Updated News From Kaup
ಕಾಪು : ಕಾಂಗ್ರೆಸ್ ಹೇಳಿಕೆಗೆ ಸೆಡ್ಡು ಹೊಡೆದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯೊಂದಿಗೆ ಸೆಲ್ಫಿಗೆ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು

Posted On: 30-09-2022 07:26PM
ಕಾಪು : ಕೇಂದ್ರ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಪುವಿಗೆ ಶುಕ್ರವಾರ ಆಗಮಿಸಿದ ಸಂದರ್ಭ ಬಿಜೆಪಿ ಕಾರ್ಯಕರ್ತರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಎರಡು ದಿನದ ಹಿಂದೆ ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಶೋಭಾ ಕರಂದ್ಲಾಜೆ ಉಡುಪಿಗೆ ಬರುತ್ತಿಲ್ಲ ಅವರು ಎರಡು ದಿನಗಳೊಳಗೆ ಬಂದರೆ ಅವರೊಂದಿಗೆ ಸೆಲ್ಫಿ ಕಳುಹಿಸಿದವರಿಗೆ ಬಹುಮಾನ ನೀಡುವ ಹೇಳಿಕೆ ನೀಡಿದ್ದರು.
ಆ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಮಿಥುನ್ ಹೇಳಿಕೆಗೆ ಸೆಡ್ಡು ಹೊಡೆಯಲು ಸೆಲ್ಫಿ ತೆಗೆದುಕೊಂಡರು.
ಉಚ್ಚಿಲ : ಸಂಗೀತ ಪ್ರಿಯರ ಹೃಣ್ಮನ ಸೆಳೆದ ಶತವೀಣಾವಲ್ಲರಿ

Posted On: 30-09-2022 07:14PM
ಉಚ್ಚಿಲ : ನವರಾತ್ರಿಯ ಪುಣ್ಯಕಾಲ, ಲಲತಾ ಪಂಚಮಿಯ ಶುಭಕಾಲದಲ್ಲಿ ಶಾರದಾ ಮಾತ್ರೆಗೆ ಪ್ರಿಯವಾದ ವೀಣಾವಾದನ ಶತವೀಣಾವಲ್ಲರಿ ವಿದ್ವಾನ್ ಪವನ ಬಿ. ಆರ್.ಆಚಾರ್ ಮಣಿಪಾಲ ಇವರ ನಿರ್ದೇಶನ ಮತ್ತು ನಿರ್ವಹಣೆಯಲ್ಲಿ ಶತವೀಣಾವಲ್ಲರಿ ಶುಕ್ರವಾರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಜರಗಿತು.
ಮಣಿಪಾಲ ಕಲಾ ಸ್ಪಂದನ ತಂಡದ ಜೊತೆಗೆ ಉಡುಪಿ, ಕಾರ್ಕಳ ಭಾಗದ ವೀಣಾ ವಾದಕರು ಜೊತೆಯಾದರು. ಸುಮಾರು 101 ವೀಣಾವಾದಕರು, ಜೊತೆಗೆ 14 ಸಹವಾದಕರು, 6 ಹಿನ್ನೆಲೆ ವಾದಕರು ಭಾಗಿಯಾಗಿದ್ದರು.
