Updated News From Kaup
ಕಾಲು ಕಳೆದುಕೊಂಡ ರಾಜೇಶ್ ಕುಲಾಲ್ : ನೆರವಿಗಾಗಿ ಸಹೃದಯಿ ದಾನಿಗಳಲ್ಲಿ ವಿನಂತಿ

Posted On: 13-09-2023 11:45AM
ಕಾಪು : ತಾಲೂಕಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅದಮಾರು ನಿವಾಸಿ ರಾಜೇಶ್ ಕುಲಾಲ್, ಇವರಿಗೆ ಪತ್ನಿ ಹಾಗೂ ಒಂದು ಹೆಣ್ಣು ಮಗುವಿದೆ. ತಿಂಗಳ ಹಿಂದೆ ಗ್ಯಾಂಗ್ರಿನ್ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ತನ್ನ ಎಡಗಾಲನ್ನೆ ಕಳೆದು ಕೊಂಡಿರುತಾರೆ, ಇನ್ನೊಂದು ಕಾಲನ್ನು ಕೂಡ ಉಳಿಸುವದು ಕಷ್ಟ ಎಂದು ವೈದ್ಯರು ತಿಳಿಸಿರುತ್ತಾರೆ.
ಇದೀಗ ಈ ಕುಟುಂಬ ಜೀವನ ನಿರ್ವಹಣೆಗೆ ಪರದಾಡುತ್ತಿದೆ. ಮಾನವೀಯ ಸಹೃದಯಿ ದಾನಿಗಳು ಈ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದರೆ ಆಧಾರ ಕಳೆದುಕೊಂಡ ಕುಟುಂಬಕ್ಕೆ ತುಸು ಆಧಾರ ಸಿಕ್ಕಂತಾಗುತ್ತದೆ. ಈ ಬಡ ಕುಟುಂಬ ದಾನಿಗಳ ಸಹಾಯದಲ್ಲಿದೆ.. ಹಣ ಸಹಾಯ ಮಾಡುವವರು ರಾಜೇಶ್ ಕುಲಾಲ್ ಪತ್ನಿ ವಿನೋದ ರವರ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.
Contact Number :9008559310 Google pay number 9008559310 Bank detail CANARA BANK Mudharangadi. NAME: Vinoda A/c number: 110106025209 IFSC: CNRB0000638.
ಪಡುಕುತ್ಯಾರು : ವಿಶ್ವಕರ್ಮ ಸಮಾಜದ ಧ್ವಜದ ಬಿಡುಗಡೆ

Posted On: 12-09-2023 08:52AM
ಪಡುಕುತ್ಯಾರು : ವಿಶ್ವಕರ್ಮ ಸಮಾಜದ ಐಕ್ಯತೆಯ ಮತ್ತು ಸಂಘಟನೆ ಪ್ರತೀಕವಾಗಿ ವಿಶ್ವಕರ್ಮ ಧ್ವಜವು ಮೂಡಿಬರಲಿ ಎಂದು ವಿಶ್ವ ಬ್ರಾಹ್ಮಣರ ಕುಲಗುರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು. ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರಿಗೆ ಹಸ್ತಾಂತರಿಸುವುದರ ಮೂಲಕ ವಿಶ್ವಕರ್ಮ ಸಮಾಜದ ಧ್ವಜದ ಬಿಡುಗಡೆ ಮಾಡಿ ಆಶೀರ್ವಚನ ನೀಡುತ್ತಿದ್ದರು.

ನಮ್ಮ ದೇವಸ್ಥಾನದ ಧರ್ಮದರ್ಶಿಗಳು, ವಿದ್ವಾಂಸರುಗಳು, ವೈದಿಕ ಮುಖಂಡರು, ವಿವಿಧ ಸಂಘಟನೆಯ ಮುಖಂಡರುಗಳೊಂದಿಗೆ ಸಭೆಗಳಲ್ಲಿ ಒಮ್ಮತ ಅಭಿಪ್ರಾಯದಿಂದ ವಿಶ್ವಕರ್ಮ ಧ್ವಜ ರೂಪುಗೊಂಡಿದೆ. ಇನ್ನಷ್ಟು ಅಭಿಪ್ರಾಯಗಳು ಬಂದಲ್ಲಿ ಸೂಕ್ತವೆನಿಸಿದಲ್ಲಿ ಪರಿಗಣಿಸುವ ಮುಕ್ತ ಅಭಿಪ್ರಾಯವೂ ಧ್ವಜಸಮಿತಿಗೆ ಇದೆ ಎಂದು ಅವರು ನುಡಿದರು.
ಇದೀಗ ರಚಿಸಲಾದ ಧ್ವಜವನ್ನು ಮಹಾ ಸಂಸ್ಥಾನದ ಎಲ್ಲ ದೇವಸ್ಥಾನದ ಧರ್ಮದರ್ಶಿಗಳು, ಎಲ್ಲಾ ಸಂಘಟನೆಯ ಮುಖಂಡರುಗಳು ವಿಶ್ವಕರ್ಮ ಮಹೋತ್ಸವದ ದಿನ ಧ್ವಜಾರೋಹಣ ನೆರವೇರಿಸುವ ಮೂಲಕ ಸಾಂಘಿಕ ಶಕ್ತಿ ಪ್ರದರ್ಶನವಾಗಲಿ ಎಂದು ಅವರು ಹಾರೈಸಿದರು. ವಿಶ್ವಕರ್ಮ ಧ್ವಜದಲ್ಲಿ ಆರು ಬಣ್ಣಗಳಿವೆ. ಇದರಲ್ಲಿ ಐದು ಬಣ್ಣಗಳು ವಿಶ್ವಕರ್ಮನ ಸಾಕಾರ ರೂಪದ ಐದು ಮುಖಗಳ ಬಣ್ಣವನ್ನು ಹೊಂದಿದೆ. ಐದು ಮುಖಗಳಾದ ಸದ್ಯೋಜಾತ- ಬಿಳಿ, ವಾಮದೇವ- ಕಪ್ಪು, ಅಘೋರ- ಕೆಂಪು, ತತ್ಪುರಷ- ಹಳದಿ , ಈಶಾನ- ಹಸುರು ಹಾಗೂ ಆರನೇ ಬಣ್ಣವು ಶರೀರ- ಹೇಮವರ್ಣ( ಚಿನ್ನದ ಬಣ್ಣ)ವನ್ನು , ಪ್ರಕೃತಿಯ ಪೂರ್ಣ ರೂಪವಾದ ಭೂಮಿಯನ್ನು ಪಂಚಶಕ್ತಿಗಳನ್ನು ಪ್ರತಿನಿಧೀಕರಿಸುತ್ತದೆ. ಭೂಮಿಯ ಮೇಲೆ ಜ್ಞಾನದ ಸಂಕೇತವಾದ ಓಂಕಾರದ ಲಾಂಛನವನ್ನು ಹೊಂದಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಜ್ಞಾನ ಸಂದೇಶವನ್ನೂ ನೀಡುತ್ತದೆ. ಆಯತಾಕಾರದ ಧ್ವಜವು ವಾಸ್ತು ಪ್ರಕಾರ ಧ್ವಜದಲ್ಲಿದೆ.
ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವೇ.ಬ್ರ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್, ಧ್ವಜ ಸಮಿತಿಯ ಸಂಚಾಲಕ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು , ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ ಸೂರ್ಯಕುಮಾರ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪಂಚಾಸಿಂಹಾಸನ ಸರಸ್ವತೀ ಪೀಠ ವಿಕಾಸ ಸಮಿತಿ( ರಿ) ಗಂಗಾವತಿಯ ಅದ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ವೇ.ಬ್ರ ಶ್ರೀ ಸುಬ್ಬಣ್ಣಾಚಾರ್ಯ ಗಿಣಿಗೇರಿ ಸಮಾಜದ ಕಾಳಿಕಾಂಬಾ ದೇವಾಲಯಗಳ ಧರ್ಮಧರ್ಶಿಗಳಾದ ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಕೆ. ಸುಂದರ ಆಚಾರ್ಯ ಕೋಟೆಕಾರು, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, , ಜನಾರ್ದನ ಆಚಾರ್ಯ ಆರಿಕ್ಕಾಡಿ, ಎ. ಶೇಖರ ಆಚಾರ್ಯ ಕಾಪು, ಬೆಳಪು ಬಾಲಕೃಷ್ಣ ಆಚಾರ್ಯ ಕಟಪಾಡಿ, ಬಿ. ಎಂ ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ತ್ರಾಸಿ ಸುಧಾಕರ ಆಚಾರ್ಯ, ಡಾ. ಬಾಲಕೃಷ್ಣ ಹೊಸಂಗಡಿ, ಡಾ. ಗೋಪಾಲಕೃಷ್ಣ ಆಚಾರ್ಯ ನವದೆಹಲಿ,ಡಾ. ವಿ.ಪಿ ರಾಘವನ್ ಕಣ್ಣೂರು, ರೂಪೇಶ್ ಆಚಾರ್ಯ ಶಿರ್ವ, ಗುರುರಾಜ್ ಕೆ ಜೆ ಮಂಗಳೂರು , ಸುರೇಶ್ ಆಚಾರ್ಯ ನಿಟ್ಟೆ ಕಾರ್ಕಳ , ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು, ರಮಾ ನವೀನ್ ಆಚಾರ್ಯ ಕಾರ್ಕಳ,ದಿನೇಶ್ ಆಚಾರ್ಯ ಕಿನ್ನಿಗೊಳಿ, ಗಣೇಶ್ ಆಚಾರ್ಯ ಕೋಟ, ಯೋಗೀಶ್ ಆಚಾರ್ಯ ಕರಂಬಳ್ಳಿ, ಕೆಮ್ಮಣ್ಣು ಗಣೇಶ ಆಚಾರ್ಯ, ವಿವೇಕ್ ಆಚಾರ್ಯ ಮಂಚಕಲ್, ವೈ ಧರ್ಮೇಂದ್ರ ಆಚಾರ್ಯ ಕಾಸರಗೋಡು, ಪೆರ್ಣೆ ಕೆ.ಎಂ ಮಧುಸೂದನ ಆಚಾರ್ಯ ಕಾಸರಗೋಡು, ಯೋಗೀಶ್ ಆಚಾರ್ಯ ಕೊಯಂಬತ್ತೂರು, ರಾಘವೇಂದ್ರ ಆಚಾರ್ಯ ಉಡುಪಿ, ಜಯಕರ ಆಚಾರ್ಯ ಕರಂಬಳ್ಳಿ, ರತ್ನಾಕರ ಆಚಾರ್ಯ ಉದ್ಯಾವರ, ಜನಾರ್ದನ ಆಚಾರ್ಯ ಕನ್ಯಾನ, ವಾದಿರಾಜ ಆಚಾರ್ಯ ಮಂಗಳೂರು, ಸತೀಶ್ ಆಚಾರ್ಯ ಸುರುಳಿ , ಚಂದ್ರ ಶೇಖರ ಆಚಾರ್ಯ ಬೆಂಗಳೂರು ರಿದಂತೆ ಬೆಂಗಳೂರು, ಕೊಯಂಬುತ್ತೂರು, ಮುಂಬೈ ಸೇರಿದಂತೆ ಉಡುಪಿ, ಮಂಗಳೂರು ಪುತ್ತೂರು ಮುಂತಾದ ಪ್ರದೇಶಗಳ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು . ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ - ಜೆಸಿ ಸಪ್ತಾಹ ಜೈತ್ರ 2023 ; ಫಲಕಗಳ ಅಳವಡಿಕೆ

Posted On: 12-09-2023 08:46AM
ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ಇದರ ಜೆಸಿ ಸಪ್ತಾಹ ಜೈತ್ರ 2023 ಮೂರನೇ ದಿನದ ಅಂಗವಾಗಿ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ಕೊಡಿಯಲ್ಲಿ ಸುಸ್ವಾಗತ ಮತ್ತು ಶುಭವಿದಾಯ ಫಲಕದೊಂದಿಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕಸ ಹಾಕುವವರಿಗೆ ಹೈಕೋರ್ಟ್ ದಂಡನೆ ಬಗ್ಗೆ ಫಲಕ ಅಳವಡಿಕೆ ಮಾಡಲಾಯಿತು.
ಈ ಫಲಕವನ್ನು ಜೆಸಿಐ ಶಂಕರಪುರ ಜಾಸ್ಮಿನ್ ನ ಸ್ಥಾಪಕ ಕಾರ್ಯದರ್ಶಿ ಮತ್ತು ಪೂರ್ವಧ್ಯಕ್ಷರು ಆದ ಜೆಸಿ ನವೀನ್ ಅಮೀನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಶಂಕರಪುರ ಜಾಸ್ಮಿನ್ ಮತ್ತು ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಜೆಸಿ ಮಾಲಿನಿ ಶೆಟ್ಟಿ, ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಖಾ ಶೆಟ್ಟಿ, ಪಂಚಾಯತ್ ಸದಸ್ಯ ದಿವೇಶ್ ಶೆಟ್ಟಿ, ವಲಯ ತರಬೇತುದಾರ ಜೆಸಿ ಸಂತೋಷ್ ಕುಮಾರ್, ಮತ್ತು ಶಂಕರಪುರ ಜಾಸ್ಮಿನ್ ನ ಪೂರ್ವಧ್ಯಕ್ಷರುಗಳು, ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಡುಪಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟಕ್ಕೆ ಚಾಲನೆ

Posted On: 11-09-2023 12:05PM
ಕಾಪು : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಉದ್ಯಾವರ ಇವರ ಜಂಟಿ ಆಶ್ರಯದಲ್ಲಿ ಇಂದು ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಉಡುಪಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ "ಖೋ-ಖೋ ಪಂದ್ಯಾಟ"ವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.
ಈ ಸಂದರ್ಭ ಶಾಸಕರು ಮಾತನಾಡಿ ಕ್ರೀಡೆಗೆ ಜಾತಿ, ಧರ್ಮ ಎಂಬ ಭೇದಭಾವವಿಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ನಾವು ಅದನ್ನು ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಿತೇಂದ್ರ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವಿಜಯ್ ಕುಮಾರ್, ಸದಸ್ಯರಾದ ಅಜಿತ್ ಕುಮಾರ್ ಶಣೈ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ವಸಂತಿ ಎಸ್, ಪುಷ್ಪಾ ಹಾಗೂ ಮುಕಾಂಬಿಕಾ, ಗುರುಪ್ರಸಾದ್ ಮತ್ತು ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಸೆಪ್ಟೆಂಬರ್ 13 : ಕಾಪುವಿನ ಕೈಪುಂಜಾಲು ದರ್ಗಾದಲ್ಲಿ ಸಫರ್ ಝಿಯಾರತ್

Posted On: 11-09-2023 09:12AM
ಕಾಪು : ಪೊಲಿಪು ಜಾಮಿಯಾ ಮಸೀದಿಯ ಅಧೀನದಲ್ಲಿರುವ ಕೈಪುಂಜಾಲು ಸಯ್ಯದ್ ಅರಬೀ ವಲಿಯುಲ್ಲಾರವರ ದರ್ಗಾದ ವಾರ್ಷಿಕ ಸಫರ್ ಝಿಯಾರತ್ ಸಮಾರಂಭ ಸೆಪ್ಟೆಂಬರ್ 13ರಂದು ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಬ್ಬಿರ್ ಅಹಮದ್ ತಿಳಿಸಿದ್ದಾರೆ.
ಶುಕ್ರವಾರ ಕಾಪು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಈ ದರ್ಗಾದಲ್ಲಿ ಪ್ರತೀ ವರ್ಷ ಇಸ್ಲಾಮಿಕ್ ಕ್ಯಾಲೆಂಡರ್ನ ಸಫರ್ ತಿಂಗಳ ಕೊನೆಯ ಬುಧವಾರ ಸಫರ್ ಝಿಯಾರತ್ ನಡೆಯಲಿದೆ. ಅಂದು ಹಿಂದೂ, ಮುಸ್ಲಿಂ, ಕ್ರೈಸ್ತರು ಜಾತಿ ಮತಭೇದವಿಲ್ಲದೆ ತಮ್ಮ ಹರಕೆ ತೀರಿಸುತ್ತಾರೆ ಎಂದರು.
ಸೆಪ್ಟೆಂಬರ್ 13ರಂದು ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ಝಿಯಾರತ್ ನಡೆಯಲಿದೆ. ಸಫರ್ ಝಿಯಾರತ್ಗೆ 11 ಮಂದಿಯ ಉಸ್ತುವಾರಿ ಸಮಿತಿ ರಚಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖ್ಯಸ್ಥ ಶಾಬಾನ್ ಫಕೀರಬ್ಬ, ಸದಸ್ಯರಾದ ರಝಬ್ ಉಮರಬ್ಬ, ಹಾಜಬ್ಬ ಕೊಂಬಗುಡ್ಡೆ, ಕೆ. ಎಂ. ರಝಾಕ್ ಉಪಸ್ಥಿತರಿದ್ದರು.
ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಜೈತ್ರ ಜೆಸಿ ಸಪ್ತಾಹಕ್ಕೆ ಚಾಲನೆ

Posted On: 10-09-2023 08:23AM
ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಜೈತ್ರ ಜೆಸಿ ಸಪ್ತಾಹಕ್ಕೆ ಶನಿವಾರ ಚಾಲನೆ ದೊರೆಯಿತು.
ಜೆಸಿ ಸಪ್ತಾಹದ ಮೊದಲ ದಿನವಾದ ಇಂದು ಅರೋಗ್ಯ ಹಿತದೃಷ್ಟಿಯಿಂದ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಯೋಗ ಶಿಕ್ಷಕಿ ಕುಮಾರಿ ಸುಮಿತ್ರ ಇವರು ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅಧ್ಯಕ್ಷರಾದ ಜೆಸಿ ಮಾಲಿನಿ ಶೆಟ್ಟಿ ಇನ್ನಂಜೆ ಸ್ವಾಗತಿಸಿದರು. ಕಾರ್ಯದರ್ಶಿ ಜೆಸಿ ಪ್ರವೀಣ್ ಪೂಜಾರಿ ವಂದಿಸಿದರು.
ಕಾಪು : ಪಾದೂರು - ಪೋಷಣ್ ಅಭಿಯಾನ ಸಪ್ತಾಹ

Posted On: 09-09-2023 09:07PM
ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಸಪ್ತಾಹ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾದೂರು ಮಹಿಳಾ ಮಂಡಲದ ಗೌರವ ಅಧ್ಯಕ್ಷರೂ, ಹಿರಿಯ ಸಮಾಜಸೇವಕರಾದ ಜಯಲಕ್ಷ್ಮಿ ಆಳ್ವರವರು ವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಅವರು ಮಹಿಳಾ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯವರು ಕಾಲಕಾಲಕ್ಕೆ ನೀಡುವ ಮಾಹಿತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುಟುಂಬದ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.
ಕಾಪು ಪ್ರಾ.ಆ.ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಯಶೋದಾ ಪೌಷ್ಟಿಕಾಂಶ ಉಳ್ಳ ಆಹಾರ ವಸ್ತುಗಳು, ಅವುಗಳ ಬಳಕೆ, ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪೂರ್ಣಿಮಾ ಆರೋಗ್ಯ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಾದೂರು ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರಸಾದ್ ಆಚಾರ್ಯ, ಸಮುದಾಯ ಆರೋಗ್ಯಾಧಿಕಾರಿ ರಮ್ಯಾ, ಸಮಿತಿಯ ಸದಸ್ಯರಾದ ವಿಶಾಲ, ಆಶಾ ಕಾರ್ಯಕರ್ತೆ ಸರಸ್ವತೀ, ಅಂಗನವಾಡಿ ಸಹಾಯಕಿ ಆಶಾ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವತ್ಸಲಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು.
ಪಡುಬಿದ್ರಿ ಜೇಸಿಐ - ಜೇಸೀ ಸಪ್ತಾಹ ಶೋಧನ-2023 ; ಆರೋಗ್ಯವಂತ ಶಿಶು ಸ್ಪರ್ಧೆ

Posted On: 09-09-2023 05:17PM
ಪಡುಬಿದ್ರಿ : ಇಲ್ಲಿ ಪಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಜೇಸಿಐ ಪಡುಬಿದ್ರಿ ಹಮ್ಮಿಕೊಂಡ ಆರೋಗ್ಯವಂತ ಶಿಶು ಸ್ಪರ್ಧೆ ಹಾಗೂ ಜೇಸೀ ಸಪ್ತಾಹ ಶೋಧನ-2023ನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಉದ್ಯಮಿ, ಜೇಸಿಐ ಪೂರ್ವ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜಶ್ರೀ ಕಿಣಿ ಮಾತನಾಡಿ, ಸ್ಪರ್ಧೆಯು ಅಂದ ಚೆಂದ ನೋಡಿ ನಡೆಯುತ್ತಿಲ್ಲ. ಸರಕಾರದ ನಿಯಮಾವಳಿಯಂತೆ ಆರೋಗ್ಯವಂತ ಶಿಶು ಸ್ಪರ್ಧೆ ಆಯೋಜಿಸಲಾಗಿದ್ದು, ಆರೋಗ್ಯ ಕೇಂದ್ರ ವ್ಯಾಪ್ತಿಯ ಶಿಶುಗಳಿಗಾಗಿ ಸ್ಪರ್ಧೆ ನಡೆಸಲಾಗಿದೆ ಎಂದರು.

ಜೇಸಿಐ ಪಡುಬಿದ್ರಿಯ ಅಧ್ಯಕ್ಷೆ ಯಶೋದಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪೂಜಾ ಫಾರ್ಮಾ ವತಿಯಿಂದ ವಿಶೇಷ ಬಹುಮಾನ ವಿತರಿಸಲಾಯಿತು. ಕನ್ನಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಶೀನ ಪೂಜಾರಿ, ಕೆಪಿಸಿಸಿ ಕಾರ್ಡಿನೇಟರ್ ನವೀನ್ಚಂದ್ರ ಜೆ.ಶೆಟ್ಟಿ, ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ಯುವಕ-ಯುವತಿ ವೃಂದದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬ್ರಹ್ಮಾವರ ಪೂಜಾ ಫಾರ್ಮಾದ ದಿನಕರ ಶೆಟ್ಟಿ, ಜೇಸಿಐ ನಿಕಟಪೂರ್ವಾದ್ಯಕ್ಷ ಶರತ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಪೂರ್ವಾಧ್ಯಕ್ಷ ಹರೀಶ್ ಕುಮಾರ್ ಪ್ರಸ್ತಾವಿಸಿದರು. ರವಿರಾಜ್ ಕೋಟ್ಯಾನ್, ಸುರೇಶ್ ಪಡುಬಿದ್ರಿ ಮತ್ತು ಸಂತೃಪ್ತಿ ಮನೋಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಶ್ವಿನಿ ಪ್ರದೀಪ್ ವಂದಿಸಿದರು.

ಫಲಿತಾಂಶ : 0-1 ವರ್ಷದೊಳಗಿನ ಮಕ್ಕಳು: ಪ್ರಥಮ-ಶ್ರೀಯಾ ವೈ.ಪುತ್ರನ್(ತಾಯಿ-ಸುಮಿತಾ), ದ್ವಿತೀಯ-ದರ್ಶಿಲ್(ಮಿನಿತಾ) ಮತ್ತು ಸುಮದ್ವ-(ಸ್ವಾತಿ ಜೆ.), ತೃತೀಯ-ರಿಯಾಂಶ್(ಮಮತಾ). 1-2ವರ್ಷದೊಳಗಿನ ಮಕ್ಕಳು: ಪ್ರಥಮ-ಯದ್ವಿ(ಸುಜಾತಾ). ದ್ವಿತೀಯ-ಧನ್ವಿತಾ(ಗೀತಾ), ತೃತೀಯ-ಪವಿಶ್(ತುಳಸಿ) ಬಹುಮಾನ ಗಳಿಸಿರುತ್ತಾರೆ.
ಕಾಪು : ಫ್ರೆಂಡ್ಸ್ ಗ್ರೂಪ್ ಕಳತ್ತೂರು - 2 ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ

Posted On: 09-09-2023 11:20AM
ಕಾಪು : ಫ್ರೆಂಡ್ಸ್ ಗ್ರೂಪ್ ಕಳತ್ತೂರು ಇವರ ವತಿಯಿಂದ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ 2 ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಕಳತ್ತೂರಿನ ಕುಲಶೇಖರ ಶೆಟ್ಟಿ ಅಡಿಟೋರಿಯಂನಲ್ಲಿ ಜರಗಿತು.
ಅರುಣ್ ಶೆಟ್ಟಿ ಪಾದೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೀರ್ಪುಗಾರರಾಗಿ ಅನಿತಾ ಉಪಾಧ್ಯಾಯ, ಪ್ರತಿಭಾ ಶೆಟ್ಟಿ, ದೇವಿಕಾ ಚೌಟ, ಗೌರವಾಧ್ಯಕ್ಷರಾದ ರಂಗನಾಥ ಶೆಟ್ಟಿ, ಫ್ರೆಂಡ್ಸ್ ಗ್ರೂಪಿನ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಚನಾ ನಿರೂಪಿಸಿದರು.
ಕಾಪು : ಇನ್ನಂಜೆಯಲ್ಲಿ ಮೊಸರು ಕುಡಿಕೆ ಕ್ರೀಡಾಕೂಟ -2023 ; ಮುದ್ದುಕೃಷ್ಣ ವೇಷ ಸ್ಪರ್ಧೆ

Posted On: 07-09-2023 11:22AM
ಕಾಪು : ತಾಲೂಕಿನ ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆ ಇವರ ಆಶ್ರಯದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಇನ್ನಂಚೆ ಒಕ್ಕೂಟ, ಬಿಲ್ಲವ ಸೇವಾ ಸಂಘ ಇನ್ನಂಜೆ, ಜೇ.ಸಿ.ಐ ಶಂಕರಪುರ ಜಾಸ್ಮಿನ್, ರೋಟರಿ ಸಮುದಾಯ ದಳ ಇನ್ನಂಜೆ, ಇನ್ನಂಜೆ ಯುವತಿ ಮಂಡಲ (ರಿ.) ಇನ್ನಂಜೆ ಇವರ ಸಹಕಾರದೊಂದಿಗೆ ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ಇಂದು ಮೊಸರು ಕುಡಿಕೆ ಕ್ರೀಡಾಕೂಟ-2023, ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭ ಮುದ್ದು ಮುದ್ದಾದ ಕೃಷ್ಣ ಆಲ್ಬಮ್ ಸಾಂಗ್ ಅನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಇನ್ನಂಜೆ ಯುವಕ ಮಂಡಲ ಅಧ್ಯಕ್ಷರಾದ ದಿವೇಶ್, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ, ಇನ್ನಂಜೆ ಎಸ್.ವಿ.ಎಚ್ ಕಾಲೇಜು ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ, ಇನ್ನಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಕಲಾ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆಯ ನಿರ್ದೇಶಕರಾದ ಶಿವರಾಮ ಪ್ರಭು, ಇನ್ನಂಜೆ ಎಸ್.ವಿ.ಎಚ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಯು. ನಂದನ್ ಕುಮಾರ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನವೀನ್ ಅಮೀನ್ ಹಾಗೂ ಇನ್ನಂಜೆ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.