Updated News From Kaup
ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆ : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದಿಂದ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮ

Posted On: 25-11-2022 06:28PM
ಕಾಪು : ಯಾವುದೇ ಪ್ರದೇಶದ ಸಾಂಸ್ಕೃತಿಕ ಹಿನ್ನೆಲೆಯ ಚಲನಚಿತ್ರ ವೀಕ್ಷಿಸಿದಾಗ ಅಲ್ಲಿಯ ಚಿತ್ರಣ ನಮ್ಮ ಮುಂದೆ ಹೇಗೆ ಬರುತ್ತದೆಯೋ ಹಾಗೆ ಸಾಹಿತ್ಯದ ಓದುವಿಕೆಯಿಂದ ಕವಿ, ಲೇಖಕರ ಓದು, ಹಿನ್ನೆಲೆ, ಪರಿಸರ ಇತ್ಯಾದಿ ತಿಳಿಯಲು ಸಾಧ್ಯ. ಬರೆಯಲು ಪ್ರತಿಯಬ್ಬರಿಗೂ ಸಾಧ್ಯ. ಪ್ರಯತ್ನ ಪಡದೆ ಯಾವುದೇ ಕಾರ್ಯ ಸಾಧ್ಯವಾಗದು. ಯಾವುದೇ ವಿಷಯವನ್ನು ಬರೆದು, ಓದಿದಾಗ ನಮ್ಮಲ್ಲಿ ಉಳಿಯಲು ಸಾಧ್ಯ. ನಮ್ಮನ್ನು ನಾವು ಪ್ರಯೋಗಕ್ಕೆ ಒಡ್ಡಿದಾಗ ಯಾವುದೇ ಕಾರ್ಯ ಸಾಧ್ಯ. ಮೊದಲ ಅಕ್ಷರದಿಂದ ಯಾರು ಸಾಹಿತಿ ಆಗಿಲ್ಲ. ಓದು, ಬರವಣಿಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಬಹುದು. ಸಾಹಿತ್ಯದ ಬಗೆಗಿನ ಒಲವನ್ನು ನಾವೆಲ್ಲರೂ ಬೆಳೆಸೋಣ ಎಂದು ಕಟಪಾಡಿಯ ತೃಷಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ಹೇಳಿದರು.

ಅವರು ಕಾಪು ದಂಡ ತೀರ್ಥ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ಮಾಸಾಚರಣೆ - ನವೆಂಬರ್ ತಿಂಗಳ ಸಡಗರ 'ಸಂಪದ - ೨೦೨೨' ಕಾರ್ಯಕ್ರಮದಲ್ಲಿ 'ಶಾಲೆಯತ್ತ ಸಾಹಿತ್ಯ' ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲಿಕ ಮರಾಠೆ ವಹಿಸಿದ್ದರು. ಈ ಸಂದರ್ಭ ಕಾಪು ತಾಲೂಕು ಘಟಕದ ಕಾರ್ಯದರ್ಶಿ ನೀಲಾನಂದ ನಾಯಕ್, ಕ.ಸಾ.ಪ ಜಿಲ್ಲಾ ಸಮಿತಿಯ ಸದಸ್ಯ ಮಧುಕರ್ ಎಸ್, ಕಾಪು ತಾಲೂಕು ಕ.ಸಾ.ಪ ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ, ದಂಡತೀರ್ಥ ಸಂಸ್ಥೆಯ ಪ್ರಾಂಶುಪಾಲೆ ಮರೀನಾ ಸರೋಜಾ ಸೋನ್ಸ್, ದಂಡ ತೀರ್ಥ ಸಮೂಹ ವಿದ್ಯಾ ಸಂಸ್ಥೆಯ ಶಿಕ್ಷಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ.ಸಾ.ಪ ಕಾಪು ತಾಲೂಕು ಘಟಕದ ಕಾರ್ಯದರ್ಶಿ ನೀಲಾನಂದ ನಾಯಕ್ ಪ್ರಸ್ತಾವಿಸಿ, ಸ್ವಾಗತಿಸಿದರು. ಕ.ಸಾ.ಪ ಕಾಪು ತಾಲೂಕು ಘಟಕದ ಖಜಾಂಚಿ ವಿದ್ಯಾಧರ್ ಪುರಾಣಿಕ್ ನಿರೂಪಿಸಿದರು. ಕ.ಸಾ.ಪ ಜಿಲ್ಲಾ ಸಮಿತಿಯ ಸದಸ್ಯ ಮಧುಕರ್ ಎಸ್ ವಂದಿಸಿದರು.
ಕ್ರಿಕೆಟ್ : ಕಟಪಾಡಿಯ ರಿತೇಶ್ ಹೆಚ್ ಸುವರ್ಣ ರಾಜ್ಯಮಟ್ಟಕ್ಕೆ ಆಯ್ಕೆ

