Updated News From Kaup

ಉಡುಪಿ ಜಿಲ್ಲೆಯ ನೂತನ ಎಸ್ಪಿಯಾಗಿ ಅಕ್ಷಯ್ ಮಚೀಂದ್ರ

Posted On: 16-08-2022 10:54PM

ಉಡುಪಿ : ಜಿಲ್ಲೆಯ ನೂತನ ಎಸ್ಪಿಯಾಗಿ ಅಕ್ಷಯ್ ಮಚೀಂದ್ರ ನೇಮಿಸಿ ಸರಕಾರ ಆದೇಶಿಸಿದೆ.

ಅಕ್ಷಯ್ ಮಚೀಂದ್ರ ಚಿಕ್ಕಮಗಳೂರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಕಳೆದೆರಡು ವರ್ಷಗಳ ಹಿಂದೆ ಉಡುಪಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ವಿಷ್ಣುವರ್ಧನ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಯ ಅಧೀಕ್ಷಕರಾಗಿ ಸರಕಾರ ನೇಮಕ ಮಾಡಿದೆ.

ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಸ್ವಾತಂತ್ರ್ಯ ದಿನಾಚರಣೆ ; ಸನ್ಮಾನ

Posted On: 16-08-2022 08:09PM

ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆಯ ವತಿಯಿಂದ ಆಗಸ್ಟ್ 15ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭ ಬೊಬ್ಬರ್ಯ ದೈವಸ್ಥಾನದಲ್ಲಿ ವಠಾರದಲ್ಲಿ ಜರಗಿತು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿ ಶೆಟ್ಟಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದರು.

ಒಕ್ಕೂಟದ ಹಿರಿಯರಾದ ಹಾಗೂ ಸದಸ್ಯರಾದ ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ದೈವಚಾಕ್ರಿ ಮಾಡುತ್ತಿರುವ ಸರಳ ಸಜ್ಜನಿಕೆ ಹೆಸರಾಂತ ಕೊರಗ ಸಮುದಾಯದ ಡೋಲು ಬಾರಿಸುವ ಮೂಲಕ ದೈವಚಾಕ್ರಿ ಮಾಡಿದ ಬಾಬು ಅಲೆವೂರ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬೊಬ್ಬರ್ಯ ಯುವ ಸೇವ ಸಮಿತಿ ಅಧ್ಯಕ್ಷರಾದ ವರದರಾಜ ಕಾಮತ್, ಉಡುಪಿ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಹಾಗೂ ಉಡುಪಿ ಕೋಶಾಧಿಕಾರಿಯಾದ ಶ್ರೀಧರ್ ಪೂಜಾರಿ, ಉಪಾಧ್ಯಕ್ಷರಾದ ಯೋಗೀಶ್ ಪೂಜಾರಿ ಹಾಗೂ ಮಹೇಶ್ ಪಂಬದ, ವಾಮನ, ಸದಸ್ಯರು ಉಪಸ್ಥಿತಿಯಿದ್ದರು. ಸಂಘಟನೆ ಕಾರ್ಯದರ್ಶಿಯಾದ ರಕ್ಷಿತ್ ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ ವಂದಿಸಿದರು.

ಉಡುಪಿ : ತುಳುನಾಡ ರಕ್ಷಣಾ ವೇದಿಕೆ - ಆಟಿಡೊಂಜಿ ದಿನ

Posted On: 16-08-2022 07:55PM

ಉಡುಪಿ : ಇಲ್ಲಿನ ಬಹ್ಮಗಿರಿಯ ಲಯನ್ಸ್ ಭವನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ನೂರಾರು ತುಳು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಹಯೋಗದಿಂದ ಆಗಸ್ಟ್ 14ರಂದು ಆಟಿಡೊಂಜಿ ದಿನ ಎಂಬ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದ ಉಧ್ಘಾಟನೆಯನ್ನು ಹಿರಿಯ ಅರ್ಚಕರಾದ ಕೇಶವ ಶಾಂತಿಯವರು ಉಧ್ಘಾಟಿಸಿದರು.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತುಳುನಾಡಿನ ಸಂಸ್ಕೃತಿ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪನೆ, ಉದ್ದೇಶ, ಸಾಮಾಜಿಕ ಹೋರಾಟ, ಸಾಮಾಜಿಕ ನೆರವು ಹಾಗೂ ಅಗತ್ಯತೆ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಟಪಾಡಿ ಶಂಕರ್ ಪೂಜಾರಿ ಆಟಿ ತಿಂಗಳ ವಿಶೇಷತೆಯ ಬಗ್ಗೆ ಹೇಳಿದರು.

ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಕೃಷ್ಣಮೂರ್ತಿ ಆಚಾರ್ಯರವರು ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಾ, ತುಳುನಾಡ ಸಂಸ್ಕೃತಿ ಉಳಿಯಬೇಕಾದಲ್ಲಿ ಈ ಸಂಘಟನೆ ಅಗತ್ಯ ಹಾಗೂ ನಿಮ್ಮೊಂದಿಗೆ ಸದಾ ಇರುವ ಭರವಸೆ ನೀಡಿದರು. ಮುಖ್ಯ ಅತಿಥಿಯಾದ ಉಡುಪಿ ನಗರ ಠಾಣಾ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ರವರು ಕಾನೂನಿನ ಬಗ್ಗೆ ಹಾಗೂ ತುಳುನಾಡಿನ ಬಗ್ಗೆ, ತುಳುನಾಡ ರಕ್ಷಣಾ ವೇದಿಕೆಯ ಅಗತ್ಯತೆಯ ಬಗ್ಗೆ ಸವಿವರದೊಂದಿಗೆ ವಿಸ್ತರಿಸಿ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಉತ್ತಮ ಕೆಲಸಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು. ಜನತಾದಳ ಜಾತ್ಯಾತೀತ ಉಡುಪಿ ಜಿಲ್ಲಾ ಕಾರ್ಯಧ್ಯಕ್ಷರಾದ ವಾಸುದೇವ್ ರಾವ್ ರವರು ತುಳುನಾಡ ಸಂಸ್ಕೃತಿ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದರು. ಹಿರಿಯ ವಕೀಲರಾದ ಹಮ್ಜತ್ ಹೆಜಮಾಡಿಯವರು ತುಳುನಾಡು ಮತ್ತು ತುಳು ಭಾಷೆಯ ಬಗ್ಗೆ ಸಂಪೂರ್ಣವಾಗಿ ವಿಸ್ತರಿಸಿ ರಾಷ್ಟ್ರಾದ್ಯಂತ ತುಳುನಾಡ ಸಂಸ್ಕೃತಿ ಬೆಳಗಲಿಯೆಂದು ಶುಭ ಹಾರೈಸಿದರು. ಉಡುಪಿ ಜಿಲ್ಲಾ ಮತ್ತು ದ.ಕ ಮೀನು ಮಾರಾಟ ಫೆಡರೇಶನ್ ನ ಅಧ್ಯಕ್ಷರಾದ ಯಶ್ಪಾಲ್ ಸುವರ್ಣರವರು ತುಳುನಾಡು ಮತ್ತು ತುಳುವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಸಭಾ ಸದಸ್ಯರು ಹಾಗೂ ವಿರೋಧ ಪಕ್ಷ ನಾಯಕರಾದ ರಮೇಶ್ ಕಾಂಚನ್ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಮುಖ್ಯ ಅತಿಥಿಗಳಾದ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಇದರ ಸಂಸ್ಥಾಪಕರಾದ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಶೆಟ್ಟಿ, ಮಹಿಳಾ ಘಟಕ ಗೌರವ ಸಲಹಾಗಾರರಾದ ಶೋಭ ಪಾಂಗಳ, ಗೌರವ ಸಲಹಾಗಾರರಾದ ಸುಧಾಕರ್ ಅಮೀನ್, ಜಿಲ್ಲಾ ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣ ಕುಮಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಸುಕನ್ಯ ಪ್ರಭಾಕರ್, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಮಹಿಳಾ ಘಟಕ ಉಪಾಧ್ಯಕ್ಷರು ಹಾಗೂ ಕಾನೂನು ಸಲಹಾಗರರಾದ ನಾಗಲಕ್ಷ್ಮಿ, ಯುವ ಘಟಕದ ಅಧ್ಯಕ್ಷರಾದ ಸುನಿಲ್ ಫೆರ್ನಾಂಡಿಸ್, ಐಟಿ ವಿಂಗ್ ಅಧ್ಯಕ್ಷರಾದ ರೋಷನ್ ಡಿಸೋಜ, ಕಾರ್ಮಿಕ ಘಟಕ ಅಧ್ಯಕ್ಷರಾದ ಜುನೈದ್, ಜಿಲ್ಲಾ ಉಪಾಧ್ಯಕ್ಷರಾದ ರಹೀಂ, ಜೊತೆ ಕಾರ್ಯದರ್ಶಿ ಶುಭಾಶ್ ಸುಧಾನ್, ಕಾರ್ನಿಕ ಘಟಕ ಪ್ರಧಾನ ಕಾರ್ಯದರ್ಶಿ ರಿತೇಶ್ ರಾವ್, ಖಜಾಂಚಿ ಡ್ಯಾನಿ, ಜಿಲ್ಲಾ ಕಾರ್ಯದರ್ಶಿ ಮಜೀದ್, ಮಹಳಾ ಘಟಕ ಜಿಲ್ಲಾ ಉಪಾಧ್ಯಕ್ಷರಾದ ಶಾಂಭವಿ, ಮಹಿಳಾ ಘಟಕ ಜಿಲ್ಲಾ ಉಪಾಧ್ಯಕ್ಷರಾದ ಸುಲತ, ಮಹಿಳಾ ಘಟಕ ಜೊತೆ ಕಾರ್ಯದರ್ಶಿ ಅನುಪಮ, ರೇಣುಕಾ, ಜಿಲ್ಲಾ ಕಾರ್ಯದರ್ಶಿಯಾದ ಸದಾನಂದ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ಷಾ ರಿಧಮಿಕ್ ವಾಯಿಸ್ ಆಫ್ ಉಡುಪಿ ಹಾಗೂ ಉಡುಪಿ ಕರೊಕೆ ತಂಡದಿಂದ ತುಳು ಸಂಗೀತ ರಸಮಂಜರಿ ನೀಡಲ್ಪಟ್ಟಿತು. ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿಯಾದ ಮೊಹಮ್ಮದ್ ಹಾರಿಸ್ ರವರು ನಿರೂಪಣೆ ಮಾಡಿದರು.

