Updated News From Kaup
ಕಾಪು ಹೊಸ ಮಾರಿಗುಡಿ ದೇವಳದಲ್ಲಿ ನವ ಜ್ಯೋತಿ ಬೆಳಗಿದ ಪೇಜಾವರ ಶ್ರೀಗಳು
Posted On: 17 Mar 2024, 02:14 PM
ಕಾಪು : ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆ ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆ ಮತ್ತು 48 ದಿನಗಳ ಮಂಡಲೋತ್ಸವವನ್ನು ಮುಗಿಸಿ ಭಾನುವಾರ ಇಳಕಲ್ಲ್ ಶಿಲೆಯಿಂದ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಮಾರಿಯಮ್ಮನ ಸನ್ನಿಧಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದರು. ಈ ಸಂದರ್ಭ ಮಾರಿಯಮ್ಮನ ಸನ್ನಿದಾನದಲ್ಲಿ ನವ ದೀಪಗಳನ್ನು ಬೆಳಗಿಸಿ ನಂತರ ದೇವಳದ ನವದುರ್ಗಾ ಮಂಟಪದಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಉಡುಪಿಗೆ ತೆರಳುತ್ತಿರುವ ಸಂದರ್ಭ ಕಾಪು ಮಾರಿಯಮ್ಮನ ದರುಶನ ಮಾಡಿದೆವು, ಜೀರ್ಣೋದ್ಧಾರ ಕೆಲಸಗಳು ಕಾಲಕ್ಕೆ ಅನುಗುಣವಾಗಿ ಆ ಮಹಾತಾಯಿ ಮತ್ತು ಪ್ರಭು ಶ್ರೀ ರಾಮಚಂದ್ರ ಹಾಗೂ ಉಡುಪಿ ಶ್ರೀ ಕೃಷ್ಣನ ದಯೆಯಿಂದ ನಿರ್ವಿಘ್ನವಾಗಿ ಮತ್ತು ಸಾಂಗವಾಗಿ ನೆರವೇರಬೇಕು, ತಾಯಿಯ ಅನುಗ್ರಹ ಲೋಕದ ಸಮಸ್ತ ಜನರ ಮೇಲಿರಲಿ ಎಂದು ಹೇಳಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ, ಕಾರ್ಯಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ, ಗೌರವಾದ್ಯಕ್ಷರಾದ ಲಾಲಾಜಿ ಆರ್. ಮೆಂಡನ್, ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಮುಂಬೈ ಸಮಿತಿಯ ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ "ಕೃಷ್ಣ ಪ್ಯಾಲೇಸ್", ಕಟ್ಟಡ ಸಮಿತಿಯ ಪ್ರಧಾನ ಸಂಚಾಲಕರಾದ ಭಗವಾನ್ ದಾಸ್ ಶೆಟ್ಟಿಗಾರ್, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರಮೇಶ್ ಶೆಟ್ಟಿ ಕಾಪು ಕೊಲ್ಯ, ದಾನಿಗಳಾದ ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸಂಚಾಲಕರುಗಳಾದ ಚಂದ್ರಶೇಖರ್ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಮ್, ಬಾಬು ಮಲ್ಲಾರ್, ಕಾಪು ಜಿ. ಎಸ್. ಬಿ ಸಮಾಜ ಭಾಂದವರು, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಶಿಲ್ಪಾ ಜಿ. ಸುವರ್ಣ,ಪ್ರಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಮನೋಹರ್ ರಾವ್ ಕಲ್ಯಾ, ಲಕ್ಷ್ಮೀಶ ತಂತ್ರಿ, ರವಿ ಭಟ್ ಮಂದಾರ, ಲಕ್ಷ್ಮೀ ನಾರಾಯಣ ತಂತ್ರಿ, ಸಿದ್ದಿಧಾತ್ರಿ ತಂಡದ ಸಂಚಾಲಕರುಗಳಾದ ಶ್ರೀಧರ ಕಾಂಚನ್, ಸುಲೋಚನ ಕೆ. ಸುವರ್ಣ, ಜಗದೀಶ್ ಮೆಂಡನ್, ಮಮತಾ ಕುಶ ಸಾಲ್ಯಾನ್, ಕಲಾವತಿ ಪುತ್ರನ್,ಗೀತಾರಾಜ್, ಉಷಾ ಕೆ. ಪುತ್ರನ್,ದಿವಾಕರ ಶೆಟ್ಟಿ ಮಲ್ಲಾರ್, ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್, ಸಿಬ್ಬಂದಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
