Updated News From Kaup
ಕುತ್ಯಾರು ಗ್ರಾ. ಪಂ ವಿವಿಧ ಕಾಮಗಾರಿಗಳಿಗೆ 3 ಕೋಟಿ 27 ಲಕ್ಷ ರೂ ಅನುದಾನ ; ಗುದ್ದಲಿ ಪೂಜೆ ; ಉದ್ಘಾಟನೆ

Posted On: 20-10-2022 10:44AM
ಕುತ್ಯಾರು : ಕಾಪು ತಾಲೂಕಿನ ಕುತ್ಯಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ 27 ಲಕ್ಷ ರೂಗಳ ವಿವಿಧ ಕಾಮಗಾರಿಗಳಲ್ಲಿ ಸುಮಾರು 19 ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ 3 ಕಾಮಗಾರಿಗಳಿಗೆ ಉದ್ಘಾಟನೆ ಶಾಸಕರಾದ ಲಾಲಾಜಿ ಆರ್ ಮೆಂಡನ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬಿಜೆಪಿ ನೇತೃತ್ವದ ಕುತ್ಯಾರು ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದು ಜನಪ್ರತಿನಿಧಿಗಳು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ಈಗಾಗಲೇ 5.33 ಕೋಟಿ ಅನುದಾನ ಹಾಗೂ ಈ ಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುತ್ಯಾರು ಇದರ ನೂತನ ಕಟ್ಟಡ ನಿರ್ಮಾಣಕ್ಕೆ 18 ಕೋಟಿ ರೂಗಳನ್ನು ಒದಗಿಸಲಾಗಿದೆ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಶಿಲ್ಪಾ ಜಿ ಸುವರ್ಣ, ಗ್ರಾಮ ಪಂಚಾಯತ್ ಅಧ್ಯಕ್ಷರು ಲತಾ ಎಸ್ ಆಚಾರ್ಯ, ಉಪಾಧ್ಯಕ್ಷರು ರಾಜಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಭಟ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಶಿಪ್ರಭಾ, ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ ಆಚಾರ್ಯ, ಗಣೇಶ್ ಶೆಟ್ಟಿ ಪಯ್ಯರು, ಸಂಪತ್ ಪೂಜಾರಿ, ಶೈಲೇಶ್, ದಿವ್ಯ ಶೆಟ್ಟಿಗಾರ್, ಭಾರತಿ, ಎವುಜಿನ್ ಲೋಬೊ, ಅಗ್ನೇಯಸ್ ಮಥಯಸ್, ಸ್ಥಳೀಯ ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಪ್ರಸಾದ್ ಶೆಟ್ಟಿ ಕುತ್ಯಾರು, ಧೀರಜ್ ಶೆಟ್ಟಿ, ನವೀನ್ ಶೆಟ್ಟಿ, ವೈ. ಎಸ್ ಭಂಡಾರಿ, ಅಶೋಕ್ ರಾವ್, ಶ್ರೀಕರ ಮಾಸ್ಟರ್, ಪ್ರದೀಪ್ ರಾವ್, ಸದಾಶಿವ ಆಚಾರ್ಯ, ಸುರೇಶ್, ಹರೀಶ್ ಆಚಾರ್ಯ, ರಾಘವೇಂದ್ರ ಹಾಗೂ ಸ್ಥಳೀಯರು, ಗುತ್ತಿಗೆದಾರರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ : ಜೀರ್ಣೋದ್ಧಾರ ಸಮಿತಿಯ ವಿಜ್ಞಾಪನ ಪತ್ರ ಬಿಡುಗಡೆ, ಕೊರಗಜ್ಜ ದೈವದ ನೇಮೋತ್ಸವ, ಸಭಾ ಕಾರ್ಯಕ್ರಮ

