Updated News From Kaup
ಪಡುಬಿದ್ರಿ ರೋಟರಿ ಕ್ಲಬ್ : ವರ್ಣ ವಿಹಾರ-2023

Posted On: 12-11-2023 03:38PM
ಪಡುಬಿದ್ರಿ : ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರ ಕಲೆಯ ಸವಿಯು ಸವಿದವನಿಗೆ ಗೊತ್ತು ಚಿತ್ರಕಲೆಯ ಬಗ್ಗೆ ತಿಳಿಯುವ ಮುನ್ನ ನಾವು ಕಲೆಯ ಬಗ್ಗೆ ಅರಿತು ಕೊಳ್ಳಲೇಬೇಕು. ಚಿತ್ರಕಲೆಯು ಮಗುವಿನ ಮಾನಸಿಕ ಬೆಳವಣಿಗೆಗೆ ಸ್ವಾಭಾವಿಕ ಸಾಧನ. ಪ್ರತಿಯೊಂದು ಮಗುವು ಶ್ರೇಷ್ಠ ಕಲಾವಿದ. ಪ್ರತಿಶತ ಶೇ.80 ರಷ್ಟು ಮಕ್ಕಳು ತಾವು ಇಷ್ಟ ಪಡುವ ಆಟಕ್ಕಿಂತಲು ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ಏಕಾಗ್ರತೆ ಹಾಗು ತಾಳ್ಮೆ ಇದ್ದರೆ ಎಷ್ಟೇ ಕಷ್ಟಕರವಾದ ಚಿತ್ರವನ್ನು ಬಿಡಿಸಬಹುದು" ಎಂದು ಖ್ಯಾತ ಚಿತ್ರ ಕಲಾವಿದ ಸೂರಾಜ್ ಮಂಗಳೂರು ನುಡಿದರು. ಅವರು ಪಡುಬಿದ್ರಿ ಸುಜಾತ ಆಡಿಟೋರಿಯಮ್ ನಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ ಇದರ ವತಿಯಿಂದ ನಡೆದ ವರ್ಣ ವಿಹಾರ-2023 ಉಡುಪಿ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾ.ಪಂ ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ ಮಾಲಕ ಅಬ್ದುಲ್ ಹಮೀದ್, ಸರಸ್ವತಿ ಮಂದಿರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಎಸ್ ಅಚಾರ್ಯ, ರೋಟರಿ ಪೂರ್ವ ಅಧ್ಯಕ್ಷ ಗಣೇಶ್ ಅಚಾರ್ಯ, ಹೇಮಲತಾ ಸುವರ್ಣ ಉಪಸ್ಥಿತರಿದ್ದರು.
ಸ್ಪರ್ಧಾ ವಿಜೇತರ ವಿವರ : 1ರಿಂದ 4 ತರಗತಿ ವಿಭಾಗ - ಎಮ್ .ರಾಝಿಕ್ (ಪ್ರಥಮ), ಜಯಕೃಷ ಎಲ್ ಬಂಗೇರ (ದ್ವಿತೀಯ) 5 ರಿಂದ 8 ನೇ ತರಗತಿ ವಿಭಾಗ - ಅನುಜ್ಞ (ಪ್ರಥಮ), ಅಮೀನಾ ಬಾನು (ದ್ವಿತೀಯ) 9 ರಿಂದ 12ನೇ ತರಗತಿ ವಿಭಾಗ - ಶುಭಾಶ್ರೀ (ಪ್ರಥಮ), ಸಮರ್ಥ ಜೋಶಿ (ದ್ವಿತೀಯ) ಸಾರ್ವಜನಿಕ ವಿಭಾಗ - ತಸ್ನೀನ್ ಅರಾ ಪಡುಬಿದ್ರಿ (ಪ್ರಥಮ), ಪ್ರತೀಕ್ ಶೆಟ್ಟಿ ಪಡುಬಿದ್ರಿ (ದ್ವಿತೀಯ)
