Updated News From Kaup

ಡಿಸೆಂಬರ್ 22 - 26 : ಉಡುಪಿಯ ಮುಕುಂದ ಕೃಪಾ ಶಾಲೆಯಲ್ಲಿ ಸುವರ್ಣ ಸಂಭ್ರಮ ; ವಿವಿಧ ಕಾರ್ಯಕ್ರಮಗಳು

Posted On: 21-12-2022 10:48PM

ಉಡುಪಿ : ಮುಕುಂದ ಕೃಪಾ ಆಂಗ್ಲ ಮಾಧ್ಯಮ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಸಂಭ್ರಮಾಚರಣೆ, ವಾರ್ಷಿಕ ಬಹುಮಾನ ವಿತರಣೆ , ವಾರ್ಷಿಕೋತ್ಸವ, ಪೇರೆಂಟ್ - ಟೀಚರ್ಸ್ ಡೇ ಮತ್ತು ಹಳೇ ವಿದ್ಯಾರ್ಥಿ ದಿನಾಚರಣೆ ಡಿ.22 ರಿಂದ ಡಿ.26 ರ ವರೆಗೆ ನಡೆಯಲಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಶಾಂತಾರಾಮ್ ಶೆಟ್ಟಿ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಡಿ.22 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಶಾಲೆಯ ಸಭಾಂಗಣದಲ್ಲಿ 50 ನೇ ವರ್ಷದ ವಾರ್ಷಿಕ ಬಹುಮಾನ ವಿತರಣಾ ದಿನ, ಡಿ.24 ರಂದು ಬೆಳಿಗ್ಗೆ 9.30 ರಿಂದ 10.30 ರ ವರೆಗೆ ಬೆಳಗ್ಗಿನ ಅವಧಿಯ ಕಾರ್ಯಕ್ರಮ ಹಾಗೂ ಮಧ್ಯಾಹ್ನ 3.30 ರಿಂದ ರಾತ್ರಿ 9 ಗಂಟೆ ವರೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ವಾರ್ಷಿಕೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಡಿ.25 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಳೇ ವಿದ್ಯಾರ್ಥಿಗಳ ದಿನ , ಮಧ್ಯಾಹ್ನ 2.30 ರಿಂದ ರಾತ್ರಿ 8.30 ರ ವರೆಗೆ ಅದೇ ವೇದಿಕೆಯಲ್ಲಿ ಪೋಷಕರು ಮತ್ತು ಶಿಕ್ಷಕರ ದಿನ ಕಾರ್ಯಕ್ರಮ ನಡೆಯಲಿದೆ ಎಂದರು ಹಾಗೂ ಶಾಲೆಯ 50 ನೇ ವರ್ಷದ ಸುವರ್ಣ ಸಂಭ್ರಮದ ದಿನವು ಡಿ.26 ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ಶಾಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ನಿವೃತ್ತ ಮುಖ್ಯೋಪಾದ್ಯಾಯಿನಿ ಕಮಲಿನಿ ಆರ್ ಭಟ್ ಅವರು ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 2.30 ರಿಂದ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾ ರಾವ್, ಉಡುಪಿ ಡಿಡಿಪಿಐ ಎನ್. ಶಿವರಾಜ್, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ಬಿಇಒ ಚಂದ್ರೇ ಗೌಡ ಡಿಎಚ್, ಮಣಿಪಾಲದ ಡಾ. ಟಿಎಂಎ ಪೈ ಫೌಂಡೇಶನ್ ನ ಕಾರ್ಯದರ್ಶಿ ಟಿ. ಅಶೋಕ್ ಪೈ, ಡಯಟ್ ಉಡುಪಿ ಇದರ ಉಪ ಪ್ರಾಂಶುಪಾಲ ಅಶೋಕ್ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಗಣನಾಥ ಎಕ್ಕಾರು, ಎಜಿಇ ಮಣಿಪಾಲ ಇದರ ಎಜುಕೇಶನ್ ಆಫೀಸರ್ ನಾಗೇಶ್ ಶಾನ್ ಭಾಗ್, ಮುಕುಂದ ಕೃಪಾ ಶಾಲೆಯ ನಿವೃತ್ತ ಪ್ರಾಂಶುಪಾಲೆ ಪ್ರಭಾವತಿ ಎಸ್ ಅಡಿಗ, ನಟ ರಕ್ಷಿತ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಜನವರಿ 8 : ಪಲಿಮಾರಿನಲ್ಲಿ ರಕ್ತದಾನ ಶಿಬಿರ