ಸನ್ಮಾನ : ವಿದ್ವಾನ್ ಪವನ ಬಿ. ಆರ್.ಆಚಾರ್ ಮಣಿಪಾಲ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ವೀಣಾವಾದನವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ಕಾಪು : ಸಮಾಜ ಸೇವಾ ವೇದಿಕೆ ವತಿಯಿಂದ ಕಾಪು ಪೊಲೀಸ್ ಠಾಣಾ ಕಟ್ಟಡದ ನವೀಕರಣಕ್ಕೆ ಸಿಮೆಂಟ್ ನೆರವು

Posted On: 30-09-2022 03:22PM
ಕಾಪು : ಸಮಾಜ ಸೇವಾ ವೇದಿಕೆ ಕಾಪು ವತಿಯಿಂದ ಕಾಪು ಪೊಲೀಸ್ ಠಾಣಾ ಕಟ್ಟಡದ ನವೀಕರಣಕ್ಕೆ ಸಂಬಂಧಿಸಿದಂತೆ ಸ್ಲಾಪ್ ಮಾಡಲು ಸುಮಾರು 70 ಚೀಲ ಸಿಮೆಂಟ್ ಅಗತ್ಯತೆಯನ್ನು ಮನಗಂಡು ತಕ್ಷಣ ಸ್ಪಂದಿಸಿ ಠಾಣೆಗೆ ಸಿಮೆಂಟ್ ಕಳುಹಿಸಿದ ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಕಾಪು ಠಾಣಾಧಿಕಾರಿ ಪಿ.ಎಸ್.ಐ ಶ್ರೀ ಶೈಲ ಡಿ.ಎಂ ರವರಿಗೆ ಹಸ್ತಾಂತರಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಠಾಣಾಧಿಕಾರಿಯವರು ಸಮಾಜ ಸೇವಾ ವೇದಿಕೆಯ ಫಾರೂಕ್ ಚಂದ್ರನಗರ ನೇತ್ರತ್ವದಲ್ಲಿ ಕೋವಿಡ್ ಸಂದರ್ಭ ಕಷ್ಟದಲ್ಲಿದ್ದ ಕುಟುಂಬಕ್ಕೆ ಅಕ್ಕಿ ಮತ್ತು ದಿನಸಿ ,ಆಹಾರ, ಮೆಡಿಕಲ್ ಕಿಟ್, ಮಾಸ್ಕ್, ಗ್ಲೌಸ್, ಸಾನಿಟೈಜರ್ ನೀಡಿದನ್ನು ಹಾಗೂ ಇನ್ನಿತರ ಕಾರ್ಯಕ್ರಮವನ್ನು ಸ್ಮರಿಸಿದರು ಹಾಗೂ ವೇದಿಕೆಯ ಹತ್ತಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಜನರಿಗೆ ಸಹಾಯ ಆಗುವಂತೆ ಮಾಡಿದೆ ಎಂದರು.
ನಮ್ಮ ಪೊಲೀಸ್ ಠಾಣೆಯ ನವೀಕರಣಕ್ಕೆ 70 ಚೀಲ ಸಿಮೆಂಟ್ ನೀಡಿದ್ದು ಅವರ ಸಾಮಾಜಿಕ ಬಗ್ಗೆ ಇರುವ ಕಾಳಜಿ ಎತ್ತಿ ತೋರಿಸುತ್ತದೆ ಎಂದರು ಮುಂದೆಯೂ ಸಮಾಜಕ್ಕೆ ಇವರಿಂದ ಉತ್ತಮ ಕಾರ್ಯಕ್ರಮ ಸಿಗುವಂತಾಗಲಿ ಎಂದು ಹಾರೈಸಿದರು
ಈ ಸಂದರ್ಭದಲ್ಲಿ ತನಿಖೆ ವಿಭಾಗದ ಕ್ರೈಂ ಪಿ.ಎಸ್.ಐ ಎಂ. ಭರತೇಶ್ ಕಂಕಣವಾಡಿ ಸಮಾಜ ಸೇವಾ ವೇದಿಕೆ ಗೌರವಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು, ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು,ಕಾರ್ಯದರ್ಶಿ ಲೋಕೇಶ್ ಭಟ್ ಪಾದೂರು, ಸದಸ್ಯರುಗಳಾದ ಅಶೋಕ್ ಶೇರಿಗಾರ್ ಅಲೆವೂರು, ಹಸನ್ ಇಬ್ರಾಹಿಂ ಹೆಚ್. ಆರ್. ರೆಸಿಡೆನ್ಸಿ ಶಿರ್ವ, ಸಿ.ಆರ್.ಪ್ರಾಪರ್ಟಿಸ್ ಸಂತೋಷ್ ಆಚಾರ್ಯ ಶಿರ್ವ, ಸಾದಿಕ್ ಸಾಹಿಲ್ ಫೇಬ್ರಿಕೇಟರ್ಸ್ ಕಾಪು, ಸರ್ಫ್ರಾಜ್ ಏರ್ಮಲ್, ಗಣೇಶ್ ನಾಯ್ಕ್ ಪಯ್ಯಾರು ಕಾಪು ಪೊಲೀಸ್ ಠಾಣಾ ಸಿಬಂದಿಯವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮಾಜ ಸೇವಾ ವೇದಿಕೆ ಗೌರವ ಸಲಹೆಗಾರರದ ದಯಾನಂದ ಕೆ ಶೆಟ್ಟಿ ದೆಂದೂರು ನಿರೂಪಿಸಿದರು.
ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ವಿಶ್ವ ಹೃದಯ ದಿನಾಚರಣೆ
 (1).jpg)
Posted On: 30-09-2022 02:08PM
ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯಕ್ಕಾಗಿ ವಿಶ್ವ ಹೃದಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಇಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಆರೋಗ್ಯವಂತ ಹೃದಯವಿರಬೇಕಾದರೆ ನಿಯಮಿತವಾದ ವ್ಯಾಯಾಮ, ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕು. ಜಗತ್ತಿನ ಎಲ್ಲರೂ ವಿಶ್ವ ಹೃದಯ ದಿನವನ್ನು ಹೃದ್ರೋಗಿಗಳೇ ಇಲ್ಲವಾಗಿಸುವ ಮೂಲಕ ಆಚರಿಸುವಂತೆ ಆಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಸೈನ್ಸ್ ಕ್ಲಬ್‌ನ ಮುಖ್ಯಸ್ಥ ಲೋಹಿತ್ ಎಸ್ ಕೆ ಸುಂದರ ಮತ್ತು ಸ್ವಸ್ಥಮನಸ್ಸುಗಳ ಮೂಲಕ ಎಲ್ಲರೂ ಹೃದಯವಂತರಾಗಿ, ಆರೋಗ್ಯವಂತರಾಗಲಿ ಎಂದು ಹಾರೈಸಿದರು. ನಂತರ ವಿದ್ಯಾರ್ಥಿಗಳಿಂದ ಹೃದಯ ಸಂಬಂಧಿ ಘೋಷಣೆಗಳು ನೆರವೇರಿತು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ ಎಸ್, ಆದರ್ಶ ಎಂ ಕೆ ಅಮೃತ್ ರೈ ಉಪನ್ಯಾಸಕರಾದ ಉಮೇಶ್, ರಾಘವೇಂದ್ರ ರಾವ್, ರಾಜೇಶ್ ಶೆಟ್ಟಿ, ಡಾ. ಆದಂ ಶೇಕ್, ಅಕ್ಷತಾ ಜೈನ್, ಸುನಿಲ್, ಹರೀಶ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಅಕ್ಟೋಬರ್ 1 : ಸಹಬಾಳ್ವೆ ಕಾಪು ತಾಲೂಕು ಘಟಕದಿಂದ ಸಾಮರಸ್ಯ ನಡಿಗೆ

Posted On: 30-09-2022 01:57PM
ಕಾಪು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದ ಅಂಗವಾಗಿ ಸಾಮರಸ್ಯದ ಬದುಕಿನ ಉಳಿವಿಗಾಗಿ ಸಹಬಾಳ್ವೆ ಕರ್ನಾಟಕ ರಾಜ್ಯಾದ್ಯಂತ ಸಾಮರಸ್ಯ ನಡಿಗೆ ಕಾರ್ಯಕ್ರಮ ಆಯೋಜಿಸಿದ್ದು ಆ ಪ್ರಯುಕ್ತ ಸಹಬಾಳ್ವೆ ಕಾಪು ತಾಲೂಕು ಘಟಕ ಸಾಮರಸ್ಯ ನಡಿಗೆಯನ್ನು ಅಕ್ಟೋಬರ್ 1, ಶನಿವಾರ ಸಂಜೆ 4:30 ಕ್ಕೆ ಹಮ್ಮಿಕೊಂಡಿದ್ದು, ಕಾಪು ಜನಾರ್ದನ ದೇವಸ್ಥಾನದಿಂದ ಪ್ರಾರಂಭಗೊಂಡು ಕಾಪು ಪೇಟೆಯಲ್ಲಿ ಸಮಾಪನಗೊಳ್ಳಲಿದೆ. ಸಮಾಪನ ಸಭೆಯಲ್ಲಿ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಹಬಾಳ್ವೆ ಕಾಪು ಅಧ್ಯಕ್ಷರಾದ ನಿರ್ಮಲ ಕುಮಾರ್ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.