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ವಹಿಸಿದ್ದರು. ಮಾಜಿ ತಾ.ಪಂ ಸದಸ್ಯ ನವೀನಚಂದ್ರ ಜೆ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ. ಉಪಾಧ್ಯಕ್ಷ ವೈ. ಸುಕುಮಾರ್, ಕನ್ನಡ ಚಲನಚಿತ್ರ ನಿರ್ಮಾಪಕ ಡಾ| ಸುರೇಶ್ ಕೋಟ್ಯಾನ್ ಚಿತ್ರಾಪು, ವಲಯ ಸೇನಾನಿ ರಿಯಾಜ್ ಮುದರಂಗಡಿ, ವಲಯ ಸಂಯೋಜಕ ರಮೀಜ್ ಹುಸೇನ್, ರೋಟರಿ ಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್, ಪಡುಬಿದ್ರಿ ಕೆನರಾ ಬ್ಯಾಂಕ್ ಪ್ರಬಂಧಕಿ ವಿಜಯ ಕಾಮತ್, ಚಲನಚಿತ್ರ ನಟಿ, ರೂಪದರ್ಶಿ ಕು.ತೃಪ್ತಿ, ಕಾರ್ಯಕ್ರಮ ನಿರ್ದೇಶಕ ರಾದ ಗಣೇಶ್ ಅಚಾರ್ಯ ಎರ್ಮಾಳ್, ತಸ್ನೀನ್ ಅರಾ, ಹೇಮಲತಾ ಸುವರ್ಣ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಬಿ.ಎಸ್. ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿದರು.
ಹೆಜಮಾಡಿ : ಕುಣಿತ ಭಜನಾ ತರಬೇತಿಗೆ ಚಾಲನೆ

Posted On: 12-11-2023 11:21AM
ಹೆಜಮಾಡಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದೆಬೆಟ್ಟುಶ್ರೀಧರ್ ಆಚಾರ್ಯ ಇವರ ನೇತೃತ್ವದಲ್ಲಿ ಕುಣಿತ ಭಜನಾ ತರಬೇತಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ದೇವಸ್ಥಾನದ ಅರ್ಚಕರು, ದಯಾನಂದ ಹೆಜಮಾಡಿ, ರಾಜಶೇಖರ್ ಹೆಜಮಾಡಿ, ಶ್ರೀನಿವಾಸ್ ಹೆಜಮಾಡಿ, ಮಹಿಳಾ ಬಳಗ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಬಂಟಕಲ್ಲು : ಕೆ ಆರ್ ಪಾಟ್ಕರ್ ರಿಂದ ರಚಿಸಲ್ಪಟ್ಟ ಕನ್ನಡದ ಗೂಡುದೀಪ

Posted On: 12-11-2023 11:15AM
ಬಂಟಕಲ್ಲು : ದೀಪಾವಳಿ ಸಂಭ್ರಮದಲ್ಲಿ ಗೂಡುದೀಪಕ್ಕೂ ಪಾಲಿದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ತಯಾರಿಸಿದ ಗೂಡುದೀಪಗಳು ರಾರಾಜಿಸಿದರೆ ಇಂದು ಅಂಗಡಿಗಳಲ್ಲಿ ತಯಾರಿಸಲ್ಪಟ್ಟ ಗೂಡುದೀಪಗಳು ಮನೆಯ ಎದುರಿಗೆ ರಾರಾಜಿಸುತ್ತಿದೆ.
ಆದರೆ ಇಲ್ಲೊಬ್ಬರು ಕನ್ನಡದ ಕಟ್ಟಾಳು, ಬಂಟಕಲ್ಲು ಗ್ರಾಮ ಪಂಚಾಯ್ ನ ಮಾಜಿ ಅಧ್ಯಕ್ಷ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಸಂಘಟನಾ ಕಾರ್ಯದರ್ಶಿ, ಇತ್ತೀಚೆಗೆ ನಡೆದ ೫ನೇ ಕಾಪು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ರೂಪಿಸಿದ ಸಮ್ಮೇಳನದ ಕಾರ್ಯಧ್ಯಕ್ಷರಾದ ಕೆ ಆರ್ ಪಾಟ್ಕರ್ ತಮ್ಮ ಮನೆಯಲ್ಲಿ ಕನ್ನಡದ ಗೂಡುದೀಪ ತಯಾರಿಸಿದ್ದಾರೆ. ಇದು ನೋಡುಗರಿಗೂ ಖುಷಿ ತಂದಿದೆ.