Posted On: 20-10-2022 10:36AM
ಪಡುಬಿದ್ರಿ : ಕಾಪು ತಾಲೂಕಿನ ತಾಲೂಕಿನ ಸಾವಿರಾರು ವರ್ಷಗಳ ಇತಿಹಾಸವಿರುವ ಪಡುಬಿದ್ರಿಯ ಶ್ರೀ ಆದಿಶಕ್ತಿ ಆದಿ ಮಾಯೆ ಅಣ್ಣಪ್ಪ ಪಂಜುರ್ಲಿ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಅಕ್ಟೋಬರ್ 22, ಶನಿವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ವಿಜ್ಞಾಪನ ಪತ್ರ ಬಿಡುಗಡೆ ಹಾಗೂ ಸಂಜೆ 4 ಗಂಟೆಗೆ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಸಭಾ ಕಾರ್ಯಕ್ರಮ ಜರಗಲಿದೆ.
ಈ ನಿಮಿತ್ತ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರನ್ನು ಕ್ಷೇತ್ರದ ಪ್ರಮುಖರು ಭೇಟಿಯಾಗಿ ಸಭಾ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದರು.
ಈ ಸಂದರ್ಭದಲ್ಲಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿಗಳಾದ ಸುಧಾಕರ್ ಮಡಿವಾಳ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಡುಬಿದ್ರಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಚ್ಚಿದನಂದ ಶೆಟ್ಟಿ ಉಡುಪಿ, ಜೀರ್ಣೋದ್ಧಾರ ಸಮಿತಿಯ ಸಹ ಸಂಚಾಲಕರಾದ ವಿನೋದ್ ಶೆಟ್ಟಿ ಉಡುಪಿ ಹಾಗೂ ಕುಮಾರ್ ಪಂಬದ ಉಪಸ್ಥಿತಿಯಿದ್ದರು.
ಇನ್ನಂಜೆ : ನರಕ ಚತುರ್ದಶಿಯಂದು ಗೊಳಿಕಟ್ಟೆಯಲ್ಲಿ ಮುಳ್ಳಮುಟ್ಟೆ ಕಾರ್ಯಕ್ರಮ

Posted On: 19-10-2022 03:08PM
ಇನ್ನಂಜೆ : ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನರಕ ಚತುರ್ದಶಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವ ಮುಳ್ಳಮುಟ್ಟೆ ಕಾರ್ಯಕ್ರಮದಲ್ಲಿ ಜೋಡುಬಂಟ ನರ್ತನ ಸೇವೆಯು ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ವಿಠೋಬಾ ಭಜನಾ ಮಂದಿರ ಗೊಳಿಕಟ್ಟೆ ಇಲ್ಲಿಗೆ ಮೆರವಣಿಗೆಯ ಮೂಲಕ ಸಾಗಿ ಊರಿಗೆ ಬಂದಿರುವ ದುರಿತಗಳು ತೊಲಗಲಿ ಹಾಗೂ ನರಕಾಸುರನ ವಧೆ ಎಂಬ ಉದ್ದೇಶದಿಂದ ಮುಳ್ಳಿನ ರಾಶಿಗೆ ಬೆಂಕಿ ಕೊಡುವುದು ವಾಡಿಕೆಯಾಗಿದೆ.
ಈ ಬಾರಿ ಅಕ್ಟೋಬರ್ 24, ಸೋಮವಾರದಂದು ಮುಂಜಾನೆ ಗಂಟೆ 4:45 ರಿಂದ ಮುಳ್ಳಮುಟ್ಟೆ ಕಾರ್ಯಕ್ರಮ ನಡೆಯಲಿದೆ ಎಂದು ವಿಠೋಬಾ ಭಜನಾ ಮಂದಿರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಕಲ ಚೇತನರ ಬಾಳಿನಲ್ಲಿ ಬೆಳಕು ಕಾಣುವ NSCDF ಕಾರ್ಯ ಸ್ತುತ್ಯರ್ಹ : ಲಾಲಾಜಿ ಆರ್ ಮೆಂಡನ್

