Updated News From Kaup

ಗುರುಪರಂಪರೆಯನ್ನು ಗೌರವಿಸಿ : ಸಚಿವ ವಿ ಸುನಿಲ್‌ ಕುಮಾರ್‌

Posted On: 06-09-2022 08:46PM

ಕಾರ್ಕಳ : ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರನ್ನು ಹಾಗೂ ಗುರುಪರಂಪರೆಯನ್ನು ಗೌರವಿಸಿ ಸಂಸ್ಕಾರಯುತ ಶಿಕ್ಷಣ ಪಡೆದು, ದೇಶದ ಅಭಿವೃದ್ಧಿಯಲ್ಲಿ ಯುವಜನರು ಕೈಜೋಡಿಸುವಂತಾಗಬೇಕೆಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್‌ ಕುಮಾರ್‌ ಕರೆ ನೀಡಿದರು. ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ “ಗುರುದೇವೋ ಭವ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರಿಯೇಟಿವ್‌ “ನಿನಾದ” ತ್ರೈಮಾಸಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತಾನಾಡಿದರು. ಪರೀಕ್ಷೆ ಮಾತ್ರ ಜೀವನದಲ್ಲಿ ಮುಖ್ಯವಲ್ಲ, ಅದರಾಚೆಗೂ ವ್ಯಕ್ತಿಗತ ಸಂಸ್ಕಾರ ಬಹಳ ಮುಖ್ಯವಾಗಿದೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳೂ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲಿ ಎಂದು ಹಾರೈಸಿದರು.

ಶಿಕಾರಿಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ ಎಸ್‌ ಶಶಧರ್, ವಿಜೇತ ವಸತಿಯುತ ವಿಶೇಷ ಶಾಲೆಯ ಮುಖ್ಯೋಪಾಧ್ಯಾನಿ ಡಾ. ಕಾಂತಿ ಹರೀಶ್‌, ನಿವೃತ್ತ ಶಿಕ್ಷಕಿ ತಾರಾ ಕೆ ಹಿರ್ಗಾನ, ಉಪನ್ಯಾಸಕ, ಸಾಹಿತಿ ರಾಘವೇಂದ್ರ ಬಿ ರಾವ್‌ (ಅನು ಬೆಳ್ಳೆ) ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅನು ಬೆಳ್ಳೆಯವರ 54 ನೇ ಕಾದಂಬರಿ “ಮುಂಬೆಳಕಿನ ತಾರೆ” ಬಿಡುಗಡೆ ಗೊಳಿಸಲಾಯಿತು. ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಸಂಸ್ಥಾಪಕರುಗಳಾದ ವಿದ್ವಾನ್‌ ಗಣಪತಿ ಭಟ್‌, ಡಾ ಗಣನಾಥ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ ಕೆ, ವಿಮಲ್‌ರಾಜ್‌ ಜಿ, ಗಣಪತಿ ಭಟ್‌ ಕೆ ಎಸ್‌, ಹಿರ್ಗಾನ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು.

ಸಂಸ್ಥಾಪಕರಾದ ಅಶ್ವಥ್‌ ಎಸ್‌ ಎಲ್‌ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಉಪನ್ಯಾಸಕ ಲೋಹಿತ್‌ ಎಸ್‌ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಟಪಾಡಿ : ಹಿಂದೂ ಯುವ ಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕದಿಂದ 16 ನೇ ಸಾರ್ವಜನಿಕ ಶನಿಕಥಾ ಪಾರಾಯಣ

Posted On: 06-09-2022 08:35PM

ಕಟಪಾಡಿ : ಹಿಂದೂ ಯುವ ಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇವರ ವತಿಯಿಂದ 16 ನೇ ಸಾರ್ವಜನಿಕ ಶನಿಕಥಾ ಪಾರಾಯಣ ಸೆಪ್ಟೆಂಬರ್ 4 ರಂದು ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಊರ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.

ಬೆಳ್ಳಿಗ್ಗೆ ಕಲಶ ಪ್ರತಿಷ್ಠೆಯಾಗಿ ಶನಿಕಥಾ ಪಾರಾಯಣ ಆರಂಭಗೊಂಡು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸಂಜೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರಗಿತು.

