Updated News From Kaup
ಶಿರ್ವ : ಹಿಂದೂ ಜೂನಿಯರ್ ಕಾಲೇಜು - ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

Posted On: 31-08-2023 05:30PM
ಶಿರ್ವ: ಇಲ್ಲಿನ ಹಿಂದೂ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಮುದ್ದು ಶೆಟ್ಟಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಹಳೆ ವಿದ್ಯಾರ್ಥಿಗಳಿಂದ ಕೊಡುಗೆ : ವಿದ್ಯಾರ್ಥಿಗಳಿಗೆ 2 ಲ.ರೂ. ವಿದ್ಯಾರ್ಥಿ ವೇತನ ಸೇರಿದಂತೆ ಕಾಲೇಜಿನಲ್ಲಿ ನಡೆಯುವ ಕ್ರೀಡಾಕೂಟ, ವಾರ್ಷಿಕೋತ್ಸವ ಮತ್ತು ನಿರ್ವಹಣಾ ಕೆಲಸಗಳಿಗೆ ಒಟ್ಟು 4 ಲಕ್ಷ ರೂಪಾಯಿಗಳ ಕೊಡುಗೆಗಳನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೀಡಲಾಯಿತು. ಸಮ್ಮಾನ : ನಿವೃತ್ತ ಉಪನ್ಯಾಸಕ ವಿಷ್ಣು ಭಟ್ ದಂಪತಿ ಮತ್ತು ಕಳೆದ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರ್ಯಾಂಕ್ ಗಳಿಸಿದ ಅಂಶಿ ಎಸ್. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಜೇಸಿಐ ರಾಷ್ಟ್ರೀಯ ತರಬೇತುದಾರ ಇನ್ನಾ ರಾಜೇಂದ್ರ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಹಳೆವಿದ್ಯಾರ್ಥಿ ಸಂಘದ ಮುಂಬೈ ಸಮಿತಿಯ ಗೌರವ ಸಲಹೆಗಾರ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ, ಮುಂಬೈ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊರ್ಕಳ, ಉಪಾಧ್ಯಕ್ಷ ಶಿರ್ವ ಕೋಡು ಜಯಪ್ರಕಾಶ ಹೆಗ್ಡೆ, ಕೋಶಾಧಿಕಾರಿ ಉಮೇಶ್ ಆಚಾರ್ಯ, ಸಂಸ್ಥೆಯ ಪ್ರಾಂಶುಪಾಲ ಭಾಸ್ಕರ ಎ. ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಸಂತಿ ಬಾಯಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ಸಂಘದ ಹಿರಿಯ ಸದಸ್ಯರು, ಕಾಲೇಜಿನ ಸಹ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ ಪ್ರಸ್ತಾವನೆಗೈದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೇಂಜ ಪವನ್ ಶೆಟ್ಟಿ ವಂದಿಸಿದರು.
ಕಾಪು : ಶಾಸಕರ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜಯಂತಿ ಆಚರಣೆ

