Updated News From Kaup
ಬಂಟಕಲ್ಲು : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಿ ಸಿ ರೋಡ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ.
Posted On: 15 Aug 2023, 01:13 PM
ಬಂಟಕಲ್ಲು : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಿ ಸಿ ರೋಡ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಜರಗಿತು. ಧ್ವಜಾರೋಹಣವನ್ನು ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಿಸಿ ರೋಡ್ ಇದರ ಗೌರವಾಧ್ಯಕ್ಷರಾದ ಕೆ ಆರ್ ಪಾಟ್ಕರ್ ನೆರವೇರಿಸಿದರು. ಧ್ವಜಸ್ತಂಭದ ದಾನಿಗಳಾದ ಶೈಲಾ ಮತಯಸ್, ಸಂಘದ ಅಧ್ಯಕ್ಷ ರಾದ ಫಿಲಿಪ್ ಸಲ್ದನ ಉಪಸ್ಥಿತರಿದ್ದರು. ಡೆನಿಸ್ ಡಿಸೋಜಾ ಸ್ವಾಗತಿಸಿದರು. ಸುಂದರ. ಬಂಗೇರ ವಂದಿಸಿದರು.
ಬಂಟಕಲ್ಲು : ಫೆಲಿಕ್ಸ್ ಮಾರ್ಟಿಸ್ ಸ್ಮರಣಾರ್ಥ ರಿಕ್ಷಾ ನಿಲ್ದಾಣಕ್ಕೆ ಸೋಲಾರ್ ದೀಪದ ಕೊಡುಗೆ
Posted On: 15 Aug 2023, 12:15 PM
ಬಂಟಕಲ್ಲು : ಇಲ್ಲಿನ ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಇದರ ರಿಕ್ಷಾ ನಿಲ್ದಾಣಕ್ಕೆ ಸುಮಾರು ರೂ. 25 ಸಾವಿರ ವೆಚ್ಚದಲ್ಲಿ ಫೆಲಿಕ್ಸ್ ಮಾರ್ಟಿಸ್ ಸ್ಮರಣಾರ್ಥ ತೆರೆಜಾ ಮಾರ್ಟಿಸ್ ಹಾಗೂ ಮಕ್ಕಳಿಂದ ಕೊಡುಗೆಯಾಗಿ ನೀಡಿದ ಸೋಲಾರ್ ದೀಪವನ್ನು ಜಯಪ್ರಕಾಶ್ ಮಾರ್ಟಿಸ್ ಉದ್ಘಾಟಿಸಿದರು. ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ಲು ಅಧ್ಯಕ್ಷ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ಲು ಗೌರವಾಧ್ಯಕ್ಷ ಮಾಧವ ಕಾಮತ, ಉಪಾಧಕಾಮತ್, ಉಪಾಧ್ಯಕ್ಷರಾದ ಸತೀಶ್, ಕೋಶಾಧಿಕಾರಿ ಸುಧಾಕರ್, ಸದಸ್ಯರು ಹಾಜರಿದ್ದರು. ಡೆನಿಸ್ ಡಿಸೋಜಾ ಸ್ವಾಗತಿಸಿದರು. ಗೋಪಾಲ್ ದೇವಾಡಿಗ ವಂದಿಸಿದರು.