ಈ ಸಂಧರ್ಭದಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಸುರೇಶ್ ಶೆಟ್ಟಿ ಗುರ್ಮೆ, ಶಿಲ್ಪಾ ಜಿ ಸುವರ್ಣ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ತಾಲೂಕ್ ಬಿ.ಜೆ.ಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಜಿಲ್ಲಾ ಉಪಾಧ್ಯಾಕ್ಷರಾದ ಶ್ರೀಶ ನಾಯಕ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಗ್ರಾಮಸ್ಯರು ಉಪಸ್ಥಿತರಿದ್ದರು.

ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷರಾಗಿ ನಾಗಭೂಷಣ್ ರಾವ್ ಅವಿರೋಧ ಆಯ್ಕೆ

Posted On: 06-09-2022 07:53PM

ಕಾಪು : ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ನಾಗಭೂಷಣ್ ರಾವ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸಂತೋಷ್ ಉಳಿಯಾರು, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಮಜೂರು, ಜೊತೆ ಕಾರ್ಯದರ್ಶಿ ಮಯೂರ್ ಕುಲಾಲ್, ಕೋಶಾಧಿಕಾರಿ ಗಜೇಂದ್ರ, ಪ್ರಧಾನ ಭಜನಾ ಸಂಚಾಲಕರಾಗಿ ಯೋಗೀಶ್ ಆಚಾರ್ಯ ಸಹ ಸಂಚಾಲಕರಾಗಿ ದುರ್ಗಾ ಪ್ರಸಾದ್, ವಿಘ್ನೇಶ್, ಸುಜಲ್, ಪ್ರಜ್ವಲ್, ಸಂಕೇತ್ ಆಯ್ಕೆಯಾಗಿದ್ದಾರೆ.

ಉದ್ಯಾವರ : ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

Posted On: 06-09-2022 07:49PM

ಉದ್ಯಾವರ : ಕಥೋಲಿಕ್ ಸಭಾ ಉದ್ಯಾವರ ಮತ್ತು ಉದ್ಯಾವರೈಟ್ಸ್ ದುಬೈ ಇವರ ನೇತೃತ್ವದಲ್ಲಿ ಯುವ, ಸ್ತ್ರೀ ಮತ್ತು ಕುಟುಂಬ ಆಯೋಗದ ಸಹಭಾಗಿತ್ವದಲ್ಲಿ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ವಿದ್ಯಾಸಂಸ್ಥೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಮಾಡಲಾಯಿತು. ಝೇವಿಯರ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಸ್ಟ್ಯಾನಿ ಬಿ ಲೋಬೊ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿ, ಗೌರವ ಧನ ವಿತರಿಸಿ, ಸನ್ಮಾನಿಸಿದರು.

