Updated News From Kaup

ಮೂಳೂರಿನಲ್ಲಿ ಪಾದಾಚಾರಿಗೆ ಸ್ಕೂಟಿ ಡಿಕ್ಕಿ ; ಸ್ಕೂಟಿ ಸವಾರ ಸಾವು, ಪಾದಚಾರಿಗೆ ಗಾಯ

Posted On: 09-09-2022 06:54PM

ಕಾಪು : ಮಲ್ಪೆಯಿಂದ ಮೀನಿನ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಬರುತ್ತಿದ್ದಾಗ ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾದಚಾರಿಯೋರ್ವರು ಅಡ್ಡ ಬಂದ ಪರಿಣಾಮ, ಸ್ಕೂಟಿ ರಸ್ತೆಗೆ ಬಿದ್ದು, ಸವಾರ ಮೃತ ಪಟ್ಟು, ಪಾದಾಚಾರಿಯ ಕಾಲು ಮುರಿತ ಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಮೃತ ಸುರೇಶ್ ರವರು ತನ್ನ ಸಹೋದ್ಯೋಗಿ ಹರೀಶ್ ರವರೊಂದಿಗೆ ಮಲ್ಪೆಯಿಂದ ಮೀನಿನ ಕೆಲಸ ಮುಗಿಸಿ ಉಚ್ಚಿಲದ ತಮ್ಮ ಮನೆಗೆ ಬರುತ್ತಿದ್ದಾಗ ಪಾದಚಾರಿ ಈರಯ್ಯ ಎಂಬವರಿಗೆ ಸ್ಕೂಟಿ ಡಿಕ್ಕಿ ಹೊಡೆದಿದೆ.

ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸುರೇಶ್ ವೃತ್ತಪಟ್ಟಿದ್ದಾರೆ. ಹರೀಶ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ ಪಾದಾಚಾರಿ ಈರಯ್ಯನವರ ಕಾಲು ಮುರಿತಗೊಂಡಿದೆ.

ಕಾಪು ಪೊಲೀಸ್ ಠಾಣಾಧಿಕಾರಿ ಶ್ರೀಶೈಲ ಮುರುಗೋಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು : ಶ್ರೀ ವೆಂಕಟರಮಣ ದೇವಸ್ಥಾನಲ್ಲಿ ಅನಂತ ಚತುರ್ದಶಿ ವಿಜ್ರಂಭಣೆಯಿಂದ ಆಚರಣೆ

Posted On: 09-09-2022 06:49PM

ಕಾಪು : ಶ್ರೀ ವೆಂಕಟರಮಣ ದೇವಸ್ಥಾನಲ್ಲಿ ಅನಂತ ಚತುರ್ದಶಿ ಉತ್ಸವವನ್ನು ಶುಕ್ರವಾರ ವಿಜ್ರಂಭಣೆಯಿಂದ ಆಚರಿಸಲಾಯಿತು.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನವನ್ನು ಅನಂತ ಚತುರ್ದಶಿ ಎಂದು ಕರೆಯಲಾಗುತ್ತದೆ. ಭಗವಾನ್ ವಿಷ್ಣುವಿನ ಶಾಶ್ವತ ರೂಪವನ್ನು ಪೂಜಿಸಲು ಈ ದಿನ ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಲಾಗಿದೆ.

ವಿಷ್ಣುವಿನ ಭಕ್ತರು ಇಂದು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಪೂಜೆಯ ಸಮಯದಲ್ಲಿ ಪವಿತ್ರ ದಾರವನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. ಈ ಉಪವಾಸವನ್ನು ಆಚರಿಸುವ ಮೂಲಕ, ಒಬ್ಬ ವ್ಯಕ್ತಿಯು ಅನೇಕ ಪಟ್ಟು ಹೆಚ್ಚು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.

ಅನಂತ ಚತುರ್ದಶಿ ಹಬ್ಬವು ಗಣೇಶ ಚತುರ್ಥಿಯ ಅಂತ್ಯವನ್ನು ಸೂಚಿಸುತ್ತದೆ. ಈ ದಿನವೇ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ. ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭ ರಂಗಪೂಜೆಯೂ ನಡೆಯಿತು.