ಇನ್ನಂಜೆ - ಮಂಡೇಡಿ ಕೆ. ಸದಾನಂದ ಶೆಟ್ಟಿ ಯವರಿಗೆ ಸನ್ಮಾನ

Posted On: 16-08-2022 05:18PM

ಕಾಪು : ಮಂಡೇಡಿ ಶ್ರೀದೇವಿ ಭಜನಾಮಂಡಳಿ ಹಾಗೂ ಮಂಡೇಡಿ ಅಂಗನವಾಡಿಯ ಜಂಟಿ ಆಶ್ರಯದಲ್ಲಿ ನಡೆದ 75 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಕೆ. ಸದಾನಂದ ಶೆಟ್ಟಿ ಯವರು ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಂಡೇಡಿ ಶ್ರೀದೇವಿ ಭಜನಾಮಂಡಳಿ ಹಾಗೂ ಗ್ರಾಮಸ್ಥರ ಪರವಾಗಿ ಕೆ ಸದಾನಂದ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಮಾಜಿಗವರ್ನರ್ ವಿ. ಜಿ. ಶೆಟ್ಟಿ ಮಾತನಾಡಿ ಸದಾನಂದ ಶೆಟ್ಟಿ ಯವರು ಗ್ರಾಮದ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಊರಿನ ಜನರಿಗೆ ಮಾರ್ಗದರ್ಶಕರಾಗಿದ್ದರು. ಇವರನ್ನು ಸನ್ಮಾನಿಸಲು ಸಿಕ್ಕ ಅವಕಾಶ ನಮ್ಮೆಲ್ಲರ ಭಾಗ್ಯವೆಂದು ಅವರಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಸುರೇಶ ಶೆಟ್ಟಿ, ಇನ್ನಂಜೆ ಸಿ. ಎ ಬ್ಯಾಂಕ್ ನ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಉಡುಪಿ ಮಿಡ್ ಟೌನ್ ಲಯನ್ಸ್ ಅಧ್ಯಕ್ಷೆ ವೀಣಾ ಜೀವನ್ ಶೆಟ್ಟಿ, ಇನ್ನಂಜೆ ರೋಟರಿ ಸಮುದಾಯದಳದ ಅಧ್ಯಕ್ಷ ಪ್ರಶಾಂತ ಶೆಟ್ಟಿ ಹಾಗೂ ಭಜನಾಮಂಡಳಿಯ ಪದಾಧಿಕಾರಿಗಳು, ಸರ್ವಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಭಜನಾಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಆಗಸ್ಟ್ 19 : ಜೆಸಿಐ ಕಾಪುವಿನಿಂದ ಮುದ್ದು ಕೃಷ್ಣ ‌ವೇಷ ಸ್ಪರ್ಧೆ

