Updated News From Kaup
ಡಿಸೆಂಬರ್ 29 : ನೇರ ಸಂದರ್ಶನ
Posted On: 26-12-2022 11:40PM
ಉಡುಪಿ : ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಡಿಸೆಂಬರ್ 29 ರಂದು ಬೆಳಗ್ಗೆ 10.30 ಕ್ಕೆ ಬಿ.ಎಸ್.ಎಲ್ ಇಂಡಿಯಾ ಪ್ರೈ.ಲಿ. 2ನೇ ಮಹಡಿ, ನಂದ ಕಮರ್ಷಿಯಲ್ ಕಾಂಪ್ಲೆಕ್ಸ್, ಕೋರ್ಟ್ ರೋಡ್, ಉಡುಪಿ ಇಲ್ಲಿ ನೇರ ಸಂದರ್ಶನ ನಡೆಯಲಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಮಕ್ಕಳ ದಾಖಲಾತಿಗೆ ಅನುಗುಣವಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಿ : ಡಾ. ವಿಶಾಲ್
Posted On: 26-12-2022 11:33PM
ಉಡುಪಿ : ಶಾಲಾ ಕಟ್ಟದ ನಿರ್ಮಾಣ ಸಂದರ್ಭದಲ್ಲಿ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಕೊಠಡಿಗಳನ್ನು ನಿರ್ಮಿಸುವಂತೆ ಇಂಜಿನಿಯರಿಂಗ್ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ವಿಶಾಲ್ ಆರ್ ಸೂಚನೆ ನೀಡಿದರು. ಅವರು ಇಂದು ನಗರದ ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ಪಿ.ಎಸ್ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಕೆ.ಪಿ.ಎಸ್ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಳೆದ ಮೂರು ವರ್ಷಗಳ ನಿರ್ಮಾಣ ಹಾಗೂ ದುರಸ್ಥಿ ಕಾಮಗಾರಿಗಳ ಪ್ರಗತಿ ವಿವರಗಳನ್ನು ಪರಿಶೀಲಿಸಿದ ಅವರು, ಬೇರೆ ಬೇರೆ ಅನುದಾನಗಳನ್ನು ಒಗ್ಗೂಡಿಸಿ ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ ತಿಳಿಸಿದರು.
ಕಾಪು : ಮಗುವಿನ ಚಿಕಿತ್ಸೆಗೆ ಧನಸಹಾಯ ನೀಡಿದ ಕುತ್ಯಾರು ಗ್ರಾಮದ ಯುವಕರು
Posted On: 26-12-2022 11:24PM
ಕಾಪು : ಕುತ್ಯಾರು ಗ್ರಾಮದ ಯುವಕರ ತಂಡ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಹಂಪಿ ಯಾತ್ರೆ ಕೈಗೊಂಡು ಹಿಂದುರುಗಿ ಬಂದ ಉಳಿದ ಹಣ ರೂ.5,400 ಹಾಗೂ ಇತರರಿಂದ ಒಟ್ಟು 15,000 ವನ್ನು ಸಂಗ್ರಹಿಸಿ ಪೇರಾಡಿ ಗ್ರಾಮದ ಶ್ರೀಧರ್ ಪೂಜಾರಿ ಇವರ 7 ವರ್ಷದ ಮಗು ಪ್ರೀತೇಶ್ ರವರ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು.
ಕಾಪು : ಕಳತ್ತೂರಿನಲ್ಲಿ ಆರ್ಥಿಕ ಹಿಂದುಳಿದ ನಾಲ್ಕು ಮಹಿಳೆಯರಿಗೆ ಸ್ವಂತ ಮನೆ ನಿರ್ಮಾಣ
Posted On: 26-12-2022 11:13PM
ಕಾಪು : ಆಲ್ ಕಾರ್ಗೋ ಲೋಜಿಸ್ಟಿಕ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶಶಿಕಿರಣ್ ಶೆಟ್ಟಿಯವರು ದಾನದ ರೂಪದಲ್ಲಿ 2021-22 ಪಟ್ಟಿಯಲ್ಲಿ ಮಂಗಳೂರಿನ ಉದ್ಯಮಿ ಎ.ಜೆ.ಶೆಟ್ಟಿ ಇವರ ಅಧ್ಯಕ್ಷತೆಯ ವಿಶ್ವ ಬಂಟರ ಪ್ರತಿಷ್ಠಾನ ಮಂಗಳೂರು ಇವರ ಮುಖಾಂತರ ಸುಮಾರು 8 ಲಕ್ಷ ವೆಚ್ಚದ 17 ಮನೆ ನಿರ್ಮಾಣಗೊಂಡಿದ್ದು ಅದರಲ್ಲಿ ಕಾಸರಗೋಡು 7 ಮನೆ, ಮಂಗಳೂರು 5 ಮನೆ, ಕುಂದಾಪುರ 1 ಮನೆ ಹಾಗೂ ಕಾಪು ತಾಲೂಕಿನ ಕಳತ್ತೂರು ಗ್ರಾಮಕ್ಕೆ 4 ಮನೆ ನಿರ್ಮಿಸಿ ಕೊಟ್ಟಿರುತ್ತಾರೆ.