Posted On: 18-10-2022 11:05PM
ಕಾಪು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಬೆಂಗಳೂರು ಪ್ರಾಯೋಜಕತ್ವದಲ್ಲಿ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮಂಗಳೂರು ಸಾರಥ್ಯದಲ್ಲಿ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದ ವಿಕಲಚೇತನರಿಗೆ ಪರಿಕರ ವಿತರಣಾ ಕಾರ್ಯಕ್ರಮ ಅಕ್ಟೋಬರ್ 18ರಂದು ಕಾಪುವಿನ ಶ್ರೀ ಆದಿಶಕ್ತಿ ವೀರಭದ್ರ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪರಿಕರಗಳಿಗೆ ಹೂವಿನ ಎಸಳು ಚೆಲ್ಲುವ ಮೂಲಕ ಚಾಲನೆ ನೀಡಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಪ್ರತಿ ಕ್ಷೇತ್ರಗಳಲ್ಲಿಯೂ ನಡೆಯಬೇಕು ಆ ಮೂಲಕ ವಿಕಲ ಚೇತನರ ಬಾಳಿನಲ್ಲಿ ಬೆಳಕು ಕಾಣಬಹುದು ಎಂದ ಅವರು NSCDF ಕಾರ್ಯ ಸ್ತುತ್ಯರ್ಹ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಕವಿ, ಲೇಖಕ ಕೆ.ವಿ.ಲಕ್ಷ್ಮಣ ಮೂರ್ತಿ ಮಾತನಾಡಿ ಇದೊಂದು ದೇಶಕ್ಕೆ ಮಾದರಿ ಕಾರ್ಯಕ್ರಮ , ಇದರಿಂದಾಗಿ ಅನೇಕರು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ಅಧ್ಯಕ್ಷತೆವಹಿಸಿದ್ದ NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಮಾತನಾಡಿ ಇದು ಭಾಷಣ ಮಾಡುವ ಕಾರ್ಯಕ್ರಮವಲ್ಲ ಬದಲಿಗೆ ವಿಕಲ ಚೇತನರ ಬಾಳಿನಲ್ಲಿ ಬೆಳಕು ಚೆಲ್ಲುವ ಕಾರ್ಯಕ್ರಮ ಎಂದು ಹೇಳಿದರು. 15 ಹೊಲಿಗೆ ಯಂತ್ರ, 3 ಗಾಲಿ ಕುರ್ಚಿ ಮತ್ತು 1 ಶ್ರವಣ ಸಾಧನ ವಿಕಲ ಚೇತನರಿಗೆ ಹಸ್ತಾಂತರಿಸಲಾಯಿತು.

ಡಾ.ನೆಲ್ಲಿಷಾ, ಲಾವಣ್ಯ, KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ , ಶ್ರುತಿ ಎಂಟರ್ಪ್ರೈಸಸ್ ಮಾಲ್ಹಕ ಸುರೇಶ್ ಮತ್ತು NSCDF ಸದಸ್ಯೆ ಹರಿಣಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ಇನ್ನಂಜೆ : ದಿವಂಗತ ಕೆ. ಸದಾನಂದ ಶೆಟ್ಟಿ - ನುಡಿನಮನ, ಸಂಸ್ಮರಣೆ

Posted On: 18-10-2022 08:16PM
ಕಾಪು : ಯಸ್. ವಿ.ಯಚ್ ವಿದ್ಯಾಸಂಸ್ಥೆಯ ಸಂಚಾಲಕರಾಗಿದ್ದ, ಶಿಕ್ಷಣ ಪ್ರೇಮಿ ಸಮಾಜಸೇವಕ ಮಂಡೇಡಿ ಹೊಸಮನೆ ದಿವಂಗತ ಕೆ. ಸದಾನಂದ ಶೆಟ್ಟಿ ಅವರಿಗೆ ನುಡಿ ನಮನ ಹಾಗೂ ಸಂಸ್ಮರಣಾ ಕಾರ್ಯಕ್ರಮವು ಶಾಲೆಯ ಹಯವದನ ಸಭಾ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಆಡಳಿತಾಧಿಕಾರಿ ಅನಂತ ಮೂಡಿತ್ತಾಯ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ, ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ನುಡಿ ನಮನ ಸಮರ್ಪಿಸಿದರು.

