Updated News From Kaup

ಉಡುಪಿ : ನಾರಾಯಣಗುರುಗಳ ವಿಷಯವನ್ನು ಸಮಾಜ ವಿಜ್ಞಾನ ಪುಸ್ತಕದಿಂದ ತೆಗೆದದ್ದು ಅಕ್ಷಮ್ಯ ಅಪರಾಧ ; ಸರಿಪಡಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

Posted On: 08-07-2022 05:40PM

ಉಡುಪಿ : ಎಸೆಸೆಲ್ಸಿ ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣಗುರುಗಳ ಪಠ್ಯ ತೆರವು ಮಾಡಿದ್ದರ ವಿರುದ್ಧ ಬಿಲ್ಲವ ಸಮಾಜದ ಎಲ್ಲ ಸಂಘಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದರು.

ಉಡುಪಿ : ಮುನ್ನೆಚ್ಚರಿಕೆ ವಹಿಸಿ, ಅವಘಡ ತಪ್ಪಿಸಿ - ಉಸ್ತುವಾರಿ ಸಚಿವ ಎಸ್.ಅಂಗಾರ

Posted On: 08-07-2022 05:15PM

ಉಡುಪಿ : ಪ್ರಸಕ್ತ ಮಳೆಗಾಲದಲ್ಲಿ ಯಾವುದೇ ಜೀವ ಹಾಗೂ ಜಾನುವಾರು ಹಾನಿಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ ಅವಘಢಗಳು ನಡೆಯದಂತೆ ತಪ್ಪಿಸಬೇಕೆಂದು ಅಧಿಕಾರಿಗಳಿಗೆ ರಾಜ್ಯದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯ ಪ್ರಾಕೃತಿಕ ವಿಕೋಪ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿವೃಷ್ಠಿಯಿಂದಾಗಿ ಮನೆಗಳು ಹಾನಿ ಉಂಟಾದ ಸಂದರ್ಭದಲ್ಲಿ ನಷ್ಠ ಪರಿಹಾರ ಅಂದಾಜಿಸುವಾಗ ಹಾನಿಯ ವಸ್ತುಸ್ಥಿತಿಯನ್ನು ವೈಜ್ಞಾನಿಕವಾಗಿ ಅಂದಾಜಿಸಿ ಗ್ರಾಮ ಲೆಕ್ಕಿಗರು ಪ್ರಾಥಮಿಕ ವರದಿಯನ್ನು ಸಲ್ಲಿಸಬೇಕು. ಅದರ ಆಧಾರದ ಮೇಲೆ ಹಾನಿಯ ಪ್ರಮಾಣವನ್ನು ಇಂಜಿನಿಯರ್ ಗಳು ನಿರ್ಧರಿಸುವುದು ಸೂಕ್ತ ಎಂದರು.

ಕಾಪು : ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆ

Posted On: 08-07-2022 12:52PM

ಕಾಪು : ಇಲ್ಲಿನ ಉಳಿಯಾರಗೋಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ವೊಂದರಿಂದ ಲಿಕ್ವಿಡ್ ಸೋರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿತ್ತು. ಮಂಗಳೂರು ಕಡೆಗೆ ತೆರಳುತ್ತಿರುವ ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆಯಾಗುತ್ತಿದ್ದು, ಸುತ್ತಲೂ ಹೊಗೆ ಆವರಿಸಿಕೊಂಡಿತ್ತು.

ಸುರತ್ಕಲ್ : ಸಂಸದರು, ಶಾಸಕರು ಅಕ್ರಮ ಟೋಲ್ ಪರ - ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪ ; ಸುರತ್ಕಲ್ ಟೋಲ್ ಗೇಟ್ಗೆ ಮುತ್ತಿಗೆ ನಿರ್ಧಾರ

Posted On: 07-07-2022 11:04PM

ಸುರತ್ಕಲ್ : ವಿಲೀನದ ನಿರ್ಣಯ, ಹೆದ್ದಾರಿ ಸಚಿವರ ಭರವಸೆ, ಸತತ ಹೋರಾಟಗಳ ಹೊರತಾಗಿಯೂ ವಿವಾದಿತ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಯಲು ಸ್ಥಳೀಯ ಸಂಸದ, ಶಾಸಕರುಗಳೇ ಕಾರಣ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಸುಂಕ ಸಂಗ್ರಹದ ಗುತ್ತಿಗೆದಾರರು ಅಕ್ರಮ ಟೋಲ್ ಗೇಟ್ ಪರ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಆರೋಪಿಸಿದೆ‌. ಇಂದು ಸುರತ್ಕಲ್ ನ ಖಾಸಗಿ ಹೊಟೇಲ್ ನಲ್ಲಿ ನಡೆದ ಹೋರಾಟ ಸಮಿತಿಯ ಸಭೆಯಲ್ಲಿ ಈ ಆರೋಪ ವ್ಯಕ್ತವಾಯಿತು‌. ಸಂಸದರು, ಶಾಸಕರು ಅಕ್ರಮ ಟೋಲ್ ಗೇಟ್ ಮುಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲು ಸಭೆ ನಿರ್ಧರಿಸಿತು.

ನಿರಂತರ ಮಳೆ - ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜುಲೈ 8 ಮತ್ತು 9ರಂದು ರಜೆ

Posted On: 07-07-2022 07:50PM

ಉಡುಪಿ/ಮಂಗಳೂರು : ಕಳೆದ ಕೆಲ ದಿನಗಳಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದ್ದು ನಾಳೆಯೂ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜುಲೈ 8ಮತ್ತು 9 ರಂದು ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಆದೇಶ ಹೊರಡಿಸಿದ್ದಾರೆ.