ಹೆಜಮಾಡಿ : ಅಯೋಧ್ಯೆಯಿಂದ ಆಗಮಿಸಿದ ಪೇಜಾವರ ಶ್ರೀಗಳಿಗೆ ಭವ್ಯ ಸ್ವಾಗತ
Posted On: 17 Mar 2024, 11:08 AM
ಹೆಜಮಾಡಿ : ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಉಡುಪಿಗೆ ಮರಳುತ್ತಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಹೆಜಮಾಡಿ ಟೋಲ್ ಬಳಿ ಸ್ವಾಗತಿಸಲಾಯಿತು. ಈ ಸಂದರ್ಭ ಹೆಜಮಾಡಿ ಟೋಲ್ ಗೇಟ್ ಬಳಿಯಿಂದ ಶ್ರೀಗಳು ಕಾಪು ಹೊಸ ಮಾರಿಗುಡಿಗೆ ತೆರಳಿದರು. ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಪಕ್ಷದ ಪ್ರಮುಖರು, ಶ್ರೀಗಳ ಅನುಯಾಯಿಗಳು ಮತ್ತಿತರರು ಉಪಸ್ಥಿತರಿದ್ದರು.
ಶಂಕರಪುರ : ಶ್ರೀ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ - ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ ಸಂಪನ್ನ
Posted On: 16 Mar 2024, 06:09 PM
ಕಟಪಾಡಿ : ಶ್ರೀ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶ್ರೀ ಕ್ಷೇತ್ರ ಶಂಕರಪುರ ಇದರ ವತಿಯಿಂದ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ ಕಾರ್ಯಕ್ರಮ ಮಾರ್ಚ್ 16ರಂದು ದೇವಾಲಯದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮೋಕ್ಷಕಟ್ಟೆಯಲ್ಲಿ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದ ಶ್ರೀ ಸಾಯಿ ಈಶ್ವರ ಗುರೂಜಿ ಮುಂದಿನ ದಿನಗಳಲ್ಲಿ ಪ್ರಾಣಿ-ಪಕ್ಷಿಗಳ ಮೋಕ್ಷ ದಿನಾಚರಣೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ದಿನಕ್ಕೆ ಮಾನ್ಯತೆ ದೊರೆಯುವಂತೆ ಸಂತ ಸಮಿತಿಯ ವತಿಯಿಂದ ಲೋಕಸಭಾ ಸದಸ್ಯರ ನೆರವಿನೊಂದಿಗೆ ಪ್ರಧಾನಿಗಳೊಂದಿಗೆ ಈ ಕುರಿತು ಚರ್ಚಿಸುವ ಉದ್ದೇಶವಿದೆ ಎಂದು ತಿಳಿಸಿದರು. ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಕೂಡ ಆತ್ಮವಿದೆ ಈ ಆತ್ಮಕ್ಕೆ ಅವುಗಳು ಸತ್ತ ಬಳಿಕ ಮೋಕ್ಷ ದೊರಕುವ ನಿಟ್ಟಿನಲ್ಲಿ ಈ ರೀತಿಯ ವಿಭಿನ್ನವಾದ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಸ್ತೆ ಬದಿಯಲ್ಲಿ ಸತ್ತ ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡುವ ಕಾಯಕವನ್ನು ಮಾಡುತ್ತಿರುವ ಅಜಯ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಸಾಮಾಜಿಕ ಮುಂದಾಳು ಸತೀಶ್ ವೇಣೂರು, ಮಹಿಳಾ ಸಂಚಾಲಕಿ ವಾರಿಜಾ ಕಲ್ಮಾಡಿ, ವಿಜಯ್ ಕುಂದರ್, ಸತೀಶ್ ದೇವಾಡಿಗ,ವಿಘ್ನೇಶ್, ಸುಪ್ರೀತಾ, ಲಕ್ಷ್ಮಿ, ನೀಲೇಶ್ ಪ್ರದೀಪ್ ಮುಂತಾದವರಿದ್ದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು. ಈ ಸಂದರ್ಭದಲ್ಲಿ ಮೋಕ್ಷ ಕಟ್ಟೆಯಲ್ಲಿ ಅಭಿಷೇಕ ನೆರವೇರಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ತಾರನಾಥ್ ಗಟ್ಟಿ ಕಾಪಿಕಾಡ್ ಆಯ್ಕೆ