ವೀರವನಿತೆ ಒನಕೆ ಓಬವ್ವರಂತೆ ಸಮಯ ಪ್ರಜ್ಞೆ ಹಾಗೂ ಧೈರ್ಯ ಮನೋಭಾವವನ್ನು ರೂಢಿಸಿಕೊಳ್ಳಿ : ಡಾ. ಪ್ರತಿಭ ಆರ್.

Posted On: 11-11-2023 11:20PM
ಕಾಪು : ಇಲ್ಲಿನ ತಹಶಿಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಅವರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾಪು ತಾಲ್ಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್ ರವರು ಜ್ಯೋತಿ ಬೆಳಗಿಸಿ ವೀರವನಿತೆ ಓಬವ್ವನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅವರು ವೀರವನಿತೆ ಒನಕೆ ಓಬವ್ವ ಅವರ ಧೈರ್ಯ-ಸ್ಥೈರ್ಯಗಳನ್ನು ಶ್ಲಾಘಿಸಿದರು. ಆಕೆ ತನ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ಒಂದು ಸಾಮ್ರಾಜ್ಯದ ಉಳಿವಿಗೆ ಕಾರಣಳಾದಳು. ನಮ್ಮ ಹೆಣ್ಣುಮಕ್ಕಳು ಕೂಡಾ ಆಕೆಯಂತೆ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭ ಉಪ ತಹಶಿಲ್ದಾರ್ ಅಶೋಕ್ ಎನ್ ಕೋಟೆಕಾರ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾಪು : ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೋಡಿ - ಸ್ವರ್ಣ ಕವಚ ಸಮರ್ಪಣಾ ಕೂಪನ್ ಬಿಡುಗಡೆ

Posted On: 11-11-2023 11:02PM
ಕಾಪು : ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೋಡಿ ಕಾಪು ಪಡು ಇಲ್ಲಿಯ ಶ್ರೀ ಬ್ರಹ್ಮರ ಮೂರ್ತಿಗೆ ಹಾಗೂ ಕೋಟಿ ಚೆನ್ನಯ್ಯರ ಸುರಿಯಕ್ಕೆ ಸ್ವರ್ಣ ಕವಚ ಸಮರ್ಪಣಾ ಕೂಪನ್ ಬಿಡುಗಡೆ ನವೆಂಬರ್ 9ರಂದು ಶ್ರೀ ಬ್ರಹ್ಮ ಬೈದೇರುಗಳ ದಿವ್ಯ ಸನ್ನಿಧಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಗನ್ನಾಥ ಪೂಜಾರಿ ಅರ್ಚಕರು ಗರಡಿ ಮನೆ, ಸೇವಾ ಯುವ ಸಮಿತಿ ಕಾಪು ಇದರ ಗೌರವಾಧ್ಯಕ್ಷರು , ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಜರಿದ್ದರು.