ವರುಣಾರ್ಭಟ : ಭಾರಿ ಮಳೆ ಸಾಧ್ಯತೆ ; ಜುಲೈ 9ರವರೆಗೆ ಉಡುಪಿ, ದ.ಕ, ಉ.ಕ ಜಿಲ್ಲೆಯಲ್ಲಿ ರೆಡ್ ಅಲಟ್೯

Posted On: 07-07-2022 06:59PM

ಕಾಪು : ಕರಾವಳಿ ಜಿಲ್ಲೆಗಳಲ್ಲಿ ಜುಲೈ 9ರವರೆಗೆ ರೆಡ್ ಅಲಟ್೯ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.

NSCDF ಸಂಸ್ಕೃತಿ ಜಾತ್ರೆ - ಸಾಮಾಜಿಕ, ರಾಜಕೀಯ, ಧಾರ್ಮಿಕ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾಗಿದೆ : ಅರಳಿ ನಾಗರಾಜ್

Posted On: 07-07-2022 11:44AM

ಮಂಗಳೂರು : ಪರಿಸರ ಅಂದರೆ ಗಿಡ ನೆಡುವುದು ನೀರು ಉಳಿಸುವುದು ಎಂದು ಭಾಷಣ ಮಾಡುತ್ತೇವೆ ಕಾರ್ಬನ ಡೈಆಕ್ಸೈಡ್ ಜಾಸ್ತಿ ಆಗದಂತೆ ನೋಡಿಕೊಳ್ಳಬೇಕು ಎಂದೆಲ್ಲ ಹೇಳಿಕೊಳ್ಳುತ್ತೇವೆಯೇ ಹೊರತು ಸಾಮಾಜಿಕ ಪರಿಸರ, ರಾಜಕೀಯ ಪರಿಸರ, ಧಾರ್ಮಿಕ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಇದು ಅತ್ಯಂತ ಖೇದಕರ ಸಂಗತಿ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ್ ಹೇಳಿದರು. ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪುರ ಭವನದಲ್ಲಿ ಜುಲೈ ಮೂರರಂದು ಆಯೋಜಿಸಿದ್ದ ಒಂದು ದಿನದ ಸಂಸ್ಕೃತಿ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕೋವಿಡ್ ನಂತಹ ಪರಿಸ್ಥಿತಿಯಲ್ಲೂ ದೇಶ ಮುನ್ನಡೆದಿದೆ. ವಿದೇಶಗಳಿಗೆ ಔಷಧಿ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಅದೇ ರೀತಿ ಬ್ರಷ್ಟಾಚಾರದಂತಹ ಪಿಡುಗು ಕೂಡಾ ವ್ಯಾಪಕವಾಗಿ ಹರಡಿಕೊಂಡಿದೆ. ಇಂದು ಪೂರ್ಣಾಂಕ ಪಡೆದ ಮಕ್ಕಳಿಗೆ ಮಾನ್ಯತೆ ಇಲ್ಲ. ಲಕ್ಷಾಂತರ ರುಪಾಯಿ ನೀಡಿ ಸೀಟು ಗಿಟ್ಟಿಸಿ ಕೊಂಡ ವಿದ್ಯಾರ್ಥಿಗಳು ಬಳಿಕ ಬ್ರಷ್ಟರಾಗದೆ ಇರುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಇದನ್ನ ತಡೆಯಬೇಕಾದರೆ ಇಂದಿನ ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ಪಾಂಬೂರು : ಕಾಣೆಯಾಗಿದ್ದ ವ್ಯಕ್ತಿ ಪತ್ತೆ

Posted On: 06-07-2022 01:58PM

ಶಿರ್ವ : ಕಾಪು ತಾಲೂಕಿನ ಪಾಂಬೂರಿನ ಲಕ್ಷ್ಮಣ್ ರಾವ್ (66) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರು ಉಡುಪಿಯ ಕಲ್ಯಾಣಪುರ, ಸಂತೆಕಟ್ಟೆ ಬಳಿ ಪತ್ತೆಯಾಗಿದ್ದಾರೆ.

ಹೋಟೆಲ್ನಲ್ಲಿ ಹೊಟ್ಟೆ ತುಂಬಾ ತಿಂದು ಹಣ ನೀಡದೆ ಮಾಲಿಕರಿಗೆ ಬೆದರಿಕೆ

Posted On: 06-07-2022 12:00PM

ಮಣಿಪಾಲ : ಹೋಟೆಲ್ ಗೆ ಆಗಮಿಸಿ ಹೊಟ್ಟೆ ತುಂಬಾ ತಿಂದು ಹಣವನ್ನು ಕೊಡದೆ ಹೋಟೆಲ್ ಮಾಲಿಕರಿಗೆ ಬೆದರಿಕೆಯೊಡ್ಡಿದ ಘಟನೆ ಮುರ್ಡೇಶ್ವರ ಭಟ್ಕಳ, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಜುಲೈ 5ರಂದು ನಡೆದಿದೆ.

ಪಾಂಬೂರು : ವ್ಯಕ್ತಿಯೋರ್ವ ಕಾಣೆ

Posted On: 06-07-2022 11:37AM

ಶಿರ್ವ : ಕಾಪು ತಾಲೂಕಿನ ಪಾಂಬೂರಿನ ಲಕ್ಷ್ಮಣ್‌ ರಾವ್‌ (66) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.