Updated News From Kaup

ಆಗಸ್ಟ್ 24 : ರವಿ ಕೃಷ್ಣಾ ರೆಡ್ಡಿ ನೇತೃತ್ವದ ಜನ ಚೈತನ್ಯ ಯಾತ್ರೆ ಉಡುಪಿಗೆ

Posted On: 23-08-2022 06:12PM

ಉಡುಪಿ : ಭೃಷ್ಟಾಚಾರ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಭೃಷ್ಟಾಚರದ ವಿರುದ್ಧ ಜಾಗೃತಿ ಮಾಡುತ್ತಿರುವ ರವಿ ಕೃಷ್ಣಾ ರೆಡ್ಡಿ ನೇತೃತ್ವದ ಜನ ಚೈತನ್ಯ ಯಾತ್ರೆ ಉಡುಪಿಗೆ ಬರಲಿದೆ.

ಉಡುಪಿಯ ನಗರ ಸಭೆಯ ಎದುರಿಗೆ ಆಗಸ್ಟ್ 24, ಮಧ್ಯಾಹ್ನ 2:30 ಗಂಟೆಗೆ ಭೃಷ್ಟಾಚಾರ ಮುಕ್ತ ಕರ್ನಾಟಕ ಅಭಿಯಾನ ನಡೆಯಲಿದೆ.

ಸಮಾನ ಮನಸ್ಕರೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಬೇಕಾಗಿಕರ್ನಾಟಕ ರಕ್ಷಣಾ ಸಮಿತಿ (KRS) ಉಡುಪಿ ಜಿಲ್ಲಾ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.

ಎಸ್‌ಕೆಪಿಎ ಕಾಪು ವಲಯ :ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಇಬ್ಬರು ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ

Posted On: 22-08-2022 08:48PM

ಪಡುಬಿದ್ರಿ : ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್‌ನ ಕಾಪು ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಪಡುಬಿದ್ರಿಯ ಎಸ್ಎಸ್ ಸಭಾಭವನದಲ್ಲಿ ಕಾಪು ವಲಯದ ಇಬ್ಬರು ಹಿರಿಯ ಸದಸ್ಯರಾದ ಬೆಳ್ಮಣ್‌ನ ವೆಂಕಟ್ರಾಯ ಕಾಮತ್ ದಂಪತಿ ಹಾಗೂ ಪಡುಬಿದ್ರಿಯ ಕರುಣಾಕರ್ ನಾಯಕ್ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತ ರಾಮಚಂದ್ರ ಆಚಾರ್ಯ ಮಾತನಾಡಿ, ಛಾಯಾಗ್ರಹಣದ ಹಿಂದಿನ ದಿನಗಳನ್ನು ಛಾಯಾಗ್ರಾಹಕರು ನೆನಪು ಮಾಡಬೇಕಿದೆ. ಪೋಲಿಸರು ಕೂಡಾ ಛಾಯಾಗ್ರಾಹಕರನ್ನು ಅವಲಂಭಿಸಬೇಕಾದ ಅನಿವಾರ್ಯ ಪರಿಸ್ಥಿತಿಯೂ ಇತ್ತು. ಛಾಯಾಗ್ರಾಹಕರಲ್ಲಿ ಉತ್ತಮ ಕಲಾವಿದನಿದ್ದು, ಅದನ್ನು ಗ್ರಹಿಸಬೇಕಿದೆ ಎಂದರು.

ಕಾಪು ವಲಯ ಎಸ್‌ಕೆಪಿಎ ಅಧ್ಯಕ್ಷ ವಿನೋದ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ರವಿ ಕುಮಾರ್ ಕಟಪಾಡಿ, ಕೋಶಾಧಿಕಾರಿ ರಾಘವೇಂದ್ರ ಭಟ್ ಉಪಾಧ್ಯಕ್ಷ ಸಚಿನ್ ಉಚ್ಚಿಲ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ ಐತಾಳ್, ಜತೆ ಕಾರ್ಯದರ್ಶಿ ಪ್ರಕಾಶ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.

ವಿನೋದ್ ಕಾಂಚನ್ ಸ್ವಾಗತಿಸಿದರು. ಶ್ರೀನಿವಾಸ ಐತಾಳ್ ನಿರೂಪಿಸಿದರು. ಸಚಿನ್ ಉಚ್ಚಿಲ ವಂದಿಸಿದರು.