ಶಿರ್ವ : ಸಂತ ಮೇರಿ ಮಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ
Posted On: 15 Aug 2023, 11:59 AM
ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಇಂದು 77ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು ಧ್ವಜಾರೋಹಣವನ್ನು ನೆರವೇರಿಸಿ, ಇತಿಹಾಸದಲ್ಲಿ ಕೋಟ್ಯಾಂತರ ಭಾರತೀಯರ ತ್ಯಾಗ-ಬಲಿದಾನ- ಹೋರಾಟದ ಫಲವೇ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ. ನಮ್ಮ ಯೋಧರ ತ್ಯಾಗಗಳನ್ನು ಸ್ಮರಿಸೋಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ನೆನೆಯೋಣ. ನವ ಸಮಾಜ ನಿರ್ಮಾಣ ಜೊತೆಗೆ ದೇಶಾಭಿವೃದ್ಧಿಗಾಗಿ ಇಂದು ಯುವಕರು ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮ ನೀಡಿ ದೇಶ ಪ್ರಗತಿಗೆ ಕೈಜೋಡಿಸಬೇಕು ಎಂದು ಮಾತನಾಡಿದರು. ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್, ಜೂನಿಯರ್ ಅಂಡರ್ ಆಫೀಸರ್ ಅನೀಶ್ ಭಟ್ , ಪೂಜಾ, ಕ್ವಾರ್ಟರ್ ಮಾಸ್ಟರ್ ಅನುಪ್ ನಾಯಕ ಪರೇಡ್ ನ ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ರೇಂಜರ್ಸ್ ಸ್ಕೌಟ್ ಲೀಡರ್ ಸಂಗೀತ ಪೂಜಾರಿ, ಎನ್.ಸಿ.ಸಿ, ಎನ್ ಎಸ್ ಎಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಭೋಧಕ ಹಾಗು ಭೋಧಕೇತರ ವೃಂದದವರು ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ವಿಶಾಲ್ ಟೆರೆನ್ಸ್ ವಾಜ್ ಹಾಗೂ ಆಲಿಸ್ಟರ್ ಸುಜಾಯ್ ಡಿಸೋಜ ಸಹಕರಿಸಿದರು. ರೋವರ್ಸ್ ಸ್ಕೌಟ್ ಲೀಡರ್ ಪ್ರಕಾಶ್ ಸ್ವಾಗತಿಸಿ, ಎನ್ಎಸ್ಎಸ್ ಯೋಜನಾಧಿಕಾರಿ ಪ್ರೇಮನಾಥ್ ವಂದಿಸಿದರು. ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‌ಕುಮಾರ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ-ಸಂಯೋಜಿಸಿದರು.
ಕಾಪು ತಾಲೂಕು ಮಟ್ಟದ 77 ನೇ ಸ್ವಾತಂತ್ರ್ಯ ದಿನಾಚರಣೆ
Posted On: 15 Aug 2023, 11:53 AM
ಕಾಪು : ತಾಲೂಕು ಮಟ್ಟದ 77 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರಗಿತು. ಕಾಪು ತಹಶೀಲ್ದಾರರಾದ ನಾಗರಾಜ್ ವಿ ನಾಯ್ಕಡ ಅವರು ಧ್ವಜಾರೋಹಣ ನೆರವೇರಿಸಿದರು. ಸನ್ಮಾನ : ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ನವೀನ್ ಕುಮಾರ್ ಹೆಚ್.ಡಿ, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ಸಂತೋಷ್, ಕಾಪು ವೃತ್ತ ನಿರೀಕ್ಷಕರಾದ ಪೂವಯ್ಯ ಹಾಗೂ ಕಾಪು ಪುರಸಭೆಯ ಸದಸ್ಯರು ಮತ್ತು ಕಾಪು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬಂಟಕಲ್ಲು : ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ - ಸ್ವಾತಂತ್ರ್ಯ ದಿನಾಚರಣೆ
Posted On: 15 Aug 2023, 09:55 AM
ಬಂಟಕಲ್ಲು : ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ.) ಬಂಟಕಲ್ಲು ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಜರಗಿತು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತನ್ ಕುಮಾರ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ.) ಬಂಟಕಲ್ಲು ಗೌರವಾಧ್ಯಕ್ಷ ಮಾಧವ ಕಾಮತ್, ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಅಧ್ಯಕ್ಷ ಕೆ ಆರ್ ಪಾಟ್ಕರ್, ಕಾರು ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ಲು ಅಧ್ಯಕ್ಷ ಉಮೇಶ್ ರಾವ್, ನಿವೃತ್ತ ಶಿಕ್ಷಕರಾದ ಪುಂಡಲೀಕ ಮರಾಠೆ, ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ.) ಬಂಟಕಲ್ಲು ಅಧ್ಯಕ್ಷ ಮಂಜುನಾಥ್ ಪೂಜಾರಿ ಉಪಸ್ಥಿತರಿದ್ದರು. ಗೋಪಾಲ್ ದೇವಾಡಿಗ ಸ್ವಾಗತಿಸಿದರು. ಡೆನಿಸ್ ಡಿಸೋಜ ವಂದಿಸಿದರು.
