Updated News From Kaup

ಕಾಪು ಲಯನ್ಸ್‌ ಕ್ಲಬ್‌ : ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್‌ ಕುಮಾರ್ ಹೆಗ್ಡೆಗೆ ಸನ್ಮಾನ

Posted On: 07-09-2022 05:35PM

ಕಾಪು : ಇಲ್ಲಿನ ಲಯನ್ಸ್‌ ಕ್ಲಬ್‌ ವತಿಯಿಂದ ಕರಂದಾಡಿ ಶ್ರೀರಾಮ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್‌ ಕುಮಾರ್ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಲಯನ್ಸ್‌ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಶೆಟ್ಟಿ, ಕಾಪು ಲಯನ್ಸ್ ಕ್ಲಬ್‌ ಅಧ್ಯಕ್ಷ ಐ.ಬಿ. ಅಶೋಕ್‌ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಹರೀಶ್‌ ನಾಯಕ್‌, ವರುಣ್ ಶೆಟ್ಟಿ, ಉದಯ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ : ಕಾನೂನು ಮಾಹಿತಿ , ಪತ್ರಿಕೆ ವಿತರಕರ ದಿನಾಚರಣೆ, ಪೋಷಣ್ ಅಭಿಯಾನ, ಆರೋಗ್ಯ ಮಾಹಿತಿ

Posted On: 07-09-2022 04:46PM

ಬಂಟಕಲ್ಲು : ಇಲ್ಲಿನ ಲಯನ್ಸ್ ಕ್ಲಬ್ ಜಾಸ್ಮಿನ್ ಇವರ ಆಶ್ರಯದಲ್ಲಿ ಬಂಟಕಲ್ಲು ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ಮಹಿಳಾ ಕಾನೂನು ಮಾಹಿತಿ, ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಪೋಷಣ್ ಅಭಿಯಾನ , ಆರೋಗ್ಯ ಮಾಹಿತಿ ಕಾರ್ಯಕ್ರಮವು ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ರೋಟರಿ ಕ್ಲಬ್ ಪಡುಬಿದ್ರಿ : ನಿವೃತ್ತ ಶಿಕ್ಷಕಿ ಚಿತ್ರಾಕ್ಷಿಯವರಿಗೆ ಸನ್ಮಾನ

Posted On: 06-09-2022 11:34PM

ಪಡುಬಿದ್ರಿ : ಇಲ್ಲಿನ ರೋಟರಿ ಕ್ಲಬ್ ಹಾಗು ರೋಟರಿ ಸಮುದಾಯ ದಳದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕಿ ಚಿತ್ರಾಕ್ಷಿಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ‌ ಗೌರವಿಸಲಾಯಿತು.

ಗುರುಪರಂಪರೆಯನ್ನು ಗೌರವಿಸಿ : ಸಚಿವ ವಿ ಸುನಿಲ್‌ ಕುಮಾರ್‌

Posted On: 06-09-2022 08:46PM

ಕಾರ್ಕಳ : ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರನ್ನು ಹಾಗೂ ಗುರುಪರಂಪರೆಯನ್ನು ಗೌರವಿಸಿ ಸಂಸ್ಕಾರಯುತ ಶಿಕ್ಷಣ ಪಡೆದು, ದೇಶದ ಅಭಿವೃದ್ಧಿಯಲ್ಲಿ ಯುವಜನರು ಕೈಜೋಡಿಸುವಂತಾಗಬೇಕೆಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್‌ ಕುಮಾರ್‌ ಕರೆ ನೀಡಿದರು. ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ “ಗುರುದೇವೋ ಭವ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರಿಯೇಟಿವ್‌ “ನಿನಾದ” ತ್ರೈಮಾಸಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತಾನಾಡಿದರು. ಪರೀಕ್ಷೆ ಮಾತ್ರ ಜೀವನದಲ್ಲಿ ಮುಖ್ಯವಲ್ಲ, ಅದರಾಚೆಗೂ ವ್ಯಕ್ತಿಗತ ಸಂಸ್ಕಾರ ಬಹಳ ಮುಖ್ಯವಾಗಿದೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳೂ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲಿ ಎಂದು ಹಾರೈಸಿದರು.

ಕಟಪಾಡಿ : ಹಿಂದೂ ಯುವ ಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕದಿಂದ 16 ನೇ ಸಾರ್ವಜನಿಕ ಶನಿಕಥಾ ಪಾರಾಯಣ

Posted On: 06-09-2022 08:35PM

ಕಟಪಾಡಿ : ಹಿಂದೂ ಯುವ ಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇವರ ವತಿಯಿಂದ 16 ನೇ ಸಾರ್ವಜನಿಕ ಶನಿಕಥಾ ಪಾರಾಯಣ ಸೆಪ್ಟೆಂಬರ್ 4 ರಂದು ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಊರ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.

ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷರಾಗಿ ನಾಗಭೂಷಣ್ ರಾವ್ ಅವಿರೋಧ ಆಯ್ಕೆ

Posted On: 06-09-2022 07:53PM

ಕಾಪು : ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ನಾಗಭೂಷಣ್ ರಾವ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉದ್ಯಾವರ : ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

Posted On: 06-09-2022 07:49PM

ಉದ್ಯಾವರ : ಕಥೋಲಿಕ್ ಸಭಾ ಉದ್ಯಾವರ ಮತ್ತು ಉದ್ಯಾವರೈಟ್ಸ್ ದುಬೈ ಇವರ ನೇತೃತ್ವದಲ್ಲಿ ಯುವ, ಸ್ತ್ರೀ ಮತ್ತು ಕುಟುಂಬ ಆಯೋಗದ ಸಹಭಾಗಿತ್ವದಲ್ಲಿ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ವಿದ್ಯಾಸಂಸ್ಥೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಮಾಡಲಾಯಿತು. ಝೇವಿಯರ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಸ್ಟ್ಯಾನಿ ಬಿ ಲೋಬೊ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿ, ಗೌರವ ಧನ ವಿತರಿಸಿ, ಸನ್ಮಾನಿಸಿದರು.

ಪಾದೂರು ರೋಟರಿ ಸಮುದಾಯ ದಳ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇಬ್ಬರು ಶಿಕ್ಷಕರಿಗೆ ಸನ್ಮಾನ

Posted On: 06-09-2022 07:24PM

ಕಾಪು‌ : ಪಾದೂರು ರೋಟರಿ ಸಮುದಾಯ ದಳ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಾದೂರು ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗಿದ್ದ ಶೈಲಿ ಪ್ರೇಮ ಕುಂದರ್ ಹಾಗೂ ಕಟಪಾಡಿ ಎಸ್ ವಿ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾಗಿರುವ ಪಾದೂರಿನ ನಿವಾಸಿ ಜ್ಯೋತಿಷ್ಯ ಶಾಸ್ತ್ರಜ್ಞ ಸುಬ್ರಹ್ಮಣ್ಯ ತಂತ್ರಿ ಅವರನ್ನು ನಿಕಟಪೂರ್ವ ಎಜಿ ರೊಟೇರಿಯನ್ ಪಿಎಚ್ ಎಫ್ ಡಾಕ್ಟರ್ ಅರುಣ್ ಹೆಗ್ಡೆಯವರು ಸನ್ಮಾನಿಸಿದರು.

ಎಲ್ಲೂರು : ಡಾ.ಸುಬ್ರಹ್ಮಣ್ಯನ್ ಸ್ವಾಮಿ ನಿಧಿಯಿಂದ ನಿರ್ಮಾಣವಾಗಲಿರುವ ರಸ್ತೆಗೆ ಗುದ್ದಲಿ ಪೂಜೆ

Posted On: 06-09-2022 07:19PM

ಎಲ್ಲೂರು : ನಿಕಟಪೂರ್ವ ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅವರ ಎಂಪಿ‌ ಫಂಡ್ ನಿಂದ ಮಂಜೂರಾದ ಕೆಮುಂಡೇಲು‌ ಹಿ.ಪ್ರಾ. ಶಾಲೆಯಿಂದ ಜೆನ್ನಿ ರಾಮರಾವ್ ಮನೆಯವರೆಗಿನ‌ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ವಿರಾಟ್ ಹಿಂದೂಸ್ಥಾನ್ ಸಂಗಮ್ ನ ರಾಷ್ಟ್ರೀಯ ಪ್ರಧಾನ‌ಕಾರ್ಯದರ್ಶಿ ಜಗದೀಶ ಶೆಟ್ಟಿ‌ ಅವರು‌ ಗುದ್ದಲಿ ಪೂಜೆ ನೆರವೇರಿಸಿದರು.

ಬಂಟಕಲ್ಲು: ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಪಡೆದ ಸತ್ಯ ಸಾಯಿ ಪ್ರಸಾದ್ ರಿಗೆ ನಾಗರಿಕ ಸಮಿತಿಯಿಂದ ಅಭಿನಂದನೆ

Posted On: 06-09-2022 07:09PM

ಬಂಟಕಲ್ಲು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಪ್ರಾರ್ಥಮಿಕ ಶಾಲೆ ರಾಜೀವ ನಗರ ಉಡುಪಿ ಇಲ್ಲಿಯ ಹಿರಿಯ ಶಿಕ್ಷಕ ಶ್ರೀ ಸತ್ಯ ಸಾಯಿ ಪ್ರಾಸಾದ್ ಬಂಟಕಲ್ಲು ಇವರು ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಪಡೆದಿರುತ್ತಾರೆ.