ಇನ್ನೇನು ಚುನಾವಣೆಗಳು ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಧರ್ಮ ಮತ್ತು ಇನ್ನಿತರ ವಿಷಯಗಳ ಮೂಲಕ ಅಹಿತಕರ ಘಟನೆಗಳನ್ನು ಸೃಷ್ಟಿಸಿ ಶಾಂತಿ ಕದಡುವ ಸಮಯದಲ್ಲಿ ಸಾಮರಸ್ಯದ ನಡಿಗೆ ಅನಿವಾರ್ಯ. ಮುಂದಿನ ದಿನಗಳಲ್ಲಿ ಸರ್ವ ಧರ್ಮ, ಸಾಮರಸ್ಯದ ಚಿಂತನೆಯ ಹಲವಾರು ಕಾರ್ಯಕ್ರಮಗಳನ್ನು ಸಹಬಾಳ್ವೆ ಕಾಪು ತಾಲೂಕು ಘಟಕ ಹಮ್ಮಿಕೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ತಸ್ನೀಮ್ ಅರಾ, ನವೀನ್ ಚಂದ್ರ ಸುವರ್ಣ, ಅಖಿಲೇಶ್, ರಾಲ್ಫಿ ಡಿ ಕೋಸ್ಟ ಮತ್ತಿತರರು ಉಪಸ್ಥಿತರಿದ್ದರು.
ಇಂದು ಕುಂಜೂರು ದುರ್ಗಾ ದೇವಸ್ಥಾನದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ

Posted On: 30-09-2022 01:30PM
ಕಾಪು : ಶ್ರೀ ದುರ್ಗಾ ಮಿತ್ರವೃಂದ ಕುಂಜೂರು, ಶ್ರೀ ದುರ್ಗಾ ಸೇವಾ ಸಮಿತಿ,ಕುಂಜೂರು, ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಆಶ್ರಯದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ (ರಿ.) ಬೆಂಗಳೂರು ಇವರ ಜನಜಾಗೃತಿ ಅಭಿಯಾನ "ಐತಿಹಾಸಿಕ ಪರಂಪರೆ ಉಳಿಸಿ" ಕಾರ್ಯಕ್ರಮ ಸೆಪ್ಟೆಂಬರ್ 30, ಶುಕ್ರವಾರ ಕುಂಜೂರು ದುರ್ಗಾ ದೇವಸ್ಥಾನದಲ್ಲಿ ಸಂಜೆ 6 ಗಂಟೆಗೆ ಜರಗಲಿದೆ.
ಕಾರ್ಯಕ್ರಮವನ್ನು ದುರ್ಗಾ ದೇವಸ್ಥಾನ,ಕುಂಜೂರು ಇದರ ಅಧ್ಯಕ್ಷರಾದ ದೇವರಾಜ ರಾವ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅದಮಾರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಸುದರ್ಶನ ವೈ .ಎಸ್ ವಹಿಸಲಿದ್ದಾರೆ.