ಕಾಪು : ವಿವಿಧ ಬೇಡಿಕೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದ ಟೈಲರ್ಸ್ ಅಸೋಸಿಯೇಷನ್

Posted On: 09-09-2022 06:29PM

ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿಯಿಂದ ಸೆಪ್ಟೆಂಬರ್ 9ರಂದು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರ ಮನೆಗೆ ಭೇಟಿ ನೀಡಿ ಟೈಲರ್ಸ್ ಗಳ ಬೇಡಿಕೆಗಳನ್ನು ಮನವಿ ಮೂಲಕ ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಬಿ ಕೆ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾದ ರಮಾನಂದ್ ಅತ್ತೂರ್ ಹಾಗೂ ಕೋಶಾಧಿಕಾರಿ ಸುರೇಶ ಶೆಟ್ಟಿಗಾರ್ ಹಾಗೂ ಸಹ ಕಾರ್ಯದರ್ಶಿ ನಾರಾಯಣ ಅಂಚನ್ ಹಾಗೂ ಕಾಪು ವಲಯ ಸಮಿತಿಯ ಅಧ್ಯಕ್ಷರಾದ ಸುರೇಖಾ ಶೈಲೇಶ್ ಹಾಗೂ ಬೆಳ್ಮಣ್ ವಲಯದ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್ ಹಾಗೂ ಕ್ಷೇತ್ರದ ಮಾಜಿ ಅಧ್ಯಕ್ಷರು ಆನಂದ್ ಪುತ್ರನ್ ಹಾಗೂ 5 ವಲಯದ ಸದಸ್ಯರುಗಳು ಉಪಸ್ಥಿತರಿದ್ದರು.

ಬಂಟಕಲ್ಲು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕದಿರು ಹಬ್ಬ

Posted On: 09-09-2022 10:32AM

ಬಂಟಕಲ್ಲು : ಅನಂತ ಚತುರ್ದಶಿಯ ಪುಣ್ಯದಿನವಾದ ಇಂದು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕದಿರು ಹಬ್ಬವನ್ನು ಆಚರಿಸಲಾಯಿತು . ಶಿರ್ವ ಅನಂತರಾಯ ಶೆಣೈರವರ ಗದ್ದೆಯಿಂದ ಕದಿರನ್ನು ತೆಗೆದು ಬಂಟಕಲ್ಲು ದೇವಳದ ಅರ್ಚಕರಾದ ವೇದಮೂರ್ತಿ ಸಂದೇಶ್ ಭಟ್ ರವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಿಸಿ ಬಂಟಕಲ್ಲು ದೇವಸ್ಥಾನಕ್ಕೆ ಕದಿರನ್ನು ಶೋಭಾಯಾತ್ರೆಯಮೂಲಕ ತರಲಾಯಿತು. ದೇವಸ್ಥಾನದಲ್ಲಿ ಕದಿರು ಪೂಜೆಯನ್ನು ನೆರವೇರಿಸಿ ಭಕ್ತಾಧಿಗಳಗೆ ಕದಿರನ್ನು ವಿತರಿಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಲೆ, ಅಧ್ಯಕ್ಷರಾದ ಜಯರಾಮ ಪ್ರಭು ಉಪಾಧ್ಯಕ್ಷರಾರ ಉಮೇಶ್ ಪ್ರಭು, ಆಡಳಿತ ಮಂಡಳಿಯ ಸುರೇಂದ್ರ ನಾಯಕ್, ಸಂತೋಷ್ ನಾಯಕ್, ರಾ ಸಾ ಯುವ ವೃಂದದ ಗೌರವಾಧ್ಯಕ್ಷ ಕೆ.ಆರ್ ಪಾಟ್ಕರ್, ಕಾರ್ಯದರ್ಶಿ ಅನಂತರಾಮ ವಾಗ್ಲೆ, ದೇವಸ್ಥಾನದ ಕಛೇರಿ ವ್ಯವಸ್ಥಾಪಕ ಕೃಷ್ಣಮೂರ್ತಿ ಪಾಟ್ಕರ್, ಅರ್ಚಕ ಸುಧೀಂದ್ರ ಭಟ್, ನರೇಶ್ ಭಟ್, ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ, ವಿರೇಂದ್ರ ಪಾಟ್ಕರ್, ಯೋಗಿಶ್ ಸಾಲ್ವಣ್ಕರ್,ರವೀಂದ್ರ ನಾಯಕ್, ಅಚ್ಚುತ ನಾಯಕ್, ದಯಾನಂದ ಪಾಟ್ಕರ್ ಮುಂತಾದವರು ಉಪಸ್ಥಿತರಿದ್ದರು.