Posted On: 24-11-2022 11:12PM
ಕಟಪಾಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸಹಯೋಗದಲ್ಲಿ ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನವೆಂಬರ್ 16 ಮತ್ತು 17 ರಂದು ಹಾಸನ ಜಿಲ್ಲೆಯ ತಾಲೂಕು ಕ್ರೀಡಾಂಗಣ ಚನ್ನರಾಯಪಟ್ಟಣದಲ್ಲಿ ನಡೆಯಿತು.
ಸೈಂಟ್ ಜಾನ್ಸ್ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಂಕರಪುರದ ವಿದ್ಯಾರ್ಥಿ ಕಟಪಾಡಿ ಅಂಬಾಡಿ ಹರೀಶ್ ದಯಾವತಿಯವರ ಪುತ್ರ ರಿತೇಶ್ ಹೆಚ್ ಸುವರ್ಣ ಉಡುಪಿ ಜಿಲ್ಲೆಯ ಕ್ರಿಕೆಟ್ ತಂಡದಲ್ಲಿ ಆಡಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಕಟಪಾಡಿಯ ಕ್ರಿಕೆಟ್ ಕೋಚ್ ಉದಯ್ ಹಾಗೂ ಪ್ರದೀಪ್ ಅವರಲ್ಲಿ ತರಬೇತಿ ಪಡೆದಿರುತ್ತಾನೆ.
ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ಹಾವು ನಾವು ಮತ್ತು ಪರಿಸರ ಜಾಗೃತಿ ಪ್ರಾತ್ಯಕ್ಷಿಕೆ

Posted On: 24-11-2022 06:34PM
ಪಲಿಮಾರು : ಇಲ್ಲಿನ ಹೊೖಗೆ ಫ್ರೆಂಡ್ಸ್ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ, ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಉಡುಪಿ ಇವರಿಂದ 'ಹಾವು ನಾವು ಮತ್ತು ಪರಿಸರ' ಎಂಬ ವಿಷಯದ ಕುರಿತು ಜಾಗೃತಿ ಮೂಡಿಸುವ ಪ್ರಾತ್ಯಕ್ಷಿಕೆ ನಡೆಯಿತು.
ಜೀವಂತ ಹಾವುಗಳನ್ನು ತಂದು, ಅವುಗಳ ಪರಿಚಯವನ್ನು ಮಾಡಿಸಿದರು. ಹಾವುಗಳು ಕಾರಣವಿಲ್ಲದೆ ಯಾರಿಗೂ ಕಚ್ಚುವುದಿಲ್ಲ ವಿದ್ಯಾರ್ಥಿಗಳು ಹಾವುಗಳನ್ನು ಕಂಡು ಭಯಪಡಬೇಕಾಗಿಲ್ಲ ಎಂಬುದಾಗಿ, ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಅಧ್ಯಕ್ಷತೆ ವಹಿಸಿದ್ದರು. ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು , ಉಪಾಧ್ಯಕ್ಷರಾದ ಸೌಮ್ಯಲತ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರ್, ಹೊೖಗೆ ಫ್ರೆಂಡ್ಸ್ ಅಧ್ಯಕ್ಷರಾದ ರಾಘವೇಂದ್ರ ಜೆ ಸುವರ್ಣ, ಉಪಾಧ್ಯಕ್ಷ ರಿತೇಶ್ ದೇವಾಡಿಗ, ಪಂಚಾಯತ್ ಸದಸ್ಯರಾದ ಸುಮಂಗಳ ದೇವಾಡಿಗ, ರಾಯೆಶ್ವರ ಪೈ , ಸುಜಾತಾ ,ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕಿ ಸುನಿತಾ, ಟೆರಾಕೋಟ ಕಲಾವಿದ ವೆಂಕಿ ಪಲಿಮಾರ್ ಉಪಸ್ಥಿತರಿದ್ದರು.
ಉಪನ್ಯಾಸಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಸಹಶಿಕ್ಷಕಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಹಶಿಕ್ಷಕಿ ಸುನಿತಾ ವಂದಿಸಿದರು.
ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ (ಮೈಸ್) ಕಾಪುವಿನಲ್ಲಿ ಶುಭಾರಂಭ