Posted On: 16 Mar 2024, 05:55 PM
ಮಂಗಳೂರು :ತುಳು ಅಕಾಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ತಾರನಾಥ್ ಗಟ್ಟಿ ಕಾಪಿಕಾಡ್ ಅವರನ್ನು ನೇಮಕ ಮಾಡಲಾಗಿದೆ. ತುಳು ಅಕಾಡೆಮಿಯ ಸದಸ್ಯರಾಗಿ ಪೃಥ್ವಿರಾಜ್, ಕುಂಬ್ರ ದುರ್ಗಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್. ಶೆಟ್ಟಿ, ಶೈಲೇಶ್ ಬಿನ್ ಭೋಜ ಸುವರ್ಣ, ಕಿಶೋರ್ ಬಿನ್ ಗುಡ್ಡಪ್ಪ ಗೌಡ, ಬೂಬ ಪೂಜಾರಿ, ರೋಹಿತಾಶ್ವ ಯು. ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್ ಶೆಟ್ಟಿ ನೇಮಕಗೊಂಡಿದ್ದಾರೆ.
ಮಾರ್ಚ್ 17(ನಾಳೆ): ಪೈಯಾರು ಶ್ರೀ ಮಲೆ ಧೂಮಾವತಿ ದೈವಸ್ಥಾನದಲ್ಲಿ ವಾರ್ಷಿಕ ಮಂಜ
Posted On: 16 Mar 2024, 01:35 PM
ಕುತ್ಯಾರು : ಇಲ್ಲಿನ ಪೈಯಾರು ಶ್ರೀ ಮಲೆ ಧೂಮಾವತಿ ದೈವಸ್ಥಾನದಲ್ಲಿ ವಾರ್ಷಿಕ ಮಂಜ (ಭೋಗ) ಮಾರ್ಚ್ 17, ಭಾನುವಾರ ರಾತ್ರಿ ಅನ್ನದಾನದೊಂದಿಗೆ ನಡೆಯಲಿದೆ. ಭಕ್ತಾಭಿಮಾನಿಗಳು ಆಗಮಿಸಿ, ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿರುವರು.
ಮಾ. 16-17 : ನಿರಂತರ್ ಉದ್ಯಾವರ - ಕೊಂಕಣಿ ನಾಟಕ ; ಕತ್ತಲಹಾಡು ಕಾರ್ಯಕ್ರಮ
Posted On: 15 Mar 2024, 05:35 PM
ಉದ್ಯಾವರ : ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ ನಿರಂತರ್ ಉದ್ಯಾವರದ ನೇತೃತ್ವದಲ್ಲಿ ಎರಡು ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಮಾರ್ಚ್ 16 ಮತ್ತು 17ರಂದು ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಠಾರದಲ್ಲಿ ಸಂಜೆ ಗಂಟೆ 6:30ಕ್ಕೆ ಸರಿಯಾಗಿ ನಡೆಯಲಿದೆ. ಮಾರ್ಚ್ 16ರಂದು ಮಂಗಳೂರಿನ ಅಸ್ತಿತ್ವ (ರಿ) ಇವರಿಂದ ವo.ಫಾ. ಆಲ್ವಿನ್ ಸೆರಾವೊ ಬರೆದಂತಹ ಕೊಂಕಣಿ ನಾಟಕ 'ಹಿಮ್ಟೊ' ಮತ್ತು ಮಾರ್ಚ್ 17 ಆದಿತ್ಯವಾರದಂದು ಪ್ರಖ್ಯಾತ ನಾದ ಮಣಿನಾಲ್ಕೂರು ಇವರಿಂದ 'ಕತ್ತಲ ಹಾಡು' ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೆಯ ಅಧ್ಯಕ್ಷ ರೋಶನ್ ಕ್ರಾಸ್ಟೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಸಂಪರ್ಕ ಸಾಧನ ಆಯೋಗ, ಐಸಿವೈಎಂ ಉದ್ಯಾವರ, ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಸೌಹಾರ್ದ ಸಮಿತಿ ಉದ್ಯಾವರ ಸಹಭಾಗಿತ್ವದಲ್ಲಿ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಕರ್ನಾಟಕ ರಾಜ್ಯದ ಪ್ರಥಮ ಲಿಂಗತ್ವ ಅಲ್ಪಸಂಖ್ಯಾತ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಾಚ್೯ 16: ಶ್ರೀ ಕ್ಷೇತ್ರ ಶಂಕರಪುರದ ಆವರಣದಲ್ಲಿ ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ
Posted On: 15 Mar 2024, 05:28 PM
ಶಂಕರಪುರ : ಶ್ರೀ ಸಾಯಿ ಈಶ್ವರ್ ಗುರೂಜಿರವರ ಪುಣ್ಯ ಮಹಾ ಸಂಕಲ್ಪದಂತೆ ಪ್ರತಿ ವರ್ಷ ಮಾರ್ಚ್ 16 ರಂದು ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ ಆಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಶಂಕರಪುರದ ಆವರಣದಲ್ಲಿ ಇರುವ ಪ್ರಾಣಿ ಪಕ್ಷಿ ಮೋಕ್ಷ ಕಟ್ಟೆಗೆ ನೀರು/ಹಾಲೆರೆದು ಗಂಟೆ ಕಟ್ಟಬಹುದು. ನಾವು ಸಾಕಿ ಬೆಳೆಸಿದ ಪ್ರಾಣಿ ಪಕ್ಷಿಗಳು ಮೃತಪಟ್ಟಿದ್ದರೆ ಅವುಗಳ ನೆನಪು ಸದ್ಗತಿ-ಮೋಕ್ಷಕ್ಕಾಗಿ ಪ್ರಾರ್ಥಿಸಲು ಅವಕಾಶವಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಧಾರ್ಮಿಕ ಪರಿಷತ್ ಸದಸ್ಯರಾಗಿ ಸದಾನಂದ ಪೂಜಾರಿ ಆಯ್ಕೆ
Posted On: 15 Mar 2024, 05:24 PM
ಕಾಪು : ಕರ್ನಾಟಕ ಸರ್ಕಾರದ ಆದೇಶದಂತೆ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಸದಾನಂದ ಪೂಜಾರಿ ಆಯ್ಕೆಗೊಂಡಿರುತ್ತಾರೆ.
ಬೆಳಪು ಸ್ಪೋರ್ಟ್ಸ್ ಕ್ಲಬ್ : 30 ನೇ ವರ್ಷದ ಸಂಭ್ರಮ
Posted On: 14 Mar 2024, 10:06 AM
ಬೆಳಪು : ಇಲ್ಲಿನ ಸ್ಪೋರ್ಟ್ಸ್ ಕ್ಲಬ್ ಇದರ 30ನೇ ವರ್ಷದ ಸಂಭ್ರಮದ ಅಂಗವಾಗಿ 2024ನೇ ಸಾಲಿನ ಸಾಮಾಜಿಕ ಕಾರ್ಯಚಟುವಟಿಕೆಯ ಭಾಗವಾಗಿ ಬೆಳಪು ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಘಟಕ ಮತ್ತು ಕಪಾಟನ್ನು ಹಸ್ತಾಂತರಿಸಲಾಯಿತು. ಬೆಳಪು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರು ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಬೆಳಪು ಸ್ಪೋರ್ಟ್ಸ್ ಕ್ಲಬ್ ನಿರಂತರವಾಗಿ ಸಾಮಾಜಿಕ, ಶಿಕ್ಷಣ, ಕ್ರೀಡೆಗಳಿಗೆ ಮಹತ್ವವನ್ನು ನೀಡುತ್ತಾ ಬಂದಿದೆ. ಮುಂದೆಯೂ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು. ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ಶಾನಾವಾಝ್ ಫಝಲುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಶಾಹೀದ್ ನವಾಜ್, ಕಾರ್ಯದರ್ಶಿ ರಿಯಾನ್ ಅನ್ಸಾರ್, ಜೊತೆ ಕಾರ್ಯದರ್ಶಿ ಸಕ್ಲೆನ್ ಅಹಮ್ಮದ್, ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಹಿರಿಯ ಸದಸ್ಯರುಗಳಾದ ಅಲ್ತಾಫ್ ಅಬ್ದುಲ್ ಘನಿ, ಸಹೀದ್ ಅಹ್ಮದ್, ಅಕ್ರಮ್ ಮಹತಾಬ್ ಉಪಸ್ಥಿತರಿದ್ದರು. ಅಂಗನವಾಡಿಯ ಶಿಕ್ಷಕಿಯರಾದ ಪ್ರಿಯ, ಆಶಾಲತಾ ಭಾಗವಹಿಸಿದ್ದರು. ಖಾಲಿದ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.