Posted On: 16-08-2022 05:12PM

ಕಾಪು : ಜೆಸಿಐ ಕಾಪು ವಲಯದಿಂದ ಜೆಸಿ ಜಗದೀಶ್ ಆಚಾರ್ಯ ಇವರ ಸ್ಮರಣಾರ್ಥ ಕಾಪು ಜಯಲಕ್ಷ್ಮೀ ಜ್ಯುವೆಲ್ಲಸ್೯ ಪ್ರಾಯೋಜಕತ್ವದಲ್ಲಿ 3 ವರ್ಷಕ್ಕಿಂತ ಕೆಳಗಿನ, ಅಂಗನವಾಡಿ ಮತ್ತು ಎಲ್ ಕೆ ಜಿ, ಯು ಕೆ ಜಿ, 1 ನೇ ಮತ್ತು 2 ನೇ ತರಗತಿಯ ಮಕ್ಕಳಿಗಾಗಿ ಆಗಸ್ಟ್ 19 ರಂದು ಕಾಪುವಿನ ಲಕ್ಷ್ಮೀ ಜನಾರ್ದನ ಸಭಾಂಗಣದಲ್ಲಿ ಬೆಳಗ್ಗೆ 9.30 ಕ್ಕೆ ಮುದ್ದು ಕೃಷ್ಣ ‌ವೇಷ ಸ್ಪರ್ಧೆ ಜರಗಲಿದೆ.

ಪ್ರತೀ ಸ್ಪರ್ಧೆಗೆ ವೇದಿಕೆಯಲ್ಲಿ ಒಂದು ನಿಮಿಷ ಅವಕಾಶ, ವೇಷ ಮತ್ತು ಭಾವಾಭಿನಯನಕ್ಕೆ ಪ್ರಾಧಾನ್ಯತೆ, ಹಿನ್ನಲೆ ಪರಿಕರಗಳನ್ನು ಅಗತ್ಯವಿದ್ದಲ್ಲಿ ಬಳಸಬಹುದು (ಅಂಕದ ಪ್ರಾಧಾನ್ಯತೆಯಿರುವುದಿಲ್ಲ), ಸ್ಪರ್ಧಾಳು ಮಕ್ಕಳ ಹೆಸರನ್ನು ಒಂದು ದಿನ ಮುಂಚಿತವಾಗಿ ಸಂಘಟಕರಲ್ಲಿ ನೋಂದಾಯಿಸ ತಕ್ಕದ್ದು, ವಿಜೇತರಿಗೆ ಅಂದೇ ಬಹುಮಾನಗಳನ್ನು ನೀಡಲಾಗುವುದು, ಸಂಘಟಕರ ತೀರ್ಮಾನವೇ ಅಂತಿಮ ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಶಿರ್ವ : ವಿಶ್ವ ಹಿಂದೂ ಪರಿಷತ್ ಭಜರಂಗದಳ - ಅಖಂಡ ಭಾರತ ಸಂಕಲ್ಪ ಹಾಗೂ ಪಂಜಿನ ಮೆರವಣಿಗೆ

Posted On: 16-08-2022 04:26PM

ಶಿರ್ವ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಶಿರ್ವ ವಲಯದ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ಹಾಗೂ ಪಂಜಿನ ಮೆರವಣಿಗೆಯು ಆಗಸ್ಟ್ 14ರಂದು ಶಿರ್ವದಲ್ಲಿ ನಡೆಯಿತು.