ಸಂತ ಫ್ರಾನ್ಸಿಸ್ ಝೇವಿಯರ್ ಕನ್ನಡ ಪ್ರೌಢಶಾಲೆ, ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆಗೈದ 25 ವಿದ್ಯಾರ್ಥಿಗಳನ್ನು ಗೌರವಿಸಿ, ಉದ್ಯಾವರೈಟ್ಸ್ ದುಬೈ ಪ್ರಾಯೋಜಕತ್ವ ವಹಿಸಿದ ಗೌರವಧನ ವಿತರಿಸಿಲಾಯಿತು. ಇದೇ ಸಂದರ್ಭದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ಸ್ ಇನ್ಸ್ಟಿಟ್ಯೂಟ್ ನ ಡೀನ್ ಆಗಿ ನೇಮಕಗೊಂಡಿರುವ ಡಾ. ಉರ್ಬನ್ ಡಿಸೋಜ, ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಕ್ಲ್ಯಾರಿನ್ ಪಿಂಟೊ, ಆಯುರ್ವೇದ ವೈದ್ಯೆ ಡಾ. ಸಿಲ್ವಿನಿಯ ಫೆರ್ನಾಂಡಿಸ್ ಮತ್ತು ಹಿರಿಯ ಕ್ರೀಡಾಪಟು ಮತ್ತು ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಅಂದ್ರಾದೆ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಹಾಯಕ ಧರ್ಮಗುರು ವಂ. ಲಿಯೋ ಪ್ರವೀಣ್ ಡಿಸೋಜ, ಉದ್ಯಾವರೈಟ್ಸ್ ದುಬೈ ಸ್ಥಾಪಕಾಧ್ಯಕ್ಷ ಜೆರಾಲ್ಡ್ ಪಿರೇರಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿಸೋಜ, ಉಪಾಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಪ್ರಮುಖರಾದ ಲೋರೆನ್ಸ್ ಡೇಸಾ, ಐರಿನ್ ಪಿರೇರಾ, ರೊಯ್ಸ್ ಫೆರ್ನಾಂಡಿಸ್, ವಿಲ್ ಫ್ರೆಡ್ ಕ್ರಾಸ್ಟೊ, ಟೆರೆನ್ಸ್ ಪಿರೇರಾ, ಜೆಫ್ರಿ ಕಸ್ತಲಿನೊ, ಆಸ್ಕರ್ ರೆಬೆಲ್ಲೋ, ಡೊನಾಲ್ಡ್ ಮಚಾದೋ ಮತ್ತಿತರರು ಉಪಸ್ಥಿತರಿದ್ದರು.

ಮೈಕಲ್ ಡಿಸೋಜ ಸ್ವಾಗತಿಸಿದರು. ಅನಿಲ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಫ್ರಾಂಕ್ಯಿ ಕರ್ಡೋಜಾ ವಂದಿಸಿದರು.

ಪಾದೂರು ರೋಟರಿ ಸಮುದಾಯ ದಳ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇಬ್ಬರು ಶಿಕ್ಷಕರಿಗೆ ಸನ್ಮಾನ

Posted On: 06-09-2022 07:24PM

ಕಾಪು‌ : ಪಾದೂರು ರೋಟರಿ ಸಮುದಾಯ ದಳ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಾದೂರು ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗಿದ್ದ ಶೈಲಿ ಪ್ರೇಮ ಕುಂದರ್ ಹಾಗೂ ಕಟಪಾಡಿ ಎಸ್ ವಿ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾಗಿರುವ ಪಾದೂರಿನ ನಿವಾಸಿ ಜ್ಯೋತಿಷ್ಯ ಶಾಸ್ತ್ರಜ್ಞ ಸುಬ್ರಹ್ಮಣ್ಯ ತಂತ್ರಿ ಅವರನ್ನು ನಿಕಟಪೂರ್ವ ಎಜಿ ರೊಟೇರಿಯನ್ ಪಿಎಚ್ ಎಫ್ ಡಾಕ್ಟರ್ ಅರುಣ್ ಹೆಗ್ಡೆಯವರು ಸನ್ಮಾನಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾದೂರು ಮಹಿಳಾ ಮಂಡಳದ ಅಧ್ಯಕ್ಷೆ ಜಯಲಕ್ಷ್ಮಿ ಆಳ್ವ ಹಾಗೂ ಶಿರ್ವ ರೋಟರಿ ಪೂರ್ವ ಅಧ್ಯಕ್ಷರಾಗಿದ್ದ ಮೈಕಲ್ ಮಥಾಯಸ್, ಆರ್ ಸಿಸಿ ಯ ಅಧ್ಯಕ್ಷ ಪ್ರಸಾದ್ ಆಚಾರ್ಯ ಹಾಗೂ ಕಾರ್ಯದರ್ಶಿ ಸಂತೋಷ್ ಆಚಾರ್ಯ ಹಾಗೂ ಆರ್ ಸಿಸಿಯ ಸಭಾಪತಿ ಜೆ ಕೆ ಆಳ್ವ ಅವರು ಉಪಸ್ಥಿತರಿದ್ದರು.