Posted On: 24-11-2022 05:19PM
ಕಾಪು : ಮೂವತ್ತಮೂರು ವರ್ಷಗಳ ಸಾರ್ಥಕ ಸೇವೆ ನೀಡಿದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ ಇದೀಗ ಕಾಪುವಿನ ಹೊಸ ಮಾರಿಗುಡಿ ಸಮೀಪದ ಹಿರಾ ಕಾಂಪ್ಲೆಕ್ಸ್ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿದೆ.
ಬೇಸಿಕ್ ಆಫ್ ಐಟಿ, ವಿಂಡೋಸ್, ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಇಂಟರ್ನೆಟ್ ಆಂಡ್ ಎಸೆನ್ಶಿಯಲ್, ಬೇಸಿಕ್ ಆಫ್ ಹಾರ್ಡ್ವೇರ್, ಮಾನ್ಯತೆ ಸರ್ಟಿಫಿಕೇಟ್ ಆಧಾರಿತ ಡಿಪ್ಲೋಮಾ ಇನ್ ಐಟಿ, ಇ - ಆಫೀಸ್, ಐಟಿ/ಡಿಸಿಎ, ನುಡಿ ತಂತ್ರಾಂಶ, ಅಡ್ವಾನ್ಸ್ಡ್ ಎಕ್ಸೆಲ್, ಟ್ಯಾಲಿ ವಿದ್ ಜಿಎಸ್‌ಟಿ/ವ್ಯಾಟ್, ವರ್ಕ್ ಪ್ಲೇಸ್ ಸ್ಕಿಲ್ಸ್ ಇತ್ಯಾದಿ ಕಲಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9380571699 9880035284
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಳಕ್ಕೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

Posted On: 23-11-2022 07:00PM
ಉಚ್ಚಿಲ : ಇತ್ತೀಚೆಗೆ ನವೀಕೃತಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರರವರು ಬುಧವಾರ ಸಂಜೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮಿಯ ದರ್ಶನ ಪಡೆದರು.
ದೇವಳದ ವತಿಯಿಂದ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಖ್ಯ ಅರ್ಚಕ ಕೆ ವಿ ರಾಘವೇಂದ್ರ ಉಪಾಧ್ಯಾಯ ಹಾಗೂ ವಿಷ್ಣುಮೂರ್ತಿ ಉಪಾಧ್ಯಾಯರವರು ಶ್ರೀದೇವಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.
ದೇವಾಲಯದ ರುವಾರಿ ನಾಡೋಜ ಡಾ. ಜಿ. ಶಂಕರ್ ರವರು ದೇವಳದ ವತಿಯಿಂದ ಗೃಹ ಸಚಿವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿದರು.
ಈ ಸಂದರ್ಭ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲಿಯನ್, ಮಹಾಜನ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಜಾನಕಿ ಲೀಲಾಧರ್, ನಾರಾಯಣ ಕರ್ಕೇರಾ, ದಿನೇಶ್ ಎರ್ಮಾಳು, ದಿನೇಶ್ ಮೂಳೂರು, ಮೋಹನ್ ಬಂಗೇರ, ದೇವಳದ ಪ್ರಧಾನ ಕಾರ್ಯನಿರ್ವಾಹಕ ಸತೀಶ್ ಅಮೀನ್ ಮಟ್ಟು, ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ. ಸಿ ಪೂವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ; 30 ವರ್ಷದ ಸಂಭ್ರಮ ; ಹೊಸ ಕಟ್ಟಡದ ಶಿಲಾನ್ಯಾಸ

Posted On: 22-11-2022 10:39AM
ಕಾಪು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23 ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಕಾಲೇಜಿನ 30 ವರ್ಷದ ಸಂಭ್ರಮ ಹಾಗು ಹೊಸ ಕಟ್ಟಡದ ಶಿಲಾನ್ಯಾಸ ಸೋಮವಾರ ನಡೆಯಿತು.

