Updated News From Kaup
ಕಾಪು : ಶ್ರೀ ವೆಂಕಟರಮಣ ದೇವಳ - ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ಸಂಪನ್ನ

Posted On: 06-10-2022 11:24AM
ಕಾಪು : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಒಂಬತ್ತು ದಿನ ನಿತ್ಯ ರಾತ್ರಿ ದುರ್ಗಾ ನಮಸ್ಕಾರ ಸೇವೆಯು ಜರಗಿ ವಿಜಯದಶಮಿ ದಿನದಂದು ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ವಿಜೃಂಭಣೆಯಿಂದ ಜರಗಿತು.

ವೇದಮೂರ್ತಿ ಕಮಲಾಕ್ಷ ಭಟ್ ಮಾರ್ಗದರ್ಶನ ದಲ್ಲಿ ವೇದಮೂರ್ತಿ ಶ್ರೀನಿವಾಸ ಭಟ್ ರವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಆಡಳಿತ ಮಂಡಳಿಯ ಸರ್ವಸದಸ್ಯರು ಹಾಗೂ ಊರ ಪರವೂರ ನೂರಾರು ಭಜಕರು ಪಾಲ್ಗೊಂಡರು.
ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ ಮೂಡುಬೆಳ್ಳೆ : 15ನೇ ವರ್ಷದ ಸತ್ಯನಾರಾಯಣ ಪೂಜೆ, ಶಾರದಾ ಪೂಜೆ, ಚಂಡಿಕಾಯಾಗ

Posted On: 06-10-2022 11:18AM
ಕಾಪು : ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಮೂಡುಬೆಳ್ಳೆ ಘಟಕದ ವತಿಯಿಂದ ಅಕ್ಟೋಬರ್ 04, ಮಂಗಳವಾರ ಬೆಳ್ಳೆ ಗೀತಾ ಮಂದಿರದಲ್ಲಿ ವೇದಮೂರ್ತಿ ವಿಖ್ಯಾತ ಭಟ್ ಇವರ ನೇತೃತ್ವದಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶಾರದಾ ಪೂಜೆ, ಮಹಾ ಚಂಡಿಕಾಯಾಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಮೂಡುಬೆಳ್ಳೆ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ಪೈ, ಕಾರ್ಯದರ್ಶಿಯಾದ ಅಭಿಷೇಕ್ ಆಚಾರ್ಯ, ಭಜರಂಗದಳ ಸಂಯೋಜಕ್ ಮಿಥುನ್ ಪೂಜಾರಿ, ವಾಣಿ ಆಚಾರ್ಯ ಮಾತೃಶಕ್ತಿ ಪ್ರಮುಖ್, ದೀಪಾ ಶೆಟ್ಟಿ ದುರ್ಗಾವಾಹಿನಿ ಪ್ರಮುಖ್, ದೀಪಕ್ ಮೂಡುಬೆಳ್ಳೆ ಜಿಲ್ಲಾ ಸೇವಾಪ್ರಮುಖ್, ಸಂತೋಷ್ ಕುಮಾರ್ ಮೂಡುಬೆಳ್ಳೆ, ಕೃಷ್ಣಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಉಚ್ಚಿಲ ದಸರಾಗೆ ತೆರೆ ; ಹೆಲಿಕಾಪ್ಟರ್ ಪುಷ್ಪವೃಷ್ಟಿ ; ಗಂಗಾರತಿಯೊಂದಿಗೆ ನವದುರ್ಗೆಯರ ಜಲಸ್ಥಂಭನ

Posted On: 06-10-2022 11:10AM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರಥಮ ಬಾರಿಗೆ ಜರಗಿದ ದಸರಾ - 2022 ಶೋಭಾಯಾತ್ರೆಯು ನವದುರ್ಗೆಯರ ಮೂರ್ತಿ ಸಹಿತ 75ಕ್ಕೂ ಮಿಕ್ಕಿ ಸ್ತಬ್ಧ ಚತ್ರಗಳ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸಾವಿರಾರು ಭಕ್ತರು ಈ ವೈಭವದ ಶೋಭಾಯಾತ್ರೆಗೆ ಸಾಕ್ಷಿಯಾದರು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಮೂಲಕ ದೇವಾಲಯ, ನವದುರ್ಗೆಯರ ಸಹಿತ ಸ್ಥಬ್ದ ಚಿತ್ರಗಳಿಗೆ ಪುಷ್ಪವೃಷ್ಟಿಗೈಯಲಾಯಿತು.