ಸಭೆಯಲ್ಲಿ ಪಾದೂರು ಅಂಗನವಾಡಿ ಶಿಕ್ಷಕಿಯಾದ ವತ್ಸಲ ಶೆಟ್ಟಿ ಹಾಗೂ ಇನ್ನೋರ್ವ ಶಿಕ್ಷಕಿಯಾದ ಪ್ರಫುಲ್ಲಾ ಆಚಾರ್ಯ ಇವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಪೂರ್ಣಿಮಾ ಕೆ ಶೆಟ್ಟಿ, ಪ್ರಕಾಶ್ ಆಚಾರ್ಯ, ಮನೋಜ್ ಶೆಟ್ಟಿ , ಜೋಯಲ್ ಮಥಾಯಸ್ ಹಾಗೂ ಇತರರು ಉಪಸ್ಥಿತರಿದ್ದರು.

ಎಲ್ಲೂರು : ಡಾ.ಸುಬ್ರಹ್ಮಣ್ಯನ್ ಸ್ವಾಮಿ ನಿಧಿಯಿಂದ ನಿರ್ಮಾಣವಾಗಲಿರುವ ರಸ್ತೆಗೆ ಗುದ್ದಲಿ ಪೂಜೆ

Posted On: 06-09-2022 07:19PM

ಎಲ್ಲೂರು : ನಿಕಟಪೂರ್ವ ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅವರ ಎಂಪಿ‌ ಫಂಡ್ ನಿಂದ ಮಂಜೂರಾದ ಕೆಮುಂಡೇಲು‌ ಹಿ.ಪ್ರಾ. ಶಾಲೆಯಿಂದ ಜೆನ್ನಿ ರಾಮರಾವ್ ಮನೆಯವರೆಗಿನ‌ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ವಿರಾಟ್ ಹಿಂದೂಸ್ಥಾನ್ ಸಂಗಮ್ ನ ರಾಷ್ಟ್ರೀಯ ಪ್ರಧಾನ‌ಕಾರ್ಯದರ್ಶಿ ಜಗದೀಶ ಶೆಟ್ಟಿ‌ ಅವರು‌ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಕೆಮುಂಡೇಲು ಹಿ.ಪ್ರಾ.ಶಾಲೆಯಲ್ಲಿ ಎಲ್ಲೂರು ಪಂಚಾಯತ್ ಉಪಾಧ್ಯಕ್ಷರಾದ ಪ್ರಮೀಳಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ‌ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅವರ ವಿರಾಟ್ ಹಿಂದೂಸ್ಥಾನ್ ಸಂಗಮ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಗ್ರಾಮಾಂತರ ಪ್ರದೇಶಗಳಲ್ಲಿ ಅಗತ್ಯ ಬೇಕಿರುವ ಕೆಲಸಗಳಿಗಾಗಿ ಸ್ವಾಮಿಯವರ ಅನುದಾನಗಳನ್ನು ಹಂಚುವುದು ಹಾಗೂ ಸಮಾಜದ ಅನಿವಾರ್ಯತೆಗೆ ಸ್ಪಂದಿಸುವ ಅವರ ಆಶಯವನ್ನು ಅನುಷ್ಠಾನಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ಜಗದೀಶ ಶೆಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ.ಎಲ್.ಕುಂಡಂತಾಯ ಅವರು ಶೆಟ್ಟಿಯವರನ್ನು ಊರವರ ಪರವಾಗಿ ಸಮ್ಮಾನಿಸಿದರು.ಎಲ್ಲೂರು ಪಂಚಾಯತ್ ಪಿ.ಡಿ.ಒ.ಪ್ರದೀಪ ಕುಮಾರ್ ಸದಸ್ಯರಾದ ದಯಾನಂದ,ಹರೀಶ, ಶಾಂತಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಎ.ಪಿ.ಜೆನ್ನಿ , ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ .ಎಸ್. ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ ಶೆಟ್ಟಿ‌ .ಮಾಜಿ ಪಂಚಾಯತ್ ಸದಸ್ಯರಾದ ಜೆನಟ್ ಬರ್ಬೋಜ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಸುಕೇತಾ ಸ್ವಾಗತಿಸಿದರು. ಸುನೀತಾ ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯಶ್ರೀ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲೆಗೆ ಭೇಟಿ ನೀಡಿದ ಜಗದೀಶ ಶೆಟ್ಟಿಯವರು ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಸುಮಾರು 150 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ ಇರುವುದನ್ನು ಮನಗಂಡು ಸರಕಾರದ ಗಮನಸೆಳೆಯುವುದಾಗಿ ಹೇಳಿದರು.