ಕ್ರಿಯೇಟಿವ್‌ ಕಾಲೇಜಿನ ಪ್ರಥಮ ವರ್ಷದ ನೀಟ್‌ ಫಲಿತಾಂಶದಲ್ಲಿಯೇ ವಿದ್ಯಾರ್ಥಿಗಳ ಅಮೋಘ ಸಾಧನೆ

Posted On: 08-09-2022 06:08PM

ಕಾರ್ಕಳ : ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ ಯು ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ತಾಳಿಕೋಟಿ (646), ಸಾತ್ವಿಕ್‌ ಶ್ರೀಕಾಂತ್‌ ಹೆಗಡೆ (641), ಸೋಹನ್‌ ಎಸ್‌ ನೀಲಕರಿ (598), ಸುದೀಪ್‌ ಅಸಂಗಿಹಾಲ್‌ (552), ಹಾಸನದ ವಿಕಾಸ್‌ ಗೌಡ ಎಂ (608) ಅಂಕಗಳನ್ನು ಗಳಿಸಿದ್ದಾರೆ.

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ನಿರ್ಮಿಸಿರುವ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನಡೆಯುತ್ತಿದೆ. ಕಾಲೇಜಿನ ಪ್ರಥಮ ವರ್ಷದ ನೀಟ್‌ ಫಲಿತಾಂಶದಲ್ಲಿಯೇ ಪರೀಕ್ಷೆಗೆ ಕುಳಿತ 88 ವಿದ್ಯಾರ್ಥಿಗಳಲ್ಲಿ 76 ವಿದ್ಯಾರ್ಥಿಗಳು ಅರ್ಹತೆಗಳಿಸಿದ್ದು, 23 ವಿದ್ಯಾರ್ಥಿಗಳು 400 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳು ಈ ಮೊದಲು ಪ್ರಕಟಗೊಂಡ JEE, CET, RIE, NDA, NATA, C.A ಮತ್ತು C.S.E.E.T, ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ದಾಖಲಿಸಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ನೀಟ್‌ ಸಂಯೋಜಕರಾದ ಲೋಹಿತ್‌ ಎಸ್‌ ಕೆ, ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ಪೆರ್ಡೂರು ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ಕುಲಾಲ್ ಹಿರಿಯಡ್ಕ ಆಯ್ಕೆ

Posted On: 08-09-2022 06:01PM

ಕಾಪು : ಕುಲಾಲ ಸಂಘ (ರಿ.) ಪೆರ್ಡೂರು ಇದರ 2022-2023 ನೇ ಸಾಲಿನ ಅವಧಿಗೆ ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ಕುಲಾಲ್ ಹಿರಿಯಡ್ಕ ಆಯ್ಕೆಯಾಗಿದ್ದಾರೆ.

ಸಂಘದ ಗೌರವಾಧ್ಯಕ್ಷರಾಗಿ ರಾಮ ಕುಲಾಲ್ ಪಕ್ಕಾಲು ಮತ್ತು ಐತು ಕುಲಾಲ್ ಕನ್ಯಾನ ಉಪಾಧ್ಯಕ್ಷರಾಗಿ ಕಾಳು ಕುಲಾಲ್ ಪೆರ್ಡೂರು, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಹಂದಿಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಕುಲಾಲ್ ಪಕ್ಕಾಲು. ಕೋಶಾಧಿಕಾರಿಯಾಗಿ ಯೋಗೀಶ್ ಕುಲಾಲ್ ಬೋರುಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ ಕುಲಾಲ್ ಕುಂಟಲ್ ಕಟ್ಟೆ ಹಾಗೂ ಸಹ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್ ಕುಕ್ಕೆಹಳ್ಳಿ ಅವರು ನೇಮಕಗೊಂಡಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪ್ರಣಿತ್ .ಪಿ ಕೋಟ್ಯಾನ್ ಗೆ ಎರಡು ಪದಕ