ಶೋಭಾಯಾತ್ರೆಯಲ್ಲಿ ಸ್ತಬ್ಧ ಚಿತ್ರಗಳು, ಹುಲಿವೇಷ ತಂಡಗಳು, ದ್ವಿಚಕ್ರ ವಾಹನದಲ್ಲಿ ಸಾಗಿದ ಯುವಕರು, ಯುವಕರ ನೃತ್ಯದ ಮೂಲಕ ಮೆರುಗು ನೀಡಿತು. ಕೆಲವು ಕಡೆಗಳಲ್ಲಿ ರಸಮಂಜರಿ ಕಾರ್ಯಕ್ರಮದ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಜನರು ಕಾದು ಕುಳಿತಿದ್ದರು.

ಉಚ್ಚಿಲದಿಂದ ಪಡುಬಿದ್ರಿ ಮಾರ್ಗವಾಗಿ ಹೆಜಮಾಡಿ ಟೋಲ್ ಗೇಟಿಗೆ ತಲುಪಿ ಅಲ್ಲಿಂದ ನೇರವಾಗಿ ಕಾಪು ಲೈಟ್ ಹೌಸ್ ಸಮೀಪದ ಕಡಲಕಿನಾರೆಯಲ್ಲಿ ನವದುರ್ಗೆಯರಿಗೆ ಗಂಗಾರತಿ ಸಲ್ಲಿಸಿ ನವದುರ್ಗೆಯರ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು.
ಪಡುಬಿದ್ರಿ : ಗಣೇಶ ಚತುರ್ಥಿಯಿಂದ ಪೂಜಿಸಲ್ಪಟ್ಟು ವಿಜಯದಶಮಿಯಂದು ಜಲಸ್ಥಂಭನಗೊಂಡ ಬಾಲ ಗಣಪತಿ

Posted On: 05-10-2022 08:31PM
ಪಡುಬಿದ್ರಿ: ಗಣೇಶ ಚತುರ್ಥಿಯಿಂದ ಆರಂಭಗೊಂಡು ವಿಜಯದಶಮಿಯವರೆಗೆ ಪೂಜಿಸಲ್ಪಟ್ಟು ಅದೇ ದಿನ ಸಂಜೆ ಮೆರವಣಿಗೆಯ ಮೂಲಕ ಜಲಸ್ಥಂಬನಗೊಳ್ಳುವ ಬಾಲ ಗಣಪತಿ ದೇವಳದ ಗಣಪತಿ ವಿಸರ್ಜನಾ ಮೆರವಣಿಗೆ ಇಂದು ಜರಗಿತು.
ಗಣೇಶ ಚತುರ್ಥಿಯಂದು ಮೊದಲ್ಗೊಂಡು ವಿಜಯದಶಮಿಯವರೆಗೆ ಪ್ರತಿನಿತ್ಯ ಸಂಜೆ ಪೂಜಾಕೈಂಕರ್ಯ ನಡೆಯುವುದು ಈ ಕ್ಷೇತ್ರದ ವಿಶೇಷವಾಗಿದೆ. ಇಲ್ಲಿ ಗಣಪತಿಗೆ ಹರಕೆಯ ರೂಪವಾಗಿ ರಂಗಪೂಜೆಯು ಪ್ರಮುಖವಾಗಿದೆ.
ಪೂಜಾ ಸೇವೆಯ ಬಳಿಕ ಸಂಜೆಯ ಹೊತ್ತಿಗೆ ಗಣಪತಿ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಮೆರವಣಿಗೆಯಲ್ಲಿ ಕ್ಷೇತ್ರದಿಂದ ಹೊರಟು ಪೇಟೆಯ ಮೂಲಕ ಕೆಳಗಿನ ಪೇಟೆಗೆ ಬಂದು ಬೀಚ್ ರಸ್ತೆಯ ಮೂಲಕ ಕ್ರಮಿಸಿ ಮುಂದೆ ಸಮುದ್ರದಲ್ಲಿ ಜಲಸ್ಥಂಭನಗೊಂಡಿತು. ಈ ಸಂದರ್ಭದಲ್ಲಿ ಹುಲಿ ವೇಷದ ತಂಡ, ಭಜನಾ ಕುಣಿತ, ನಾಸಿಕ್ ಬ್ಯಾಂಡ್, ವೇಷಗಳು ಪ್ರಮುಖ ಆಕರ್ಷಣೆಯಾಗಿತ್ತು.
ಕೋತಲಕಟ್ಟೆ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಸಂಪನ್ನ

Posted On: 05-10-2022 12:28PM
ಕಾಪು : ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನ ಕೋತಲಕಟ್ಟೆ ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ 9 ದಿನಗಳ ಪೂಜಾ ವಿಧಿಯು ವಿಜೃಂಭಣೆಯಿಂದ ಜರಗಿ ಬುಧವಾರ ಸಂಪನ್ನಗೊಂಡಿತು.