ಉಡುಪಿ ಜಿಲ್ಲಾ ರಜತ ಮಹೋತ್ಸವ ವೆಬ್ಸೈಟ್ ; ಲಾಂಭನ ಬಿಡುಗಡೆ

Posted On: 22-08-2022 08:37PM

ಉಡುಪಿ : ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಕಾರ್ಯಕ್ರಮದ ವೆಬ್ಸೈಟ್ ಮತ್ತು ಲಾಂಛನವನ್ನು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.

ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ವೆಬ್ಸೈಟ್ ನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಲಾಂಛನವನ್ನು ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಎಎಸ್ಪಿ ಎಸ್.ಟಿ ಸಿದ್ಧಲಿಂಗಪ್ಪ, ಕುಂದಾಪುರ ಸಹಾಯಕ ಕಮೀಷನರ್ ರಾಜು ಕೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಆಗಸ್ಟ್ 25 : ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ

Posted On: 22-08-2022 08:19PM

ಉಡುಪಿ : ಜಿಲ್ಲಾಡಳಿತ ಉಡುಪಿ ಇವರ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಆಗಸ್ಟ್ 25 ರಂದು ಸಂಜೆ 5 ಗಂಟೆಗೆ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು, ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪ ಮೊಯಿಲಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಸಂಸದ ಬಿ.ವೈ.ರಾಘವೇಂದ್ರ, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ.ಆರ್.ಮೆಂಡನ್, ಬಿ.ಎಂ.ಸುಕುಮಾರ ಶೆಟ್ಟಿ, ವಿಧಾನಪರಿಷತ್ ಶಾಸಕರುಗಳಾದ ಆಯನೂರು ಮಂಜುನಾಥ, ಎಸ್.ಎಲ್.ಭೋಜೆಗೌಡ, ಡಾ||ತೇಜಸ್ವಿನಿ ಗೌಡ, ಮಂಜುನಾಥ ಭಂಡಾರಿ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್, ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಯು.ಆರ್.ಸಭಾಪತಿ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.

ಕಟಪಾಡಿ : ಯುವವಾಹಿನಿಯ ಅಂತರ್ ಘಟಕಗಳ ಸಾಂಸ್ಕೃತಿಕ ಕಾರ್ಯಕ್ರಮ ಡೆನ್ನಾನ ಡೆನ್ನನ ಸಂಪನ್ನ

Posted On: 21-08-2022 11:54PM

ಕಟಪಾಡಿ‌ : ಅಂತರ್ ಜಿಲ್ಲೆಯಲ್ಲಿ 33 ಘಟಕಗಳನ್ನು ಹೊಂದಿರುವ ಯುವವಾಹಿನಿ ಸಂಸ್ಥೆಯ ಸದಸ್ಯರ ಪ್ರತಿಭೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಯುವವಾಹಿನಿ ಘಟಕದ ಆತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಅಂತರ್ ಘಟಕ ಸಾಂಸ್ಕೃತಿಕ ಕಾರ್ಯಕ್ರಮವಾಗಿರುವ ಡೆನ್ನಾನ ಡೆನ್ನನ ಆಗಸ್ಟ್ 21 ರಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಗಿರಿ ಸಭಾಗ್ರಹದಲ್ಲಿ ಸಂಪನ್ನಗೊಂಡಿತು.