ದಕ್ಷಿಣ ಪ್ರಾಂತ್ಯದ ಮಾತೃ ಶಕ್ತಿ ಸಹ ಸಂಯೋಜಕಿ ಸುರೇಖಾರಾಜ್ ದಿಕ್ಸೂಚಿ ಭಾಷಣ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಶಿರ್ವ ವಲಯದ ಅಧ್ಯಕ್ಷರಾದ ವಿಖ್ಯಾತ ಭಟ್ ವಹಿಸಿದ್ದರು

ಈ ಸಂದರ್ಭದಲ್ಲಿ ಜಿಲ್ಲಾ ಸೇವಾಪ್ರಮುಖ್ ದೀಪಕ್ ಮೂಡುಬೆಳ್ಳೆ, ಮಠಮಂದಿರ ಸಂಪರ್ಕ್ ಕುಶಲ ಪೆರ್ಡೂರು, ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು, ಪ್ರಖಂಡ ಕಾರ್ಯದರ್ಶಿ ರಾಜೇಂದ್ರ ಶಣೈ, ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ್ ಶಿರ್ವ, ಶಿರ್ವ ವಲಯ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್, ವಲಯ ಭಜರಂಗದಳ ಸಹ ಸಂಚಾಲಕ್ ನೀರಜ ಪೂಜಾರಿ, ಎಲ್ಲಾ ಘಟಕಾಧ್ಯಕ್ಷರು ಹಾಗೂ ಮಾತೃಶಕ್ತಿ ಸಂಯೋಜಕಿಯರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಮೆಂಡನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ನಾಯಕ್ ವಂದಿಸಿದರು.

ಯುವ ವಿಚಾರ ವೇದಿಕೆ : ಸ್ವಾತಂತ್ರ್ಯ ಅಮೃತೊತ್ಸವ ದ್ವಜಾರೋಹಣ ಹಾಗೂ ಮನೋರಂಜನಾ ಗ್ರಾಮೀಣ ಕ್ರೀಡಾಕೂಟ

Posted On: 16-08-2022 07:12AM

ಉಡುಪಿ : ಯುವ ವಿಚಾರ ವೇದಿಕೆ (ರಿ.) ಕೊಳಲಗಿರಿ ಉಪ್ಪೂರು ಇವರ ವತಿಯಿಂದ, ನಮ್ಮ ದೇಶ ಸ್ವತಂತ್ರ ಪಡೆದು 75 ಸಂವತ್ಸರ ಪೂರೈಸಿರುವ ಶುಭ ಸಂದರ್ಭದ "ಅಮೃತೋತ್ಸವ" ಕಾರ್ಯಕ್ರಮದನ್ವಯ ಸ್ವಾತಂತ್ರದ ಮುನ್ನಾ ದಿನ ಸಾರ್ವಜನಿಕರಿಗೆ ವಾಲಿಬಾಲ್ , ತ್ರೋಬಾಲ್, ಹಾಗೂ ಇನ್ನಿತರ ಗ್ರಾಮೀಣ ಮನೋರಂಜನಾ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ, ಮಕ್ಕಳಿಗೆ, ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ನಡೆಸಲಾಗಿತ್ತು. ಆಗಸ್ಟ್ 15ರಂದು ಅಮೃತೋತ್ಸವ ದ್ವಜಾರೋಹಣದ ನಂತರ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಧ್ವಜಾರೋಹಣವನ್ನು ಉಪ್ಪೂರು ಗ್ರಾಮದ 20 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಊರಿನ ಹೆಮ್ಮೆಯ ವೀರ ಯೋಧ ರಮೇಶ್ ಪೂಜಾರಿ ತೆಂಕಬೆಟ್ಟು ಇವರು ನೆರವೇರಿಸಿದರು. ಕ್ರೀಡಾ ಸ್ಪರ್ಧಾ ಕಾರ್ಯಕ್ರಮವನ್ನು ಲಗೋರಿ ಪಲ್ಲೆಗೆ ಬಾಲ್ ಎಸೆಯುವುದರ ಮೂಲಕ ಯುವ ಉದ್ಯಮಿ ಆಗಿರುವ ಸಂದೀಪ್ ನಾಯಕ್ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತ್ ಉಲ್ಲಾ ಬೇಗ್, ಪಂಚಾಯತ್ ಸದಸ್ಯರಾದ ಅಶ್ವಿನ್ ರೋಚ್, ಸತೀಶ್ ಪೂಜಾರಿ, ದೇಹ ದಾನಿ ಸಮಾಜ ಸೇವಕ ಹಿತೈಷಿ ರಮೇಶ್ ಕರ್ಕೇರಾ, ಸ್ಥಳೀಯರು ನಿರ್ವತ್ತ ಬ್ಯಾಂಕ್ ಉದ್ಯೋಗಿ ಪ್ರಭಾಕರ್ ನಾಯಕ್, ಮುಂಬೈ ಯುವ ಉದ್ಯಮಿ ಮೈಕಲ್, ವೇದಿಕೆಯ ಹಿರಿಯರಾದ ಮಾಧವ ಪಾಣ, ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ನಾಗೇಶ್, ಉಪ್ಪೂರು ವ್ಯ.ಸೆ.ಸ.ಸಂಘ ಇದರ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸಂದೀಪ್ ಶೆಟ್ಟಿ ಹಾಗೂ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸ್ಪರ್ಧಾ ಕಾರ್ಯಕ್ರಮದಲ್ಲಿ ಸ್ಥಳೀಯ 8 ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ತಂಡಗಳು ಸಾರ್ವಜನಿಕರು , ಶಾಲಾ ಮಕ್ಕಳು ವೇದಿಕೆಯ ಸದಸ್ಯರು ಭಾಗವಹಿಸಿದ್ದರು. ಕೊಳಲಗಿರಿಯ ಪುಷ್ಪಲತಾ ಸಸ್ಯಾಲಯದವರು ನೀಡಿದ ಸಸ್ಯಗಳನ್ನು ಅತಿಥಿ ಗಣ್ಯರಿಗೆ ಸ್ಮರಣಿಕೆಯಾಗಿ ನೀಡಲಾಯಿತು. ಅಧ್ಯಕ್ಷರಾದ ದಿನೇಶ್ ಶೆಟ್ಟಿ ಸ್ವಾಗತಿಸಿದರು, ಕು. ಕಾವ್ಯ ಸ್ಪರ್ಧಿಗಳ ಪಟ್ಟಿಯನ್ನು ವಾಚಿಸಿ, ಸದಾಶಿವ ಕುಮಾರ್, ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಕೊಳಲಗಿರಿ ವಂದಿಸಿದರು.