ಉಚ್ಚಿಲ ದಸರಾ-2022 ಕ್ಷಣಗಣನೆ ; ಸ್ತಬ್ದ ಚಿತ್ರಗಳ ಅಂತಿಮ ಹಂತದ ತಯಾರಿ

Posted On: 05-10-2022 12:05PM
ಉಚ್ಚಿಲ : ನವರಾತ್ರಿಯ ಕೊನೆಯ ದಿನವಾದ ಇಂದು ಪ್ರಥಮ ಬಾರಿಗೆ ಶೋಭಾಯಾತ್ರೆಯ ವೈಭವಕ್ಕೆ ತಯಾರಿ ನಡೆಸುತ್ತಿರುವ ಶ್ರೀ ಮಹಾಲಕ್ಷ್ಮೀ ದೇಗುಲವು ಅಣಿಯಾಗುತ್ತಿದೆ.

ಸಂಜೆ ವೇಳೆಗೆ ಶೋಭಾಯಾತ್ರೆಗೆ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಇದರ ಪೂರ್ವತಯಾರಿಯಾಗಿ 50ಕ್ಕೂ ಅಧಿಕ ಸ್ತಬ್ಧ ಚಿತ್ರಗಳು ಈಗಾಗಲೇ ದೇವಳದ ಸನಿಹದಲ್ಲಿದ್ದು ಅಂತಿಮ ಹಂತದ ತಯಾರಿಯಲ್ಲಿ ನಿರತರಾಗಿದ್ದಾರೆ.
ಉಚ್ಚಿಲ : ಶೋಭಾಯಾತ್ರೆಯ ಮೆರವಣಿಗೆಯ ಪೂರ್ವ ತಯಾರಿ ಬಗ್ಗೆ ಪೋಲಿಸ್ ಸಭೆ

Posted On: 05-10-2022 11:31AM
ಉಚ್ಚಿಲ : ನವರಾತ್ರಿ ಉತ್ಸವದ ಶೋಭಾಯಾತ್ರೆಯ ಮೆರವಣಿಗೆಯ ಪೂರ್ವ ತಯಾರಿ ಬಗ್ಗೆ ಕಾಪು ಪೋಲಿಸ್ ವೃತ್ತ ನಿರೀಕ್ಷಕರಾದ ಪೂವಯ್ಯ ನೇತೃತ್ವದಲ್ಲಿ ಪೋಲಿಸ್ ಅಧಿಕಾರಿಗಳಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿಕೆ ಕಾರ್ಯ ಬುಧವಾರ ಉಚ್ಚಿಲದ ಮೊಗವೀರ ಸಭಾ ಭವನದಲ್ಲಿ ಜರಗಿತು.

ಶೋಭಾಯಾತ್ರೆಯ ಕಾರ್ಯದಲ್ಲಿ 14 ಎಸೈ, 2 ಡಿವೈಎಸ್ಪಿ, 4 ಸಿಪಿಐ, 22 ಎಎಸೈ, 133 ರಷ್ಟು ಪಿಸಿಗಳು, 4 ಡಿ ಆರ್ ಪೋಲಿಸ್ ವಾಹನ, 1 ಕೆ ಎಸ್ ಪಿ ವಾಹನ, ಇದರ ಜೊತೆಗೆ 150 ಮಂದಿ ದೇವಳದಿಂದ ನೇಮಿಸಲ್ಪಟ್ಟ ಸ್ವಯಂ ಸೇವಕರು ಇಂದಿನ ಶೋಭಾಯಾತ್ರೆಯ ಬಂದೋಬಸ್ತ್ ಕಾರ್ಯದಲ್ಲಿ ತೊಡಗಲಿರುವರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ವಿಜಯ ಪ್ರಸಾದ್,ಡಿವೈಎಸ್ಪಿ ಸುಧಾಕರ್, ವೃತ್ತ ನಿರೀಕ್ಷಕರಾದ ಅಂತ ಪದ್ಮನಾಭ, ಪ್ರಮೋದ್ ಕುಮಾರ್, ಸಂಪತ್ , ಕೆ ಸಿ ಪೂವಯ್ಯ ಉಪಸ್ಥಿತರಿದ್ದರು.
ಪಡುಬಿದ್ರಿ ಠಾಣೆಯಲ್ಲಿ ಆಯುಧ ಪೂಜೆ

Posted On: 05-10-2022 07:58AM
ಪಡುಬಿದ್ರಿ : ಇಲ್ಲಿನ ಪೋಲಿಸ್ ಠಾಣೆಯಲ್ಲಿ ಆಯುಧ ಪೂಜೆಯು ಮಂಗಳವಾರ ವಿಜೃಂಭಣೆಯಿಂದ ಜರಗಿತು.