ಕಾಪು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ದೀಪಾವಳಿ ಹಬ್ಬದ ಆಚರಣೆ

Posted On: 11-11-2023 10:26PM
ಕಾಪು : ಮಾಧ್ಯಮ ಕ್ಷೇತ್ರ ಇಂದು ಕ್ರಿಯಾಶೀಲವಾಗಿದೆ. ಸಮಾಜದ ಒಳಿತು ಕೆಡುಕುಗಳ ಬಗೆಗೆ ಬೆಳಕು ಚೆಲ್ಲುವ ಕಾರ್ಯ ಮಾಧ್ಯಮದ ಮೂಲಕ ಆಗಬೇಕಾಗಿದೆ. ಪತ್ರಕರ್ತರು ಅವರ ಕುಟುಂಬ ವರ್ಗದೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಖುಷಿಯ ವಿಷಯ. ದೀಪಾವಳಿಯು ನಮ್ಮಲ್ಲಿ ಸಂಭ್ರಮ ಉಂಟುಮಾಡಿ ಎಲ್ಲರಿಗೂ ಒಳಿತಾಗಲಿ ಎಂದು ಕಾಪು ತಹಶೀಲ್ದಾರರಾದ ಡಾ. ಪ್ರತಿಭ ಆರ್ ಶುಭ ಹಾರೈಸಿದರು. ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಸಂಜೆ ನಡೆದ ದೀಪಾವಳಿ ಹಬ್ಬದ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಹಿರಿಯ ಪತ್ರಕರ್ತರಾದ ಪುಂಡಲೀಕ ಮರಾಠೆ ದೀಪಾವಳಿಯ ಮಹತ್ವ ವಿವರಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಪತ್ರಕರ್ತರುಗಳಾದ ಶೇಖರ ಅಜೆಕಾರು, ಶಶಿಧರ್ ಹೆಮ್ಮಣ್ಣಗೆ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಹೆಜಮಾಡಿ ವಹಿಸಿದ್ದರು.
ಈ ಸಂದರ್ಭ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್, ಕೋಶಾಧಿಕಾರಿ ಹೇಮನಾಥ್ ಉಪಸ್ಥಿತರಿದ್ದರು. ಪತ್ರಕರ್ತ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜಮಾಡಿ ಸ್ವಾಗತಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ವಂದಿಸಿದರು.
ಮುಲ್ಕಿ : ಶಿವಾಯ ಫೌಂಡೇಶನ್ ಮುಂಬಯಿ ವತಿಯಿಂದ ಕುಟುಂಬವೊಂದಕ್ಕೆ ದೀಪಾವಳಿಗೆ ಹೊಸ ಬಟ್ಟೆ, ದಿನಸಿ ಹಸ್ತಾಂತರ

Posted On: 11-11-2023 09:49PM
ಮುಲ್ಕಿ : ಶಿವಾಯ ಫೌಂಡೇಶನ್ (ರಿ.) ಮುಂಬಯಿ ವತಿಯಿಂದ ಕಾರ್ನಾಡು ಅಮೃತಾಮಯಿ ನಗರ ನಿವಾಸಿ ಗೀತಾ ಅವರ ಮನೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಲಾಯಿತು.
ಕುಟುಂಬಕ್ಕೆ ದೀಪಾವಳಿ ಹಬ್ಬದ ಸಲುವಾಗಿ ಮಕ್ಕಳಿಗೆ ಹೊಸ ಬಟ್ಟೆ ಹಾಗೂ ದಿನಸಿ ಸಾಮಾನುಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ಗೌರವ ಸಲಹೆಗಾರರಾದ ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರಿ, ಸದಸ್ಯರಾದ ರವಿ ಶೆಟ್ಟಿ ಶಾರದೆ, ಜಗನ್ನಾಥ್ ಶೆಟ್ಟಿ ರಮಣಿ ಐಸ್ ಕ್ರೀಮ್ ಪಡುಬಿದ್ರಿ, ಸುಧಾಕರ್ ಕೆ ಪಡುಬಿದ್ರಿ, ಧೀರಜ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಗ್ರಾಹಕರ ಸೇವೆಗಾಗಿ ಹೋಟೆಲ್ ಮಯೂರ - ಲಾಡ್ಜಿಂಗ್ ಜೊತೆಗೆ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಇನ್ನಿತರ ಖಾದ್ಯಗಳು
Posted On: 11-11-2023 04:02PM
ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಲಾಡ್ಜಿಂಗ್ ಜೊತೆಗೆ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಇನ್ನಿತರ ಖಾದ್ಯಗಳನ್ನು ಉಣ ಬಡಿಸುತ್ತಿದೆ ಕಾಪುವಿನ ಹೋಟೆಲ್ ಮಯೂರ.