ವಿದ್ಯಾರ್ಥಿ ಸಂಘದ ನೂತನ ನಾಯಕನಾಗಿ ಗೌರವ್ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದನು.

ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ತುಳು ಚಿತ್ರರಂಗದ ನವರಸ ನಟ ಭೊಜರಾಜ್ ವಾಮಂಜೂರು, ಕಾಲೇಜಿನ ಪ್ರಾಂಶುಪಾಲರಾದ ಸ್ಟೀವನ್ ಕ್ವಾಡ್ರಸ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರೊಷನಿ ಯಶ್ವಂತ್, ಮತ್ತು ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿರ್ವ : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿಯಲ್ಲಿ ಪ್ರತಿಭಾ ದಿನಾಚರಣೆ

Posted On: 21-11-2022 05:29PM
ಶಿರ್ವ : ಕುತ್ಯಾರಿನಲ್ಲಿರುವ ಆನೆಗುಂದಿ ಶ್ರೀ ಸರಸ್ವತಿ ಪೀಠದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್‌ನಲ್ಲಿ ನವೆಂಬರ್ 19ರಂದು ಪ್ರತಿಭಾ ದಿನಾಚರಣೆ ಆಚರಿಸಲಾಯಿತು.

ಖ್ಯಾತ ಗಾಯಕಿ ಹಾಗೂ ಕಲಾವಿದೆ ಕಾವ್ಯಶ್ರೀ ಆಚಾರ್ಯ ಕೊಡವೂರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಭಾವಪೂರ್ಣವಾದ ಮಧುರ ಗೀತೆಗಳೊಂದಿಗೆ ಮಕ್ಕಳನ್ನು ರಂಜಿಸಿದರು.

ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ (ಆಸೆಟ್) ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ವಿದ್ವಾನ್ ಶಂಭುದಾಸ್ ಗುರೂಜಿ, ಪ್ರಾಂಶುಪಾಲ ಗುರುದತ್ತ ಸೋಮಯಾಜಿ, ವಿಜಯಲಕ್ಷ್ಮಿ ತಂತ್ರಿ, ಸಹಾಯಕ ಪ್ರಾಂಶುಪಾಲೆ ಸಂಗೀತಾ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಶಿಕ್ಷಕರ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ನಡೆದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ವಿದ್ಯಾರ್ಥಿಗಳು ನೃತ್ಯ, ಗಾಯನ ಮತ್ತು ಕಿರುನಾಟಕ ಕಾರ್ಯಕ್ರಮಗಳೊಂದಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಂಚಿನಡ್ಕ ಸತ್ಯದೇವಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ : ಕುಣಿತ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 19-11-2022 04:16PM
ಪಡುಬಿದ್ರಿ : ಕಂಚಿನಡ್ಕ ಸತ್ಯದೇವಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 28 ವರ್ಷದ ಮಹಾಪೂಜೆಯ ಅಂಗವಾಗಿ ಆಯೋಜಿಸಿರುವ ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶನಿವಾರ ನಡೆಯಿತು.

ವಿಶೇಷವಾಗಿ ಅಯ್ಯಪ್ಪ ಮಾಲಾಧಾರಿಗಳ ಶಿಬಿರದಲ್ಲಿ ನಡೆದ ಕ್ಷೇತ್ರಶುದ್ಧಿ,ಗಣಹೋಮ ಸಂದರ್ಭದಲ್ಲಿ ಪಡುಬಿದ್ರಿ ಬ್ರಹ್ಮಸ್ಥಾನದ ನಾಗಪಾತ್ರಿ ಗೌರವಾನ್ವಿತ ಸುರೇಶ್ ಭಟ್ ಅವರ ದಿವ್ಯ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭು, ಕರ್ನಾಟಕ ರಾಜ್ಯ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್.ಆರ್.ಹೆಗ್ಡೆ, ಪಡುಬಿದ್ರಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಗುರುರಾಜ್ ಪೂಜಾರಿ,ಕೊಂಕನಡ್ಪು ಕೋಡ್ದಬ್ಬು ದೈವಸ್ಥಾನ ಪ್ರ.ಅರ್ಚಕರಾದ ಬಾಬು ಮುಖಾರಿ, ಕಾಪು ಪ್ರಖಂಡ ವಿಹಿಂಪ ಮುಖಂಡರಾದ ರಾಜೇಂದ್ರ ಶೆಣೈ, ಹಿಂಜಾವೇ ಮುಖಂಡ ರಾಜೇಶ್ ಉಚ್ಚಿಲ,ಊರಿನ ಹಿರಿಯರಾದ ಸುಬ್ಬ ಕಂಚಿನಡ್ಕ, ಕೃಷ್ಣ ಗುರುಸ್ವಾಮಿ, ಸಮಿತಿಯ ಅಧ್ಯಕ್ಷ ಶಿವಪ್ಪ ಸಾಲ್ಯಾನ್ ಮೊದಲಾದವದರು ಉಪಸ್ಥಿತರಿದ್ದರು.
ಪಡುಬಿದ್ರಿ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನ ಶೀತಲೀಕೃತ ಶವಗಾರ ಉದ್ಘಾಟನೆ