ಮಾಜಿ ಸಚಿವರಾದ ವಿನಯ್‌ ಕುಮಾರ್ ಸೊರಕೆ ಮಾತನಾಡಿ ಡೆನ್ನಾನ ಡೆನ್ನನ ತುಳುನಾಡಿನ ಪ್ರತೀಕ. ಯುವ ಸಮುದಾಯದ ದೇಶ ನಮ್ಮದು. ಸಾಂಸ್ಕೃತಿಕ, ಕ್ರೀಡೆಯ ಮೂಲಕ ಯುವ ಸಮುದಾಯವನ್ನು ಆಕರ್ಷಿಸಲು ಸಾಧ್ಯ. ಬಿಲ್ಲವ ಸಮಾಜ ಕೋಟಿ ಚೆನ್ನಯ ಮತ್ತು ಕಾಂತಾಬಾರೆ ಬುದಬಾರೆಯರ ಆರಾಧನೆಯ ಮೂಲಕ ಸಂಘಟಿತರಾಗಬೇಕಾಗಿದೆ. ಸಮಾಜದ ಸಂಘಟನೆಗಳು ಸಮಾಜದ ಏಳಿಗೆಗೆ ಶ್ರಮಿಸಬೇಕಿದೆ ಎಂದರು. ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಕೋಶಾಧಿಕಾರಿ ಪದ್ಮರಾಜ್ ಆರ್ ಮಾತನಾಡಿ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಬಹುಮಾನದ ವಿಚಾರವಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವ ಮೂಲಕ ಯುವವಾಹಿನಿ ಗೆದ್ದಿದೆ. ಯುವವಾಹಿಯ ಮೂಲಕ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತಂದು ನಾರಾಯಣಗುರುಗಳ ತತ್ವ ಸಂದೇಶ ಸಾರಬೇಕಾಗಿದೆ ಎಂದರು.

ಡೆನ್ನಾನ ಡೆನ್ನನ -2022 ವಿಜೇತರು : ಯುವವಾಹಿನಿಯ 20 ಘಟಕಗಳು ಸ್ಪರ್ಧಿಸಿದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಘಟಕ ರೂ.25,000 ನಗದಿನೊಂದಿಗೆ ಪ್ರಥಮ ಬಹುಮಾನ, ಹಳೆಯಂಗಡಿ ಘಟಕ ರೂ.15,000 ನಗದಿನೊಂದಿಗೆ ದ್ವಿತೀಯ, ಪಣಂಬೂರು ಕುಳಾಯಿ ಘಟಕ ರೂ.10,000 ನಗದಿನೊಂದಿಗೆ ತೃತೀಯ ಬಹುಮಾನ ಪಡೆಯಿತು. ವೈಯಕ್ತಿಕವಾಗಿ ಶ್ರೇಷ್ಠ ನಿರ್ವಹಣೆ ನೀಡಿದ ನಿರ್ಮಿತಾ ಹಳೆಯಂಗಡಿ ಘಟಕ, ಶ್ರವಣ್ ಕುಮಾರ್ ಪಡುಬಿದ್ರಿ ಘಟಕ, ಚಂದ್ರಹಾಸ್ ಬೆಳ್ತಂಗಡಿ ಘಟಕ, ಯುವರಾಜ್ ಬೆಳ್ತಂಗಡಿ ಘಟಕ ಮತ್ತು ರಿದ್ವಿ ಡಿ ಪೂಜಾರಿ ಪಣಂಬೂರು ಕುಳಾಯಿ ಘಟಕ, ಮೋಕ್ಷ್ ಮಾಣಿ ಘಟಕ ಬಾಲ ನಟ ವಿಶೇಷ ಬಹುಮಾನ ಪಡೆದರು. ಆಗಸ್ಟ್ ತಿಂಗಳಲ್ಲಿ ನಡೆಸಲಾಗಿದ್ದ ಸಾಹಿತ್ಯ ಸೌರಭ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಭಾಷಣ, ಪ್ರಬಂಧ ಏರ್ಪಡಿಸಲಾಗಿದ್ದು, ಇದರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 800 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ನಾರಾಯಣಗುರು ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಉಡುಪಿ ಜಿಲ್ಲೆಯ ಬಿಲ್ಲವ ಪರಿಷತ್ ಅಧ್ಯಕ್ಷರಾದ ನವೀನ್ ಅಮೀನ್ ಶಂಕರಪುರ, ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್‌ ಎರ್ಮಾಳ್, ಕಾಪು ಬಿಲ್ಲವರ ಸಹಾಯಕ ಸಂಘದ ಗೌರವ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ಪ್ರವೀಣ್ ಡಿ.ಪೂಜಾರಿ, ಯುವವಾಹಿನಿ ಉಡುಪಿ ಘಟಕದ ಕಾರ್ಯದರ್ಶಿ ದಯಾನಂದ ಕರ್ಕೇರ, ಯುವವಾಹಿನಿ ಕೇಂದ್ರ ಸಮಿತಿಯ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಜಗದೀಶ್ ಕುಮಾರ್ ಕಾರ್ಯಕ್ರಮ ಸಂಚಾಲಕರಾದ ಅಶೋಕ್ ಕೋಟ್ಯಾನ್, ಮಹಾಬಲ ಅಮೀನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ವಹಿಸಿದ್ದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ಪ್ರವೀಣ್ ಡಿ. ಪೂಜಾರಿ ಸ್ವಾಗತಿಸಿದರು. ರೇಣುಕಾ ಕಣಿಯೂರು ಮತ್ತು ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕರಾದ ಅಶೋಕ್ ಕೋಟ್ಯಾನ್ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವಂದಿಸಿದರು.

ಕಾಪು : ಶ್ರೀ ವೆಂಕಟರಮಣ ದೇವಳದ ವಾರ್ಷಿಕ ಮಹಾಸಭೆ

Posted On: 21-08-2022 09:12PM

ಕಾಪು : ಇತಿಹಾಸ ಪ್ರಸಿದ್ದ ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಇಂದು ವಾರ್ಷಿಕ ಮಹಾಸಭೆ ಹತ್ತು ಸಮಸ್ತರ ಉಪಸ್ಥಿತಿ ಯಲ್ಲಿ ಜರಗಿತು. ಕಳೆದ ಐದು ವರ್ಷ ಪೂರ್ಣಗೊಂಡು ಮುಂದಿನ ಐದು ವರ್ಷಕ್ಕೆ ಹೊಸದಾಗಿ ಆಡಳಿತ ಮಂಡಳಿಯ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇಂದಿನ ಸಭೆಯಲ್ಲಿ ಸಭಿಕರ ನೂತನ ಆಡಳಿತ ಮಂಡಳಿ ಪುನರಾಯ್ಕೆ ಪ್ರಕ್ರಿಯೆ ಮೂಲಕ ದೇವಳದ ಆಡಳಿತ ಮೊಕ್ತೇಸರರಾಗಿ ಪ್ರಸಾದ್ ಗೋಕುಲದಾಸ್ ಶೆಣೈ ಹಾಗೂ ಮೊಕ್ತೇಸರರಾಗಿ ಸದಾಶಿವ ಕಾಮತ್ , ಶ್ರೀಕಾಂತ್ ಭಟ್, ಎಮ್.ರಾಜೇಶ್ ಶೆಣೈ, ರಾಮ್ ನಾಯಕ್ ಕಾಪು ಇವರು ಆಯ್ಕೆಯಾದರು.

ಮೇಲ್ವಿಚಾರಕ ಮಂಡಳಿ ಸದಸ್ಯರಾಗಿ ಸುನಿಲ್ ಪೈ, ಮೋಹನದಾಸ ಕಿಣಿ, ಕೃಷ್ಣಾನಂದ ನಾಯಕ್ , ಚಂದ್ರಕಾಂತ್ ಕಾಮತ್, ರಾಜೇಶ್ ಶೆಣೈ ಮಜೂರ್ ಇವರು ಆಯ್ಕೆಯಾದರು. ಪುನರಪಿ ಆಯ್ಕೆಯಾದ ಮಾಜಿ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ ಮಾತನಾಡಿ ಕಾಪುವಿನ ಸಮಸ್ತ ಸಮಾಜ ಬಾಂಧವರ ಪ್ರೋತ್ಸಾಹ ಮತ್ತು ಸಹಕಾರದಿಂದ ಐದು ವರ್ಷಗಳಲ್ಲಿ ಪ್ರಾಮಾಣಿಕ ವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ಇನ್ನು ಮುಂದಿನ ದಿನಗಳಲ್ಲಿ ಇದೇ ರೀತಿ ತಮ್ಮ ಸಹಕಾರ ಬಯಸುತ್ತೇನೆ. ಅಲ್ಲದೆ ದೇವರ ದರ್ಶನ ಕ್ಕೆ ಬರುವ ಭಕ್ತಾದಿಗಳಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಿ ದೇವಳದ ಅಭಿವೃದ್ಧಿ ಗೆ ದುಡಿಯುತ್ತೇನೆ ಎಂದರು.