ಈದು : ಸಾಮೂಹಿಕ ಶನೈಶ್ಚರ ಪೂಜೆ, ಕುಣಿತ ಭಜನಾ ಕಾರ್ಯಕ್ರಮ, ಹಿಂದೂ ಧರ್ಮ ಜಾಗೃತಿ ಸಭೆ
Posted On: 12 Mar 2024, 09:53 PM
ಕಾರ್ಕಳ : ಶ್ರೀ ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ ಈದು, ಹಿಂದೂ ಜಾಗರಣ ವೇದಿಕೆ, ಹಿಂದೂ ಮಹಿಳಾ ಜಾಗರಣ, ಭಗತ್ ಸಿಂಗ್ ಘಟಕ ಈದು ಇದರ ಆಶ್ರಯದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ, ಕುಣಿತ ಭಜನಾ ಕಾರ್ಯಕ್ರಮ ಮತ್ತು ಹಿಂದೂ ಧರ್ಮ ಜಾಗೃತಿ ಸಭೆ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಶ್ರೀ ಗುರುದೇವ ದತ್ತ ಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರುರವರು ಆಶೀರ್ವಚನಗೈದರು. ಉಪನ್ಯಾಸಕರೂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗದ ಪ್ರಮುಖ್ ಆಗಿರುವ ಕೇಶವ ಬಂಗೇರ ಪ್ರಧಾನ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಮಾಲಕರ ಸಂಘ ಹಾಗೂ ಈದು ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ.ರವೀಂದ್ರ ಶೆಟ್ಟಿ ಬಜಗೋಳಿಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ಸಂಚಾಲಕರಾದ ಗುರುಪ್ರಸಾದ್ ನಾರಾವಿ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಭಜನಾ ತರಬೇತುದಾರ ಅಶೋಕ್ ಕಳಸಬೈಲು, ಜೈ ತುಳುನಾಡು ವೇದಿಕೆಯ ಅಧ್ಯಕ್ಷರಾದ ವಿಶು ಶ್ರೀಕೇರ, ವಸಂತ ಪಡ್ಡಾಯಿ ಪಾಪು, ಎಸ್ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಸುದರ್ಶನ್, ಈದು ಮೂಕಾಂಬಿಕಾ ಯುವಕ ಸಂಘದ ಅಧ್ಯಕ್ಷರಾದ ಯೋಗೀಶ್ ಪೂಜಾರಿ, ಈದು ಹಿಂದೂ ಜಾಗರಣ ವೇದಿಕೆ ಭಗತ್ ಸಿಂಗ್ ಘಟಕದ ಅಧ್ಯಕ್ಷರಾದ ಪ್ರಸಾದ್ ಶರ್ಮ, ಈದು ಮಹಿಳಾ ಜಾಗರಣ ವೇದಿಕೆ ಘಟಕದ ಅಧ್ಯಕ್ಷೆ ಪ್ರೇಮಾ, ಹಿಂದೂ ಮಹಿಳಾ ಜಾಗರಣ ವೇದಿಕೆ ಭಗತ್ ಸಿಂಗ್ ಘಟಕ ಈದು ಇದರ ಸಹಸಂಚಾಲಕರಾದ ಲಾವಣ್ಯ ಈದು ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಭಜನಾ ತರಬೇತುದಾರ ದೀನ್ ರಾಜ್ ಕಳವಾರ್ ಉಪಸ್ಥಿತರಿದ್ದರು.
