Updated News From Kaup

ಪಡುಬಿದ್ರಿ : ಹೆಜ್ಜೇನು ದಾಳಿ - ಓರ್ವ ಮೃತ ; ಇನ್ನೋರ್ವ ಗಂಭೀರ

Posted On: 15-12-2022 08:06PM

ಪಡುಬಿದ್ರಿ : ಇಲ್ಲಿನ ಬೀಚ್ ಬಳಿ ಹೆಜ್ಜೇನು ದಾಳಿಯಿಂದ ಒರ್ವ ವ್ಯಕ್ತಿ ಮೃತಪಟ್ಟರು ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದು ಹಲವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಮೃತ ವ್ಯಕ್ತಿ ಸ್ಥಳೀಯ ನಿವಾಸಿ ವಾಸುದೇವ ಡಿ. ಸಾಲ್ಯಾನ್ (65) ರಕ್ಷಣೆಗಾಗಿ ಸಮುದ್ರದ ನೀರಿಗೆ ಹಾರಿದವರು ಮತ್ತೆ ಮೇಲೆ ಬರಲಾಗದೆ ಅಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ. ಚಂದ್ರಶೇಖರ (65) ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣ ಪಡುಬಿದ್ರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯವಾಗಿ ಹಲವರ ಮೇಲೆ ದಾಳಿ ನಡೆಯಿತಾದರೂ ಅವರು ಓಡಿ ತಪ್ಪಿಸಿಕೊಂಡಿದ್ದಾರೆ.

ಬೀಚ್ ಬಳಿಯ ಆಂಗ್ಲ ಮಾಧ್ಯಮ ಶಾಲೆ ಬಿಟ್ಟು ಶಾಲಾ ವಾಹನ ಮಕ್ಕಳನ್ನು ಹೇರಿಕೊಂಡು ಹೋಗಿದ್ದರಾದರೂ ನಡೆದುಕೊಂಡು ಹೋಗುವ ಮಕ್ಕಳು ಇನ್ನೇನು ಆ ಪ್ರದೇಶಕ್ಕೆ ಬರುತ್ತಾರೆ ಎನ್ನುವಾಗ ಸಾರ್ವಜನಿಕರು ಬೊಬ್ಬೆ ಹಾಕಿ ಮಕ್ಕಳನ್ನು ತಡೆದ್ದರಿಂದ ಬಾರೀ ಅನಾಹುತ ತಪ್ಪಿದಂತ್ತಾಗಿದೆ. ಭಾನುವಾರವಾಗಿದ್ದರೆ ಈ ಬೀಚ್ ಪ್ರದೇಶದಲ್ಲಿ ಬಾರೀ ಜನ ಸಂದಣಿ ಇರುತ್ತಿದ್ದು ಮತ್ತಷ್ಟು ದುರಂತ ಸಂಬವಿಸುತ್ತಿತ್ತು ಎನ್ನುತ್ತಾರೆ ಸ್ಥಳೀಯರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರು ಆ ಹೆಜ್ಜೇನು ಹಿಂಡನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಂಗಾಳದಲ್ಲಿ ಮಹಾಲಕ್ಷ್ಮೀ ರೆಡಿಮೇಡ್ ಗಾರ್ಮೆಂಟ್ಸ್ ಉದ್ಘಾಟನೆ

Posted On: 15-12-2022 02:45PM

ಪಾಂಗಾಳ : ಇಲ್ಲಿನ ಬರೋಡಾ ಬ್ಯಾಂಕ್ ನ ಎದುರುಗಡೆ ಇರುವ ಕೆ.ಕೆ. ಆರ್ಕೆಡ್, ಒಂದನೇ ಮಹಡಿಯಲ್ಲಿ ಮಹಾಲಕ್ಷ್ಮೀ ರೆಡಿಮೇಡ್ ಗಾರ್ಮೆಂಟ್ಸ್ ನ್ನು ಬುಧವಾರ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು.