ಮುಖ್ಯ ಉಪನ್ಯಾಸಕಾರರಾಗಿ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಜ್ಯೋತಿಂದ್ರನಾಥ ಭಾಗವಹಿಸಲಿದ್ದಾರೆ. ವೇ.ಮೂ.ಚಕ್ರಪಾಣಿ ಉಡುಪ ಅರ್ಚಕರು, ಕೆ.ಎಲ್.ಕುಂಡಂತಾಯ, ಪ್ರಫುಲ್ಲ ಶೆಟ್ಟಿ ,ಎಲ್ಲೂರು ಗುತ್ತು, ಸತೀಶ ಕುಂಡಂತಾಯ, ಚಂದ್ರಹಾಸ ಆಚಾರ್ಯ, ರಾಘವೇಂದ್ರ ಶೆಟ್ಟಿ , ಮ್ಯಾನೇಜರ್ ದುರ್ಗಾದೇವಸ್ಥಾನ ,ಕುಂಜೂರು ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಪಿಎಫ್ಐ ಮತ್ತದರ ಸಹ ಸಂಘಟನೆಗಳ ಮೇಲೆ 5 ವರ್ಷಗಳ ನಿಷೇಧ ಹೇರಿರುವುದು ಸ್ವಾಗತಾರ್ಹ ನಿರ್ಧಾರ : ಲಾಲಾಜಿ ಆರ್ ಮೆಂಡನ್

Posted On: 29-09-2022 11:10AM
ಕಾಪು : ದೇಶದ ತುಂಬಾ ಮತೀಯ ಉಗ್ರವಾದ, ಗಲಭೆ ಸೃಷ್ಟಿ, ಕೋಮು ದ್ವೇಷ ಸೃಷ್ಟಿ, ದೇಶ ವಿರೋಧಿ ಕೃತ್ಯಗಳಲ್ಲಿ ಪಿಎಫ್ಐ ಮತ್ತು ಅದರ 8 ಸಹೋದರ ಸಂಸ್ಥೆಗಳು ಭಾಗಿಯಾಗಿದ್ದವು. ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ನಡೆದ ಹಲವು ವಿದ್ವಂಸಕ ಕೃತ್ಯಗಳಲ್ಲಿ ಈ ಸಂಘಟನೆಯ ಹೆಸರು ಕೇಳಿ ಬಂದಿತ್ತು. ಇದರ ಜೊತೆಗೆ ನಮ್ಮ ಹಲವಾರು ಕಾರ್ಯಕರ್ತರ ಕೊಲೆಗಳಲ್ಲಿ ಈ ಸಂಘಟನೆಯ ಪಾಲುದರಿಕೆ ಸ್ಪಷ್ಟವಾಗಿತ್ತು. ಈ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಕೂಗು ಕೇಳಿಬರುತ್ತಿತ್ತು. ಆದರೆ, ಈ ಹಿಂದೆ ಇದ್ದ ಸರ್ಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ಸಂಘಟನೆಗಳನ್ನು ಪೋಷಣೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿತ್ತು.
ಆದರೆ, ಕಳೆದ ಎರಡು ವಾರಗಳಿಂದ ಪಿಎಫ್ಐ ಮತ್ತು ಸಹ ಸಂಘಟನೆಗಳ ಮೇಲೆ ಸರಿಯಾದ ಸಾಕ್ಷಿಗಳನ್ನು ಕಲೆಹಾಕಿ ಎನ್ಐಎ ಮತ್ತು ಉಳಿದ ತನಿಖಾ ಸಂಸ್ಥೆಗಳು ಸರಣಿ ಬಂಧನಗಳನ್ನು ಮಾಡಿತ್ತು. ಇದರ ನಂತರ ಕೆಲವು ಆತಂಕಕಾರಿ ಮಾಹಿತಿಗಳು ಸರ್ಕಾರಕ್ಕೆ ದೊರೆತ ಕಾರಣ ಮತ್ತು ಹಲವಾರು ಹೊರಗಿನ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಸಾಬೀತಾದ ಕಾರಣಕ್ಕೆ ಪಿಎಫ್ಐ ಮತ್ತು 8 ಇತರ ಸಂಘಟನೆಗಳ ಮೇಲೆ 5 ವರ್ಷಗಳ ನಿಷೇಧವನ್ನು ಸರ್ಕಾರ ಹೇರಿದೆ. ಇದು ಅತ್ಯಂತ ಸ್ವಾಗತಾರ್ಹ ನಿರ್ಧಾರವಾಗಿದ್ದು ಇದರಿಂದ ಈ ಸಂಘಟನೆಗಳ ಕುಕೃತ್ಯಗಳಿಗೆ ಕಡಿವಾಣ ಬೀಳಲಿದೆ ಜೊತೆಗೆ ಈ ಸಂಘಟನೆಗಳು ಈವರೆಗೆ ನಡೆಸಿರುವ ದುಶ್ಕೃತ್ಯಗಳ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲಿ.
