Updated News From Kaup

ಕಾಪು : ಶ್ರೀ ಜನಾರ್ದನ ದೇಗುಲ ಮತ್ತು ಹೊಸ ಮಾರಿಗುಡಿಗೆ ಪ್ರಮೋದ್ ಮುತಾಲಿಕ್ ಭೇಟಿ

Posted On: 03-10-2022 02:14PM

ಕಾಪು : ಪ್ರಖರ ಹಿಂದುತ್ವವಾದಿ, ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರವರು ಸೋಮವಾರ ಕಾಪು ಶ್ರೀ ಜನಾರ್ದನ ದೇಗುಲ ಹಾಗೂ ಕಾಪು ಶ್ರೀ ಹೊಸಮಾರಿ ಗುಡಿ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇಗುಲಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ

Posted On: 02-10-2022 04:31PM

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಉಚ್ಚಿಲ ದಸರಾ 2022 ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿದರು.

ಉದ್ಯಾವರ : ಗಾಂಧಿ ಜಯಂತಿ ಆಚರಣೆ

Posted On: 02-10-2022 03:10PM

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಕಥೋಲಿಕ್ ಸಭಾ ಉದ್ಯಾವರ ಘಟಕ ಇವರ ಜಂಟಿ ಆಶ್ರಯದಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.

ಬಂಟಕಲ್ಲು : ಸಾಮರಸ್ಯ ನಡಿಗೆ, ಗಾಂಧಿ ನಮನ, ಸ್ವಚ್ಚತಾ ಕಾರ್ಯಕ್ರಮ

Posted On: 02-10-2022 02:07PM

ಬಂಟಕಲ್ಲು : ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಎಸ್. ವಿ.ಎಸ್ ಪ.ಪೂ ಕಾಲೇಜ್ ಇನ್ನಂಜೆ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಇವರ ಸಹಯೋಗದೊಂದಿಗೆ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಚತಾ ಕಾರ್ಯದೊಂದಿಗೆ ಗಾಂಧಿ ನಮನ ಕಾರ್ಯಕ್ರಮವು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ನಡೆಯಿತು.

ಕಾಪು ತಾಲೂಕಿನ ವಿವಿದೆಡೆಯಲ್ಲಿ ಶಾಸಕ ಲಾಲಾಜಿ ಮೆಂಡನ್ ನೇತೃತ್ವದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ

Posted On: 02-10-2022 01:48PM

ಕಾಪು : ಶಾಸಕರಾದ ಲಾಲಾಜಿ ಆರ್ ಮೆಂಡನ್ ನೇತೃತ್ವದಲ್ಲಿ ಕ್ಷೇತ್ರದ 9 ಪ್ರಮುಖ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬೆಳಿಗ್ಗೆ 8.30 ಗಂಟೆಗೆ ಏಕಕಾಲದಲ್ಲಿ ಚಾಲನೆಗೊಂಡು 12 ಗಂಟೆ ತನಕ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಇನ್ನಂಜೆ : ಎಸ್ ವಿ ಎಸ್ ಮತ್ತು ಎಸ್ ವಿ ಎಚ್ ಶಾಲೆಯಲ್ಲಿ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ; ಶ್ರಮದಾನ

Posted On: 02-10-2022 01:38PM

ಇನ್ನಂಜೆ : ಎಸ್ ವಿ ಎಸ್ ಮತ್ತು ಎಸ್ ವಿ ಎಚ್ ಆಂಗ್ಲ ಮಾಧ್ಯಮ ನರ್ಸರಿ ಮತ್ತು ಹೈಯರ್ ಪ್ರೈಮರಿ ಶಾಲೆ ಇನ್ನಂಜೆ ಇಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನವನ್ನು ಶಾಲಾ ಆಡಳಿತಾಧಿಕಾರಿ ಅನಂತ ಮೂಡಿತ್ತಾಯರವರು ಉದ್ಘಾಟಿಸಿದರು.

ಇನ್ನಂಜೆ : ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ; ಸನ್ಮಾನ

Posted On: 02-10-2022 01:03PM

ಇನ್ನಂಜೆ : ರೋಟರಿ ಸಮುದಾಯ ದಳ ಇನ್ನಂಜೆ ಮತ್ತು ಇನ್ನಂಜೆ ಗ್ರಾಮ ಪಂಚಾಯತ್ ಜಂಟಿಯಾಗಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆಯನ್ನು ಆಚರಿಸಿತು.

