತ್, ಶ್ರೀಗುರು ರಾಘವೇಂದ್ರ ಭಜನಾ ಮಂಡಳಿ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಯಶಸ್ವಿ ಉದ್ಯಮಿ ಡೇನಿಸ್ ಮತಾಯಸ್, ಕಲಾ ವೈಕರಿ ಅಭಿನಯ ಸಾಮ್ರಾಟ್ ಪ್ರಭಾಕರ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಗಣಪತಿ ಆಚಾರ್ಯ ಹೇರೂರು ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವಿಧ ಸ್ಫರ್ಧಾವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ರವಿ ದೇವಾಡಿಗ ವಿಜೇತರನ್ನು ಪರಿಚಯಿಸಿದರು. ಫ್ರ‍್ರೆಂಡ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ದೀಪಕ್ ಕೊಟ್ಯಾನ್, ಕಾರ್ಯದರ್ಶಿ ಸುಮಿತ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಹೇರೂರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ದೀಕ್ಷಾ ವರದಿ ವಾಚಿಸಿದರು. ವಿಜಯ್ ಧೀರಜ್, ದಿವ್ಯಜ್ಯೋತಿ ನಿರೂಪಿಸಿದರು. ಕು.ಅಶ್ಮಿತಾ ವಂದಿಸಿದರು. ನಂತರ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಲಾ ಚಾವಡಿ (ರಿ.) ಅಂಬಲಪಾಡಿ ಉಡುಪಿ ಇವರಿಂದ ತುಳು ಹಾಸ್ಯ ನಾಟಕ "ಮೋಕೆದ ಮದಿಮಾಲ್" ಪ್ರದರ್ಶನಗೊಂಡಿತು.