ಇದೇ ಸಂಧರ್ಭ ಈ ಕಾರ್ಯಾಚರಣೆಗೆ ಕಾರಣರಾದ ನವರಾತ್ರಿಯ ಶುಭಸಂದರ್ಭದಲ್ಲಿ ಇಂತಹ ದಿಟ್ಟ ಹೆಜ್ಜೆ ಇಟ್ಟಿರುವ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಜಿ, ಗೃಹ ಸಚಿವರಾದ ಅಮಿತ್ ಶಾ, ಕೇಂದ್ರ ಗೃಹ ಇಲಾಖೆ, ಎನ್ಐಎ ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಅಭಿನಂದನೆಗಳನ್ನು ಮತ್ತು ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ ಎಂದು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ನವರಾತ್ರಿಯ ನೆಪದಲ್ಲಿ ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡಿಸುತ್ತಿರುವ ಪಾಲಕರು

Posted On: 28-09-2022 10:47PM
ಪಡುಬಿದ್ರಿ : ನವರಾತ್ರಿಯ ಸಂಭ್ರಮದಲ್ಲಿ ವೇಷಗಳದ್ದೇ ಕಾರುಬಾರು. ಆದರೆ ಪಡುಬಿದ್ರಿ ಪೇಟೆಯಲ್ಲಿ ಕಂಡ ದೃಶ್ಯ ಮಾತ್ರ ಭಿನ್ನ ಸಂಭ್ರಮದ ನಡುವೆ ಬೇಸರ ತರಿಸುವಂತಿತ್ತು. ಇದಕ್ಕೆ ಕಾರಣ ಪಾಲಕರು ಏನೂ ತಿಳಿಯದ ಮುಗ್ಧ ಮಕ್ಕಳ ಮುಖಕ್ಕೆ ಬಣ್ಣ ಬಳಿದು ಜರಿ ಜರಿ ಬಟ್ಟೆ ತೊಡಿಸಿ, ವೇಷದ ನೆಪದಲ್ಲಿ ಭಿಕ್ಷೆ ಬೇಡಿಸುತ್ತಿರುವುದು ಕಂಡು ಬಂದಿದೆ.

ಇದನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರ ಕೆಮರಾಕ್ಕೆ ಹೆದರಿದ ತಾಯಿ ಅಲ್ಲಿಂದ ವೇಗವಾಗಿ ಹೋಗುವ ದೃಶ್ಯ ಕಂಡು ಬಂದಿದೆ.
ಮತೋರ್ವ ಗರ್ಭಿಣಿ ಮಹಿಳೆ ತನ್ನ ಪುಟ್ಟ ಎರಡು ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡಿ ಸುತ್ತಿರುವುದು ಕಂಡು ಬಂದಿದೆ. ಸ್ಥಳೀಯರೋರ್ವರು ಇವರಿಗೆ ಗದರಿಸುತ್ತಿರುವುದು ಕಂಡುಬಂದಿದೆ.
ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡುತ್ತಿರುವುದು ಎಷ್ಟು ಸರಿ ಸಂಬಂಧ ಪಟ್ಟ ಇಲಾಖೆಗಳು ಎಲ್ಲಿವೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಕಳತ್ತೂರು : ಅಂಗನವಾಡಿಯಲ್ಲಿ ಪೋಷಣೆ ಅಭಿಯಾನ ಕಾರ್ಯಕ್ರಮ

Posted On: 28-09-2022 04:36PM
ಕಳತ್ತೂರು : ಗ್ರಾಮದ 3 ಅಂಗನವಾಡಿ ಕೇಂದ್ರದ ಪೋಷಣೆ ಅಭಿಯಾನ ಕಾರ್ಯಕ್ರಮ ಕಳತ್ತೂರು ಅಂಗನವಾಡಿಯಲ್ಲಿ ನಡೆಯಿತು. ಪೋಷಣೆ ಅಭಿಯಾನ ಕಾರ್ಯಕ್ರಮದಲ್ಲಿ ಮೊಳಕೆ ಬರಿಸಿದ ಹೆಸರುಕಾಳು ಪೌಷ್ಟಿಕ ಆಹಾರ -ತರಕಾರಿ -ಸೊಪ್ಪು ಗಳಿಂದ ಸಿಗುವಂತಹ ಪೌಷ್ಟಿಕ ಆಹಾರದ ಮಾಹಿತಿ ನೀಡಲಾಯಿತು. ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಕೂಡ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಫಾರೂಕ್ ಚಂದ್ರನಗರ ಮಾತನಾಡಿ ಕಳತ್ತೂರು ಅಂಗನವಾಡಿಯವರ ಕೆಲಸ ಶ್ಲಾಘನಿಯವಾದದ್ದು. ಇವರ ಸಮಾಜಮುಖಿ ಕೆಲಸ ದೇವರು ಮೆಚ್ಚುವಂತಹದು. ಕಾರ್ಯಕ್ರಮದ ಮುತವರ್ಜಿಯನ್ನು ಕಳತ್ತೂರು ಉಪಕೇಂದ್ರದ ಸಿ. ಎಚ್.ಓ ದೀಪಿಕಾ, ಕಿರಿಯ ಮಹಿಳಾ ಕಾರ್ಯಕರ್ತೆ ಸುಧಾವತಿ ಹಾಗೂ 3 ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಸೇರಿಕೊಂಡು ಯಶಸ್ವಿಯಾಗಿ ನಡೆಸಿದ್ದು ಊರಿನವರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಜನಾರ್ಧನ ಆಚಾರ್ಯ, ದಿವ್ಯ ಶೆಟ್ಟಿಗಾರ್, ಸ್ಟೇನ್ಲಿಸಸ್ ಕೊರ್ಡ ಹಾಗೂ ಬಾಲವಿಕಾಸ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷ, ಸದಸ್ಯರು ಮಕ್ಕಳ ತಾಯಂದಿರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕುತ್ಯಾರು ಗುತ್ತು ಮಂಡೇಡಿ ಕೆ ಸದಾನಂದ ಶೆಟ್ಟಿ ನಿಧನ

Posted On: 27-09-2022 07:21PM
ಕಾಪು : ಇನ್ನಂಜೆ ಗ್ರಾಮದ ಹಿರಿಯರಾದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಾರ್ಗದರ್ಶನ ನೀಡುತಿದ್ದ ಕುತ್ಯಾರು ಗುತ್ತು ಮಂಡೇಡಿ ಕೆ ಸದಾನಂದ ಶೆಟ್ಟಿ (87) ಯವರು ಇಂದು ಬೆಳಿಗ್ಗೆ ನಿಧಾನರಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿ, ಉಡುಪಿ ಕೃಷಿ ಸಂಘದ ಅಧ್ಯಕ್ಷರಾಗಿ, ವಿಶ್ವಹಿಂದೂ ಪರಿಷತ್ ಕಾಪು ಪ್ರಖಂಡರಾಗಿ ಸೇವೆ ಸಲ್ಲಿಸಿರುತ್ತಾರೆ.