ಮೂಳೂರು‌ : ಕೈರಂಪನಿಗೆ ಬಿದ್ದ ಬೃಹತ್ ಗಾತ್ರದ ತೊರಕೆ ಮೀನುಗಳು

Posted On: 01-10-2022 10:42PM

ಮೂಳೂರು : ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ಶುಕ್ರವಾರ ಹಾಗೂ ಶನಿವಾರ ಎರ್ಮಾಳಿನ ಕೈರಂಪಣಿ ಮೀನುಗಾರರ ಬಲೆಗೆ ಬೃಹತ್ ಗಾತ್ರದ ತೊರಕೆ ಮೀನುಗಳು ಬಿದ್ದಿದೆ.

ಉಚ್ಚಿಲ : ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟನೆ ; 700ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ

Posted On: 01-10-2022 05:13PM

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಳದ ಮೊಗವೀರ ಭವನ ಸಭಾಂಗಣದಲ್ಲಿ ಶನಿವಾರ ಮಹಾಲಕ್ಷ್ಮಿ ಕೋ ಅಪರೇಟಿವ್ ಬ್ಯಾಂಕ್ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಉಚ್ಚಿಲ ದಸರಾ ಅಂಗವಾಗಿ ಹಮ್ಮಿಕೊಂಡ ಅವಿಭಜಿತ ದಕ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೆದ್ದಾರಿ ಪಕ್ಕದಲ್ಲಿದ್ದುಕೊಂಡು ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರವು ದೇಶ ವಿದೇಶಗಳ ಭಕ್ತರನ್ನು ಅಕರ್ಷಿಸುವ ತಾಣವಾಗಿ ಮೂಡಿಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ಈ ಬಾರಿಯ ದಸರಾ ಮಹೋತ್ಸವ ಅದರ ಹಿರಿಮೆಗೆ ಗರಿ ಮೂಡಿಸಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಎಲ್ಲಾ ದಸರಾ ಮಹೊತ್ಸವಗಳನ್ನು ಉಚ್ಚಿಲ ದಸರಾ ಮೀರಿಸಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕುಂಜೂರು : ಐತಿಹಾಸಿಕ ಪರಂಪರೆ ಉಳಿಸಿ ಜಾಗೃತಿ ಕಾರ್ಯಕ್ರಮ

Posted On: 01-10-2022 08:19AM

ಕುಂಜೂರು :‌ ಹೀಗೆ ಇದ್ದಿತೆಂದು‌ ನಿರೂಪಿಸುವ ಸತ್ಯ ಕಥೆಯೇ ಇತಿಹಾಸ. ಇಂತಹ ಅಮೂಲ್ಯ ಪಾರಂಪರಿಕ ಮೌಲ್ಯಗಳಿರುವ ದಾಖಲೆಗಳನ್ನು ಮನನ ಮಾಡಿಕೊಳ್ಳುವ ,ಕಾಪಿಡುವ ಪ್ರಯತ್ನವಾಗಿ "ಐತಿಹಾಸಿಕ ಪರಂಪರೆ ಉಳಿಸಿ" ಎಂಬ ಕಾರ್ಯಕ್ರಮ ರಾಜ್ಯದಾದ್ಯಂತ ನಡೆಯುತ್ತಿದೆ. ಪ್ರಾಚ್ಯ ವಸ್ತುಗಳ ಅಧ್ಯಯನದಿಂದ,ಲಿಖಿತ ದಾಖಲೆಗಳ‌ ಆಧಾರದಲ್ಲಿ‌ ಇತಿಹಾಸವನ್ನು ಕಟ್ಟಬಹುದು ಎಂದು ಅದಮಾರಿನ‌ ಪೂರ್ಣಪ್ರಜ್ಞ ಪ.ಪೂ.ಕಾಲೇಜಿನ ಉಪನ್ಯಾಸಕ‌ ವೈ. ಜ್ಯೋತೀಂದ್ರನಾಥ ರಾವ್ ಅಭಿಪ್ರಾಯಪಟ್ಟರು. ‌‌ ಅವರು ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಶ್ರಯದಲ್ಲಿ ಸ್ಥಳೀಯ ದುರ್ಗಾ ಮಿತ್ರವೃಂದ, ದುರ್ಗಾ ಸೇವಾ ಸಮಿತಿಗಳ ಸಹಯೋಗದಲ್ಲಿ‌ ನೆರವೇರಿದ ಬೆಂಗಳೂರಿನ ಇತಿಹಾಸ ಅಕಾಡೆಮಿಯ "ಐತಿಹಾಸಿಕ ಪರಂಪರೆ ಉಳಿಸಿ" ಕಾರ್ಯಕ್ರಮದಲ್ಲಿ‌ ಪ್ರಧಾನ ಭಾಷಣ ಮಾಡಿದರು.