ವೇದಿಕೆಯಲ್ಲಿ ದಿವಂಗತ ಕೆ.ಸದಾನಂದ ಶೆಟ್ಟಿ ಅವರ ಸಹೋದರರಾದ ಕೆ. ರಮಾನಂದ ಶೆಟ್ಟಿ ಮತ್ತು ಕೆ.ದಯಾನಂದ ಶೆಟ್ಟಿ, ಅಳಿಯಂದಿರಾದ ಬಾಲಕೃಷ್ಣ ಶೆಟ್ಟಿ ಮತ್ತು ವಿಜಯ ಶೆಟ್ಟಿ, ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ.ಶೆಟ್ಟಿ ಮಂಡೇಡಿ, ನಿರ್ದೇಶಕರಾದ ಶಿವರಾಮ ಶೆಟ್ಟಿ ಮಂಡೇಡಿ , ಎಸ್. ವಿ. ಎಚ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯಯ, ಮುಖ್ಯ ಶಿಕ್ಷಕರಾದ ಸುಷ್ಮಾ, ಮಮತಾ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಪಾಂಗಾಳ ವಿದ್ಯಾವರ್ಧಕ ಶಾಲೆ, ಪಾಂಗಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಇನ್ನಂಜೆ ಶಾಲಾ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು.
ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇಗುಲಕ್ಕೆ ಕಾಶಿ ಮಠಾಧೀಶರ ಭೇಟಿ ; ಪಾದಪೂಜೆ

Posted On: 18-10-2022 08:00PM
ಕಾಪು : ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇಗುಲಕ್ಕೆ ಮಂಗಳವಾರ ಕಾಶಿ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ ವೆಂಕಟರಮಣ ದೇವರ ದರ್ಶನ ಪಡೆದರು. ದೇವಳದ ವತಿಯಿಂದ ಸ್ವಾಮೀಜಿಯವರ ಪಾದ ಪೂಜೆ ನೆರವೇರಿಸಲಾಯಿತು.

ದೇವಳದ ಪ್ರಧಾನ ಅರ್ಚಕ ಕಮಲಾಲಕ್ಷ ಭಟ್, ಅರ್ಚಕರಾದ ಶ್ರೀನಿವಾಸ್ ಭಟ್ ಮತ್ತು ರವೀಂದ್ರ ಭಟ್ ಶಿರ್ವ ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭ ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ, ಮೊಕ್ತೆಸರರಾದ ರಾಮನಾಯಕ್, ಶ್ರೀಕಾಂತ್ ಭಟ್, ರಾಜೇಶ್ ಶೆಣೈ, ಸದಾಶಿವ ಕಾಮತ್, ಸದಸ್ಯರಾದ ಮಜೂರು ರಾಜೇಶ್ ಶೆಣೈ, ಚಂದ್ರಕಾಂತ್ ಕಾಮತ್, ಕೃಷ್ಣಾನಂದ್ ನಾಯಕ್, ಅತುಲ್ ಕುಡ್ವಾ ಮೊದಲಾದವರು ಉಪಸ್ಥಿತರಿದ್ದರು.
ಅಕ್ಟೋಬರ್ 30 : ಕಾಪುವಿನಲ್ಲಿ ಬೃಹತ್ ರಕ್ತದಾನ ಶಿಬಿರ

Posted On: 18-10-2022 06:15PM
ಕಾಪು : ಧರಣಿ ಸಮಾಜ ಸೇವಾ ಸಂಘ ಕಾಪು, ಜೆಸಿಐ ಕಾಪು ಮತ್ತು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಕಾಪು ವಲಯ ಇವರ ಆಶ್ರಯದಲ್ಲಿ ಸರಕಾರಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು, ಉಡುಪಿ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಅಕ್ಟೋಬರ್ 30, ಆದಿತ್ಯವಾರ ಬೆಳಿಗ್ಗೆ ಗಂಟೆ 9ರಿಂದ ಅಪರಾಹ್ನ ಗಂಟೆ 1ರ ತನಕ ವೀರಭದ್ರ ಸಭಾಭವನ, ಕಾಪು ಇಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಮ್ಯಾಷರ್ಸ್ ವೆಲ್ಫೇರ್ ಆಂಡ್ ಸ್ಫೋಟ್ಸ್೯ ಕ್ಲಬ್ ಪಡುಬಿದ್ರಿ : ಅಧ್ಯಕ್ಷರಾಗಿ ರಮೀಝ್ ಹುಸೇನ್ ಪುನರಾಯ್ಕೆ