ಶ್ರೀ ದುರ್ಗಾಪರಮೇಶ್ವರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಅಗ್ರಹಾರ ಕಟಪಾಡಿ : ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ

Posted On: 15-08-2022 11:22PM

ಕಟಪಾಡಿ : ಶ್ರೀ ದುರ್ಗಾಪರಮೇಶ್ವರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಅಗ್ರಹಾರ ಕಟಪಾಡಿ ಇಲ್ಲಿ 75ನೇ ವರ್ಷದ ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೈ ಭರತ್ ಹೆಗ್ಡೆ ಹಾಗೂ ಶಾಲಾ ಸಂಚಾಲಕರಾದ ರಂಜನ್ ಹೆಗ್ಡೆ ನೆರವೇರಿಸಿದರು.

75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.

ಈ ಸಂಧರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸರೋಜಿನಿ, ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್, ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕದ ಅಧ್ಯಕ್ಷರಾದ ದಿಲೀಪ್, ಕೋಶಾಧಿಕಾರಿ ಅರ್ಜುನ್,ಸದಸ್ಯರಾದ ಸಂತೋಷ್ ಪೂಜಾರಿ, ರಮೇಶ್, ಗಿರಿಧರ್, ಕರುಣಾಕರ್ ಶೆಟ್ಟಿ,ಸಂತೋಷ್.ಎನ್. ಎಸ್. ಕಟಪಾಡಿ, ದೀಪಕ್ ದುರ್ಗಾನಗರ, ಅಂಗನವಾಡಿ ಶಿಕ್ಷಕಿಯರಾದ ಸುಮ, ಸಹಾಯಕಿಯರಾದ ಮೋಹಿನಿ ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಕ್ಷಕಿ ತಿಲಕ ಸ್ವಾಗತಿಸಿದರು. ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು : ಧ್ವಜಾರೋಹಣ ; 75 ಔಷಧೀಯ ಸಸ್ಯಗಳನ್ನು ನೆಟ್ಟ ವಿದ್ಯಾರ್ಥಿಗಳು

