Updated News From Kaup

ಶಿರ್ವ ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಕೋಡು ಹರಿಪ್ರಸಾದ್ ಸಾಲಿಯಾನ್ ಆಯ್ಕೆ

Posted On: 20-09-2022 11:20PM

ಶಿರ್ವ : ಇಲ್ಲಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಕೋಡು ಹರಿಪ್ರಸಾದ್ ಸಾಲಿಯಾನ್ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಕುತ್ಯಾರು, ಗೀತಾ ವಾಗ್ಲೆ, ಪ್ರವೀಣ್ ಪೂಜಾರಿ, ಮಿತ್ರಬೆಟ್ಟು ಕಾರ್ಯದರ್ಶಿಯಾಗಿ ರವೀಂದ್ರ ಪಾಟ್ಕರ್ ಕೋಡುಗುಡ್ಡೆ, ಜತೆ ಕಾರ್ಯದರ್ಶಿಯಾಗಿ ಜಯಶ್ರೀ ಶೆಟ್ಟಿ ಶಿರ್ವ, ರಾಜೇಶ್ ಶೆಟ್ಟಿ ಪಂಜಿಮಾರು, ಸುಮತಿ ಜೆ ಸುವರ್ಣ ಕೋಶಾಧಿಕಾರಿ ಪ್ರಕಾಶ್ ಕೋಟ್ಯಾನ್ ನ್ಯಾರ್ಮ ಹಾಗೂ 40 ಮಂದಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಮಾದಕ ಪದಾರ್ಥ‌ ಬಳಕೆಯ ವಿರುದ್ಧ ಜನಜಾಗೃತಿ ಅಭಿಯಾನ ಕಾರ್ಯಕ್ರಮ

Posted On: 20-09-2022 09:10PM

ಕಾಪು : ಮೂಳೂರ್ ಜುಮಾ ಮಸೀದಿ ಹಾಗು ಸಿರಾಜುಲ್ ಇಸ್ಲಾಂ ಅರಬಿ ಮದ್ರಸ ಮೂಳೂರ್ ಇದರ ಜಂಟಿ ಆಶ್ರಯದಲ್ಲಿ ಇಂಲೈಟ್ ವೆಲ್ನೆಸ್ ಸೆಂಟರ್ ಕುತ್ತಾರ್ ಮಂಗಳೂರು ಇದರ ಸಹಯೋಗದೊಂದಿಗೆ ಮಾದಕ ಪದಾರ್ಥ ಬಳಕೆಯ ವಿರುದ್ಧ ಜನ ಜಾಗೃತಿ ಅಭಿಯಾನ ಕಾರ್ಯಕ್ರಮವು ಜುಮಾ ಮಸೀದಿ ಕ್ಯಾಂಪಸ್ ನಲ್ಲಿ ಜರುಗಿತು.

ಮಸೀದಿ ಅಧ್ಯಕ್ಷ ಸೈಯದ್ ಮುರಾದ್ ಅಲಿ ಅಧ್ಯಕ್ಷತೆಯನ್ನು ವಹಿಸಿದ್ದರು. ಖತೀಬರಾದ ಹಫೀಳ್ ಅಶ್ರಫ್ ಸಖಾಫಿ ದುವಾ ನೆರವೇರಿಸಿದರು. ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ ಪೂವಯ್ಯರವರು ಮಾದಕ ಪದಾರ್ಥ ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ವಿವರಿಸಿ ಇಂದಿನ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಕಾರ್ಯಕ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ತರಬೇತುದಾರ ಬಹುಮಾನ್ಯ ಇಬ್ರಾಹಿಂ ಖಲೀಲ್ ರವರು ಲಹರಿಪದಾರ್ಥಗಳ ದಾಸರಾಗುವುದರಿಂದಾಗುವ ಅನಾಹುತಗಳ ಬಗ್ಗೆ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಅದರಿಂದ ತಡೆಯಲು ಪೋಷಕರು ತೆಗೆದುಕೊಳ್ಳಬಹುದಾದ ಉಪಾಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮದ್ರಸ ಅಧ್ಯಕ್ಷ ಅಹ್ಮದ್ ಬಾವ ವೈ.ಬಿ.ಸಿ, ಸದ್ರ್ ಉಸ್ತಾದ್ ಅಬ್ದುಲ್ ಲತೀಫ್ ಸಅದಿ , ಎಂ.ಎ. ಗಫೂರ್ ಉಪಸ್ಥಿತರಿದ್ದರು. ವೈ.ಬಿ.ಸಿ. ಬಷೀರ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಸ್ ಆರ್ ರಫೀಕ್ ವಂದಿಸಿದರು.