Posted On: 08-09-2022 05:51PM

ಕಾಪು : ಶಿವಮೊಗ್ಗ ಜಿಲ್ಲೆಯಲ್ಲಿ ಅಗಸ್ಟ್ 20 ಮತ್ತು 21ರಂದು ನಡೆದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧಾಕೂಟದಲ್ಲಿ ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್ ಶಿರ್ವ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಪ್ರಣಿತ್ ಪಿ ಕೋಟ್ಯಾನ್ ಕುಮಿಟೆಯಲ್ಲಿ ಚಿನ್ನದ ಪದಕ ಮತ್ತು ಕಟದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.

ಇವರು ಪ್ರತಿಷ್ಠಿತ ಬುಡಾಕನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಸ್ಥೆಯ ಮುಖ್ಯ ಶಿಕ್ಷಕರಾದ ರೆಂಷಿ ವಾಮನ್ ಪಾಲನ್ ಹಾಗೂ ಶಿಕ್ಷಕಿ ಮೇಘ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಉಚ್ಚಿಲ ನಿವಾಸಿಯಾದ ಪ್ರದೀಪ್ ಎಸ್. ಕೋಟ್ಯಾನ್ ಮತ್ತು ಪ್ರೀತಿ ಪ್ರದೀಪ್ ಕೋಟ್ಯಾನ್ ರವರ ಪುತ್ರನಾಗಿದ್ದಾರೆ.

ಕಾಪು ಲಯನ್ಸ್‌ ಕ್ಲಬ್‌ : ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್‌ ಕುಮಾರ್ ಹೆಗ್ಡೆಗೆ ಸನ್ಮಾನ

Posted On: 07-09-2022 05:35PM

ಕಾಪು : ಇಲ್ಲಿನ ಲಯನ್ಸ್‌ ಕ್ಲಬ್‌ ವತಿಯಿಂದ ಕರಂದಾಡಿ ಶ್ರೀರಾಮ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್‌ ಕುಮಾರ್ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಲಯನ್ಸ್‌ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಶೆಟ್ಟಿ, ಕಾಪು ಲಯನ್ಸ್ ಕ್ಲಬ್‌ ಅಧ್ಯಕ್ಷ ಐ.ಬಿ. ಅಶೋಕ್‌ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಹರೀಶ್‌ ನಾಯಕ್‌, ವರುಣ್ ಶೆಟ್ಟಿ, ಉದಯ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ : ಕಾನೂನು ಮಾಹಿತಿ , ಪತ್ರಿಕೆ ವಿತರಕರ ದಿನಾಚರಣೆ, ಪೋಷಣ್ ಅಭಿಯಾನ, ಆರೋಗ್ಯ ಮಾಹಿತಿ

Posted On: 07-09-2022 04:46PM

ಬಂಟಕಲ್ಲು : ಇಲ್ಲಿನ ಲಯನ್ಸ್ ಕ್ಲಬ್ ಜಾಸ್ಮಿನ್ ಇವರ ಆಶ್ರಯದಲ್ಲಿ ಬಂಟಕಲ್ಲು ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ಮಹಿಳಾ ಕಾನೂನು ಮಾಹಿತಿ, ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಪೋಷಣ್ ಅಭಿಯಾನ , ಆರೋಗ್ಯ ಮಾಹಿತಿ ಕಾರ್ಯಕ್ರಮವು ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಹಿರಿಯ ಸಿವಿಲ್ ನ್ಯಾಯಧೀಶೆ, ಜಿಲ್ಲಾ ಕಾನೂನು ಸೇವೆಗಳ ಕಾನೂನು ಪ್ರಾಧಿಕಾರ ಉಡುಪಿ ಇದರ ಸದಸ್ಯ ಕಾರ್ಯದರ್ಶಿ ಶರ್ಮಿಳಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಹಿಳೆಯರ ಕಾನೂನುಗಳು ಮತ್ತು ಅದರ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಕೇಂದ್ರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ವೈಷ್ಣವಿಯವರು ಪೋಷಣ್ ಅಭಿಯಾನ ಮತ್ತು ಸಾಮಾನ್ಯ ಆರೋಗ್ಯ ಮಾಹಿತಿ ನೀಡಿದರು.