ಮಣಿಪಾಲದ ಕೆಲವೆಡೆ ತಡರಾತ್ರಿವರೆಗೆ ತೆರೆದಿರುವ ಹೋಟೆಲ್ ಗಳಲ್ಲಿ ಅನೈತಿಕ ಚಟುವಟಿಕೆ ; ಸೂಕ್ತ ಕ್ರಮಕ್ಕೆ ದಿನೇಶ್ ಮೆಂಡನ್ ಆಗ್ರಹ
Posted On: 14 Aug 2023, 10:59 PM
ಉಡುಪಿ : ಶೈಕ್ಷಣಿಕ ಕ್ಷೇತ್ರ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ರಾತ್ರಿ ಇಡೀ ಕಾರ್ಯಾಚರಿಸುತ್ತಿದ್ದ ಬಾರ್ ಮತ್ತು ಪಬ್ ಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಅದೇ ರೀತಿ ಮಣಿಪಾಲದ ಕೆಲವು ಕಡೆ ಹೋಟೆಲ್ ವ್ಯಾಪಾರದ ನೆಪದಲ್ಲಿ ತಡರಾತ್ರಿವರೆಗೂ ವ್ಯಾಪಾರ ಮಾಡಿಕೊಂಡು ಅಲ್ಲಿ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದ್ದು ಇದರ ವಿರುದ್ಧವೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷದ್ ಬಜರಂಗದಳ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ.
ಪಡುಬಿದ್ರಿ : ಶ್ರೀ ಮಹಾಗಣಪತಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ನೂತನ ಕಚೇರಿ ಉದ್ಘಾಟನೆ
Posted On: 14 Aug 2023, 09:31 PM
ಪಡುಬಿದ್ರಿ : ಶ್ರೀ ಮಹಾಗಣಪತಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಪಡುಬಿದ್ರಿ ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಸೋಮವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷರಾದ ಯಶೋದಾ, ಕಾಪು ತಾಲೂಕು ಸಂಜೀವಿನಿ ವಲಯ ಮೇಲ್ವಿಚಾರಕರಾದ ಸುಜಾತ, ಪಡುಬಿದ್ರಿ ಶ್ರೀ ಮಹಾಗಣಪತಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಸುಮತಿ, ಪಡುಬಿದ್ರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪಂಚಾಕ್ಷರಿ ಹಿರೇಮಟ್, ಕಾರ್ಯದರ್ಶಿಗಳಾದ ರೂಪಲತಾ ಉಪಸ್ಥಿತರಿದ್ದರು.
ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಶಾಸಕರ ಭೇಟಿ ; ವಿವಿಧ ಸವಲತ್ತು ವಿತರಣೆ ; ಸಾರ್ವಜನಿಕರ ಅಹವಾಲು ಸ್ವೀಕಾರ
Posted On: 14 Aug 2023, 09:25 PM
ಪಡುಬಿದ್ರಿ : ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದರು. ಶಾಸಕರು ಪಂಚಾಯತ್ ನ 25 ಶೇಕಡಾ ನಿಧಿಯಿಂದ ಪರಿಶಿಷ್ಟ ಜಾತಿ ಅವರಿಗೆ ಮಂಜೂರಾದ ಮನೆ ರಿಪೇರಿಯ ಸಹಾಯಧನ ಹಾಗೂ ಶೇಕಡಾ 5 ನಿಧಿಯಿಂದ ಅಂಗವಿಕಲರಿಗೆ ಸಹಾಯಧನ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಪಡುಬಿದ್ರಿ ಗ್ರಾಮ ಪಂಚಾಯತ್ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷೆ ಯಶೋದಾ, ಪಡುಬಿದ್ರಿ ಪೋಲಿಸ್ ಉಪ ನಿರೀಕ್ಷಕರಾದ ಪ್ರಸನ್ನ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ರಾಜಶ್ರೀ ಕಿಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪಂಚಾಕ್ಷರಿ, ಗ್ರಾಮ ಆಡಳಿತಾಧಿಕಾರಿಗಳಾದ ಮಥಾಯಿ, ಪಡುಬಿದ್ರಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿರ್ವ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿರ್ವ ವಲಯದ ಬೃಹತ್ ಪಂಜಿನ ಮೆರವಣಿಗೆ ಸಂಪನ್ನ
Posted On: 14 Aug 2023, 09:05 PM
ಶಿರ್ವ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿರ್ವ ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆಯು ಆಗಸ್ಟ್ 13ರಂದು ಶಿರ್ವ ಸಿದ್ಧಿವಿನಾಯಕ ದೇವಸ್ಥಾನದಿಂದ ಆರಂಭಗೊಂಡು ಶಿರ್ವಪೇಟೆವರೆಗೆ ಸಾಗಿ ಬಂತು. ನಂತರ ಶಿರ್ವ ಗಣೇಶೋತ್ಸವ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಪ್ರಾಸ್ತಾವಿಕ ನುಡಿಗಳನ್ನು ಜಿಲ್ಲಾ ಸೇವಾಪ್ರಮುಖ್ ರಾದ ವಿಖ್ಯಾತ ಭಟ್ ಮಾಡಿದರು. ದಿಕ್ಸೂಚಿ ಭಾಷಣವನ್ನು ಬಜರಂಗದಳ ರಾಜ್ಯಸಂಚಾಲಕರಾದ ಸುನಿಲ್ ಕೆ ಆರ್ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ವಿ. ಹಿಂ. ಪ. ತಾಲೂಕು ಅಧ್ಯಕ್ಷ ಜಯಪ್ರಕಾಶ್ ಪ್ರಭು, ತಾಲೂಕು ಕಾರ್ಯದರ್ಶಿ ರಾಜೇಂದ್ರ ಶೆಣೈ, ಸಹ ಸಂಚಾಲಕ್ ಆನಂದ ಶಿರ್ವ, ತಾಲೂಕು ದುರ್ಗಾವಾಹಿನಿ ಪ್ರಮುಖ್ ನಿಕ್ಷಿತಾ , ಪ್ರಕಾಶ್ ಕೋಟ್ಯಾನ್ ವಲಯ ಅಧ್ಯಕ್ಷರು, ಕಾರ್ಯದರ್ಶಿ ನೀರಜ್, ಸಂಚಾಲಕ್ ವಿಶ್ವನಾಥ್, ಸಂಘದ ಹಿರಿಯರು , ಶ್ರೀಕಾಂತ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ,ಶಿ ಲ್ಪಾಸುವರ್ಣ, ರವೀಂದ್ರ ಪಾಟ್ಕರ್, ಪ್ರಸಾದ್ ಕುತ್ಯಾರ್, ಭಾಜಪದ ಪ್ರಮುಖರು ಉಪಸ್ಥಿತರಿದ್ದರು.
ಬೆಳಪುವಿನಲ್ಲಿ ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣಕ್ಕೆ ಸ್ಥಳ ಪರಿಶೀಲನೆ
Posted On: 14 Aug 2023, 08:58 PM
ಬೆಳಪು : ಇಲ್ಲಿ ನಿರ್ಮಾಣಗೊಳ್ಳಲಿರುವ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಕ್ರೀಡಾಂಗಣಕ್ಕೆ ರಾಜ್ಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ರಜನೀಶ್ ರವರ ತಂಡ ಸ್ಥಳ ಪರಿಶೀಲನೆ ನಡೆಯಿತು. ಗ್ರಾಮ ಅಭಿವೃದ್ಧಿಯ ರುವಾರಿ ಡಾ. ದೇವಿಪ್ರಸಾದ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆ ಅಧಿಕಾರಿಗಳು, ತಾಲೂಕು ಸರ್ವೆ ಅಧಿಕಾರಿಗಳು, ಗ್ರಾಮ ಕರಣಿಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