ಮಹಾಸಭೆಯಲ್ಲಿ ಹಿರಿಯರಾದ ಸುರೇಶ್ ಪ್ರಭು, ಕೆ.ಎಲ್.ನಾಯಕ್, ಕರುಣಾಕರ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಆಗಸ್ಟ್ 22 : ಕಟಪಾಡಿ ಪಳ್ಳಿಗುಡ್ಡೆಯ ಜೋಕಾಲಿ ಫ್ರೆಂಡ್ಸ್ ತಂಡದಿಂದ ವೇಷ ಧರಿಸಿ ಬಂದ ಹಣವನ್ನು ಆರೋಗ್ಯ ಸಮಸ್ಯೆಯಿರುವ ಮಕ್ಕಳಿಗೆ ಹಸ್ತಾಂತರ ಕಾರ್ಯಕ್ರಮ

Posted On: 21-08-2022 03:04PM

ಕಟಪಾಡಿ : ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಆರೋಗ್ಯ ಸಮಸ್ಯೆಗೆ ಆರ್ಥಿಕ ಸಹಾಯ ನೀಡಿ ಅವರ ಪಾಲಿಗೆ ಆಶಾಕಿರಣ ಮೂಡಿಸುವಲ್ಲಿ ಶ್ರಮಿಸುವ ಕಟಪಾಡಿ ಪಳ್ಳಿಗುಡ್ಡೆಯ ಜೋಕಾಲಿ ಫ್ರೆಂಡ್ಸ್ ತಂಡವು ಶ್ರೀಕೃಷ್ಣ ಜನ್ಮಾಷ್ಟಮಿಯಂದು 4 ನೇ ವರ್ಷದ ವೇಷ ಧರಿಸಿತ್ತು. ಈ ನಾಲ್ಕನೇ ವರ್ಷದಿಂದ ಬಂದ ಹಣವನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮವು ಆಗಸ್ಟ್ 22 ರಂದು ಸಂಜೆ 6 ಗಂಟೆಗೆ ಜರಗಲಿದೆ.

ಸಾಮಾಜಿಕ ಸೇವೆಯಲ್ಲಿ ಜೋಕಾಲಿ ಫ್ರೆಂಡ್ಸ್ : ತೆರೆಮರೆಯಲ್ಲಿ ಯಾವುದೇ ಪ್ರಚಾರದ ಹಂಗಿಲ್ಲದೆ ಸಾಮಾಜಿಕ ಕೈಂಕರ್ಯ ಮಾಡುತ್ತಿರುವ ಕಟಪಾಡಿ ಪಳ್ಳಿಗುಡ್ಡೆಯ ಜೋಕಾಲಿ ಫ್ರೆಂಡ್ಸ್ ತಂಡದ ಕಾರ್ಯ ಶ್ಲಾಘನೀಯ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕಳೆದ 3 ವರ್ಷದಲ್ಲಿ ವೇಷ ಧರಿಸಿ ಹಲವಾರು ಮಕ್ಕಳ ಚಿಕಿತ್ಸೆಗೆ ಧನಸಹಾಯವಿತ್ತಿದ್ದಾರೆ. ಇದಲ್ಲದೆ ಶ್ರಮದಾನ,ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣುಮಗಳ ಮದುವೆಗೆ ಮಾಂಗಲ್ಯ ಸಹಾಯ, ಮನೆ ಕಟ್ಟಿಸುವ ಕಾರ್ಯ, ಹಾವು ಹಿಡಿಯುವಿಕೆ, ಶವ ಸಂಸ್ಕಾರದಂತಹ ಕಾರ್ಯಗಳಿಗೆ ಸಹಾಯ, ರಕ್ತದಾನ ಇತ್ಯಾದಿ ಕಾರ್ಯಗಳನ್ನು ಮಾಡಿರುತ್ತಾರೆ.