Posted On: 31-08-2023 05:08PM
ಕಾಪು: ತಾಲ್ಲೂಕು ಆಡಳಿತ ಸೌಧದಲ್ಲಿರುವ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ ನಡೆಯಿತು.
ಶಾಸಕರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಂದೇ ಮತವನ್ನು ಸಾರಿದ ದಾರ್ಶನಿಕರು. ಅವರ ತತ್ವ ಸಿದ್ದಾಂತ ಅನುಕರಣೀಯ, ಆದರ್ಶಯುತವಾಗಿದೆ ಎಂದರು.
ಜಿಲ್ಲಾ ಬಿಜೆಪಿ ಮಹಿಳಾ ಘಟಕಾಧ್ಯಕ್ಷೆ ವೀಣಾ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ, ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಬಿಲ್ಲವ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕಾಪು : ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Posted On: 30-08-2023 06:00PM
ಕಾಪು : ತಾಲೂಕು ಆಡಳಿತ, ತಾಲೂಕು ಪಂಚಾಯತ್ ಕಾಪು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪುರಸಭೆ ಕಾಪು ಇವರ ಸಹಯೋಗದಲ್ಲಿ ಬುಧವಾರ ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಕಾಪು ತಹಸೀಲ್ದಾರ್ ನಾಗರಾಜ ವಿ ನಾಯ್ಕಡ ಚಾಲನೆ ನೀಡಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರಕಾರವು ತನ್ನ 100 ದಿನದ ಕಡಿಮೆ ಕಾಲಾವಧಿಯಲ್ಲಿ ಮೂರು ಭರವಸೆಯನ್ನು ಈಡೇರಿಸಿದೆ. ಕೆಲವೇ ಸಮಯದಲ್ಲಿ ಇನ್ನೂ ಎರಡು ಭರವಸೆಯನ್ನು ಪೂರ್ಣಗೊಳಿಸಲಿದೆ ಎಂದರು.
ಈ ಸಂದರ್ಭ ಪುರಸಭಾ ಸದಸ್ಯರಾದ ಹರಿಣಾಕ್ಷಿ, ವಿದ್ಯಾಲತಾ, ಉಮೇಶ್ ಕರ್ಕೆರ, ಮೋಹಿನಿ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ವಿಜಯ, ಯೋಜನಾಧಿಕಾರಿ ವೀಣಾ ವಿವೇಕಾನಂದ, ಪುರಸಭಾ ಮುಖ್ಯ ಅಧಿಕಾರಿ ಸಂತೋಷ್ ಎಸ್ ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಬೆಂಗಳೂರಿನ ಸಂಜಯ್ ಪಿತಾಂಬರರಿಂದ ಸೈಕಲ್ ಸಂಚಾರ - ಶಂಕರಪುರ ಟು ಮಹಾರಾಷ್ಟ್ರ ; ಶ್ರೀ ಸಾಯಿನಾಥರ ಮಂದಿರ ಭೇಟಿ

Posted On: 30-08-2023 05:34PM
ಕಾಪು : ಬೆಂಗಳೂರಿನ ಸಂಜಯ್ ಪಿತಾಂಬರ ದೇಸಾಯಿಯವರು ಕಾಪು ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಿಂದ ಹೊರಟು ಭಾರತದಾದ್ಯಂತ 25,000 ಕಿ.ಲೋ ಮೀಟರ್ ಸೈಕಲ್ನಲ್ಲಿ ಸಂಚಾರಿಸಿ 6000ಕ್ಕೂ ಹೆಚ್ಚು ಶ್ರೀ ಸಾಯಿನಾಥರ ಮಂದಿರಕ್ಕೆ ಭೇಟಿ ನೀಡಿ ಶ್ರೀ ಸಾಯಿನಾಥಾರ ತತ್ವ ಪ್ರಚಾರದ ಜೊತೆಗೆ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪ ವಿಶ್ವಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆಯ ಮಹತ್ವವನ್ನು ಜನರಿಗೆ ತಿಳಿಯಪಡಿಸುತ್ತಾ ಸಂಚರಿಸುವ ಬಗೆಗೆ ಇಂದು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಮಾಹಿತಿ ನೀಡಿದರು.

ಆಗೋಸ್ಟ್ 31ರ ಗುರುವಾರ ಬೆಳಿಗ್ಗೆ 8:20ಕ್ಕೆ ಉಡುಪಿ ಜಿಲ್ಲೆಯ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಆರ್ಶೀವಾದ ಪಡೆದು ಯಾತ್ರೆ ಪ್ರಾರಂಭವಾಗಿ ಮಹಾರಾಷ್ಟ್ರದ ಶಿರಡಿಯಲ್ಲಿ ಯಾತ್ರೆ ಕೊನೆಗೊಳ್ಳಲಿದೆ ಎಂದರು.
ಸಂಚಾರದ ಉದ್ದ ಅಗಲಕ್ಕೂ ನನ್ನ ಧ್ಯೇಯ “ಸಾಮಾನ್ಯ ಮನುಷ್ಯ ತನ್ನ ಜೀವನಕ್ಕಾಗಿ ಹೋರಾಡುತ್ತಾನೆ” ಎಂಬುದಾಗಿ ಇರುತ್ತದೆ ಎಂದು ಸಂಜಯ್ ಪಿತಾಂಬರ ದೇಸಾಯಿ ಹೇಳಿದರು.
ಈ ಸಂದರ್ಭ ಸಂಜಯ್ ಪಿತಾಂಬರ ದೇಸಾಯಿ, ಸುಧಾಕರ ಶೆಟ್ಟಿ, ಸತೀಶ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.
ಕುತ್ಯಾರು : ಸೂರ್ಯ ಚೈತನ್ಯ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ನೇಮಕ

Posted On: 30-08-2023 04:25PM
ಕುತ್ಯಾರು : ಶ್ರೀ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಪಡುಕುತ್ಯಾರು ಉಡುಪಿ ಇವರ ಮಾರ್ಗದರ್ಶನದಲ್ಲಿ ಎಸೆಟ್ ಆಧೀನದಲ್ಲಿರುವ ಕಾಪು ತಾಲೂಕಿನ ಕುತ್ಯಾರು ಶ್ರೀ ಸೂರ್ಯ ಚೈತನ್ಯ ಆಂಗ್ಲ ಮಾಧ್ಯಮ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ ಇವರನ್ನು ನೇಮಿಸಲಾಗಿದೆ.
ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ಸುಮಾರು 40 ವರ್ಷಗಳ ಶೈಕ್ಷಣಿಕ ಸೇವಾ ಅನುಭವವನ್ನು ಹೊಂದಿರುತ್ತಾರೆ.
ಪ್ರಸ್ತುತ ಈ ಸಂಸ್ಥೆಯಲ್ಲಿ ಯಲ್. ಕೆ .ಜಿ ಯಿಂದ 10ನೇ ತರಗತಿವರೆಗೆ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸಂಸ್ಕೃತ ,ಯೋಗ, ಕರಾಟೆ, ಯಕ್ಷಗಾನ ,ಭಜನೆ ಕುಣಿತ ಮೊದಲಾದ ವಿಷಯಗಳಲ್ಲಿ ತರಬೇತಿಯನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿದ್ದು ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯಲ್ಲಿ ಐದನೇ ಸ್ಥಾನವನ್ನು ಪಡೆದಿರುತ್ತದೆ.
ಕಾರ್ಕಳ : ಕುಲಾಲ ಸಂಘ ಇರ್ವತ್ತೂರು ವತಿಯಿಂದ ಗ್ರಾಮ ಪಂಚಾಯತ್ ಗೆ ಪೋಡಿಯಂ ಹಸ್ತಾಂತರ

Posted On: 30-08-2023 12:33PM
ಕಾರ್ಕಳ : ಇಲ್ಲಿನ ಇರ್ವತ್ತೂರು ಕುಲಾಲ ಸಂಘ (ರಿ.) ವತಿಯಿಂದ ಇರ್ವತ್ತೂರು ಗ್ರಾಮ ಪಂಚಾಯತ್ ನ ನೂತನ ಸಭಾಭವನಕ್ಕೆ ಪೋಡಿಯಂನ್ನು ಸಂಘದ ಅಧ್ಯಕ್ಷರಾದ ಸುರೇಶ್ ಬಂಗೇರ ಪಾಲಾಜೆ ಮುಂದಾಳತ್ವದಲ್ಲಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭರತ್ ಕುಮಾರ್ ಜೈನ್,ಉಪಾಧ್ಯಕ್ಷೆ ದೀಪಾ ಶ್ರೀನಾಥ್, ಪಂಚಾಯತ್ ಪಿ.ಡಿ.ಓ ಆನಂದ ವಾರ್ತಿ, ಪಂಚಾಯತ್ ಸದಸ್ಯೆ ಅನಿತಾ ನಾಗೇಶ್ ಕುಲಾಲ್, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯೆ ಪ್ರಮೀಳಾ ಕುಲಾಲ್ ಉಪಸ್ಥಿತರಿದ್ದರು.
ಪಡುಬಿದ್ರಿ : ಕಂಚಿನಡ್ಕ ಶ್ರೀ ಗುರು ರಾಘವೇಂದ್ರ ಮಂದಿರದಲ್ಲಿ ಶ್ರೀ ರಾಯರ ಆರಾಧನಾ ಮಹೋತ್ಸವ ಮತ್ತು ಅಖಂಡ ಭಜನಾ ಸಂಕೀರ್ತನೆ

Posted On: 29-08-2023 08:30AM
ಪಡುಬಿದ್ರಿ : ಇಲ್ಲಿನ ನಡ್ಸಾಲು ಗ್ರಾಮದ ಕಂಚಿನಡ್ಕ ಶ್ರೀ ಗುರು ರಾಘವೇಂದ್ರ ಮಂದಿರದಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 2 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.
ಆಗಸ್ಟ್ 31, ಗುರುವಾರ ಪೂರ್ವಾರಾಧನೆ, ಸೆಪ್ಟೆಂಬರ್ 01, ಶುಕ್ರವಾರ ಮಧ್ಯಾರಾಧನೆ, ಸೆಪ್ಟೆಂಬರ್ 02, ಶನಿವಾರ ಉತ್ತರಾಧನೆ (ಬೆಳಿಗ್ಗೆ ಗಂಟೆ 6ರಿಂದ ಸಂಜೆ 7ರ ತನಕ) ಶ್ರೀ ಗುರುರಾಘವೇಂದ್ರ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ರಾಯರ ಆರಾಧನಾ ಮಹೋತ್ಸವ ಮತ್ತು ಅಖಂಡ ಭಜನಾ ಸಂಕೀರ್ತನೆ - ಮಹಾ ಪ್ರಸಾದ ಅದೇ ದಿನ ಮಧ್ಯಾಹ್ನ ಗಂಟೆ 1 ರಿಂದ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಇನ್ನಂಜೆ ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿ - ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

Posted On: 28-08-2023 10:56PM
ಕಾಪು : ತಾಲೂಕಿನ ಇನ್ನಂಜೆ ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯಲ್ಲಿ ಪಾಂಗಾಳ ಮುರಳಿ ಭಟ್ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಪೂಜೆಯು ನಡೆಯಿತು.
ಈ ಸಂದರ್ಭ ಗ್ರಾಮದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಮಂಡೇಡಿ ದೇರೆಕ್ಯಾರ್ ಮನೆ ದಿವಂಗತ ವಿಠಲ ಶೆಟ್ಟಿ ಸ್ಮರಣಾರ್ಥ ಅವರ ಮಗ ದಯಾನಂದ ವಿ ಶೆಟ್ಟಿ ಪ್ರೋತ್ಸಾಹ ಧನ ಹಾಗೂ ಶಶಿಧರ ಕೆ ಶೆಟ್ಟಿ ಕುಂಜಿರಬೆಟ್ಟು ನೀಡಲ್ಪಟ್ಟ ಶಾಲು ಮತ್ತು ಸ್ಮರಣಿಕೆಯನ್ನು ಮುಂಬೈ ಉದ್ಯಮಿ ರತ್ನಾಕರ ಶೆಟ್ಟಿ ಮಂಡೇಡಿ ಸಾದುಮನೆ ಮಕ್ಕಳಿಗೆ ನೀಡಿ ಗೌರವಿಸಿದರು.
ಈ ಸಂದರ್ಭ ರತ್ನಾಕರ ಶೆಟ್ಟಿ ಹಾವಂಜೆ, ಬಾಲಕೃಷ್ಣ ಶೆಟ್ಟಿ ಪೊಲ್ಯ, ಮುಕ್ಕಾಲಿ ರಮಾನಂದ ಶೆಟ್ಟಿ, ಮಂಡಳಿಯ ಅಧ್ಯಕ್ಷ ಲಕ್ಷ್ಮಣ ಕೆ ಶೆಟ್ಟಿ, ಕಾರ್ಯದರ್ಶಿ ಕೃಷ್ಣ ವಿ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಎಸ್ ಶೆಟ್ಟಿ, ಮಂಡಳಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಹೆಜಮಾಡಿ : ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ - ಸರಕಾರದ ಉಚಿತ ಕೊಡುಗೆ ವಿತರಣೆ

Posted On: 28-08-2023 10:31PM
ಹೆಜಮಾಡಿ : ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಇಂದು ಸರಕಾರದ ಉಚಿತ ಕೊಡುಗೆಯಲ್ಲಿ ಒಂದಾದ ಶೂ / ಸಾಕ್ಸ್ ವಿತರಣಾ ಕಾರ್ಯಕ್ರಮ ನಡೆಯಿತು.

ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸತೀಶ್ ನಾಯಕ್ ಹಾಗೂ ಸದಸ್ಯರುಗಳು, ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಪಾಂಡುರಂಗ ಕರ್ಕೇರ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ದಾನಿಗಳಾದ ಮುಂಬೈ ಹಳೆ ವಿದ್ಯಾರ್ಥಿ ಟ್ರಸ್ಟ್ ನ ಸದಸ್ಯರಾದ ಶೇಷಗಿರಿರಾವ್, ಅನಿಲ್ ಕುಂದರ್, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಳತ್ತೂರು : ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ - ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಕುತ್ಯಾರು ಆನೆಗುಂದಿ ಸೂರ್ಯಚೈತನ್ಯ ಶಾಲೆ

Posted On: 28-08-2023 10:20PM
ಕಳತ್ತೂರು : 2023-24 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರು ಇಲ್ಲಿ ನಡೆಯಿತು.
ಆನೆಗುಂದಿ ಸೂರ್ಯಚೈತನ್ಯ ಶಾಲೆ ಕುತ್ಯಾರು ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ, ದ್ವಿತೀಯ, ತೃತೀಯ ಬಹುಮಾನ ಪಡೆದರು.
ಆಶುಭಾಷಣ ಸ್ಪರ್ಧೆ ರಜತ್ (ಪ್ರಥಮ), ಸಂಸ್ಕೃತ ಭಾಷಣ ಮೌನೇಶ್ (ಪ್ರಥಮ), ರಂಗೋಲಿ ವಂಶಿಕ (ಪ್ರಥಮ), ಧಾರ್ಮಿಕ ಪಠಣ ಬೋಧಯನ(ಪ್ರಥಮ), ಇಂಗ್ಲೀಷ್ ಕಂಠಪಾಠ ಪ್ರಾಪ್ತಿ (ಪ್ರಥಮ), ಕತೆ ಹೇಳುವುದು ಧನ್ವಿ (ಪ್ರಥಮ), ಚಿತ್ರಕಲೆ ಅದಿತಿ ಆಚಾರ್ಯ (ಪ್ರಥಮ), ಸಂಸ್ಕೃತ ಭಾಷಣ ಸೋಹನ್ (ಪ್ರಥಮ) ಬಹುಮಾನ ಪಡೆದಿರುತ್ತಾರೆ.
ದ್ವಿತೀಯ ಬಹುಮಾನ 11 ವಿದ್ಯಾರ್ಥಿಗಳು ಪಡೆದಿರುತ್ತಾರೆ. ತೃತೀಯ ಬಹುಮಾನ 8 ವಿದ್ಯಾರ್ಥಿಗಳು ಪಡೆದಿರುತ್ತಾರೆ.