ವಿವಿಧ ರೀತಿಯ ಕಾಟನ್ ನೈಟಿಗಳು, ಕಾಟನ್ ಸೀರೆಯ ಸ್ಕರ್ಟ್‌ಗಳನ್ನು ಹೋಲ್‌ ಸೇಲ್‌ ದರದಲ್ಲಿ ತಯಾರಿ ಮಾಡಿಕೊಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7760862063

ಉಡುಪಿ : ಟೋಲ್ ಗೇಟ್ - ಸಮಾನ ಮನಸ್ಕರ ಸಭೆ ; ಅಧ್ಯಾದೇಶದ ವಾಪಾಸಿಗೆ ಧರಣಿಯ ತೀರ್ಮಾನ

Posted On: 14-12-2022 10:01PM

ಉಡುಪಿ : ಸುರತ್ಕಲ್ ನಿಂದ ತೆರವುಗೊಳಿಸಿರುವ ಅಕ್ರಮ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳಿಸಿ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದ್ಯಾದೇಶ ಜಾರಿಗೊಳಿಸಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ನಡೆಸಬೇಕಾದ ಹೋರಾಟದ ಕುರಿತು ಚರ್ಚಿಸಲು ಉಡುಪಿ ಅಜ್ಜರಕಾಡಿನಲ್ಲಿ ಇಂದು ಸಮಾನ ಮನಸ್ಕ ಸಂಘಟನೆಗಳ ಸಭೆ ನಡೆಯಿತು.

ವಿನಯ ಕುಮಾರ್ ಸೊರಕೆ, ಮುನೀರ್ ಕಾಟಿಪಳ್ಳ, ಅಭಯ ಚಂದ್ರ ಜೈನ್, ಬಾಲಕೃಷ್ಣ ಶೆಟ್ಟಿ, ಎಮ್ ಜಿ ಹೆಗ್ಢೆ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶೇಖರ ಹೆಜಮಾಡಿ, ರಮೇಶ್ ಕಾಂಚನ್, ನವೀನ್ ಚಂದ್ರ ಶೆಟ್ಟಿ ,ಸುಂದರ ಮಾಸ್ತರ್, ನೇರ್ಗಿ, ರಾಲ್ಫಿ ಡಿ ಕೋಸ್ತ, ಫಣಿರಾಜ್, ಸುರೇಶ್ ಕಲ್ಲಾಗರ, ರಮೀಜ್ ಪಡುಬಿದ್ರೆ, ಧೀರಜ್, ಸುಧೀರ್ ಕರ್ಕೇರ, ಸುಭಾಷ್ ಸಾಲ್ಯಾನ್, ಶೇಕಬ್ಬ ಕೋಟೆ, ಇಬ್ರಹಿಮ್ ಸನ ,ಯತೀಶ್ ಕರ್ಕೇರಾ ಸಹಿತ ಉಡುಪಿ ಯ ಹಲವು ಸಂಘಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

ಮುಂದೆ ನಡೆಸಬೇಕಾದ ಹೋರಾಟಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಡಿಸೆಂಬರ್ 29 ರಂದು ಉಡುಪಿಯಲ್ಲಿ ಅಧ್ಯಾದೇಶದ ವಾಪಾಸು ಪಡೆಯಿರಿ ಎಂಬ ಬೇಡಿಕೆಯಡಿ ಸಾಮೂಹಿಕ ಧರಣಿ ನಡೆಸಲು ತೀರ್ಮಾನಿಸಲಾಯಿತು.

34 ನೇ ವರ್ಷದ ಮುಂಡ್ಕೂರು ನಾನಿಲ್ತಾರ್ ಕುಲಾಲ ಸಂಘದ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 14-12-2022 09:43PM

ಕಾರ್ಕಳ :ಮುಂಡ್ಕೂರು ನಾನಿಲ್ತಾರ್ ಕುಲಾಲ ಸಂಘದ 34ನೇ ವರ್ಷದ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಅಭಿನಂದನ ಕಾರ್ಯಕ್ರಮ, ವೈದಕೀಯ ನೆರವು, ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಬುಧವಾರ ಕುಲಾಲ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಯರಾಮ್ ಕುಲಾಲ್, ಜಗನಾಥ್ ಮೂಲ್ಯ, ಸಂತೋಷ್ ಕುಲಾಲ್, ಲೋಕೇಶ್ ಕುಲಾಲ್, ದೀಪಕ್ ಬೆಳ್ಮಣ್ ಉಪಸ್ಥಿತರಿದ್ದರು.