ಲೋಕಾಯುಕ್ತ ಕಾಯ್ದೆಯಡಿ ದೂರು ಸಲ್ಲಿಕೆಗೆ ಅವಕಾಶ

Posted On: 20-09-2022 10:36AM

ಉಡುಪಿ : ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವಿಚಾರಣೆ ಬಯಸುವ ಜಿಲ್ಲೆಯ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ದೃಷ್ಠಿಯಿಂದ ದೂರು ಅರ್ಜಿಗಳ ಪ್ರಪತ್ರಗಳನ್ನು ಸೆಪ್ಟಂಬರ್ 21 ರಂದು ಬೈಂದೂರು ಪ್ರವಾಸಿ ಮಂದಿರ, ಸೆ. 22 ರಂದು ಕುಂದಾಪುರ ಪ್ರವಾಸಿ ಮಂದಿರ, ಸೆ. 23 ರಂದು ಹೆಬ್ರಿ ಪ್ರವಾಸಿ ಮಂದಿರ, ಸೆ. 26 ರಂದು ಕಾರ್ಕಳ ಪ್ರವಾಸಿ ಮಂದಿರ, ಸೆ. 27 ರಂದು ಬ್ರಹ್ಮಾವರ ತಾಲೂಕು ಕಚೇರಿ ಆವರಣ ಹಾಗೂ ಸೆ. 28 ರಂದು ಕಾಪು ತಾಲೂಕು ಕಚೇರಿ ಆವರಣದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ವರೆಗೆ ಸ್ವೀಕರಿಸಲಾಗುವುದು.

ಉಡುಪಿ ತಾಲೂಕಿಗೆ ಸಂಬಂಧಪಟ್ಟ ದೂರು ಅರ್ಜಿಗಳನ್ನು ನೇರವಾಗಿ ಉಡುಪಿ ಲೋಕಾಯುಕ್ತ ಕಛೇರಿಗೆ ನೀಡಬಹುದಾಗಿದೆ. ಕಾರ್ಯಕ್ರಮದಲ್ಲಿ ಉಡುಪಿ ಘಟಕದ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಭಾಗವಹಿಸಲಿದ್ದು, ಸಾರ್ವಜನಿಕರು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ತೊಂದರೆ ಅನುಭವಿಸಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 0820-2958881 ಹಾಗೂ ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 0820-2536661 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೋಟರಿ ಶಂಕರಪುರ : ಇಂಜಿನಿಯರ್ಸ್ ದಿನಾಚರಣೆ

Posted On: 20-09-2022 10:29AM

ಕಾಪು : ರೋಟರಿ ಕ್ಲಬ್ ಶಂಕರಪುರದ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಇಂಜಿನೀಯರ್ ಗಳಾದ ಅಬ್ದುಲ್ ಖಾದರ್ ಹಾಗೂ ಕ್ಯಾರಲ್ ಡಿಸಿಲ್ವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಅನಿತಾ ಡಿಸೋಜರವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್, ವೆಲೇರಿಯನ್ ನೊರೋಹ್ನ, ಮಾಲಿನಿ ಶೆಟ್ಟಿ, ಸಿಲ್ವಿಯ ಕಸ್ಟಲೀನೋ, ಅಂತೋನಿ ಡೇಸಾ, ಜಾರ್ಜ್ ಡಿಸಿಲ್ವ, ಪ್ಯಾಟ್ರಿಕ್ ಡಿಸೋಜಾ, ಫ್ಲಾವಿಯ ಮ್ಯಾನೇಜಸ್, ಫ್ರಾನ್ಸಿಸ್ ಡೇಸಾ, ಲಕ್ಷ್ಮಣ್ ಪೂಜಾರಿ, ರೋಟರಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ : ತೆಂಗಿನ ಮರ ಹತ್ತುವವರಿಗೆ ಕೇರಾ ಸುರಕ್ಷಾ ವಿಮೆ ಬಗ್ಗೆ ಮಾಹಿತಿ ಹಾಗೂ ನೋಂದಾವಣೆ ಕಾರ್ಯಕ್ರಮ