Posted On: 15-08-2022 10:54PM

ಕಾಪು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪ್ರಾಂಶುಪಾಲರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶಕ್ಕಾಗಿ ನಾವು ಎಂಬ ಧ್ಯೇಯ ಸಾರಿದರು. ಅಮೃತ ಮಹೋತ್ಸವ ಅಂಗವಾಗಿ 75 ಔಷಧೀಯ ಸಸ್ಯಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

Posted On: 15-08-2022 08:19PM

ಉಡುಪಿ : ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿ, ಕುಮಾರ ಕೃಪದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಸ್ವಾತಂತ್ರ್ಯ ಸಿಕ್ಕಿ ನಮಗೆ 75 ವರ್ಷ ಆಯ್ತು ಅನೇಕ ಮಹನೀಯರು, ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ. ನಾವು ವಿಮರ್ಶೆ ಮಾಡಿ ನೋಡಬೇಕಾಗುತ್ತದೆ. ಇನ್ನು 25 ವರ್ಷಗಳಲ್ಲಿ ಶತಮಾನೋತ್ಸವ ಸಂಭ್ರಮ ಬರುತ್ತದೆ. ನಾವೆಲ್ಲರೂ ಜಾತಿ, ಧರ್ಮ, ಪಕ್ಷ, ಮರೆತು ಭಾರತೀಯರು ಎಂಬ ರೀತಿಯಲ್ಲಿ ಒಗ್ಗಟ್ಟಾಗಿ ದೇಶದ ಬಗ್ಗೆ, ನಮ್ಮ ಊರಿನ ಬಗ್ಗೆ ಬೆಳವಣಿಗೆಯ ಬಗ್ಗೆ ಆಲೋಚನೆ ಮಾಡಬೇಕು.

ರೋಟಿ, ಕಪಡ, ಮಖಾನ್, ಆರೋಗ್ಯ,ಶಿಕ್ಷಣ, ಎಲ್ಲ ಶ್ರೀಸಾಮಾನ್ಯರಿಗೆ ಸಿಕ್ಕಿದರೆ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ . ಬಡತನ, ಭ್ರಷ್ಟಾಚಾರ ಭಯೋತ್ಪಾದನೆ ನಿರ್ಮೂಲನೇ ಆಗಿ ನಿಜವಾದ ಸ್ವಾತಂತ್ರ್ಯ ಜನಸಾಮಾನ್ಯರಿಗೆ ಸಿಗಲಿ ಎಂದು ಹಾರೈಸುತ್ತಾ ಶುಭಾಶಯಗಳು ಕೋರಿದರು.

ಈ ಸಂದರ್ಭ ಪಕ್ಷ ನಾಯಕರುಗಳಾದ ವಾಸುದೇವ ರಾವ್, ಜಯಕುಮಾರ್ ಪರ್ಕಳ, ಜಯರಾಮ ಆಚಾರ್ಯ, ಗಂಗಾಧರ ಬಿರ್ತಿ, ಶಾಲಿನಿ ಬಿ ಶೆಟ್ಟಿ ಕೆಂಚನೂರು, ಮನ್ಸೂರ್ ಇಬ್ರಾಹಿಂ, ಸಂಕಪ್ಪ. ಎ, ಚಂದ್ರಹಾಸ್ ಎರ್ಮಾಳ್ ,ಉಮೇಶ್ ಕರ್ಕೇರ, ಸಂಜಯ್ ಕುಮಾರ್, ಇಕ್ಬಾಲ್ ಅತ್ರಾಡಿ, ಭರತ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಆಚಾರ್ಯ, ಹುಸೇನ್ ಹೈಕಾಡಿ, ಎಂ ಎ ಬಾವು ಮೂಳೂರು, ಬಿ.ಕೆ ಮೊಹಮ್ಮದ್, ರಾಮರಾವ್, ರಝಕ್ ಉಚ್ಚಿಲ, ರಂಗ ಎನ್ ಕೋಟ್ಯಾನ್, ಸರ್ಫಾಜ್ ಮಲ್ಲಾರು, ಹರೀಶ್ ಶೆಟ್ಟಿ, ರಶೀದ್ ಸರ್ಕಾರಿಗುಡ್ಡೆ, ಸನಾ, ಪದ್ಮನಾಭ ಆರ್ ಕೋಟ್ಯಾನ್, ಸನವರ್ ಕಲೀಮ್, ಪೈಸೆಲ್ ಅಲೆವೂರು, ಅನೇಕ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.