ಈ ಬಾರಿ ಸಂಗ್ರಹವಾದ ಹಣವನ್ನು ಹೆಜಮಾಡಿಯ ಕಿವಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಸುಮಾರು 18ರಿಂದ 20 ಲಕ್ಷ ವೆಚ್ಚ ತಗಲಲಿರುವ ಮಗುವಿಗೆ ಮತ್ತು ಶಸ್ತ್ರಚಿಕಿತ್ಸೆಗೆ ಅಂದಾಜು 2.50 ಲಕ್ಷ ಬೇಕಾಗಿರುವ ಕಟಪಾಡಿಯ ಕೈ, ಕಾಲು ಶಕ್ತಿ ಕಳೆದುಕೊಂಡಿರುವ ಮಗುವಿಗೆ ನೀಡಲು ಜೋಕಾಲಿ ಫ್ರೆಂಡ್ಸ್ ತಂಡ ಸಿದ್ಧವಾಗಿದೆ.

ಇದರ ಜೊತೆಗೆ ಕೃಷಿಯ ಬಗ್ಗೆ ನಿರಾಸಕ್ತಿ ಮೂಡುವ ಕಾಲಘಟ್ಟದಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುವ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ, ವಿದ್ಯಾರ್ಥಿವೇತನ ಕಾರ್ಯಕ್ರಮವು ಜರಗಲಿದೆ. ವೇಷ ಧರಿಸಿ ಸಂಗ್ರಹಿಸಿ ಬಂದ ಹಣದ ಡಬ್ಬಿಯನ್ನು ಆಗಸ್ಟ್ 20, ಆದಿತ್ಯವಾರದಂದು ಸಂಜೆ ಸಾರ್ವಜನಿಕರ ಎದುರು ತೆರೆಯಲಾಗುವುದು ಎಂದು ನಮ್ಮ ಕಾಪುವಿಗೆ ತಿಳಿಸಿದರು.

ಫ್ರೆಂಡ್ಸ್ ಗ್ರೂಪ್ ಕಳತ್ತೂರು : ಮುದ್ದುಕೃಷ್ಣ, ಆಟೋಟ ಸ್ಪರ್ಧೆ

Posted On: 21-08-2022 01:36PM

ಕಾಪು :ಫ್ರೆಂಡ್ಸ್ ಗ್ರೂಪ್ ಕಳತ್ತೂರು ವತಿಯಿಂದ ಕುಶಲ ಶೇಖರ ಶೆಟ್ಟಿ ಇಂಟರ್ನಾಷನಲ್ ಆಡಿಟೋರಿಯಂನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪ್ರಥಮ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆಯು ಜರಗಿತು.

ಕಾರ್ಯಕ್ರಮವನ್ನು ವಾಸು ಶೆಟ್ಟಿ ದಂಪತಿಗಳು ಉದ್ಘಾಟಿಸಿದರು.

ಮುದ್ದುಕೃಷ್ಣ ಸ್ಪರ್ಧೆ ಫಲಿತಾಂಶ : ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಅನಿಕಾ, ಅಗಸ್ತ್ಯ, ಜಿಯಾ ಸುವರ್ಣ ಸಮಾನ ಬಹುಮಾನ ಗಳಿಸಿದರು. 2ರಿಂದ 4 ವರ್ಷದ ವಿಭಾಗದಲ್ಲಿ ಶ್ರೀವತ್ಸ ಪ್ರಥಮ, ನೈರಿತಿ ರಾವ್ ದ್ವಿತೀಯ ಬಹುಮಾನ ಗಳಿಸಿದರು. 5ರಿಂದ 7 ವರ್ಷದ ವಿಭಾಗದಲ್ಲಿ ಮನಸ್ವಿ ದೇವಾಡಿಗ ಪ್ರಥಮ, ದೃತಿನ್ ದ್ವಿತೀಯ ಬಹುಮಾನ ಗಳಿಸಿದರು. 8ರಿಂದ 13 ವರ್ಷದ ವಿಭಾಗದಲ್ಲಿ ಜನ್ವಿತ್ ದೇವಾಡಿಗ ಪ್ರಥಮ, ತಾನಿಯಾ ಮತ್ತು ಸನ್ವಿತ್ ದ್ವಿತೀಯ ಬಹುಮಾನ ಗಳಿಸಿದರು. ಒಂದರಿಂದ ಏಳು ವರ್ಷದವರೆಗಿನ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶೇಖರ ಶೆಟ್ಟಿ, ರಂಗನಾಥ ಶೆಟ್ಟಿ, ಅನಿತಾ ಉಪಾಧ್ಯಾಯ, ಹರಿಣಿ ರೈ, ಫ್ರೆಂಡ್ಸ್ ಗ್ರೂಪ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಅನಿತಾ ಉಪಾಧ್ಯಾಯ, ಪ್ರತಿಭಾ ಶೆಟ್ಟಿ, ಪ್ರತಿಮಾ ಶೆಟ್ಟಿ ಸಹಕರಿಸಿದರು. ಪ್ರೀತಂ ಶಿರ್ವ ಕಾರ್ಯಕ್ರಮ ನಿರೂಪಿಸಿದರು.