ಉಡುಪಿ : ಹಾವಂಜೆ ಕೊಳಲುಗಿರಿ ದೊಡ್ಡಮನೆ ಮರ್ಲ್ ಜುಮಾದಿ ದೈವದ ದರ್ಶನ ಸೇವೆ

Posted On: 14-12-2022 09:37PM

ಉಡುಪಿ : ಜಿಲ್ಲೆಯಲ್ಲಿ 500 ವರ್ಷಗಳ ಇತಿಹಾಸವಿರುವ ಉಡುಪಿ ಜಿಲ್ಲೆಯ ಹಾವಂಜೆ ಕೊಳಲುಗಿರಿ ದೊಡ್ಡಮನೆ ಮರ್ಲ್ ಜುಮಾದಿ ಹಾಗೂ ಬಂಟ ದೈವಗಳ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಬುಧವಾರ ಜುಮಾದಿ ದೈವದ ದರ್ಶನ ಸೇವೆ ಜರಗಿತು.

ಈ ಸಂದರ್ಭದಲ್ಲಿ ಸುಂದರ್ ಶೆಟ್ಟಿ, ವಿನೋದ್ ಶೆಟ್ಟಿ, ದೊಡ್ಡನ ಗುಡ್ಡೆ ಅಶೋಕ್ ಶೆಟ್ಟಿ, ಜಯಕರ್ ಶೆಟ್ಟಿ ಪುಣೆ, ಅಶೋಕ್ ಶೆಟ್ಟಿ, ಸುರೇಶ ಶೆಟ್ಟಿ ಹಾಗೂ ಕುಟುಂಬಿಕರು ಉಪಸ್ಥಿತಿಯಿದ್ದರು.

ಡಿಸೆಂಬರ್ 31 : ಮೂಳೂರು ಮೂಲ್ಯ ಮನೆಯಲ್ಲಿ ಸಿರಿ ಸಿಂಗಾರದ ನೇಮೋತ್ಸವ

Posted On: 14-12-2022 02:33PM

ಕಾಪು : ತಾಲೂಕಿನ ಮೂಳೂರು ಮೂಲ್ಯ ಮನೆ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ದೈವಗಳ ಹರಕೆಯ ಸಿರಿ ಸಿಂಗಾರದ ನೇಮೋತ್ಸವ ಡಿಸೆಂಬರ್ 31, ಶನಿವಾರದಂದು ಜರಗಲಿದೆ.

ಅದೇ ದಿನ ಬೆಳಿಗ್ಗೆ 11:30ಗೆ ಚಪ್ಪರ ಮುಹೂರ್ತ, ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ, ಸಂಜೆ 7 ಗಂಟೆಗೆ ಬಾಳು ಭಂಡಾರ ಹೊರಡುವುದು. ರಾತ್ರಿ 9ಕ್ಕೆ ಸರಿಯಾಗಿ ಮೈಸಂದಾಯ, ಜುಮಾದಿ, ಜುಮಾದಿ ಬಂಟ, ಪಂಜುರ್ಲಿ,ಗುಳಿಗ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಮೂಳೂರು ಮೂಲ್ಯ ಮನೆಯ ಮುಕ್ಕಾಲ್ದಿ ಅರುಣ್ ಕುಲಾಲ್ ಹಾಗೂ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪಲಿಮಾರು : ಕೈ ತೋಟ ಕ್ರಾಂತಿಯಾಗಲಿ ಕಾರ್ಯಕ್ರಮ