ಸಮವಸ್ತ್ರಧಾರಿಗಳಾಗಿ ಕೆಲಸದೊತ್ತಡದಿಂದ ಇರುತ್ತಿದ್ದ ಪೋಲಿಸರು ಒಂದೇ ರೀತಿಯ ಬಣ್ಣದ ಬಟ್ಟೆ ಧರಿಸಿ ಆಯುಧ ಪೂಜೆಯಲ್ಲಿ ಪಾಲ್ಗೊಂಡರು.
ಈ ಪಡುಬಿದ್ರಿ ಪೋಲಿಸ್ ಠಾಣಾಧಿಕಾರಿ ಪುರುಷೋತ್ತಮ್, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ರಕ್ಷಣಾಪುರ ಜವನೆರ್ನ ಕೂಟ ಪಿಲಿ ಪರ್ಬ - ಅಶೋಕ್ ರಾಜ್ ಕಾಡಬೆಟ್ಟು ತಂಡ ಪ್ರಥಮ, ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ದ್ವಿತೀಯ

Posted On: 05-10-2022 01:12AM
ಕಾಪು : ರಕ್ಷಣಾಪುರ ಜವನೆರ್ನ ಕೂಟ ಕಾಪು ದಸರಾ ಹಬ್ಬದ ಪ್ರಯುಕ್ತ ಕಾಪು ಜನಾರ್ಧನ ದೇವಸ್ಥಾನದ ಬಳಿಯ ಮೈದಾನಲ್ಲಿ ಜರಗಿದ ಹುಲಿ ವೇಷ ಸ್ಪರ್ಧೆ - 20022 ಕಾಪು ಪಿಲಿ ಪರ್ಬವನ್ನು ಕಾಪು ಮಾರಿಗುಡಿ ತಂತ್ರಿವರ್ಯರು ಉದ್ಘಾಟಿಸಿ ಶುಭ ಹಾರೈಸಿದರು.