ರಾಜ್ಯ ಮಟ್ಟದ ಭಜನಾ ಸ್ಪರ್ಧೆ : ಉದ್ಯಾವರದ ಶ್ರೀ ನಾರಾಯಣಗುರು ಯುವಜನ ಕಲಾ ಮಂಡಳಿಗೆ ದ್ವಿತೀಯ ಸ್ಥಾನ
Posted On: 26-12-2022 12:10PM
ಕಾಪು : ಕರಾವಳಿ ಮಿತ್ರ ವೃಂದ ಮತ್ತು ಮಹಿಳಾ ವೃಂದ ಕಾಪು ಪಡು ಇವರ ಆಶ್ರಯದಲ್ಲಿ ಕಾಪುವಿನಲ್ಲಿ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಉದ್ಯಾವರ ಬಿಲ್ಲವ ಮಹಾಜನ ಸಂಘದ ಅಂಗಸಂಸ್ಥೆಯಾದ ಶ್ರೀ ನಾರಾಯಣಗುರು ಯುವ ಜನ ಕಲಾ ಮಂಡಳಿ ಉದ್ಯಾವರ ದ್ವಿತೀಯ ಸ್ಥಾನ ಪಡೆದಿರುತ್ತದೆ.
ಓಮನ್ ಬಿಲ್ಲವಾಸ್ : ಅಧ್ಯಕ್ಷರಾಗಿ ಸುಜಿತ್ ಎಸ್ ಅಂಚನ್ ಪಾಂಗಳ ಆಯ್ಕೆ
Posted On: 24-12-2022 03:49PM
ಗಲ್ಫ್ ರಾಷ್ಟ್ರದ ಸುಲ್ತಾನೇಟ್ ಆಪ್ ಓಮನ್ (ಮಸ್ಕತ್) ಇಲ್ಲಿರುವ ಓಮನ್ ಬಿಲ್ಲವಾಸ್ ಸಂಘಟನೆಯ 2023 ರಿಂದ 2024 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಡೆಯಿತು.
ಕಟಪಾಡಿ : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ - ಕೃತಜ್ಞತಾಪೂರ್ವಕ ಸಭೆ
Posted On: 24-12-2022 03:40PM
ಕಟಪಾಡಿ : ಯಾವುದೇ ಕಾರ್ಯ ಪೂರ್ವತಯಾರಿಯಿಲ್ಲದೆ ಆಗದು. ಎಲ್ಲರ ಸಹಕಾರ ಅಗತ್ಯ. ಸಫಲತೆಯ ಮನೋಭಾವ ಇದ್ದಾಗ ಕಾರ್ಯ ಸಾಧ್ಯ. ಕಾಪು ತಾಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇನಕ್ಕೆ ತಾಲೂಕು ಅಧ್ಯಕ್ಷರು, ಸಮಿತಿ ಮತ್ತು ಶಾಲೆಯ ಅಧ್ಯಾಪಕ ವೃಂದದವರ ಪರಿಶ್ರಮವಿದೆ. ಮುಂದೆಯೂ ನಮ್ಮ ಸಂಸ್ಥೆಯ ಸಹಕಾರವಿದೆ ಎಂದು ಕಟಪಾಡಿ ಎಸ್ ವಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕೆ ಸತ್ಯೇಂದ್ರ ಪೈ ಹೇಳಿದರು. ಅವರು ಶನಿವಾರ ಕಟಪಾಡಿ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ಜರಗಿದ ಕಾಪು ತಾಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇನದ ಕೃತಜ್ಞತಾಪೂರ್ವಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅದಮಾರು ಪಿಪಿಸಿ ನೆನೆಪಿನಂಗಳ ಗುರುಶಿಷ್ಯರ ಸಮಾಗಮ - 2022
Posted On: 21-12-2022 11:07PM