Posted On: 19-09-2022 07:53PM

ಪಡುಬಿದ್ರಿ : ಸಂಘಟನೆಯ ಕೊರತೆ ಮತ್ತು ವಿಚಾರಗಳ ಕೊರತೆಯಿಂದ ಕಾರ್ಮಿಕರು ಅಸಂಘಟಿತರಾಗುತ್ತಿದ್ದಾರೆ. ತೆಂಗಿನ ಮರ ಹತ್ತುವವರಿಗೆ ಇದೇ ಸಮಸ್ಯೆಯಾಗಿತ್ತು. ಇದನ್ನು ಗುರುತಿಸಿ ಅವರಿಗೆ ಉಪಯೋಗವಾಗುವ ಕಾರ್ಯವನ್ನು ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿರವರು ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕೇರಾ ಸುರಕ್ಷಾ ವಿಮೆ ಪ್ರಚಲಿತದಲ್ಲಿದೆ. ತಿಂಗಳಿಗೆ ಕೆಲವೊಂದು ತೆಂಗಿನ ಮರ ಹತ್ತುವವರ ಸಾವು ನಾವು ಕಾಣುತ್ತಿದ್ದೇವೆ. ಈ ವಿಮೆ ಅವರ ಕುಟುಂಬವರ್ಗಕ್ಕೆ ಸಹಾಯಕವಾಗಿದೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ. ಕೇವಲ 99ರೂಪಾಯಿ ನೀಡಿ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ಶಾಶ್ವತ ಅಂಗ ಊನ ಅಥವಾ ಮೂಳೆ ಮುರಿತವಾದವರಿಗೆ ಎರಡುವರೆ ಲಕ್ಷ ಸಿಗುತ್ತದೆ. ಓರಿಯಂಟಲ್ ಬ್ಯಾಂಕ್ ವಿಮೆ ಮತ್ತು ಕೇಂದ್ರ ಸರಕಾರದ ಮೂಲಕ ದೊರೆಯಲಿದೆ. ಸಣ್ಣಪುಟ್ಟ ಗಾಯಗೊಂಡವರಿಗೆ ಒಂದು ಲಕ್ಷ ರೂಪಾಯಿ ಕೊಡುವ ಅವಕಾಶವಿದೆ. ಅವರನ್ನು ಆಸ್ಪತ್ರೆಯಲ್ಲಿ ಆರೈಕೆ ಮಾಡುವವರಿಗೆ ದಿನಕ್ಕೆ 3 ಸಾವಿರದಂತೆ ಒಂದು ವಾರದವರೆಗೆ 18 ಸಾವಿರ ಖರ್ಚು ವೆಚ್ಚ ಭರಿಸುವ ಅವಕಾಶವಾಗಿದೆ. ನೋಂದಾವಣೆಗೆ ಅಕ್ಟೋಬರ್ 31 ಕೊನೆಯ ದಿನವಾಗಿದ್ದು ಆದಷ್ಟು ಬೇಗ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಉಡುಪಿ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಹೇಮಂತ್ ಕುಮಾರ್ ತಿಳಿಸಿದರು. ಅವರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಪಡುಬಿದ್ರಿ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 19ರಂದು ಪಡುಬಿದ್ರಿ ಮಾರ್ಕೆಟ್ ರಸ್ತೆಯ ಸಾಯಿ ಆರ್ಕೇಡ್ ಬಿಲ್ಡಿಂಗ್ ನಲ್ಲಿ ಜರಗಿದ ಪಡುಬಿದ್ರಿ, ಫಲಿಮಾರು, ಹಾಗೂ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೆಂಗಿನ ಮರ ಹತ್ತುವವರಿಗೆ ಕೇರ ಸುರಕ್ಷಾ ವಿಮೆ ಬಗ್ಗೆ ಮಾಹಿತಿ ಹಾಗೂ ನೋಂದಾವಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಫಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನೀತಾ ಗುರುರಾಜ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ಉಡುಪಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಕಾಪುವಿನ ಸಹಾಯಕ ತೋಟಗಾರಿಕೆ ಅಧಿಕಾರಿ ಅಮಿತ ಸಿಂಪಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ತೆದಾರರ ಸೇವಾ ಸಹಕಾರಿ ಸಂಘ ಪಡುಬಿದ್ರಿ ಇದರ ಅಧ್ಯಕ್ಷರಾದ ಪಿ ಕೆ ಸದಾನಂದ ವಹಿಸಿದ್ದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.

ಕಾಪು : ಕೈಪುಂಜಾಲು ವಹಿಯುಲ್ಲಾ ದರ್ಗಾದ ಉರುಸ್ ; ಶಾಂತಿ ಸಭೆ

Posted On: 19-09-2022 06:13PM

ಕಾಪು : ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮುಂಬರುವ ಸೆಪ್ಟೆಂಬರ್ 21 ರಂದು ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ವಹಿಯುಲ್ಲಾ ದರ್ಗಾದ (ಕಾಪು ಪೋಲಿಪು ಜಾಮಿಯಾ ಮಸೀದಿಯ ಅಧೀನದಲ್ಲಿರುವ) ಉರುಸ್ ಕಾರ್ಯಕ್ರಮದ ಪ್ರಯುಕ್ತ ಶಾಂತಿ ಸಭೆಯನ್ನು ಪೊಲೀಸ್ ವೃತ್ತ ನಿರೀಕ್ಷಕರು ಕಾಪು ಇವರ ನೇತೃತ್ವದಲ್ಲಿ ನಡೆಸಲಾಯಿತು.

ಈ ವೇಳೆ ಪೋಲಿಪು ಜಾಮಿಯಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕೈ ಪುಂಜಾಲು ವಾರ್ಡ್ನ ಪುರಸಭಾ ಸದಸ್ಯರು ಹಾಗೂ ಕೈಪುಂಜಾಲಿನ ಸ್ಥಳೀಯರು ಉಪಸ್ಥಿತಿಯಿದ್ದರು.

ಮಟ್ಟಾರು : ಹಿಂದೂ ಸಮಾಜೋತ್ಸವದ ಮನವಿ ಪತ್ರ ಬಿಡುಗಡೆ

Posted On: 18-09-2022 10:41PM

ಮಟ್ಟಾರು : ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ಇದರ ನೇತೃತ್ವದಲ್ಲಿ ನವೆಂಬರ್ 27 ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದ ಮನವಿ ಪತ್ರ ಇಂದು ಬಿಡುಗಡೆ ಮಾಡಲಾಯಿತು.

ವಿಶ್ವ ಹಿಂದೂ ಪರಿಷದ್ ಮಟ್ಟಾರು ಘಟಕದ ಗೌರವಾಧ್ಯಕ್ಷ ವಿಜಯ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಮತ್ತು ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಕರಸೇವಕರಾದ ಪಾಂಗಾಳ ಪಾಂಡುರಂಗ ಶ್ಯಾನಭಾಗ್ ಮನವಿ ಪತ್ರ ಬಿಡುಗಡೆ ಮಾಡಿದರು.

ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಕರಸೇವಕರಾದ ಸುಂದರ ಪ್ರಭು ಶಿರ್ವ,ರಮೇಶ್ ಪ್ರಭು ಬೆಳೆಂಜಾಲೆ,ದಿನೇಶ್ ಪಾಟ್ಕರ್ ಮಟ್ಟಾರು,ಶ್ರೀಪತಿ ಕಾಮತ್ ಶಿರ್ವ, ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಕಾರ್ಯದರ್ಶಿ ರಾಜೇಂದ್ರ ಶೆಣೈ, ಶಿರ್ವ ವಲಯ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್,ಮಟ್ಟಾರು ಘಟಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ,ಬಜರಂಗದಳ ಸಂಚಾಲಕ ವಿಶ್ವನಾಥ ಆಚಾರ್ಯ, ಮಾತೃಶಕ್ತಿ ಪ್ರಮುಖ್ ಸುಲೋಚನಾ ಆಚಾರ್ಯ, ದುರ್ಗಾವಾಹಿನಿ ಸಂಚಾಲಕಿ ದೀಕ್ಷಾ ಪ್ರಭು ಉಪಸ್ಥಿತರಿದ್ದರು.ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಪ್ರಸ್ತಾವನೆಗೈದರು.

ಉಡುಪಿ : ಬಿಜೆಪಿ‌ ಜಿಲ್ಲಾ ಒಬಿಸಿ‌‌‌ ಮೋರ್ಚಾ - ವಿಶ್ವಕರ್ಮ‌, ನಾರಾಯಣಗುರು ಜಯಂತಿ ಆಚರಣೆ ;ಸಾಧಕರಿಗೆ ಸನ್ಮಾನ

Posted On: 18-09-2022 08:51PM

ಉಡುಪಿ : ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಮತ್ತು ಬ್ರಹ್ಮಶ್ರೀ‌ ನಾರಾಯಣ ಗುರು ಜಯಂತಿ ಆಚರಣೆಯು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು ಅಧ್ಯಕ್ಷತೆಯಲ್ಲಿ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಸಕ್ತ‌ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಡಾ| ಅಣ್ಣಯ್ಯ ಕುಲಾಲ್, ಅತ್ಯುತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಜೀವ ದೇವಾಡಿಗ, ಕೊರಗ ಸಮುದಾಯದ ಗುರಿಕಾರ ಸುಂದರ ಕೊರಗ ಇವರನ್ನು ಸನ್ಮಾನಿಸಲಾಯಿತು. ಭಗವಾನ್‌ ವಿಶ್ವಕರ್ಮರ ಕುರಿತು‌ ಉಪನ್ಯಾಸವನ್ನು ಕಟಪಾಡಿ ಆನೆಗುಂದಿ ಸಂಸ್ಥಾನದ ಪವನ್ ಶರ್ಮ ನಡೆಸಿಕೊಟ್ಟರು. ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಉಪನ್ಯಾಸವನ್ನು ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದಯಾನಂದ ಡಿ. ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಅಶೋಕ್ ಮೂರ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಜಿಲ್ಲಾ ಒಬಿಸಿ ಮೋರ್ಚಾದ ಉಸ್ತುವಾರಿ ರೇಷ್ಮಾ ಉದಯ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಒಬಿಸಿ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು, ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಬಿಲ್ಲವ ಸಮಾಜ ಬಾಂಧವರು ಮತ್ತು ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಕಡಿಯಾಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರುಣ್ ಕುಮಾರ್ ಬಾಣ ವಂದಿಸಿದರು.

ಶಿರ್ವದ ಹದಗೆಟ್ಟ ರಸ್ತೆ ದುರಸ್ತಿಗೊಳಿಸಿದ ಬಂಟಕಲ್ಲು ನಾಗರಿಕ ಸೇವಾ ಸಮಿತಿ ; ಸಾರ್ವಜನಿಕರಿಂದ ಶ್ಲಾಘನೆ

Posted On: 18-09-2022 08:36PM

ಶಿರ್ವ : ಇಲ್ಲಿನ ರಾಜ್ಯ ರಸ್ತೆಯು ಗಣಪತಿ ದೇವಸ್ಥಾನ ಮತ್ತು ಜುಮ್ಮಾ ಮಸೀದಿ ಬಳಿ ತೀವ್ರ ಹದಗೆಟ್ಟಿದ್ದು, ಶಿಕ್ಷಕ ಅಲ್ವಿನ್ ದಾಂತಿಯವರು ರಸ್ತೆಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಘಟನೆಯ ಬಳಿಕ ಎಚ್ಚೆತ್ತ ಸಾರ್ವಜನಿಕರು ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಭಾನುವಾರ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ರಾಮರಾಯ ಪಾಟ್ಕರ್ ಮತ್ತು ತಂಡದ ಸದಸ್ಯರು ಗುಂಡಿಗಳಿಗೆ ಜಲ್ಲಿ ಕಾಂಕ್ರೀಟ್ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇವರ ಸೇವಾಕಾರ್ಯಕ್ಕೆ ಶಿರ್ವ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನಂಜೆ : ಉಚಿತ ಹೊಸ ಆಯುಷ್ಮಾನ್ ಕಾರ್ಡ್ ನೋಂದಾವಣೆ ಶಿಬಿರ

Posted On: 18-09-2022 07:09PM

ಇನ್ನಂಜೆ : ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಇನ್ನಂಜೆ ದಾಸ ಭವನದಲ್ಲಿ ಉಚಿತ ಹೊಸ ಆಯುಷ್ಮಾನ್ ಕಾರ್ಡ್ ನೋಂದಾವಣೆ ಶಿಬಿರವು ಮಾಲಿನಿ ಇನ್ನಂಜೆ ನೇತೃತ್ವದಲ್ಲಿ ಗ್ರಾಮ ಒನ್ ಇನ್ನಂಜೆ ಇವರ ಸಹಭಾಗಿತ್ವದಲ್ಲಿ ನಡೆಯಿತು.

180 ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

ದಿವೇಶ್ ಶೆಟ್ಟಿ ಇನ್ನಂಜೆ,ಪ್ರವೀಣ್ ಶೆಟ್ಟಿ ಪಾಂಗಾಳ,ಸುರೇಖಾ ಶೆಟ್ಟಿ ಪಾಂಗಾಳ, ರಾಘವೇಂದ್ರ ಆಚಾರ್ಯ ಇನ್ನಂಜೆ, ಸುನೀಲ್ ಸಾಲ್ಯಾನ್ ಕಲ್ಯಾಲು,ನಾಗೇಂದ್ರ ಭಟ್ ಕಲ್ಯಾಲು,ಸುಬ್ರಮಣ್ಯ ಭಟ್ ಕಲ್ಯಾಲು,ಶ್ರೀಕಾಂತ್ ಭಟ್ ಇನ್ನಂಜೆ,ರವಿ ಆಚಾರ್ಯ, ಪ್ರಕಾಶ್ ಮತ್ತಿತರರು ಸಹಕರಿಸಿದರು.