Posted On: 21-12-2022 10:39PM

ಪಲಿಮಾರು : ಹೊಯಿಗೆ ಫ್ರೆಂಡ್ಸ್ ಹೊಯಿಗೆ (ರಿ.) ಪಲಿಮಾರು, ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 8, ಆದಿತ್ಯವಾರ ಬೆಳಿಗ್ಗೆ 8 ರಿಂದ ಅಪರಾಹ್ನ 2 ರ ವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರಿನಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ : ರಾಘವೇಂದ್ರ ಸುವರ್ಣ- 8197605299. ಪ್ರತಾಪ್- 9743339093.

ಕಾಪು : ಲಕ್ಷ್ಮೀ ಜನರಲ್ ಸ್ಟೋರ್ಸ್ ನಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ

Posted On: 20-12-2022 06:51PM

ಕಾಪು : ಇಲ್ಲಿನ ಲಕ್ಷ್ಮೀ ಜನರಲ್ ಸ್ಟೋರ್ಸ್ ನಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟಕ್ಕೆ ಕರ್ನಾಟಕ ರಾಜ್ಯ ಹಾಲು ಮಹಾಮಂಡಳ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಡಿಸೆಂಬರ್ 18 ರಿಂದ ಜನವರಿ 18 ರವರೆಗೆ ನಂದಿನಿ ಸಿಹಿ ಉತ್ಸವ ಜರಗಲಿದೆ. ನಂದಿನಿ ಸಿಹಿ ಉತ್ಪನ್ನಗಳಿಗೆ ಶೇ. 20 ರಿಯಾಯಿತಿ ದೊರೆಯಲಿದೆ ಇದರ ಸದುಪಯೋಗ ಸಾರ್ವಜನಿಕರು ಪಡೆಯಬಹುದು. ಸಿಹಿ ಉತ್ಪನ್ನಗಳ ಮಾರಾಟದ ಮೂಲಕ ಇದ್ದ ಗ್ರಾಹಕರನ್ನು ಉಳಿಸಿ ಹೊಸ ಗ್ರಾಹಕರನ್ನು ಸೆಳೆಯುವುದು. ಕರ್ನಾಟಕ ರಾಜ್ಯದಲ್ಲಿಯ 58 ಬಗೆಯ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಿಹಿ ಉತ್ಸವ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ದಕ್ಷಿಣ ಕನ್ನಡ ಹಾಲು ಮಹಾಮಂಡಲ ಇದರ ಉಪ ವ್ಯವಸ್ಥಾಪಕರಾದ ಸುಧಾಕರ್, ಕೆಎಂಎಫ್ ಪ್ರಭಾರ ಜಂಟಿ ನಿರ್ದೇಶಕ ರಮೇಶ್ ಬೂದಗತ್ತಿ, ಕೆಎಂಎಫ್ ಮಾರ್ಕೆಟಿಂಗ್ ಆಫೀಸರ್ ಸಿ ಎಚ್ ಮೋಹನ್, ಉದ್ಯಮಿ ಕೆ ಕಮಲಾಕ್ಷ ನಾಯಕ್, ಮಹಾಲಕ್ಷ್ಮಿ ಟ್ರೇಡರ್ಸ್ ನ ಹರೀಶ್ ಕೆ ನಾಯಕ್, ಅನುಪೂರ್ವಿ ಸಮೂಹ ಸಂಸ್ಥೆಯ ಪ್ರವರ್ತಕರಾದ ಪ್ರೀತಿ ನಾಯಕ್, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಾರ್ಕೆಟಿಂಗ್ ಆಫೀಸರ್ ಸಂದೀಪ್, ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯವಸ್ಥಾಪಕ ರವಿರಾಜ್ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ಡಿಸೆಂಬರ್ 23 : ಕಾಪು ರಂಗತರಂಗ ತಂಡದ 16 ನೇ ನಾಟಕ 'ಬುಡೆದಿ' ಪ್ರಥಮ ಪ್ರದರ್ಶನ