ಬಂಟಕಲ್ಲು: ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಪಡೆದ ಸತ್ಯ ಸಾಯಿ ಪ್ರಸಾದ್ ರಿಗೆ ನಾಗರಿಕ ಸಮಿತಿಯಿಂದ ಅಭಿನಂದನೆ

Posted On: 06-09-2022 07:09PM

ಬಂಟಕಲ್ಲು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಪ್ರಾರ್ಥಮಿಕ ಶಾಲೆ ರಾಜೀವ ನಗರ ಉಡುಪಿ ಇಲ್ಲಿಯ ಹಿರಿಯ ಶಿಕ್ಷಕ ಶ್ರೀ ಸತ್ಯ ಸಾಯಿ ಪ್ರಾಸಾದ್ ಬಂಟಕಲ್ಲು ಇವರು ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಪಡೆದಿರುತ್ತಾರೆ.

ಇವರನ್ನು ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರು ಶಿಕ್ಷಕ ಸತ್ಯ ಸಾಯಿ ಪ್ರಸಾದ್ ರವರ ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಸಮಿತಿ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರು ಪ್ರಸಾದ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಪೇಟ ತೊಡಿಸಿ ಸನ್ಮಾನಿಸಿ ಅಭಿನಂದಿಸಿ ಈ ನಿಮ್ಮ ಪ್ರಶಸ್ತಿ ನಮ್ಮ ಊರಿಗೆ, ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದ್ದು ಮುಂದೆ ರಾಜ್ಯಪ್ರಶಸ್ತಿ ದೊರೆಯುವಂತಾಗಲಿ ಎಂದು ಶುಭಹಾರೈಸಿದರು.

ಸಮಿತಿಯ ಉಪಾಧ್ಯಕ್ಷರಾದ ಪುಂಡಲೀಕ ಮರಾಠೆಯವರು ಪ್ರಸಾದ್ ರವರ ಸೇವೆಯನ್ನು ಶ್ಲಾಘಿಸಿ ಶುಭಹಾರೈಸಿದರು. ಇನ್ನೋರ್ವ ಉಪಾಧ್ಯಕ್ಷರಾದ ಮಾಧವ ಕಾಮತ್, ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ, ಸದಸ್ಯರಾದ ಉಮೇಶ್ ರಾವ್, ಹರೀಶ್ ಹೇರೂರು, ಡೆನಿಸ್ ಡಿ' ಸೋಜ ಹಾಗೂ ಇಂದಿರಾ ಪ್ರಸಾದ್ ರವರು ಉಪಸ್ಥಿತರಿದ್ದರು.

ಬಂಟಕಲ್ಲು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 18ನೇ ವರ್ಷದ ಧಾರ್ಮಿಕ ಸಭಾ ಕಾರ್ಯಕ್ರಮ ಸಂಪನ್ನ

Posted On: 06-09-2022 07:03PM

ಬಂಟಕಲ್ಲು : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 18ನೇ ವರ್ಷದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರದಾನ ಅರ್ಚಕರಾದ ಮಧ್ವರಾಜ್ ಭಟ್ ರವರು ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ. ಮೊದಲಾಗಿ ಗಡಿಯ ರಕ್ಷಣೆ ಮಾಡುವ ಸೈನಿಕರಿಗೆ ನಮಿಸೋಣ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಉಡುಪಿ ದೊಡ್ಡಣ್ಣಗುಡ್ಡೆ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಾಮಾನಂದ ಗುರೂಜಿ ಸಾಧಕರಾದ ರಾಮಕೃಷ್ಣ ಶರ್ಮಾ ಬಂಟಕಲ್ಲು, ಜಯಪ್ರಕಾಶ್ ರಾವ್ ಹೇರೂರ್, ರಮೇಶ್ ಆಚಾರ್ಯ ಬಂಟಕಲ್ಲು, ಗಣೇಶ್ ಕುಲಾಲ್ ಪಂಜಿಮಾರ್, ಸುಭಾಸ್ ನಾಯಕ್ ಸಡಂಬೈಲ್, ಕು. ಪ್ರಿಯಾಂಕಾ ಆಚಾರ್ಯ ಹೇರೂರು ಇವರನ್ನು ಸನ್ಮಾನಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಆಶೀರ್ವದಿಸಿದರು.