ಪತ್ರಿಕಾ ವಿತರಕರ ದಿನಾಚರಣೆಯ ಹಾಗು ಶಿರ್ವ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿದ್ದ ಕೆ ಆರ್ ಪಾಟ್ಕರ್ ರವರನ್ನು ಲಯನ್ಸ್ ಕ್ಲಬ್ ಹಾಗೂ ಅಂಗನವಾಡಿ ಕೇಂದ್ರದ ಪರವಾಗಿ ನ್ಯಾಯಧೀಶೆ ಶರ್ಮಿಳಾರವರು ಸನ್ಮಾನಿಸಿದರು. ಕೆ ಆರ್ ಪಾಟ್ಕರ್ ರವರು ಸನ್ಮಾನಕ್ಕೆ ಕೃತಜ್ಞತೆಯನ್ನು ತಿಳಿಸಿದರು. ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಅಂಗನವಾಡಿ ಮೇಲ್ವಿಚಾರಕಿ ಶಶಿಕಲಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ರೀನಾ ಡಿ ಸೋಜ, ಬಂಟಕಲ್ಲು ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್, ಅಂಗನವಾಡಿ ಕಾರ್ಯಕರ್ತೆಯರಾದ ವಿನಯಾ ಹರೀಶ್, ಉಷಾ ಪಾಟ್ಕರ್, ಜಯಂತಿ, ಲ ಐರಿನ್ ಸಿಕ್ವೇರಾ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು, ಸದಸ್ಯರು, ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಲಯನ್ಸ್ ಕಾರ್ಯದರ್ಶಿ ಅನಿತಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು. ವಿನಯಾ ವಂದಿಸಿದರು.

ರೋಟರಿ ಕ್ಲಬ್ ಪಡುಬಿದ್ರಿ : ನಿವೃತ್ತ ಶಿಕ್ಷಕಿ ಚಿತ್ರಾಕ್ಷಿಯವರಿಗೆ ಸನ್ಮಾನ

Posted On: 06-09-2022 11:34PM

ಪಡುಬಿದ್ರಿ : ಇಲ್ಲಿನ ರೋಟರಿ ಕ್ಲಬ್ ಹಾಗು ರೋಟರಿ ಸಮುದಾಯ ದಳದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕಿ ಚಿತ್ರಾಕ್ಷಿಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ‌ ಗೌರವಿಸಲಾಯಿತು.

ರೋಟರಿ ಅಧ್ಯಕ್ಷೆ ಗೀತಾ ಅರುಣ್ ‌ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ‌ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ, ಪೂರ್ವ ಅಧ್ಯಕ್ಷ ರಾದ ಪಿ. ಕೃಷ್ಣ ಬಂಗೇರ , ರಮೀಜ್ ಹುಸೇನ್‌, ಸದಸ್ಯರಾದ ಸುನೀಲ್ ಕುಮಾರ್, ಪವನ್ ಸಾಲ್ಯಾನ್, ಪುಷ್ಪಲತಾ ಗಂಗಾಧರ್ , ಸಂತೋಷ್ ಪಡುಬಿದ್ರಿ ರೋಟರಿ ಸಮುದಾಯದಳ ಅಧ್ಯಕ್ಷೆ ದೀಪಾಶ್ರಿ ಕರ್ಕೇರ, ಕಾರ್ಯದರ್ಶಿ ತನಿಷಾ ಜಿ. ಕುಕ್ಯಾನ್ , ಸದಸ್ಯರಾದ ಅದ್ವಿತ್ ಕುಮಾರ್ ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷೆ ಗೀತಾ ಅರುಣ್ ಸ್ವಾಗತಿಸಿದರು. ಯಶೋಧ ಪಡುಬಿದ್ರಿ ನಿರೂಪಿಸಿದರು. ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು.