Updated News From Kaup
ಪಡುಬಿದ್ರಿ : ಗಾಂಜಾ ಸೇವನೆ - ವ್ಯಕ್ತಿಯೋರ್ವ ವಶಕ್ಕೆ

Posted On: 07-09-2023 11:12AM
ಪಡುಬಿದ್ರಿ : ಇಲ್ಲಿನ ಠಾಣಾ ವ್ಯಾಪ್ತಿಯ ನಂದಿಕೂರು ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಶೆಯಲ್ಲಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪಡುಬಿದ್ರಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಪಡುಬಿದ್ರಿ ಠಾಣೆಯ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ರೌಂಡ್ಸ್ ನಲ್ಲಿರುವಾಗ ರಕ್ಷಿತ್ ಶೆಟ್ಟಿ(29) ಎಂಬಾತನು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಅವನು ಯಾವುದೋ ಮಾದಕ ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದುಕೊಂಡು ಮಣಿಪಾಲದ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಮಾದಕ ವಸ್ತುವಾದ ಗಾಂಜಾ ಸೇವಿಸಿರುವ ಬಗ್ಗೆ ವೈದ್ಯರು ದೃಢಪತ್ರವನ್ನು ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪಡುಬಿದ್ರಿ : ಬಂಟರ ಸಂಘ - ನಿವೃತ್ತ ಶಿಕ್ಷಕರಿಗೆ ಸನ್ಮಾನ

Posted On: 07-09-2023 10:46AM
ಪಡುಬಿದ್ರಿ : ಬಂಟರ ಸಂಘ (ರಿ.) ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಪಡುಬಿದ್ರಿ, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಇವರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ದಂಪತಿಗಳನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ, ನಿವೃತ್ತ ಶಿಕ್ಷಕ ನಾರಾಯಣಶೆಟ್ಟಿ ದಂಪತಿಗಳನ್ನು ಅವರ ಮನೆಗೆ ತೆರಳಿ ಗೌರವಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷರಾದ ಡಾ| ದೇವಿ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿಶೆಟ್ಟಿ ಗುಂಡ್ಲಾಡಿ, ಟ್ರಸ್ಟ್ ಅಧ್ಯಕ್ಷರಾದ ಶಶಿಧರ ಶೆಟ್ಟಿ ಎರ್ಮಾಳು, ಸಂಘದ ಉಪಾಧ್ಯಕ್ಷೆ ಅನಿತಾ ವಿಶು ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಎರ್ಮಾಳು, ಕಾರ್ಯದರ್ಶಿ ವಾಣಿ ರವಿ ಶೆಟ್ಟಿ, ಕೋಶಾಧಿಕಾರಿ ರಶ್ಮಿ ಸುಧಾಕರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಮಾಜಿ ಅಧ್ಯಕ್ಷೆ ಶೋಭಾ ಜೆ ಶೆಟ್ಟಿ, ಉಪಾಧ್ಯಕ್ಷೆ ಭಾರತಿ ಬಿ ಶೆಟ್ಟಿ, ಶಾಲಿನಿ ಶಶಿಧರ್ ಶೆಟ್ಟಿ, ಜಯ ಶೆಟ್ಟಿ ಪದ್ರ ಉಪಸ್ಥಿತರಿದ್ದರು.
ವಿಶ್ವಹಿಂದೂಪರಿಷತ್ ಭಜರಂಗದಳ ಮೂಡುಬೆಳ್ಳೆ ಘಟಕ : ಸ್ಥಾಪನಾ ದಿನಾಚರಣೆ ; ನಾಟಿ ವೈದ್ಯೆಗೆ ಸನ್ಮಾನ

Posted On: 07-09-2023 09:56AM
ಕಾಪು : ವಿಶ್ವಹಿಂದೂಪರಿಷತ್ ಭಜರಂಗದಳ ಮೂಡುಬೆಳ್ಳೆ ಘಟಕದ ವತಿಯಿಂದ ವಿಶ್ವಹಿಂದೂಪರಿಷತ್ ಸ್ಥಾಪನಾ ದಿನಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ನಾಟಿ ವೈದ್ಯೆಯಾದ ಶ್ರೀಮತಿ ವಾರಿಜಾ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಹಿಂದೂಪರಿಷತ್ ಜಿಲ್ಲಾಸೇವಾಪ್ರಮುಖ್ ವಿಖ್ಯಾತ ಭಟ್, ತಾಲೂಕು ಮಾತೃಶಕ್ತಿ ಪ್ರಮುಖ್ ವಾಣಿ ಆಚಾರ್ಯ, ಮೂಡುಬೆಳ್ಳೆ ಘಟಕ ಅಧ್ಯಕ್ಷರಾದ ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ಅಭಿಷೇಕ್ ಆಚಾರ್ಯ, ಸಂಚಾಲಕ್ ಮಿಥುನ್ ಪೂಜಾರಿ, ಮಾತೃಶಕ್ತಿ ಪ್ರಮುಖ್ ಆಶಾ ಶೆಟ್ಟಿ, ದುರ್ಗಾವಾಹಿನಿ ಪ್ರಮುಖ್ ದೀಪಾ ಶೆಟ್ಟಿ , ಭಾಜಪದ ಪ್ರಮುಖರಾದ ರಾಜೇಂದ್ರಶೆಟ್ಟಿ, ಗುರುರಾಜಭಟ್, ರಾಮಚಂದ್ರಭಟ್, ಕೃಷ್ಣಆಚಾರ್ಯ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಶ್ರೀಮತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇಂದು : ಬೆಳ್ಳಿಬೆಟ್ಟು - 34ನೇ ವರ್ಷದ ಮೊಸರು ಕುಡಿಕೆ ಉತ್ಸವ

Posted On: 07-09-2023 09:50AM
ಕಾಪು : ಇಲ್ಲಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಸಿರಿ ಕುಮಾರ ಭಜನಾ ಮಂಡಳಿ ಬೆಳ್ಳಿಬೆಟ್ಟು ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಅಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಇಂದು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು ಕ್ಷೇತ್ರ ಸಮಿತಿ ಟೈಲರ್ ಅಸೋಸಿಯೇಷನ್ ಅಧ್ಯಕ್ಷರಾಗಿ ರಮಾನಂದ ಮೂಲ್ಯ ಆಯ್ಕೆ

Posted On: 07-09-2023 09:46AM
ಕಾಪು : ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ರಮಾನಂದ ಮೂಲ್ಯ ಆಯ್ಕೆಯಾಗಿರುತ್ತಾರೆ.

ಪಡುಬಿದ್ರಿ : ಕಂಚಿನಡ್ಕ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ - ಶ್ರೀ ಗುರು ರಾಘವೇಂದ್ರ ಫ್ರೆಂಡ್ಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ

Posted On: 06-09-2023 08:43PM
ಪಡುಬಿದ್ರಿ : ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಹಾಗೂ ಶ್ರೀ ಗುರು ರಾಘವೇಂದ್ರ ಫ್ರೆಂಡ್ಸ್ ಕಂಚಿನಡ್ಕ ಇವರ ವತಿಯಿಂದ "ಶ್ರೀಕೃಷ್ಣ ಜನ್ಮಾಷ್ಟಮಿ" ಆಚರಣೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹೇಮಚಂದ್ರ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎಸ್ ಶಾಫಿ, ಉದ್ಯಮಿಗಳಾದ ಮಿಥುನ್ ಹೆಗ್ಡೆ, ಗುರಿಕಾರರಾದ ಹರೀಶ್ ಕಂಚಿನಡ್ಕ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾಡಳಿತ ವತಿಯಿಂದ ಶ್ರೀಕೃಷ್ಣ ಜಯಂತಿ ಆಚರಣೆ

Posted On: 06-09-2023 07:02PM
ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ವಳಕಾಡು ಸರಕಾರಿ ಪೌಢಶಾಲೆ ಶಾಲೆಯಲ್ಲಿ ಬುಧವಾರ "ಶ್ರೀಕೃಷ್ಣ ಜಯಂತಿ - 2023" ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಯಾದವ ಗೊಲ್ಲ ಸಮಾಜ ಸಂಘ (ರಿ.) ವಾರಂಬಳ್ಳಿ ಅಧ್ಯಕ್ಷರಾದ ದಯಾನಂದ್ ಬಿ.ಆರ್, ಸ್ಥಳೀಯ ನಗರಸಭಾ ಸದಸ್ಯರಾದ ರಜನಿ ಹೆಬ್ಬಾರ್, ವಳಕಾಡು ಸರಕಾರಿ ಪೌಢಶಾಲಾ ಮುಖ್ಯೋಪಾಧ್ಯಾಯರಾದ ನಿರ್ಮಲಾ, ಸಾಹಿತಿಗಳಾದ ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಉಪಸ್ಥಿತರಿದ್ದರು.
ಕಾರ್ಕಳ : ಶಿಕ್ಷಕ ವೃತ್ತಿ ಪರಮ ಪವಿತ್ರವಾದದ್ದು, ಗುರುತ್ವದೆಡೆಗೆ ಕರೆದೊಯ್ಯುವುದೇ ವಿದ್ಯೆ - ಪ್ರೊ.ಬಿ.ಪದ್ಮನಾಭಗೌಡ

Posted On: 06-09-2023 06:16PM
ಕಾರ್ಕಳ : ಶಿಕ್ಷಕ ಮತ್ತು ಶಿಕ್ಷಕ ವೃತ್ತಿಗಳು ಅತ್ಯಂತ ಶ್ರೇಷ್ಠವಾದದ್ದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾ, ಶಿಕ್ಷಕನೂ ಅಧ್ಯಯನಶೀಲನಾಗಬೇಕು. ನಿರಂತರವಾಗಿ ಗುರುತರವಾದ ಜವಾಬ್ದಾರಿಯಿಂದ ಬೋಧನೆ ಮಾಡುವವರಾಗಬೇಕು ಎಂದು ಪ್ರೊ.ಬಿ.ಪದ್ಮನಾಭ ಗೌಡ ಕರೆನೀಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಆಚರಿಸಲಾದ 'ಗುರುದೇವೋ ಭವ' ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿ ಚೇತನಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಶೆಟ್ಟಿ ಮಾತನಾಡಿ ಗುರುಗಳೆಂದರೆ ಅಪಾರ ಗೌರವದಿಂದ ಕಾಣಬೇಕಾದ ವ್ಯಕ್ತಿ, ಅಂತಹ ವ್ಯಕ್ತಿತ್ವಕ್ಕೆ ಜಗತ್ತಿನಲ್ಲಿ ಅಪೂರ್ವ ಮನ್ನಣೆಯಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದಿ ಉಪನ್ಯಾಸಕ ವಿನಾಯಕ ಜೋಗ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಆದಂ ಶೇಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಸಂಸ್ಥೆಯ ಉಪನ್ಯಾಸಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸಂಸ್ಥೆಯ ಆದರ್ಶ ಮತ್ತು ಕನಸನ್ನು ಹಂಚಿಕೊಂಡರು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ.ಕೆ, ವಿಮಲ್ ರಾಜ್ ಜಿ, ಗಣಪತಿ ಭಟ್ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾಪು : ತಾಯಿಯ ಸಂಸ್ಮರಣೆಗೆ ಪ್ರಥಮ ವರ್ಷ ಕಾಪುವಿನಲ್ಲಿ ಮೂರ್ತಿ ಪ್ರತಿಷ್ಠೆ ; ಮೂರನೇ ವರ್ಷ ಮುಂಬೈನಲ್ಲಿ ಬೃಹತ್ ವೈದ್ಯಕೀಯ ಶಿಬಿರ

Posted On: 06-09-2023 06:05PM
ಕಾಪು : ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ್ದ ಗೀತಾ ಯಾದವ್ ಪೂಜಾರಿ ಅವರ ಮೂರನೇ ಪುಣ್ಯ ತಿಥಿಯ ಪ್ರಯುಕ್ತ ಮುಂಬಯಿ ಮಹಾನಗರದಲ್ಲಿ ಬೃಹತ್ ವೈದ್ಯಕೀಯ ಶಿಬಿರ ನಡೆಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿದ್ದ ಕಾಪು ಪಡುಗ್ರಾಮದ ಗರಡಿಮನೆ ಗೀತಾ ಯಾದವ್ ಪೂಜಾರಿ ಅವರು ರಾಜಕೀಯದ ಜೊತೆಗೆ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಮುಂಬೈ ಜೋಸೆಫ್ ಪಠೇಲ್ ಎಸ್ಟೇಟ್ ನವರಾತ್ರಿ ದುರ್ಗಾ ಪೂಜಾ ಮಂಡಲ್‌ನ ಸಂಸ್ಥಾಪಕರಾಗಿದ್ದ ಅವರು, ಮುಂಬೈ ತುಳುನಾಡ ಕನ್ನಡಿಗರ ಜೊತೆಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದು ಕಾಪು ಪರಿಸರದಲ್ಲಿಯೂ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರು ೨೦೨೦ ಸೆ. ೩ರಂದು ಹೃದಯಘಾತಕ್ಕೊಳಗಾಗಿ ಮೃತಪಟ್ಟಿದ್ದರು. ದಿ| ಗೀತಾ ಯಾದವ್ ಪೂಜಾರಿ ಅವರ ನೆನಪಿಗಾಗಿ ಪತಿ ವಸಂತ್ ಯಾದವ್, ಮಕ್ಕಳಾದ ಮನೋಜ್ ವಿ. ಯಾದವ್, ಸಂತೋಷ್ ವಿ. ಯಾದವ್, ವಿನಯ್ ವಿ. ಯಾದವ್ ಮತ್ತು ನವದುರ್ಗಾ ಲಕ್ಷೀ ಅವರು ೨೦೨೧ರಲ್ಲಿ ಕಾಪು ಗರಡಿ ರಸ್ತೆಯ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಮಾರ್ಬಲ್ ಶಿಲೆಯ ಗುಡಿಯನ್ನು ನಿರ್ಮಿಸಿ, ಅದರಲ್ಲಿ ಅವರ ಪುತ್ಥಳಿಯನ್ನು ಪ್ರತಿಷ್ಟಾಪಿಸಿದ್ದರು. ಗೀತಾ ಯಾದವ್‌ರವರ ಪುತ್ಥಳಿಯ ಜತೆಗೆ ಅವರ ತಾಯಿ ಕಲ್ಯಾಣಿ ಬಾಯಿ ಪೂಜಾರಿ, ಅಜ್ಜಿ ಮುತ್ತಕ್ಕ ಬೈದಿ ಪೂಜಾರ್‍ತಿ ಅವರ ಮೂರ್ತಿಯನ್ನೂ ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿಸಿ ಕರಾವಳಿಯಲ್ಲಿ ಭಾರೀ ಸುದ್ದಿಯಾಗಿದ್ದರು.

ದಿ| ಗೀತಾ ಯಾದವ್ ಪೂಜಾರಿ ಅವರ ಮೂರನೇ ಸಂಸ್ಮರಣೆಯ ಮುಂಬಯಿಯ ವರ್ಸೋವಾದಲ್ಲಿ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಣೆ, ಉಚಿತ ಔಷಧ ವಿತರಣೆ, ಬ್ಲಡ್ ಪ್ರೆಶರ್ ಮತ್ತು ಡಯಾಬಿಟಿಸ್ ಪರೀಕ್ಷೆ, ಅಸ್ತಮಾ ಪರೀಕ್ಷೆ, ಬಿಎಂಐ ಪರೀಕ್ಷೆ, ದಂತ ತಪಾಸಣೆ, ರಕ್ತ ಗುಂಪು ವರ್ಗೀಕರಣ, ಯೂರಿಕ್ ಆಸಿಡ್ ತಪಾಸಣೆ ನಡೆಸಲಾಯಿತು. ಒಂದು ಸಾವಿರಕ್ಕೂ ಅಽಕ ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದ ಬಗ್ಗೆ ದಿ| ಗೀತಾ ಯಾದವ್ ಪೂಜಾರಿ ಅವರ ಪುತ್ರ ಸಂತೋಷ್ ವಿ. ಯಾದವ್ ಅವರು ಈ ಬಗ್ಗೆ ಮಾಹಿತಿ ನೀಡಿ, ನಮ್ಮ ತಾಯಿ ಜೀವಿತಾವಧಿಯಲ್ಲಿ ನಡೆಸಿರುವ ಸೆವಾ ಕಾರ್ಯಗಳು ನಮಗೆಲ್ಲರಿಗೂ ಅನುಕರಣೀಯವಾಗಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವೂ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದು ಅವರ ಹೆಸರನ್ನು ಶಾಶ್ವತವಾಗಿಸುವ ಪ್ರಯತ್ನವಾಗಿ ಗುಡಿ ನಿರ್ಮಿಸಿ, ಶಿಲೆಕಲ್ಲಿನಲ್ಲಿ ಮೂರ್ತಿ ಕೆತ್ತಿಸಿ, ಪ್ರತಿಷ್ಠಾಪಿಸಿದ್ದೇವೆ. ಅವರ ನೆನಪಿನಲ್ಲಿ ಈ ಬಾರಿ ಮೂರನೇ ವರ್ಷದ ಸಾಮೂಹಿಕ ವೈದ್ಯಕೀಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಕಳ : ವಾಲಿಬಾಲ್ ಪಂದ್ಯಾಟದಲ್ಲಿ ನಾನಿಲ್ತಾರ್ ಕುಲಾಲ ಸಂಘ ದ್ವಿತೀಯ

Posted On: 06-09-2023 05:59PM
ಕಾರ್ಕಳ : ತಾಲೂಕಿನ ಕಾರ್ಕಳ ಕುಲಾಲ ಸಂಘದ ಆಯೋಜನೆಯಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ನಾನಿಲ್ತಾರು ಕುಲಾಲ ಸಂಘ ದ್ವಿತೀಯ ಸ್ಥಾನ ಗಳಿಸಿದ್ದು, ನಾನಿಲ್ತಾರು ಕುಲಾಲ ಸಂಘ ಇದರ ಅಧ್ಯಕ್ಷರು ಕುಶ ಆರ್ ಮೂಲ್ಯ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.