Posted On: 20-12-2022 02:07PM

ಕಾಪು : ಇಲ್ಲಿನ ರಂಗತರಂಗ ಕಲಾವಿದರಿಂದ ಡಿಸೆಂಬರ್ 23 ಶುಕ್ರವಾರದಂದು ಕಾಪು ಹೊಸ ಮಾರಿಗುಡಿಯ ಮೈದಾನದಲ್ಲಿ ನೂತನ ಹದಿನಾರನೇ ನಾಟಕ 'ಬುಡೆದಿ' ಪ್ರದರ್ಶನ ಗೊಳ್ಳಲಿದೆ ಎಂದು ರಂಗತರಂಗ ಸಂಚಾಲಕರಾದ ಸಮಾಜ ರತ್ನ ಲೀಲಾಧರ ಶೆಟ್ಟಿ ಕರಂದಾಡಿ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿದ್ದು ಉಚ್ಚಿಲ ನಿರ್ದೇಶನ, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಕಥೆ, ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ, ಶರತ್ ಉಚ್ಚಿಲ ಸಂಗೀತ ನಾಟಕಕ್ಕಿದೆ.

16ನೇ ನಾಟಕ ಬುಡೆದಿಯ ಪ್ರಥಮ ಪ್ರದರ್ಶನದ ಟಿಕೆಟನ್ನು ಒಟಿಟಿ ಬುಕ್ ಮೈ ಶೋ ಆ್ಯಪ್ ಮೂಲಕ ಕಾಯ್ದಿರಿಸಲು ಅವಕಾಶವಿದೆ ಎಂದು ತಿಳಿಸಿದರು. ಪ್ರಥಮ ಪ್ರದರ್ಶನದಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಗುರ್ಮೆ ಸುರೇಶ್ ಶೆಟ್ಟಿ, ವಕೀಲರಾದ ಸಂಕಪ್ಪ, ಉದ್ಯಮಿ ರೋಹಿತ್ ಆಳ್ವ ಮೊದಲಾದವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶರತ್ ಉಚ್ಚಿಲ, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಕಡಲ ಐಸಿರ 2022 ; ಜನಮನ ಸೆಳೆದ ಚೆಂಡೆವಾದನ

Posted On: 18-12-2022 09:02PM

ಕಾಪು : ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ.) ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು, ದಿ| ಆರ್ ಡಿ ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ, ಕಾಪು ಇದರ ಸಂಯುಕ್ತ ಆಶ್ರಯದಲ್ಲಿ ಕಾಪು ದೀಪಸ್ಥಂಭದ ಬಳಿ ಕಡಲ ಕಿನಾರೆಯಲ್ಲಿ ಬೀಚ್ ಉತ್ಸವ ಕಡಲ ಐಸಿರ 2022 ಕಾರ್ಯಕ್ರಮದಲ್ಲಿ ಆದಿತ್ಯವಾರದಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಚೆಂಡೆ ವಾದನ ಜನಮನ ಸೆಳೆಯಿತು. ಸಭಾ ಕಾರ್ಯಕ್ರಮ, ಬೆಂಗಳೂರು ತಂಡದಿಂದ ರಸಮಂಜರಿ ಕಾರ್ಯಕ್ರಮವೂ ಜರಗಲಿದೆ.

