Updated News From Kaup
ಜ.24-25: ಸಾಸ್ತಾನ ಶ್ರೀ ನಾಲ್ಕು ಪಾದ ಹ್ಯಾಗೂಳಿ, ಕೋಳೆರಾಯ, ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಗೆಂಡೆ ಸೇವೆ, ಕೋಲಸೇವೆ

Posted On: 23-01-2024 06:24PM
ಸಾಸ್ತಾನ : ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿತಲೆಯ ಶ್ರೀ ನಾಲ್ಕುಪಾದ ಹ್ಯಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಜಾತ್ರೆಯ ಗೆಂಡ ಸೇವೆ ಹಾಗೂ ಕೋಲವು ಜ. 24 ಮತ್ತು ಜ. 25 ರಂದು ನಡೆಯಲಿದೆ.

ಜ.23 ರಿಂದ ಪಂಚ ವಿಂಶತಿ ಕಲಶ ಸ್ಥಾಪನೆ, ಅಧಿವಾಸ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ಜ.24 ರಂದು ರಾತ್ರಿ 8 ಗಂಟೆಗೆ ‘ಗೆಂಡಸೇವೆ’ ಮತ್ತು ಸೇವಾ ಕರ್ತರಿಂದ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಮತ್ತು ಕೋಲ ಸೇವೆ ನಡೆಯಲಿದೆ.

ಜ.25 ರಂದು ಮಧ್ಯಾಹ್ನ ಹರಕೆಯ ರೂಪದಲ್ಲಿ ‘ತುಲಾಭಾರ ಸೇವೆ’ ಹಾಗೂ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಜ.21ರಂದು ಹ್ಯಾಗೂಳಿ, ಪಂಜುರ್ಲಿ ದೈವಗಳಿಗೆ ಸಮರ್ಪಣೆ ಮಾಡಲಿರುವ ಚಿನ್ನದ ಮುಖವಾಡದ ಮೆರವಣಿಗೆ ಜರಗಿತ್ತು.
ಕುತ್ಯಾರು : ಶ್ರೀ ರಾಮಾಯಣ ಕಥಾ ಮಾಲಿಕೆ ಸಮಾರೋಪ

Posted On: 23-01-2024 06:12PM
ಕುತ್ಯಾರು : ಆನೆಗೊಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು ಇಲ್ಲಿ ಜನವರಿ 10 ರಿಂದ 23ರವರೆಗೆ ರಾಮಾಯಣದ ಏಳು ಕಾಂಡಗಳ ಕಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಶ್ರೀ ರಾಮಾಯಣ ಕಥಾ ಮಾಲಿಕೆಯನ್ನು ನಡೆಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಕಥಾ ನಿರೂಪಣೆ ಮಾಡಿದ ಪಾಂಡುರಂಗ ಶಾನುಬಾಗ್ ಇವರನ್ನು ಆಡಳಿತ ಮಂಡಳಿ ಉಪಾಧ್ಯಕ್ಷ ವಿವೇಕ ಆಚಾರ್ಯ ಮಂಚಕಲ್ ಮತ್ತು ಶಾಲಾ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಗೌರವಿಸಿದರು.
ಶಿಕ್ಷಕ ವೃಂದದವರು ಮತ್ತು ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸತೀಶ್ ಕುತ್ಯಾರು ಸ್ವಾಗತಿಸಿ ಸಂಸ್ಥೆಯ ಪ್ರಾಂಶುಪಾಲರಾದ ಸಂಗೀತ ರಾವ್ ವಂದಿಸಿದರು.
ಅಯೋದ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ : ಕಾಪು ಮಾರಿಯಮ್ಮ ಸನ್ನಿದಾನದಲ್ಲಿ ವಿಶೇಷ ಪೂಜೆ

Posted On: 23-01-2024 05:36PM
ಕಾಪು : ಪ್ರಭು ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆ ಸಂದರ್ಭ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಾಪು ಶ್ರೀ ಮಾರಿಯಮ್ಮ ದೇವಸ್ಥಾನ (ಶ್ರೀ ಹೊಸ ಮಾರಿಗುಡಿ ದೇವಸ್ಥಾನ) ಇಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ ಉಪಸ್ಥಿತಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಬೈದಶ್ರೀ ಭಜನಾ ತಂಡ ಬಡಾ ಎರ್ಮಾಳು ಇವರಿಂದ ಭಜನಾ ಸಂಕೀರ್ತನೆ ನಡೆಯಿತು.

ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ರವೀಂದ್ರ ಎಮ್, ಬಾಬು ಮಲ್ಲಾರ್, ಶೈಲಜಾ ಪುರುಷೋತ್ತಮ್, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ : ಶ್ರೀ ವೆಂಕಟರಮಣ ದೇವಳ - ವಿವಿಧ ಧಾರ್ಮಿಕ ಕಾರ್ಯ ; ನಗರ ಸಂಕೀರ್ತನೆ

Posted On: 22-01-2024 10:25PM
ಪಡುಬಿದ್ರಿ : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ಅಯೋಧ್ಯಾ ಮಂದಿರ ಉದ್ಘಾಟನಾ ಉತ್ಸವ ಪ್ರಯುಕ್ತ ಜರಗಿದ ಶ್ರೀ ರಾಮೋತ್ಸವ - ರಾಮನಾಮ ತಾರಕ ಹವನ, ಉತ್ಸವ ಭಜನೆ ಪ್ರಾಥ:ಕಾಲದಿಂದಲೇ ಪ್ರಾರಂಭವಾಗಿ ಸಂಪನ್ನಗೊಂಡಿತು.
ಸಾಯಂಕಾಲ ದೇವಳದಿಂದ ರಾಮನ ಪಲ್ಲಕ್ಕಿಯೊಂದಿಗೆ ನಗರ ಸಂಕೀರ್ತನೆ ಜರಗಿತು. ಈ ಕಾರ್ಯದಲ್ಲಿ ನೂರಾರು ಭಜಕರು, ದೇವಳದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಉಡುಪಿ : ಅಯೋಧ್ಯೆ ಶ್ರೀ ರಾಮ ಪ್ರತಿಷ್ಟಾ ಕಾಯ೯ - ಉಚಿತ ವೈದ್ಯಕೀಯ ಶಿಬಿರ

Posted On: 22-01-2024 10:09PM
ಉಡುಪಿ : ಅಯೋಧ್ಯೆ ಶ್ರೀ ರಾಮ ಪ್ರತಿಷ್ಟಾ ಕಾಯ೯ದ ನಿಮಿತ್ತ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಭಾರತೀಯ ಜನ್ ಔಷಧಿ ಕೇಂದ್ರದ ವತಿಯಿಂದ ಸೋಮವಾರ ಉಚಿತ ವೈದ್ಯಕೀಯ ಶಿಬಿರ ಜನ ಔಷಧಿ ಕೇಂದ್ರದ ವಠಾರದಲ್ಲಿ ನಡೆಯಿತು.
ಕಾಯ೯ಕ್ರಮದಲ್ಲಿ ಲೋoಬಾಡ್೯ ಮೆಮೋರಿಯಲ್ ಆಸ್ಪತ್ರೆ (ಮಿಷನ್) ಇದರ ವೈದ್ಯಾಧಿಕಾರಿ ಡಾ| ಗಣೇಶ್ ಕಾಮತ್, ಮತ್ತು ಇತರ ವೈದ್ಯರು ಭಾಗವಹಿಸಿದ್ದರು.
ಮಾಹೆ ಮಣಿಪಾಲದ ಡಾI ಸವಿತಾ ಬಾಸ್ರಿ, ಡಾI ಆದಿತ್ಯ ಶೆಟ್ವಿ, ಡಾ| ಶ್ರೀಧರ ಡಿ, ಡಾ| ಅಂಕಿತಾ ಶೆಟ್ಟಿ ಮಾಹಿತಿ ನೀಡಿದರು.
ಜಯಂಟ್ಸ್ ಪದಾಧಿಕಾರಿಗಳಾದ ಸುಂದರ ಪೂಜಾರಿ, ವಿವೇಕಾನಂದ ಕಾಮತ್, ಶ್ರೀನಾಥ್, ವೈದ್ಯಕೀಯ ಪ್ರತಿನಿಧಿ ಸಂಘದ ಕಾಯ೯ದಶಿ೯ ಪ್ರಸನ್ನ ಕಾರಂತ, ಮಿಲ್ಟನ್, ಅಣ್ಣಯ್ಯದಾಸ್, ರೋಹಿ ರತ್ನಾಕರ ಉಪಸ್ಥಿತರಿದ್ದರು.
ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ - ವಿಶೇಷ ಪೂಜಾ ಕಾರ್ಯಕ್ರಮ