ಉತ್ತಮ ಗುಣಮಟ್ಟದ ಆಹಾರ ಮತ್ತು ರೂಮ್ಸ್ ಜೊತೆಗೆ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸಭಾಂಗಣ ಹಾಗೂ ಕ್ಯಾಟರಿಂಗ್ ವ್ಯವಸ್ಥೆಯನ್ನು ಕೂಡಾ ಒದಗಿಸುತ್ತಿದ್ದಾರೆ.
ಕಾಪು ಮಯೂರ ಹೋಟೆಲ್ ನಿಂದ 3 ಕಿ.ಮೀ ವ್ಯಾಪ್ತಿಯವರೆಗೆ ಫ್ರೀ ಹೋಮ್ ಡೆಲಿವರಿ ವ್ಯವಸ್ಥೆಯೂ ಇದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 72596 11190
ಕಾಪು : ಪಡುಬಿದ್ರಿ - ಕನ್ನಂಗಾರ್ ಬೈಪಾಸ್ ರಸ್ತೆ ಶೀಘ್ರ ಕಾಮಗಾರಿಗೆ ಹೋರಾಟ ಸಮಿತಿ ಆಗ್ರಹ

Posted On: 11-11-2023 12:37PM
ಕಾಪು : ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಸುಮಾರು 350 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಭರವಸೆ ನೀಡಿ 6 ವರ್ಷ ಸಂದರೂ ಈವರೆಗೆ ಸರ್ವಿಸ್ ರಸ್ತೆ ನಿರ್ಮಾಣಗೊಂಡಿಲ್ಲ. ಈ ಕಾರಣದಿಂದಾಗಿ ಈ ಭಾಗದಲ್ಲಿ 54 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 8 ಮಂದಿ ಯುವಜನತೆ ಪ್ರಾಣವನ್ನು ಕಳೆದುಕೊಂಡಿರುತ್ತಾರೆ. ಪಡುಬಿದ್ರಿ ಹಾಗೂ ಹೆಜಮಾಡಿಯಲ್ಲಿ ಸುಮಾರು ನಾಲ್ಕು ನೂರು ಅಟೋ-ರಿಕ್ಷಾಗಳಿದ್ದು, ಸಾರ್ವಜನಿಕರು ದ್ವಿಚಕ್ರ ವಾಹನ ಹಾಗೂ ಕಾರು, ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ರಾಣವನ್ನು ಒತ್ತೆ ಇಟ್ಟು ಭಯದಿಂದಲೇ ಇಲ್ಲಿ ಸಂಚರಿಸಬೇಕಾಗಿದೆ ಎಂದು ಪಡುಬಿದ್ರಿ, ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಪೌವ್ಲ್ ರೊಲ್ಪಿ ಡಿ ಕೋಸ್ತ ಹೇಳಿದರು. ಅವರು ಪಡುಬಿದ್ರಿ - ಹೆಜಮಾಡಿ ಕನ್ನಂಗಾರ್ ಬೈಪಾಸ್ ಬಳಿ ಸರ್ವಿಸ್ ರಸ್ತೆ ನಿರ್ಮಾಣದ ಕುರಿತಂತೆ ಶನಿವಾರ ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಹೆದ್ಮಾರಿ 66ರ ಹೆಜಮಾಡಿ ಬಳಿ ಟೋಲ್ ಗೇಟ್ ನಿರ್ಮಾಣ ಸಂದರ್ಭದಲ್ಲಿ ಹೆದ್ದಾರಿಯಿಂದ ಹೆಜಮಾಡಿಯ ಒಳರಸ್ತೆ ಸಂಪರ್ಕಿಸುವುದಕ್ಕೆ ಕನ್ನಂಗಾರು ಬಳಿ ರಸ್ತೆ ವಿಭಜಕ ನಿರ್ಮಿಸಿರುವುದಿಲ್ಲ. ಸುಮಾರು 150 ಮೀಟರ್ ಹಿಂದಕ್ಕೆ ಪಡುಬಿದ್ರಿ ಬೀಡು ಬಳಿಯ ಸುಜ್ಞಾನ್ ಗೇಟ್ ಬಳಿ ಕಾನೂನು ಬಾಹಿರವಾಗಿ ಹೆದ್ದಾರಿಯ ವಿರುದ್ಧ ದಿಕ್ಕಿನಿಂದ ಎಲ್ಲಾ ಮಾದರಿಯ ವಾಹನಗಳು ಸಂಚರಿಸಿ ತೀರಾ ಅಪಾಯಕಾರಿಯಾಗಿ ಹೆಜಮಾಡಿಗೆ ಬರುತ್ತಿವೆ. ಈ ಸಂಕಷ್ಟವನ್ನು ಮನಗಂಡು ಕನ್ನಂಗಾರ್ ಬೈಪಾಸ್ ನಿಂದ ಪಡುಬಿದ್ರಿವರೆಗೆ ಸುಮಾರು 350 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಆ ಸಮಯದಲ್ಲಿ ಉಭಯ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರವನ್ನು ಆಗ್ರಹಿಸಲಾಗಿತ್ತು. ಆ ಸಂದರ್ಭದಲ್ಲಿ ಜನರ ಸಮಸ್ಯೆಯನ್ನು ಮನಗಂಡು ಹೆದ್ದಾರಿ ಇಲಾಖೆಯ ಮುಖ್ಯ ಅಧಿಕಾರಿಗಳು ಶೀಘ್ರ ಸರ್ವಿಸ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.
ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಪಡುಬಿದ್ರಿ ಹೆಜಮಾಡಿ ಗ್ರಾಮಸ್ಥರ ಪಡುಬಿದ್ರಿ- ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯನ್ನು ರಚಿಸಿರುತ್ತೇವೆ. ಈಗಾಗಲೇ ಸಮಸ್ಯೆ ಶೀಘ್ರ ಪರಿಹಾರಕ್ಕೆ ಆಗ್ರಹಿಸಿ ಉಡುಪಿಯ ಸಂಸದರು ಹಾಗೂ ಕೇಂದ್ರ ಸರಕಾರದ ಮಂತ್ರಿಗಳಾದ ಶೋಭಾ ಕರಂದ್ಲಾಜೆಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದು ಇವರು ನಮ್ಮ ಮನವಿಗೆ ತಕ್ಷಣವಾಗಿ ಸ್ಪಂದಿಸಿ ಈ ಸರ್ವಿಸ್ ರಸ್ತೆಯ ಕಾಮಗಾರಿ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯವರಿಗೆ ಪತ್ರವನ್ನು ಬರೆದಿರುತ್ತಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಮಟ್ಟದಿಂದ ಸಚಿವರವರೆಗೂ ಮನವಿ ನೀಡಲಾಗಿದೆ. ನಮ್ಮ ನಿಯೋಗವು ಮಂಗಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ಕಚೇರಿಗೆ ಹಾಗೂ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಕಚೇರಿಗೆ ನಮ್ಮ ನಿಯೋಗವು ತೆರಳಿ ಪ್ರಾದೇಶಿಕ ಅಧಿಕಾರಿಯ ಭೇಟಿಯಾಗಿ ನಮ್ಮ ಮನವಿಯನ್ನು ಈಗಾಗಲೇ ಸಲ್ಲಿಸಿರುತ್ತೇವೆ. ಅತೀ ಶೀಘ್ರವಾಗಿ ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಸುಮಾರು 350 ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸುವರೇ ಮಂಗಳೂರು ಯೋಜನಾ ನಿರ್ದೇಶಕರವರಿಗೆ ದೂರವಾಣಿ ಕರೆಯ ಮೂಲಕ ನಿರ್ದೇಶನವನ್ನು ನೀಡಿರುತ್ತಾರೆ. ಮಂಗಳೂರಿನಲ್ಲಿ ಯೋಜನಾ ನಿರ್ದೇಶಕರು, ಪ್ರಾದೇಶಿಕ ಅಧಿಕಾರಿಯವರ ನಿರ್ದೇಶನದಂತೆ ಎರಡು ದಿವಸದೊಳಗೆ ಅಂದಾಜು ಪಟ್ಟಿಯನ್ನು ತಯಾರಿಸಿ ಸುಮಾರು 4 ರಿಂದ 6 ತಿಂಗಳ ಒಳಗೆ ಡಾಮರು ರಸ್ತೆಯನ್ನು ನಿರ್ಮಿಸುವುದು ಹಾಗೂ ಇದೇ ದೀಪಾವಳಿ ಹಬ್ಬದ ನಂತರ ಅತೀ ಶೀಘ್ರವಾಗಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ.