ಈ ಹಿಂದೆ ಕಾರ್ಯಕ್ರಮಗಳನ್ನು ಆಯೋಜಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ.) ವತಿಯಿಂದ ಆದಿತ್ಯವಾರದಂದು ಆಟದ ಜೊತೆಗೆ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಫುಡ್ ಫೆಸ್ಟಿವಲ್, ಲೇಸರ್ ಷೋ, ರಸಮಂಜರಿ, ಬಲೆ ಬೀಸಿ ಮೀನು ಹಿಡಿಯುವುದು, ಚೆಂಡೆ ಸ್ಪರ್ಧೆ, ಡ್ರಮ್ - ಚೆಂಡೆ ಸ್ಪರ್ಧೆ, ಕೊಳಲು - ಚೆಂಡೆ ವಾದನ, ಬೀಚ್ ವಾಲಿಬಾಲ್ ಸ್ಪರ್ಧೆ, ಕೊಳಲು ತಬಲ ತಂಡ, ಶ್ವಾನ ಸ್ಪರ್ಧೆ, ಈಜು ಸ್ಪರ್ಧೆ, ಮರಳಿನಲ್ಲಿ ಕಲಾಕೃತಿ, ಹುಟ್ಟು ಧೋನಿ ಸ್ಪರ್ಧೆ, ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್‌ ಕ್ರೀಡಾಕೂಟ

Posted On: 18-12-2022 03:52PM

ಕಾಪು : ಕುತ್ಯಾರು ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನ್‌ ಟ್ರಸ್ಟ್‌ನ ಆಡಳಿತಕ್ಕೊಳಪಟ್ಟ ಸೂರ್ಯಚೈತನ್ಯ ಹೈಸ್ಕೂಲಿನ ವಾರ್ಷಿಕ ಕ್ರೀಡಾಕೂಟವು ಶನಿವಾರದಂದು ಆಡಳಿತ ಮಂಡಳಿ ಅಧ್ಯಕ್ಷ ಮೋಹನ್‌ ಕುಮಾರ್‌ ಬೆಳ್ಳೂರು ಅಧ್ಯಕ್ಷತೆಯಲ್ಲಿ ಜರುಗಿತು.

ಶಿರ್ವ ಪೊಲೀಸ್‌ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ರಾಘವೇಂದ್ರ ಸಿ. ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡೆಯಿಂದ ಶಿಸ್ತು, ಒಗ್ಗಟ್ಟು ಸಾಧ್ಯವಾಗುವುದು. ಪೊಲೀಸ್‌ ಮತ್ತು ಸೇನೆಯ ಸೇರ್ಪಡೆಗೆ ದೈಹಿಕ ಕ್ಷಮತೆ ಅತ್ಯಗತ್ಯ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಿ ಉನ್ನತ ಸಾಧನೆ ಮಾಡಬೇಕು ಎಂದು ಕರೆಯಿತ್ತರು.

ಠಾಣಾ ಎಎಸ್ಸೈ ಶಶಿಧರ್‌ ಕೆ, ಕಾರ್ಯದರ್ಶಿ ಗುರುರಾಜ್‌ ಕೆ.ಜೆ. ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನೆಯ ವಂದನೆ ಸ್ವೀಕರಿಸಿದರು. ಉಪಾಧ್ಯಕ್ಷ ವಿವೇಕ್‌ ಆಚಾರ್ಯ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ಗೌರವ ಸಲಹೆಗಾರ ವಿದ್ವಾನ್‌ ಶಂಭುದಾಸ ಗುರೂಜಿ, ಪ್ರಿನ್ಸಿಪಾಲ್‌ ಗುರುದತ್ತ ಸೋಮಯಾಜಿ, ಸಹಾಯಕ ಪ್ರಿನ್ಸಿಪಾಲ್‌ ಸಂಗೀತಾ, ಶಿಕ್ಷಕವೃಂದ,ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಗುರುದತ್ತ ಸೋಮಯಾಜಿ ಸ್ವಾಗತಿಸಿದರು. ಸಹ ಶಿಕ್ಷಕಿ ರಮ್ಯಾ ಪ್ರಭು ನಿರೂಪಿಸಿ ಸಹ ಶಿಕ್ಷಕ ಮಂಜುನಾಥ್‌ ಶೇಟ್‌ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್‌ ಆಚಾರ್ಯ ಕ್ರೀಡಾಕೂಟವನ್ನು ಸಂಘಟಿಸಿದರು.