Posted On: 11-12-2022 07:08PM

ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರ ಸಹಯೋಗದಲ್ಲಿ ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಕೈ ತೋಟ ಕ್ರಾಂತಿಯಾಗಲಿ ಕಾರ್ಯಕ್ರಮದಡಿ ವಿಷಮುಕ್ತ ಆಹಾರ ನಮ್ಮದಾಗಲಿ ಎಂಬ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪರು ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹರಿಕೃಷ್ಣ ಕಾಮತ್ ಮಾತನಾಡಿ ನಾವು ಸೇವಿಸುವ ಪ್ರತಿಯೊಂದು ಆಹಾರವು ಇಂದು ರಾಸಾಯನಿಕ ಪದಾರ್ಥಗಳಿಂದ ತಯಾರಾಗುತ್ತಿದ್ದು ಕನಿಷ್ಠ ನಾವು ನಮಗೆ ಬೇಕಾದ ತರಕಾರಿಯನ್ನಾದರೂ ನಮ್ಮ ಮನೆಯಂಗಳದಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆದು ಆರೋಗ್ಯ ಕಾಪಾಡಿಕೊಳ್ಳುವ. ಇಲ್ಲವಾದಲ್ಲಿ ಮುಂದೊಂದು ದಿನ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗಬಹುದು ಮತ್ತು ಸಾವಯವ ಪದ್ದತಿಯಲ್ಲಿ ಯಾವ ರೀತಿ ಕೈ ತೋಟ ಮಾಡಬಹುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಪಲಿಮಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು, ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಉಪಾಧ್ಯಕ್ಷ ರಾದ ರಾಜೇಂದ್ರ ಬಲ್ಲಾಳ್, ಗುರುರಾಜ್ ಭಟ್, ಆಶಾ, ದೀಪಕ್ ಕಾಂಜರ್ ಕಟ್ಟೆ, ವಸಂತ್ ಸನಿಲ್, ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರ್ ಇದರ ಅಧ್ಯಕ್ಷರಾದ ರಾಘವೇಂದ್ರ ಜೆ ಸುವರ್ಣ, ಕಾರ್ಯದರ್ಶಿ ಸತೀಶ್ ಕುಮಾರ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಾವಯವ ಕೃಷಿಯ ಬಗ್ಗೆ ಮೂರು ಕೈಪಿಡಿಯನ್ನು ಪರಿಚಯಿಸಿ ಭಾಗವಹಿಸಿದ ಆಸಕ್ತರಿಗೆ ತರಕಾರಿ ಬೀಜ ಹಾಗೂ ಗಿಡಗಳನ್ನು ಉಚಿತವಾಗಿ ನೀಡಲಾಯಿತು. ಅರುಣ್ ಎಸ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಪಡುಬಿದ್ರಿ : ರಸ್ತೆ ಸುರಕ್ಷತೆ ಹಾಗೂ ಅಪರಾಧ ತಡೆ ಮಾಸ ಜಾಗೃತಿ ; ಬೈಕ್ ರ‌್ಯಾಲಿ

Posted On: 11-12-2022 06:33PM

ಪಡುಬಿದ್ರಿ : ಇಲ್ಲಿನ ಪೊಲೀಸ್ ಠಾಣೆ, ರೋಟರಿ ಕ್ಲಬ್ ಪಡುಬಿದ್ರಿ, ರೋಟರಿ ಸಮುದಾಯದಳ ಪಡುಬಿದ್ರಿ, ಇನ್ನರ್‌ವೀಲ್ ಕ್ಲಬ್ ಪಡುಬಿದ್ರಿ ಜಂಟಿ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ ಹಾಗೂ ಅಪರಾಧ ತಡೆ ಮಾಸ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಬೈಕ್ ರ್ಯಾಲಿಗೆ ಆದಿತ್ಯವಾರ ಪಡುಬಿದ್ರಿ ಪೇಟೆಯಲ್ಲಿ ಕಾಪು ವೃತ್ತನಿರೀಕ್ಷಕರಾದ ಕೆ.ಸಿ. ಪೂವಯ್ಯ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ರಸ್ತೆಯಲ್ಲಿ ವಾಹನ ಚಲಾಯಿಸುವವರು ತಮ್ಮ ಸುರಕ್ಷತೆಯ ಜೊತೆಗೆ ವಾಹನಗಳ ದಾಖಲೆಯನ್ನು ಇಟ್ಟುಕೊಳ್ಳಬೇಕಾಗಿದೆ. ಇದರ ಬಗೆಗಿನ ಜಾಗೃತಿ ಅನಿವಾರ್ಯ ಎಂದರು.

ರಸ್ತೆ ಸುರಕ್ಷತೆ ಹಾಗೂ ಅಪರಾಧ ತಡೆ ಮಾಸ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಬೈಕ್ ರ‌್ಯಾಲಿಯು ಪಡುಬಿದ್ರಿ ಪೇಟೆಯಿಂದ ಪ್ರಾರಂಭಗೊಂಡು ಕೆಳಗಿನ ಪೇಟೆಯಾಗಿ ಬೀಚ್ ರಸ್ತೆಯ ಮೂಲಕ ಸಾಗಿ ಬೀಚ್ನಲ್ಲಿ ಸಮಾಪನಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪಡುಬಿದ್ರಿಯ ಅಧ್ಯಕ್ಷರಾದ ಗೀತಾ ಅರುಣ್ ವಹಿಸಿದ್ದರು.