Posted On: 22-01-2024 10:04PM
ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಇವರಿಂದ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಸಂಸ್ಥೆಯ ಪ್ರಮುಖರಾದ ಕಿರಣ್ ರಾಜ್ ಕರ್ಕೇರ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಟೀಮ್ ಮಾರುತಿ ಮೂಳೂರು - ಆಯ್ದ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳ ವಿತರಣೆ ; ದೀಪ ಸಂಭ್ರಮ

Posted On: 22-01-2024 10:00PM
ಕಾಪು : ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಪುಣ್ಯ ದಿನದಂದು ಟೀಮ್ ಮಾರುತಿ ಮೂಳೂರು ವತಿಯಿಂದ ಮೂಳೂರಿನ ಆಯ್ದ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳ ಜೊತೆಗೆ ಸಂಜೆ ದೀಪ ಬೆಳಗಿಸಿ ಸಂಭ್ರಮಿಸುವ ಸಲುವಾಗಿ ದೀಪದ ಎಣ್ಣೆ, ಹಣತೆ ವಿತರಿಸಿ, ದೀಪ ಬೆಳಗಿಸಿ ಸಂಭ್ರಮಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಪ್ರಹಾರ್, ಉಪಾಧ್ಯಕ್ಷರಾದ ಜಯೇಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಗಗನ್ ಮೆಂಡನ್, ಗೌರವ ಸಲಹೆಗಾರರು ಧೀರೇಶ್ ಡಿ ಪಿ, ಕೋಶಾಧಿಕಾರಿ ಹವ್ಯಾಸ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಆಕಾಶ್ ಪೂಜಾರಿ, ಸದಸ್ಯರದ ಪವನ್, ಆವೀಶ್ , ಸುಮನ್ ಶೆಟ್ಟಿ, ವರುಣ್ ಕುಲಾಲ್ ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು.
ಶಿವಾಯ ಫೌಂಡೇಶನ್ ಮುಂಬಯಿ : ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರ ಭೇಟಿ

Posted On: 22-01-2024 09:51PM
ಉಡುಪಿ : ಶಿವಾಯ ಫೌಂಡೇಶನ್ (ರಿ.) ಮುಂಬಯಿ ವತಿಯಿಂದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಗವಾನ್ ಶ್ರೀ ರಾಮನ ಪ್ರತಿಷ್ಠಾಪನೆ ಅಂಗವಾಗಿ ಉಪ್ಪೂರಿನ ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅನ್ನದಾನ ದ ಸೇವೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ, ಪೂರ್ವ ಸಹಾಯಕ ಗರ್ವನರ್ ಗಣೇಶ್ ಅಚಾರ್ಯ ಉಚ್ಚಿಲ, ಶಿವಾನಿ ಫೌಂಡೇಶನ್ ಸಂಸ್ಥೆ ಸದಸ್ಯರಾದ ರವಿ ಶೆಟ್ಟಿ ಶಾರದೆ, ಜಗನ್ನಾಥ ಶೆಟ್ಟಿ ಪಾದೆಬೆಟ್ಟು, ಪ್ರಜ್ವಲ್ ಶೆಟ್ಟಿ, ಸಂಸ್ಥೆಯ ಹಿತೈಷಿಗಳಾದ ಸುಧಾಕರ್ ಕೆ., ಸಂತೋಷ್ ನಂಬಿಯಾರ್, ನವೀನ್ ಪೂಜಾರಿ, ಸ್ಪಂದನ ಸಂಸ್ಥೆ ಸಂಚಾಲಕ ಜರ್ನಾಧನ್ ಎನ್. ಉಪಸ್ಥಿತರಿದ್ದರು.
ಕಟಪಾಡಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಿಳಾ ಘಟಕದ ಸಭೆ