ಯುವವಾಹಿನಿ : ಅಂತರ್ ಘಟಕಗಳ ಸಾಂಸ್ಕೃತಿಕ ಕಾರ್ಯಕ್ರಮ -ಡೆನ್ನಾನ ಡೆನ್ನನ -2022ಕ್ಕೆ ಸಚಿವ ಸುನಿಲ್ ಕುಮಾರ್ ಚಾಲನೆ

Posted On: 21-08-2022 10:58AM

ಕಟಪಾಡಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಉಡುಪಿ ಯುವವಾಹಿನಿ ಘಟಕದ ಅತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆದಿತ್ಯವಾರ ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಗಿರಿ ಸಭಾಗ್ರಹದಲ್ಲಿ ಯುವವಾಹಿನಿಯ ಅಂತರ್ ಘಟಕಗಳ ಸಾಂಸ್ಕೃತಿಕ ಕಾರ್ಯಕ್ರಮ ಡೆನ್ನಾನ ಡೆನ್ನನ ಕಾರ್ಯಕ್ರಮವನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪ್ರತಿಭೆಗಳಿಗೆ ಅವಕಾಶ ಕಡಿಮೆ. ಸೂಕ್ತ ಅವಕಾಶದ ಅನಿವಾರ್ಯವಿದೆ. ಯುವವಾಹಿನಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಪ್ರತಿಭೆಗಳನ್ನು ಅಣಿಗೊಳಿಸುತ್ತಿದೆ. ಭಾಷೆ, ಸಂಸ್ಕೃತಿಯಿಂದ ಉತ್ತಮ ನಡವಳಿಕೆ ಮೂಡಲು ಸಾಧ್ಯ. ಸಮಾಜವನ್ನು ಸಾಂಸ್ಕೃತಿಕ ಚಟುವಟಿಕೆಯಿಂದ ತಿದ್ದಬಹುದು. ನಮ್ಮ ನಡವಳಿಕೆಯನ್ನು ರೂಪಿಸಲು ಸಾಂಸ್ಕೃತಿಕ ಚಟುವಟಿಕೆಗಳು ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಯುವವಾಹಿನಿ ಸಂಘಟನೆ ಮುಂಚೂಣಿಯಲ್ಲಿದೆ ಎಂದರು.

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಮಂಗಳೂರು ಇದರ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ್ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪ ಸುವರ್ಣ, ಉಡುಪಿ ಯುವವಾಹಿನಿ ಘಟಕದ ಕಾರ್ಯದರ್ಶಿ ದಯಾನಂದ ಕರ್ಕೇರ, ಕಾರ್ಯಕ್ರಮ ಸಂಚಾಲಕರಾದ ಮಹಾಬಲ ಅಮೀನ್, ಅಶೋಕ್ ಕೋಟ್ಯಾನ್ ಉಪಸ್ಥಿತರಿದ್ದರು.

ಉಡುಪಿ ಘಟಕದ ಅಧ್ಯಕ್ಷರಾದ ಪ್ರವೀಣ್ ಡಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಯುವವಾಹಿನಿ ಕೇಂದ್ರ ಸಮಿತಿಯ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಜಗದೀಶ್ ಸ್ವಾಗತಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಪ್ರಸ್ತಾವಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್‌ ಸೌಹಾರ್ದ ಸಹಕಾರಿ ಕಾರವಾರ : ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯಿಂದ ಮಾನಸ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರ ಭೇಟಿ