ಈ ಗುರು ಶಿಷ್ಯ ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಆಗ ಗುರುಗಳಾಗಿದ್ದ ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪೌಢಶಾಲೆ ಹಾಗೂ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿದ್ದ ಶಿಕ್ಷಕರಿಗೆ, ಉಪನ್ಯಾಸಕರಿಗೆ, ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ನಿವೃತ್ತ ಪ್ರಾಂಶುಪಾಲರುಗಳಾದ ಬಿ. ಆರ್. ನಾಗರತ್ನ, ಎಂ. ಲಕ್ಷ್ಮೀ ನಾರಯಣ ರಾವ್, ರಮೇಶ ಹಂದೆ, ನಾರಾಯಣ ಹೆಬ್ಬಾರ್, ಎಂ ರಾಮಕೃಷ್ಣ ಪೈ, ಹಾಗೂ ನಿವೃತ್ತ ಉಪನ್ಯಾಸಕರಾದ ಏಕನಾಥ ಡೋಂಗ್ರೆ, ಹರಿಪ್ರಸಾದ್, ನಿವೃತ್ತ ಶಿಕ್ಷಕರಾದ ವೆಂಕಟರಾಜ ಸರಳಾಯ, ವಾದಿರಾಜ ತಂತಿ, ವಿಠಲ ದಾಸ್, ಜಯಶಂಕರ್, ರವಿ, ಶೆಟ್ಟಿ, ಹಾಗೂ ಮುಖ್ಯೋಪಾಧ್ಯಾಯರಾದ ಗಣಪತಿ ಭಟ್ ಸಂಧ್ಯಾ ಗಣಪತಿ ಭಟ್ ರನ್ನು ಸನ್ಮಾನಿಸಲಾಯಿತು. ತೀರಿಹೋದ ಗುರುಗಳಿಗೆ ಅವರ ಮನೆಯವರನ್ನು ಕರೆಸಿ ಅವರಿಗೂ ಗೌರವ ಸಲ್ಲಿಸಿದರು. ಶಿಕ್ಷಕೇತರ ಬಂಧುಗಳಾದ ನಾಗರತ್ನ ಕೆ. ವಸಂತ, ಸುಧಾಕರ ಅಮೀನ್, ಸುಧಾಕರ ಪೂಜಾರಿ, ಸದಾಶಿವ ಆಚಾರಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿತು
ಡಿಸೆಂಬರ್ 22 - 26 : ಉಡುಪಿಯ ಮುಕುಂದ ಕೃಪಾ ಶಾಲೆಯಲ್ಲಿ ಸುವರ್ಣ ಸಂಭ್ರಮ ; ವಿವಿಧ ಕಾರ್ಯಕ್ರಮಗಳು
Posted On: 21-12-2022 10:48PM
ಉಡುಪಿ : ಮುಕುಂದ ಕೃಪಾ ಆಂಗ್ಲ ಮಾಧ್ಯಮ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಸಂಭ್ರಮಾಚರಣೆ, ವಾರ್ಷಿಕ ಬಹುಮಾನ ವಿತರಣೆ , ವಾರ್ಷಿಕೋತ್ಸವ, ಪೇರೆಂಟ್ - ಟೀಚರ್ಸ್ ಡೇ ಮತ್ತು ಹಳೇ ವಿದ್ಯಾರ್ಥಿ ದಿನಾಚರಣೆ ಡಿ.22 ರಿಂದ ಡಿ.26 ರ ವರೆಗೆ ನಡೆಯಲಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಶಾಂತಾರಾಮ್ ಶೆಟ್ಟಿ ತಿಳಿಸಿದ್ದಾರೆ.
ಜನವರಿ 8 : ಪಲಿಮಾರಿನಲ್ಲಿ ರಕ್ತದಾನ ಶಿಬಿರ
Posted On: 21-12-2022 10:39PM
ಪಲಿಮಾರು : ಹೊಯಿಗೆ ಫ್ರೆಂಡ್ಸ್ ಹೊಯಿಗೆ (ರಿ.) ಪಲಿಮಾರು, ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 8, ಆದಿತ್ಯವಾರ ಬೆಳಿಗ್ಗೆ 8 ರಿಂದ ಅಪರಾಹ್ನ 2 ರ ವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರಿನಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