ಬಂಟಕಲ್ಲು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಎಡ್ವರ್ಡ್ ಮೆನೆಜಸ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೌರವಾಧ್ಯಕ್ಷ ಶಂಕರ್ ನಾಯಕ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕು. ಸುರಭಿ ಮತ್ತು ಕು. ಖುಷಿ ಪ್ರಾರ್ಥಿಸಿದರು. ವಿಘ್ನೇಶ್ ಶೆಟ್ಟಿ ಪೊಡಮಲೆ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ದಿನೇಶ್ ದೇವಾಡಿಗ ಬಹುಮಾನದ ಪಟ್ಟಿ ವಾಚಿಸಿ ಧನ್ಯವಾದ ನೀಡಿದರು. ಅಧ್ಯಕ್ಷರಾದ ಮಾಧವ ಕಾಮತ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮಾಧವ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿ : ಬನ್ನಂಜೆಯ ನವೀಕೃತ ನಾರಾಯಣಗುರು ಆಡಿಟೋರಿಯಂ ಲೋಕಾರ್ಪಣೆ

Posted On: 05-09-2022 07:49PM

ಉಡುಪಿ : ಬಿಲ್ಲವ ಸೇವಾ ಸಂಘ ಉಡುಪಿ (ರಿ.) ಇದರ ಬನ್ನಂಜೆಯ ನವೀಕೃತ ನಾರಾಯಣಗುರು ಆಡಿಟೋರಿಯಂ ಲೋಕಾರ್ಪಣೆ ಸೆಪ್ಟೆಂಬರ್ 03 ರಂದು ನೆರವೇರಿತು.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ನವೀಕೃತ ನಾರಾಯಣಗುರು ಆಡಿಟೋರಿಯಂ ಲೋಕಾರ್ಪಣೆಗೊಳಿಸಿ ಆಶೀರ್ವಚಿಸಿದರು.

ಶಾಸಕ ಕೆ ರಘುಪತಿ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲ (ರಿ.) ಮೂಲ್ಕಿ ಅಧ್ಯಕ್ಷರಾದ ರಾಜಶೇಖರ್ ಕೋಟ್ಯಾನ್, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಅಧ್ಯಕ್ಷರಾದ ಬಿ.ಎನ್ ಶಂಕರ ಪೂಜಾರಿ, ಸ್ಥಳೀಯ ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ಬಿಲ್ಲವ ಸೇವಾ ಸಂಘ ಉಡುಪಿ (ರಿ.) ಬನ್ನಂಜೆ ಅಧ್ಯಕ್ಷರಾದ ಆನಂದ ಪೂಜಾರಿ ಕಿದಿಯೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಂಟಕಲ್ಲು : ರಾಜಾಪುರ ಸಾರಸ್ವತ ಯುವ ವೃಂದದಿಂದ ಶಿಕ್ಷಕರ ದಿನಾಚರಣೆ

Posted On: 05-09-2022 07:43PM

ಬಂಟಕಲ್ಲು : ಇಲ್ಲಿನ ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆಯ 6 ಮಂದಿ ಗೌರವ ಶಿಕ್ಷಕಿಯರು ಹಾಗೂ ಇಬ್ಬರು ಅಂಗನವಾಡಿ ಶಿಕ್ಷಕಿಯರನ್ನು ಶಿಕ್ಷಕರ ದಿನಾಚರಣೆ ಅಂಗವಾಗಿ ಗೌರವಿಸಲಾಯಿತು.

