Updated News From Kaup

ಫೆಬ್ರವರಿ 18 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

Posted On: 17-02-2023 09:30PM

ಕಾಪು : ತಾಲೂಕಿನ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ದೇವಳದಲ್ಲಿ ಫೆಬ್ರವರಿ 18ರ ಸಂಜೆ ಗಂಟೆ 4 ರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಮಾರ್ಚ್ 11 : ಮಟ್ಟಾರಿನಲ್ಲಿ ಹಿಂದೂ ಹೃದಯ ಸಂಗಮ ; ಕುಮಾರಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ

Posted On: 17-02-2023 09:08PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ಮಾರ್ಚ್ 11 ರಂದು ಹಿಂದೂ ಹೃದಯ ಸಂಗಮ ಕಾರ್ಯಕ್ರಮ‌ ಶಿರ್ವ ಗ್ರಾಮದ ಮಟ್ಟಾರ್ ನಲ್ಲಿ ಜರಗಲಿದೆ.

ಉಡುಪಿ ‌ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ಉಸ್ತುವಾರಿ ಜೀನಲ್ ಗಾಲರಿಗೆ ಸನ್ಮಾನ

Posted On: 15-02-2023 09:50PM

ಉಡುಪಿ : ಎ.ಐ.ಸಿ.ಸಿ ಯಿಂದ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಜೀನಲ್ ಗಾಲರಿಗೆ ಕೆ.ಪಿ.ಸಿ.ಸಿ ಕಚೇರಿ ಬೆಂಗಳೂರಿನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪರವಾಗಿ ಸನ್ಮಾನಿಸಲಾಯಿತು.

ಉಡುಪಿ : ರಾಜ್ಯಮಟ್ಟದ ‌ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಯಕ್ಷಪ್ರಭಾ ಪತ್ರಿಕೆಗೆ ಗೌರವ ಸಮರ್ಪಣೆ

Posted On: 15-02-2023 09:38PM

ಉಡುಪಿ : ಜಿಲ್ಲೆಯಲ್ಲಿ ನೆರವೇರಿದ 'ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ - ೨೦೨೩' ಈ ಸದವಸರದಲ್ಲಿ ಶ್ರೀಕ್ಷೇತ್ರ ಕಟೀಲಿನಿಂದ ಪ್ರಕಟವಾಗುವ "ಯಕ್ಷಪ್ರಭಾ ಪತ್ರಿಕೆ"ಯನ್ನು ಗೌರವಿಸಲಾಯಿತು.

ಕಾಪು : ಹೊಸ ಮಾರಿಗುಡಿಯಲ್ಲಿ ಜೀರ್ಣೋದ್ಧಾರದ ಕುರಿತು ಪೇಟೆಯ ವ್ಯಾಪಾರಸ್ಥರೊಂದಿಗೆ ಸಮಾಲೋಚನಾ ಸಭೆ

Posted On: 15-02-2023 09:32PM

ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ನವದುರ್ಗಾ ಮಂಟಪದಲ್ಲಿ ಆದಿತ್ಯವಾರ ಮಧ್ಯಾಹ್ನ ಸಮಗ್ರ ಜೀರ್ಣೋದ್ಧಾರದ ಕುರಿತು ಕಾಪು ಪೇಟೆಯ ವ್ಯಾಪಾರಸ್ಥರೊಂದಿಗೆ ಸಮಾಲೋಚನಾ ಸಭೆ ನಡೆಯಿತು.

ಯಕ್ಷರಂಗದ ಭರವಸೆಯ ಭಾಗವತ ರೋಶನ್ ಕೋಟ್ಯಾನ್

Posted On: 14-02-2023 12:31AM

ಶತಮಾನಗಳ ಇತಿಹಾಸವಿರುವ ಯಕ್ಷಗಾನವು ಸದಾ ಪಂಡಿತ ಪಾಮರರ ಚಿಂತನ-ಮಂಥನದ ವಸ್ತುವಾಗಿರುದು ಯಕ್ಷಗಾನ ಕಲೆಯ ಜೀವಂತಿಕೆಯ ಲಕ್ಷಣವಾಗಿದೆ. ಇದರ ವರ್ಣರಂಜಿತ ಇತಿಹಾಸದಲ್ಲಿ ತೆಂಕು-ಬಡಗಿನ ಅನೇಕ ಕಲಾವಿದರು ಅವಿಸ್ಮರಣೀಯರು.ಯಕ್ಷರಂಗದಲ್ಲಿ ಮಿಂಚಿ ಕಲಾ ಪ್ರೇಮಿಗಳ ಮನಗೆದ್ದ ತನ್ನದೇ ಆದ ಛಾಪನ್ನು ಒತ್ತಿ ಪ್ರೇಕ್ಷಕರ ಮನ ಗೆಲ್ಲಲು ಅಂಗೈ ಅಗಲದ ರಂಗದಲ್ಲಿ ಕ್ಷಣಾರ್ಧದಲ್ಲಿ ಮೂರು ಲೋಕಗಳನ್ನು ಸಾಕ್ಷಾತ್ಕರಿಸಿ ಪುರಾಣ ಕಥೆಗಳಿಗೆ ಜೀವಂತಿಕೆಯನ್ನು ನೀಡಬಲ್ಲ ತೆಂಕು-ಬಡಗಿನ ಪ್ರಬುದ್ಧ ಕಲಾವಿದರನೇಕರು ಇಂದು ಕಣ್ಮರೆಯಾದರೂ ಅವರೆಲ್ಲರ ಆದರ್ಶನೀಯವಾದ ಮಾರ್ಗದರ್ಶನದಲ್ಲಿ ಯಕ್ಷರಂಗದತ್ತ ಪಾದ ಬೆಳೆಸುವ ಕಲಾವಿದರಿಂದ ಯಕ್ಷಗಾನವನ್ನು ಉಳಿಸಬೇಕು, ಬೆಳೆಸಬೇಕು ಮಾತ್ರವಲ್ಲದೆ ರಂಗಕರ್ಮಿಗಳ ಬದುಕನ್ನು ರೂಪಿಸಲೆಂದು ಉದಯಿಸಿರುವ ಸಂಘ ಸಂಸ್ಥೆಗಳು ಹಲವಾರು.ಹಾಗಾಗಿ ಸರ್ವಾಂಗ ಸುಂದರವಾದ ಯಕ್ಷಗಾನವು ನಮ್ಮ ಜಿಲ್ಲೆಯ ಜನ ಜೀವನದಲ್ಲಿ ಬೆರೆತಂತೆ ಮತ್ಯಾವ ಕಲಾ - ಪ್ರಕಾರವೂ ಬೆರೆತಿಲ್ಲವೆನ್ನಬಹುದು.