ಜನವರಿ 15 : ಕುತ್ಯಾರು ಮೂಲ್ಯರ ಯಾನೆ ಕುಲಾಲರ ಸಂಘದಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Posted On: 18-12-2022 03:06PM

ಕಾಪು : ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಜನವರಿ 15 ರ ರವಿವಾರ ಕುತ್ಯಾರು ರಾಮೊಟ್ಟು ಬನತೋಡಿ ಗದ್ದೆಯಲ್ಲಿ ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ಧಾರ್ಮಿಕ ಸಭೆ ನಂತರ ಪ್ರಸಾದ ಭೋಜನವಿರುತ್ತದೆ ಎಂದು ಕಾರ್ಯಕ್ರಮ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುವರು.

ಕಾಪು : ಕಡಲ ಐಸಿರ 2022 ; ಜನ ಸಾಗರ ; ನೃತ್ಯ ಸ್ಪರ್ಧೆ ; ಲೇಸರ್ ಷೋ

Posted On: 17-12-2022 08:32PM

ಕಾಪು : ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ.) ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು, ದಿ| ಆರ್ ಡಿ ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ, ಕಾಪು ಇದರ ಸಂಯುಕ್ತ ಆಶ್ರಯದಲ್ಲಿ ಕಾಪು ದೀಪಸ್ಥಂಭದ ಬಳಿ ಕಡಲ ಕಿನಾರೆಯಲ್ಲಿ ಬೀಚ್ ಉತ್ಸವ ಕಡಲ ಐಸಿರ 2022 ಕಾರ್ಯಕ್ರಮದಲ್ಲಿ ನೃತ್ಯ ಸ್ಪರ್ಧೆ ವೀಕ್ಷಿಸಲು ಜನ ಸಾಗರವೇ ನೆರೆದಿದ್ದು ಜನಮನ ಸೆಳೆಯಿತು.

ಇದರ ಜೊತೆಗೆ ಲೇಸರ್ ಷೋ, ವಿಶೇಷ ಚೇತನ ಮಕ್ಕಳ ನೃತ್ಯ, ಹಾಡು ಸಭಿಕರ ಗಮನ ಸೆಳೆಯಿತು.

ಈ ಹಿಂದೆ ಕಾರ್ಯಕ್ರಮಗಳನ್ನು ಆಯೋಜಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ.) ಕಾಪು ಈ ಬಾರಿ ಶನಿವಾರ ಮತ್ತು ಆದಿತ್ಯವಾರದಂದು ಆಟದ ಜೊತೆಗೆ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಫಲಪುಷ್ಪ ಕಲಾ ಸ್ಪರ್ಧೆ- ಪ್ರದರ್ಶನ, ಫುಡ್ ಫೆಸ್ಟಿವಲ್, ಲೇಸರ್ ಷೋ, ರಸಮಂಜರಿ, ಬಲೆ ಬೀಸಿ ಮೀನು ಹಿಡಿಯುವುದು, ಗಾಳ ಹಾಕಿ ಮೀನು ಹಿಡಿಯುವುದು, ಚೆಂಡೆ ಸ್ಪರ್ಧೆ, ಬೀಚ್ ವಾಲಿಬಾಲ್ ಸ್ಪರ್ಧೆ, ಮಹಿಳೆಯರಿಗಾಗಿ ತ್ರೋಬಾಲ್, ಸಂಗೀತ ಕುರ್ಚಿ ಇತ್ಯಾದಿ ಸ್ಪರ್ಧೆಗಳು, ಕೊಳಲು ತಬಲ ತಂಡ, ಶ್ವಾನ ಸ್ಪರ್ಧೆ, ಈಜು ಸ್ಪರ್ಧೆ, ಮರಳಿನಲ್ಲಿ ಕಲಾಕೃತಿ, ಹುಟ್ಟು ಧೋನಿ ಸ್ಪರ್ಧೆ, ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಜನವರಿ 7, 8 : ಮಹಾದೇವಿ ಫ್ರೆಂಡ್ಸ್ ಕಾಪು ಆಶ್ರಯದಲ್ಲಿ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ; ಸಮ್ಮಾನ