Posted On: 19-08-2022 11:56PM

ಕಾಪು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್‌ ಸೌಹಾರ್ದ ಸಹಕಾರಿ ಕಾರವಾರ ಇದರ ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯ ಮುಖೇನ ಮಾನಸ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರ ಪಾಂಬೂರು, ಇಲ್ಲಿಯ ಸುಮಾರು 110 ವಿದ್ಯಾರ್ಥಿಗಳಿಗೆ ಸೊಲಾಪುರ ಚಾದ‌ರ್ ಮತ್ತು ಸಿಹಿತಿಂಡಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್‌ರವರು ಸಂಸ್ಥೆಯು ಕಾರವಾರ ಮಾತ್ರವಲ್ಲದೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಅನೇಕ ಶಾಖೆಗಳನ್ನು ಹೊಂದಿದ್ದು ವಿವಿಧ ಸಮಾಜಸೇವಾ ಕಾರ್ಯಕ್ರಮಗಳ ಮುಖೇನ ಗುರುತಿಸಿಕೊಂಡಿದೆ. ಇಂದು ಮಾನಸ ಸಂಸ್ಥೆಯ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಬೆಡ್‌ಶೀಟ್ ಮತ್ತು ಸಿಹಿತಿಂಡಿ, ವಿತರಿಸಿ, ಮಾನವೀಯ ಮೌಲ್ಯಗಳಿಗೆ ಉತ್ತೇಜನ ನೀಡಿದ್ದು, ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿ ಎಲ್ಲರಿಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಶುಭಾಶಯ ಕೋರಿದರು.

ಮತ್ತೋರ್ವ ಮುಖ್ಯ ಅತಿಥಿ ಹೋಲಿಕ್ರಾಸ್ ಚರ್ಚ್‌ ಧರ್ಮಗುರುಗಳಾದ ವಂದನೀಯ ಫಾ| ಹೆನ್ರಿ ಮಸ್ಕರೇನಸ್ ಮಾತನಾಡಿ, 'ಮಿಲಾಗ್ರಿಸ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು ವಿಶೇಷ ಚೇತನ ಅಂದರೆ ದೇವರ ಮಕ್ಕಳನ್ನು ಸಂತೋಷಪಡಿಸುವ ಮೂಲಕ ದೇವರಿಗೆ ಅತ್ಯಂತ ಪ್ರಿಯವಾದ ಕೆಲಸ ಮಾಡಿದ್ದು ಅಭಿವಂದನಾರ್ಹವೆಂದು ಹೇಳಿದರು. ಉಡುಪಿ ವಿಭಾಗದ ಅಭಿವೃದ್ಧಿ ಅಧಿಕಾರಿಯಾದ ಜೀವನ್ ಡಿಸೋಜರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಮಿಲಾಗ್ರಿಸ್ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಾರ್ಜ್ ಫೆರ್ನಾಂಡಿಸ್ ರವರ ಸಾಮಾಜಿಕ ಕಳಕಳಿಯ ಭಾಗವಾಗಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯದಲ್ಲಿರುವ ೧೧೧ ಶಾಖೆಗಳ ಮೂಲಕ ಸುಮಾರು 3000 ವಿಶೇಷ ಚೇತನ ಮತ್ತು ಅನಾಥ ಮಕ್ಕಳಿಗೆ ಸೋಲಾಪುರ ಚಾದರ ಮತ್ತು ಸಿಹಿತಿಂಡಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಾನಸದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹೆನ್ರಿ ಮಿನೇಜಸ್ ಮತ್ತು ಟ್ರಸ್ಟಿಗಳಾ ಸಿ|ಜಾನ್ ಮಾರ್ಟಿಸ್, ಶಾಖೆಯ ಪ್ರಾಂಶುಪಾಲರಾದ ಸಿ| ಅನ್ಸಿಲ್ಲಾ, ಶಿರ್ವ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಗ್ರೇಸಿ ಕರ್ಡೋಜ, ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯ ಶಾಖಾ ವ್ಯವಸ್ಥಾಪಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಶಿರ್ವ ಶಾಖಾ ವ್ಯವಸ್ಥಾಪಕಿ ಪ್ರಮಿಳಾ ಲೋಬೊ ವಂದಿಸಿದರು. ಶಾಲೆಯ ಶಿಕ್ಷಕ ಶಿಕ್ಷಕೇತರ ವರ್ಗ ಹಾಗೂ ಎರಡೂ ಶಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.