ಕಾಪು : ಬೆಳಪು ವಿಜ್ಞಾನ ಕೇಂದ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಹಣ ಮೀಸಲಿಟ್ಟು ಕಾಮಗಾರಿ ಪೂರ್ಣಗೊಳ್ಳಲಿ - ಡಾ|| ದೇವಿ ಪ್ರಸಾದ್ ಶೆಟ್ಟಿ

Posted On: 14-02-2023 12:07AM

ಕಾಪು : ಕಳೆದ 7 ವರ್ಷಗಳಿಂದ ಕಾಮಗಾರಿ ಕುಂಠಿತಗೊಂಡ ಬೆಳಪುವಿನ ವಿಜ್ಞಾನ ಕೇಂದ್ರ ಹಾಗೂ ಪಿಜಿ ಸೆಂಟರ್ ಗೆ ಈ ಬಾರಿಯ ಬಜೆಟ್ ನಲ್ಲಿ ಕನಿಷ್ಠ 50 ಕೋಟಿ ಹಣ ಇಡಬೇಕೆಂದು ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪುವಿನಲ್ಲಿ ಆಗ್ರಹಿಸಿದ್ದಾರೆ.

ಸಾಧು ಸಂತರನ್ನು ವಿಭಜಿಸದರಿ : ಈಶ ವಿಠಲದಾಸ ಸ್ವಾಮೀಜಿ

Posted On: 13-02-2023 11:58PM

ಕಟಪಾಡಿ‌ : ನಾವು ಇಂದು ಸಾಧು ಸಂತರುಗಳನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತ ಆಗುವಂತೆ ಮಾಡುತ್ತಿದ್ದೇವೆ. ಸಾಧು ಸಂತರು ಎಲ್ಲ ಜಾತಿ ಧರ್ಮಕ್ಕೆ ಒಳಪಟ್ಟಿರುವುದರಿಂದ ದಯಮಾಡಿ ಅವರನ್ನು ವಿಭಜಿಸದಿರಿ ಎಂದು ಕೇಮಾರು ಸಾಂದಿಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.

ಬೆಳಪು : ಪಣಿಯೂರಿನಲ್ಲಿ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 13-02-2023 11:53PM

ಬೆಳಪು : ಗ್ರಾಮದ ಪಣಿಯೂರು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಪಣಿಯಾರು ಶ್ರೀ ಬಬ್ಬು ಸ್ವಾಮಿ ಸನ್ನಿಧಿಯಲ್ಲಿ ಫೆಬ್ರವರಿ 12ರಂದು ಬಿಡುಗಡೆಗೊಳಿಸಲಾಯಿತು.

ಮಾರ್ಚ್ 3: ಕಳತ್ತೂರು ಪಿ.ಕೆ ಎಸ್ ಪ್ರೌಢಶಾಲೆಯಲ್ಲಿ ಗುರುವಂದನೆ, ಮನೋರಂಜನಾ ಕಾರ್ಯಕ್ರಮ

Posted On: 13-02-2023 11:04PM

ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢ ಶಾಲೆ ಕಳತ್ತೂರು ಇಲ್ಲಿ ಮಾರ್ಚ್ 3, ಶುಕ್ರವಾರ ಸಂಜೆ ಗಂಟೆ 5ರಿಂದ ಶಾಲೆಯ ನಿವೃತ್ತ ಶಿಕ್ಷಕರಾದ ಗೋಪಾಲ ಕೃಷ್ಣ ರಾವ್ ಅವರಿಗೆ ಹಳೆ ವಿದ್ಯಾರ್ಥಿಗಳು ಹಾಗೂ ಅವರ ಅಭಿಮಾನಿಗಳ ಮುಂದಾಳತ್ವದಲ್ಲಿ ಗುರುವಂದನಾ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳ ಮನೋರಂಜನ ಕಾರ್ಯಕ್ರಮ, ಕಾಪು ರಂಗತರಂಗ ಕಲಾವಿದರ ತುಳು ಹಾಸ್ಯಮಯ ನಾಟಕ ಬುಡೆದಿ ಪ್ರದರ್ಶನಗೊಳ್ಳಲಿದೆ.