Posted On: 19-11-2022 02:43PM
ಪಡುಬಿದ್ರಿ : 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಿಂದ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ ಶೀತಲೀಕೃತ ಶವಗಾರವನ್ನು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮವಾಗಿ ನೂತನ ಶೀತಲಿಕೃತ ಘಟಕ ಚಾಲನೆಗೊಂಡಿದ್ದು ಉತ್ತಮ ಬೆಳವಣಿಯಾಗಿದ್ದು. ಅಮೃತಯೋಜನೆಯಡಿ ತನ್ನ ಶಿಫಾರಸ್ಸಿನ ಮೇರೆಗೆ 20 ಲಕ್ಷ ಅನುದಾನದಲ್ಲಿ ಶವಗಾರ ಕಟ್ಟಡ ನಿರ್ಮಾಣಗೊಂಡಿದ್ದು ಹಾಗೂ ನೂತನ ಶವಗಾರಕ್ಕೆ 5 ಲಕ್ಷ ಮೊತ್ತದ ಶೀತಲಿಕೃತ ಘಟಕವನ್ನು ಸಹಕಾರ ಸಪ್ತಾಹ ನಿಟ್ಟಿನಲ್ಲಿ ಕೊಡಮಾಡಿದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ನಾಗಭೂಷಣ್ ಉಡುಪ, ತಾಲೂಕು ವೈದ್ಯಾಧಿಕಾರಿ ವಾಸುದೇವ್ ಉಪಾಧ್ಯಾಯ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಮಹಾಲಕ್ಷ್ಮಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಯಶಪಾಲ್ ಸುವರ್ಣ, ಸೇವಾಭಾರತಿ ಬೆಳ್ತಂಗಡಿ ಅಧ್ಯಕ್ಷರಾದ ಕೆ ವಿನಾಯಕ್ ರಾವ್ , ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಕೋಟ್ಯಾನ್, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಪಡುಬಿದ್ರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶ್ರೀ ಕಿಣಿ, ಪಡುಬಿದ್ರಿ ಗಣಪತಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ ಎಚ್, ಸೊಸೈಟಿಯ ನಿರ್ದೇಶಕರು, ಸಿಬ್ಬಂದಿ ವರ್ಗ, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಪು : ಪಡು ಕುತ್ಯಾರು ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಮಹೋತ್ಸವ ಸಂಪನ್ನ

Posted On: 19-11-2022 01:47PM
ಕಾಪು : ತಾಲೂಕಿನ ಪಡು ಕುತ್ಯಾರು ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಮಹೋತ್ಸವವು ಆನೆಗುಂದಿ ಮಠದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನವೆಂಬರ್ 18ರಂದು ಜರಗಿತು.
ಈ ಸಂದರ್ಭ ಕ್ಷೇತ್ರದ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು. ಶ್ರೀದೇವಿಯ ಮಹಾಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯು ನಡೆಯಿತು.
ಮುಕ್ತೇಶ್ವರ ಪ್ರಕಾಶ ಎನ್ ಆಚಾರ್ಯ, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಚಂದ್ರ ಎಚ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಕಾಪು ಜಯರಾಮ ಆಚಾರ್ಯ, ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.