Posted On: 18-10-2022 05:17PM
ಪಡುಬಿದ್ರಿ : ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಿ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಕಿಟ್ ವಿತರಣೆ, ಈದ್ ಕಿಟ್ ವಿತರಣೆ, ಸ್ವಚ್ಚತಾ ಕಾರ್ಯ, ಸಮಾಜ ಸೇವೆಯಲ್ಲಿ ತೊಡಗಿರುವ ಸ್ಮ್ಯಾಷರ್ಸ್ ವೆಲ್ಫೇರ್ ಆಂಡ್ ಸ್ಫೋಟ್ಸ್೯ ಕ್ಲಬ್ ಪಡುಬಿದ್ರಿ ಇದರ ವಾರ್ಷಿಕ ಮಹಾಸಭೆ ಮಂಗಳವಾರ ನಡೆಯಿತು.
ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಮೀಝ್ ಹುಸೇನ್ ಪುನರಾಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಮೊಹಮ್ಮದ್ ಕೌಸರ್, ಉಪಾಧ್ಯಕ್ಷರಾಗಿ ನಸ್ರುಲ್ಲ, ರಾಝಿ, ಅನ್ವರ್. ಕಾರ್ಯದರ್ಶಿಯಾಗಿ ನಿಝಾರ್, ಜೊತೆ ಕಾರ್ಯದರ್ಶಿಯಾಗಿ ರಾಝಿಕ್, ಕೋಶಾಧಿಕಾರಿಯಾಗಿ ಮಿಶೈಲ್, ಕ್ಲಬ್ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಮುಸ್ತಾಕ್, ಅರ್ಶಾದ್, ಶಾಮಿಲ್, ಅಝ್ಮಾಲ್, ಸಲಹೆಗಾರರಾಗಿ ಅಬ್ದುಲ್ ಮುತ್ತಲಿಬ್, ಕ್ರೀಡಾ ಕಾರ್ಯದರ್ಶಿಯಾಗಿ ರಿಯಾಝ್ ಆಯ್ಕೆಯಾದರು.
ಅಕ್ಟೋಬರ್ 26 : ಕಾಪು ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ಬೃಹತ್ ಸಾರ್ವಜನಿಕ ವಾಹನ ಪೂಜೆ

Posted On: 18-10-2022 01:00PM
ಕಾಪು : ವಿಧಾನ ಸಭಾ ಕ್ಷೇತ್ರ ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬೃಹತ್ ಸಾರ್ವಜನಿಕ ವಾಹನ ಪೂಜೆಯು ಕಾಪು ಹೊಸ ಮಾರಿಗುಡಿ ವಠಾರದಲ್ಲಿ 26 ನೇ ಬೆಳ್ಳಿಗೆ 9 ಗಂಟೆಗೆ ನಡೆಯಲಿದೆ ಎಂದು ಕಾಪು ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಪು ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ

Posted On: 18-10-2022 12:55PM
ಕಾಪು: ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ಕಾಶಿ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ ದೇವರ ದರುಶನ ಪಡೆದರು.
ಪ್ರಪ್ರಥಮ ಬಾರಿಗೆ ಕಾಪು ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಚಂಡಿಕಯಾಗದ ಪೂರ್ಣಹುತಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಅರ್ಚಕರಾದ ಕಮಾಲಕ್ಷ ಭಟ್, ಶ್ರೀನಿವಾಸ್ ಭಟ್ , ರವೀಂದ್ರ ಭಟ್ ಶಿರ್ವ, ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ, ಮೊಕ್ತೆಸರರಾದ ರಾಮನಾಯಕ್, ಶ್ರೀಕಾಂತ್ ಭಟ್, ರಾಜೇಶ್ ಶೆಣೈ, ಸದಾಶಿವ ಕಾಮತ್, ಸದಸ್ಯರಾದ ಮಜೂರು ರಾಜೇಶ್ ಶೆಣೈ, ಚಂದ್ರಕಾಂತ್ ಕಾಮತ್, ಕೃಷ್ಣಾನಂದ್ ನಾಯಕ್, ಅತುಲ್ ಕುಡ್ವಾ ಮೊದಲಾದವರು ಉಪಸ್ಥಿತರಿದ್ದರು.