ಈ ಕಾಮಗಾರಿಯು ಅತೀ ಶೀಘ್ರವಾಗಿ ಕೈಗೊಳ್ಳದಿದ್ದಲ್ಲಿ, ಪಡುಬಿದ್ರಿ ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಪಡುಬಿದ್ರಿ ಹಾಗೂ ಹೆಜಮಾಡಿಯ ಸಾರ್ವಜನಿಕರನ್ನು ಸೇರಿಸಿ ಕನ್ನಂಗಾರು ಬೈಪಾಸ್ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು. ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೆಶ್ಮಾ ಮೆಂಡನ್, ಪಡುಬಿದ್ರಿ ಗ್ರಾಮ ಪಂಚಾಯತ್ ಶಶಿಕಲಾ, ಹೋರಾಟ ಸಮಿತಿಯ ಕಾರ್ಯದರ್ಶಿ ಸನಾ ಇಬ್ರಾಹಿಂ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಭಾಸ್ ಜಿ.ಸಾಲ್ಯಾನ್, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಅಲ್-ಅಝ್ ಹರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹೆಜಮಾಡಿ ಸಂಚಾಲಕ ಹಾಜಿ ಶೇಖಬ್ಬ ಉಪಸ್ಥಿತರಿದ್ದರು.
ರೂಪಶ್ರೀ ಕುಲಾಲ್ ಕಾರು ಅಪಘಾತ ಪ್ರಕರಣ : ಕಾಪು ಕುಲಾಲ ಯುವ ವೇದಿಕೆ ಸೂಕ್ತ ತನಿಖೆಗೆ ಆಗ್ರಹ

Posted On: 11-11-2023 10:07AM
ಮಂಗಳೂರು : ಕಾರು ಚಾಲಕನ ನಿರ್ಲಕ್ಷದಿಂದ ಅಪಘಾತದಲ್ಲಿ ಮೃತಪಟ್ಟ ಸುರತ್ಕಲ್ ಬಾಳ ನಿವಾಸಿ ರೂಪಶ್ರೀ ಕುಲಾಲ್ ಇವರ ಆತ್ಮಕ್ಕೆ ಚಿರ ಶಾಂತಿಯನ್ನು ಕರುಣಿಸಲಿ ಹಾಗೆಯೇ ತಪ್ಪಿಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕೆಂದು ಕಾಪು ಕುಲಾಲ ಯುವ ವೇದಿಕೆಯ ಉದಯ ಕುಲಾಲ್ ಆಗ್ರಹಿಸಿದ್ದಾರೆ.
ಮಂಗಳೂರು : ಕಾರು ಚಾಲಕನ ನಿರ್ಲಕ್ಷದಿಂದ ಅಪಘಾತದಲ್ಲಿ ಮೃತಪಟ್ಟ ಸುರತ್ಕಲ್ ಬಾಳ ನಿವಾಸಿ ರೂಪಶ್ರೀ ಕುಲಾಲ್ ಇವರ ಆತ್ಮಕ್ಕೆ ಚಿರ ಶಾಂತಿಯನ್ನು ಕರುಣಿಸಲಿ ಹಾಗೆಯೇ ತಪ್ಪಿಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕೆಂದು ಕಾಪು ಕುಲಾಲ ಯುವ ವೇದಿಕೆಯ ಉದಯ ಕುಲಾಲ್ ಆಗ್ರಹಿಸಿದ್ದಾರೆ.