ಈ ಸಂದರ್ಭ ಪಡುಬಿದ್ರಿ ಪೊಲೀಸ್ ಠಾಣೆ ಠಾಣಾಧಿಕಾರಿ ಪುರುಷೋತ್ತಮ್, ಅಪರಾಧ ವಿಭಾಗದ ಪ್ರಕಾಶ್, ರೋಟರಿ ವಲಯ-5 ಸಹಾಯಕ ಗವರ್ನರ್ ಡಾ. ಶಶಿಕಾಂತ್ ಕಾರಿಂಕ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಪದ್ರ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ನವೀನ್ ಚಂದ್ರ ಜೆ ಶೆಟ್ಟಿ, ರಿಕ್ಷಾ ಯೂನಿಯನ್ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ರೋಟರಿ ವಲಯ 5 ರ ಪೂರ್ವ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ರಮೀಜ್ ಹುಸೇನ್, ಕಾಪುವಿನ ಎಲ್ಐಸಿ ಅಭಿವೃದ್ಧಿ ಅಧಿಕಾರಿ ರಮೇಶ್ ಯು, ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ ಅಧ್ಯಕ್ಷೆ ವಿಮಲ ಕೆ ಸಾಲ್ಯಾನ್, ರೋಟರಿ ಸಮುದಾಯದಳ ಅಧ್ಯಕ್ಷೆ ದೀಪಾಶ್ರೀ ಕರ್ಕೇರ, ಸುಧಾಕರ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ಕನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Posted On: 10-12-2022 11:36AM

ಕಟಪಾಡಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾಪು ತಾಲೂಕು ಘಟಕದ 4 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಸ್ ವಿ ಎಸ್ ಪದವಿ ಪೂರ್ವ ಕಾಲೇಜ್ ಇಲ್ಲಿ ಶನಿವಾರ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಬಹುಭಾಷಾ ಸಾಹಿತಿ ಕ್ಯಾಥ್ರಿನ್ ರೊಡ್ರಿಗಸ್ ಸಭಾಧ್ಯಕ್ಷತೆ ವಹಿಸಿದ್ದರು.

ಉದ್ಘಾಟನೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ನಾಸಿಕ್ ಬ್ಯಾಂಡ್, ಚೆಂಡೆ, ಭಾರತ ಸೇವಾದಳ, ಹುಲಿವೇಷ, ಜಾನಪದ ನೃತ್ಯ, ಸ್ಕೌಟ್ ಗೈಡ್ಸ್ ತಂಡ, ವಿವಿಧ ಶಾಲಾ ಮಕ್ಕಳು, ತಾಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಉದ್ಘಾಟನೆಗೊಂಡಿತು. ಸಮ್ಮಾನ, ಪುಸ್ತಕ ಬಿಡುಗಡೆ : ಗೋವಾ ವಿಮೋಚನಾ ಹೋರಾಟಗಾರ ವಿಠಲ ಕಿಣಿಯವರನ್ನು ಸನ್ಮಾನಿಸಲಾಯಿತು. ಅತಿಥಿಗಳ ಸಮ್ಮುಖ ಲೇಖಕರ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಉಡುಪಿ ಜಿಲ್ಲಾ ಘಟಕದ ಮತ್ತು ಕಾಪು ತಾಲೂಕು ಘಟಕದ ಪದಾಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

ಡಿಸೆಂಬರ್ 11 : ಕಂಬಳಕಟ್ಟ ಮನೆಯ ಸಿರಿ ಕುಮಾರ ದೈವಳ ಕಂಬಳ

Posted On: 09-12-2022 11:28PM

ಉಡುಪಿ : ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಿರಿ ಕುಮಾರ ದೈವಳ ಕಂಬಳವು ಡಿಸೆಂಬರ್ 11, ಭಾನುವಾರದಂದು ಮಧ್ಯಾಹ್ನ ಗಂಟೆ 2ರಿಂದ ಆದಿ ಉಡುಪಿಯ ಕೊಡವೂರು ಕಂಬಳಕಟ್ಟೆ ಮನೆಯಲ್ಲಿ ಜರಗಲಿದೆ ಕಂಬಳ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಂಬಳ ಮನೆಯ ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.