ಸರ್ವೆಪಲ್ಲಿ ರಾಧಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಶಿಕ್ಷಕಿಯರನ್ನು ಗೌರವಪೂರ್ವಕವಾಗಿ ವೇದಿಕೆ ಬರಮಾಡಿಕೊಳ್ಳಲಾಯಿತು. ಯುವ ವೃಂದದ ಗೌರವಾಧ್ಯಕ್ಷ ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರ ದಿನಾಚರಣೆ ಬಗ್ಗೆ ಮಾತನಾಡಿ ಇಂದಿನ ದಿನಗಳಲ್ಲಿ ಕನ್ನಡ ಅನುದಾನಿತ ಶಾಲೆಗಳು ಗೌರವ ಶಿಕ್ಷಕಿಯರಿಂದಲೇ ನಡೆಯುತ್ತಿವೆ. ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ನೇಮಕವಾಗುತ್ತಿಲ್ಲವಾದುದರಿಂದ ಅತೀ ಕಡಿಮೆ ಗೌರವಧನ ಪಡೆಯುತ್ತಿರುವ ಗೌರವ ಶಿಕ್ಷಕಿಯರನ್ನು ಇಂದು ಅಭಿನಂದಿಸಲು ರಾಜಾಪುರ ಸಾರಸ್ವತ ಯುವ ವೃಂದವು ಹೆಮ್ಮೆ ಪಡುತ್ತದೆ ಎಂದರು.

ಗೌರವ ಶಿಕ್ಷಕಿಯರಾದ ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್ , ಶಾಲಿನಿ ಆಚಾರ್ಯ, ವಿನುತ ಆಚಾರ್ಯ, ಶ್ವೇತಾ ಪಾಟ್ಕರ್, ಸೌಮ್ಯ ಹಾಗೂ ಅಂಗನವಾಡಿ ಶಿಕ್ಷಕಿಯರಾದ ವಿನಯಾ ಹರೀಶ್, ಉಷಾ ಪಾಟ್ಕರ್ ರವರನ್ನು ಮುಖ್ಯ ಅತಿಥಿಗಳು ಶಾಲು ಹೊದಿಸಿ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು. ಯುವ ವೃಂದದ ವತಿಯಿಂದ ಶಾಲೆಗೆ ಸರ್ವೇಪಲ್ಲಿ ರಾಧಕೃಷ್ಣನ್ ರವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಬಂಟಕಲ್ಲು ದೇವಸ್ದಾನದ ಆಡಳಿತ ಮಂಡಳಿಯ ಮೋಕ್ತೇಸರರಾಗಿರುವ ಶಶಿಧರ ವಾಗ್ಲೆ, ಶಾಲಾ ಸಂಚಾಲಕ ಜಯರಾಮ ಪ್ರಭು, ಆಡಳಿತ ಮಂಡಳಿಯ ಉಮೇಶ್ ಪ್ರಭು, ಸುರೇಂದ್ರ ನಾಯಕ್ ಹಳೇ ವಿದ್ಯಾರ್ಥಿ ರಿಚಾರ್ಡ್ ಡಿ'ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಯ ಕೋರಿದರು. ಶಿಕ್ಷಕಿಯರಿಗೆ ಹಾಡು, ಭಾಷಣ ಸ್ಪರ್ಧೆಯನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು.

ಯುವ ವೃಂದದ ಉಪಾಧ್ಯಕ್ಷ ಅಭಿಷೇಕ್ ನಾಯಕ್ ಹಾಗೂ ವಿಶ್ವನಾಥ ಬಾಂದೇಲ್ಕರ್, ಸಂಕೇತ್, ಸುಮಲತ, ಪ್ರಶಾಂತ್, ಸುಬ್ರಹ್ಮಣ್ಯ ವಾಗ್ಲೆ ಉಪಸ್ಥಿತರಿದ್ದರು. ಯುವ ವೃಂದದ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಅನಂತರಾಮ ವಾಗ್ಲೆ ವಂದಿಸಿದರು.