Posted On: 16-12-2022 10:47PM

ಕಾಪು‌ : ಮಹಾದೇವಿ ಫ್ರೆಂಡ್ಸ್, ಕಾಪು ಇವರ ಆಶ್ರಯದಲ್ಲಿ 4ನೇ ವರ್ಷದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಮಹಾದೇವಿ ಟ್ರೋಫಿ - 2023 ಜನವರಿ 7, ಶನಿವಾರ ಮತ್ತು 8 ,ಆದಿತ್ಯವಾರ ಮಹಾದೇವಿ ಶಾಲಾ ಕ್ರೀಡಾಂಗಣ, ಕಾಪು ಇಲ್ಲಿ ಜರಗಲಿದೆ. ಪ್ರಥಮ ಬಹುಮಾನವಾಗಿ ₹ 50,555 ಹಾಗೂ ಮಹಾದೇವಿ ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ ₹ 25,555 ಹಾಗೂ ಮಹಾದೇವಿ ಟ್ರೋಫಿ ಸಿಗಲಿದೆ.

ಲೀಗ್ ಮಾದರಿಯ 12 ಟೀಮ್‌ಗಳ ಪಂದ್ಯಾಕೂಟ ಜನವರಿ 7, ಶನಿವಾರ ಮಧ್ಯಾಹ್ನ ಗಂಟೆ 2 ರಿಂದ ಪ್ರಾರಂಭ. ಮುಕ್ತ ಪಂದ್ಯಾಕೂಟ ಜನವರಿ 7, ಶನಿವಾರ ರಾತ್ರಿ ಗಂಟೆ 10 ರಿಂದ ಪ್ರಾರಂಭವಾಗಲಿದೆ.

ಸಮ್ಮಾನ‌ : 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ, 2022ನೇ ಸಾಲಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಟ್ರಿಂಗ್ ಆಟ್೯ ನಲ್ಲಿ ಸಾಧನೆಗೈದಿರುವ ಶಶಾಂಕ್ ಸಾಲ್ಯಾನ್, 2022ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಕಾಪು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ರಕ್ಷಣ್ ಕಲ್ಯಾ ಇವರ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸಮ್ಮಾನಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸುಶಾಂತ್ 7795160058, ಮಾಧವ ಪೂಜಾರಿ 7899065890, ಜಗದೀಶ್ 8123431411

ಇನ್ನಂಜೆ : ಅಪರಾಧ ತಡೆ ಮಾಸಾಚರಣೆ ಮಾಹಿತಿ ಕಾರ್ಯಕ್ರಮ

Posted On: 16-12-2022 06:46PM

ಇನ್ನಂಜೆ : ಜೆಸಿಐ ಶಂಕರಪುರ ಜಾಸ್ಮಿನ್, ಕಾಪು ಪೊಲೀಸ್ ಠಾಣೆ ಮತ್ತು ಯಸ್ ವಿ ಎಚ್ ಪ್ರೌಢಶಾಲೆ ಇನ್ನಂಜೆ ಇವರ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಮಾಹಿತಿ ಕಾರ್ಯಕ್ರಮವು ಇನ್ನಂಜೆ ದಾಸ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೈಹಿಕಶಿಕ್ಷಕ ನವೀನ್ ಶೆಟ್ಟಿ ಉದ್ಘಾಟಿಸಿದರು. ಕಾಪು ಠಾಣಾಧಿಕಾರಿಯಯಾದ ಶ್ರೀಶೈಲ ಮುರಗೋಡ ಮಾಹಿತಿಯನ್ನು ನೀಡಿದರು.

ಜೆಸಿಐ ಶಂಕರಪುರ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಸಿಲ್ವಿಯಾ ಕಾಸ್ಟಲಿನೋ ಜೆಸಿ ವಾಣಿ ವಾಚಿಸಿದರು. ಜೆಸಿಐ ಶಂಕರಪುರ ಅಧ್ಯಕ್ಷರಾದ ಮಾಲಿನಿ ಪಾರ್ಥ ಇನ್ನಂಜೆ ಸ್ವಾಗತಿಸಿದರು. ಶಾಲೆಯ ಅಧ್ಯಾಪಕ ಪ್ರಭಾಕರ್ ಭಟ್ ವಂದಿಸಿದರು.