Posted On: 21-01-2024 06:31PM
ಕಟಪಾಡಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಉಡುಪಿ ಜಿಲ್ಲೆ ಇದರ ಮಹಿಳಾ ಘಟಕದ ಸಭೆಯು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಜರಗಿತು.
ಇದೇ ಸಂದರ್ಭ ಮಾರ್ಚ್ 10ರಂದು ನಡೆಯಲಿರುವ ಬೆಳ್ಳಿ ಹಬ್ಬ ಸಂಭ್ರಮ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ಬಿಡುಗಡೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ ಮಹಾಮಂಡಲದ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾಂಜಲಿ ಸುವರ್ಣ ವಹಿಸಿದ್ದರು.
ಈ ಸಂದರ್ಭ ಬಿಲ್ಲವ ಮುಖಂಡರಾದ ಸತ್ಯಜಿತ್ ಸುರತ್ಕಲ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ, ಸದಸ್ಯ ಗಣೇಶ್ ಮೂಡುಪೆರಾರೆ, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮ ರತ್ನಾಕರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್‌ಕುಮಾರ್ ಬಹರೈನ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷ ಆನಂದ ಮಾಬಿಯಾನ್, ಶ್ರೀ ನಾರಾಯಣಗುರು ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹರಿಶ್ಚಂದ್ರ ಅಮೀನ್, ಬಿಲ್ಲವ ಪರಿಷತ್ ಮಾಜಿ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಸಮಾಜದ ಇತರ ಗಣ್ಯರು ಉಪಸ್ಥಿತರಿದ್ದರು.
ಕಾಪು : ಇನ್ನಂಜೆಯಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆಯ ನೋಂದಣಿ ಅಭಿಯಾನಕ್ಕೆ ಚಾಲನೆ

Posted On: 21-01-2024 06:16PM
ಕಾಪು : ಪಿ.ಎಂ. ವಿಶ್ವಕರ್ಮ ಯೋಜನೆಯ ನೋಂದಣಿ ಅಭಿಯಾನವು ಇನ್ನಂಜೆ ಗ್ರಾ. ಪಂ. ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅಭಿಯಾನ ಉದ್ಘಾಟಿಸಿದ ಇನ್ನಂಜೆ ಗ್ರಾ. ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಮಾತನಾಡಿ, ಪಿ. ಎಂ. ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ಕೆಲಸ ಮಾಡುವ ಅರ್ಹರೆಲ್ಲರೂ ನೋಂದಾವಣೆ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು. ತಾವು ಮಾಡುವ ಉದ್ಯಮ ಅಭಿವೃದ್ಧಿ ಪಡಿಸಲು ಬ್ಯಾಂಕಿನಲ್ಲಿಶೇ. 5 ಬಡ್ಡಿದರದಲ್ಲಿ ಸಾಲ ಸೌಲಭ್ಯ, ತಮ್ಮ ವೃತ್ತಿಯ ಉಪಕರಣ ಖರೀದಿಸಲು ಸಹಾಯಧನ, 5 ದಿನಗಳ ತರಬೇತಿಗೆ 500ರೂ. ಸಹಾಯಧನ ಸಿಗುತ್ತಿದ್ದು ಗ್ರಾಮಸ್ಥರು ಯೋಜನೆಯ ಉಪಯೋಗ ಪಡೆದು ಆರ್ಥಿಕ ಸಬಲೀಕರಣ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಇನ್ನಂಜೆ ಗ್ರಾ.ಪಂ. ಉಪಾಧ್ಯಕ್ಷೆ ಸುರೇಖ ಶೆಟ್ಟಿ, ಮಾಧ್ಯಮ ವರದಿಗಾರ ವಿಕ್ಕಿ ಪೂಜಾರಿ, ಬ್ಯಾಂಕ್ ಆಫ್ ಬರೋಡ ಇನ್ನಂಜೆ ಶಾಖೆಯ ಮೆನೇಜರ್ ನೇಹಾ ಮೆಂಡೋನ್ಸ, ರಾಜೇಶ್ವರಿ ಸ್ವಸಹಾಯ ಒಕ್ಕೂಟದ ಅಧ್ಯಕ್ಷೆ ಸುಗುಣ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಅಶ್ಮಿತಾ, ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಪಂಚಾಯತ್ ಸಿಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಇನ್ನಂಜೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್ ಸ್ವಾಗತಿಸಿ, ನಿರೂಪಿಸಿದರು. ಪಂಚಾಯತ್ ಬಿಲ್ ಕಲೆಕ್ಟರ್ ಹರೀಶ್ ವಂದಿಸಿದರು.