ಹುಲಿ ಕುಣಿತದ ಹೆಸರು ನೋಂದಾಯಿಸಿದ್ದ ಹತ್ತು ತಂಡಗಳಲ್ಲಿ ಒಂಭತ್ತು ತಂಡಗಳು ಇಪ್ಪತ್ತು ನಿಮಿಷಗಳ ಕಾಲವಧಿಯಲ್ಲಿ ತಮ್ಮ ಕುಣಿತದ ಜೊತೆಗೆ ಮುಡಿ ಎತ್ತುವಿಕೆ ಇತ್ಯಾದಿ ಪ್ರಕಾರಗಳ ಪ್ರದರ್ಶನ ನೀಡಿತು. ಡ್ಯಾನ್ಸಿಂಗ್ ಸ್ಟಾರ್ ಎಡಪದವು ತಂಡದಿಂದ ನೃತ್ಯ ಕಾರ್ಯಕ್ರಮ, ಭಾರ್ಗವಿ ತಂಡದಿಂದ ಸಂಗೀತ ಕಾರ್ಯಕ್ರಮ ಜರಗಿತು. ಚಲನಚಿತ್ರ ನಟರಾದ ಅರ್ಜುನ್ ಕಾಪಿಕಾಡ್, ಚೈತ್ರ ಶೆಟ್ಟಿ, ಸಂದೀಪ್, ಮರ್ವಿನ್ , ಇಲ್ಲ್ ಒಕ್ಕೊಲ್ ಚಿತ್ರ ತಂಡವು ಪ್ರಮುಖ ಆಕರ್ಷಣೆಯಾಗಿತ್ತು. ಈ ಸಂದರ್ಭ ವಿವಿಧ ಕ್ಷೇತ್ರದ ಯುವ ಪ್ರತಿಭೆಗಳನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭ : ಈ ಸಂದರ್ಭ ಮಾತನಾಡಿದ ಕಾರ್ಯಕ್ರಮದ ರುವಾರಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ದೇಶ ವಿದೇಶದಲ್ಲಿ ಹುಲಿಕುಣಿತ ಪ್ರಸಿದ್ಧಿ ಹೊಂದಿದೆ. ನವರಾತ್ರಿ ತುಳುನಾಡಿನ ಸಾಂಸ್ಕೃತಿಕ ಹಬ್ಬ. ನಮ್ಮ ರಕ್ಷಣಾಪುರ ಜವರ್ನೆನ ತಂಡವು ಈ ಕಾರ್ಯಕ್ರಮ ಕಾಪುವಿನಲ್ಲಿಯೂ ಆಗಬೇಕೆಂಬ ಇಚ್ಛೆಯಿಂದ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂದಿನ ವರ್ಷವೂ ದೊಡ್ಡ ಮಟ್ಟದಲ್ಲಿ ಹುಲಿ ಕುಣಿತ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ವೈಯಕ್ತಿಕ ಮತ್ತು ತಂಡ ಪ್ರಶಸ್ತಿ ಪುರಸ್ಕೃತರು : ಪ್ರಥಮ ಬಹುಮಾನ ಒಂದು ಲಕ್ಷ ನಗದು ಜೊತೆಗೆ ಟ್ರೋಫಿಯನ್ನು ಅಶೋಕ್ ರಾಜ್ ಕಾಡಬೆಟ್ಟು ತಂಡವು ಪಡೆಯಿತು. ದ್ವಿತೀಯ ಬಹುಮಾನವನ್ನು ಐವತ್ತು ಸಾವಿರ ನಗದು ಟ್ರೋಫಿಯೊಂದಿಗೆ ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡವು ಪಡೆಯಿತು. ಮುಡಿ ಎತ್ತುವಿಕೆ : ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡ ಕಿನ್ನಿ ಪಿಲಿ : ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡ ವಿಶೇಷ ಕಪ್ಪು ಹುಲಿ : ಕಿಂಗ್ ಟೈಗರ್ ಕಾಪು ತಂಡ ಅತ್ಯುತ್ತಮ ಹುಲಿ ಕುಣಿತ ತಂಡ : ಅಶೋಕ್ ರಾಜ್ ಕಾಡಬೆಟ್ಟು ತಂಡ ಪಡೆದುಕೊಂಡಿತು. ಭಾಗವಹಿಸಿದ ತಂಡಕ್ಕೆ ನಗದು ಪ್ರೋತ್ಸಾಹಕರ ಗೌರವ ನೀಡಲಾಯಿತು.
ಕಾರ್ಯಕ್ರಮದಲ್ಲಿ ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಗುಲಾಂ ಅಹ್ಮದ್, ಶೇಖರ್ ಹೆಜ್ಮಾಡಿ, ವಿನಯ್ ಬಲ್ಲಾಳ್, ಶಿವಾಜಿ ಸುವರ್ಣ, ಸಾದಿಕ್, ವೈ ಸುಧೀರ್ ಕುಮಾರ್, ಗಣೇಶ್ ಕೋಟ್ಯಾನ್, ಶಾಂತಲತ ಶೆಟ್ಟಿ, ಜ್ಯೋತಿ ಮೆನನ್, ಅಶ್ವಿನಿ, ಸಾದಿಕ್, ಶರ್ಫುದ್ಧೀನ್, ಅಮೀರುದ್ದೀನ್, ಶೇಖಬ್ಬ, ಅಖಿಲೇಶ್, ಕೇಶವ ಸಾಲ್ಯಾನ್, ಸೌರಭ್ ಬಲ್ಲಾಳ್, ದೀಪಕ್ ಎರ್ಮಾಳ್, ಸತೀಶ್ಚಂದ್ರ, ಆಸೀಫ್, ಇಮ್ರಾನ್, ದೀಪ್ತಿ, ಶೋಭ ಬಂಗೇರ, ಫರ್ಝಾನ, ಹರೀಶ್ ನಾಯಕ್, ಸುನಿಲ್ ಬಂಗೇರ, ಪ್ರಭಾಕರ ಆಚಾರ್ಯ, ಗಿರೀಶ್ ಉದ್ಯಾವರ, ಕಾರ್ತಿಕ್ ಅಮೀನ್, ಎಂ ಎಸ್ ಮನ್ಸೂರ್, ಅಬಿದ್ ಆಲಿ, ಸಾಯಿ, ಯಶವಂತ್ ಅಮೀನ್, ಕರುಣಾಕರ್ ಪೂಜಾರಿ, ಜಿತೇಂದ್ರ ಪುಟಾರ್ಡೊ, ಲಕ್ಷ್ಮೀಶ್ ತಂತ್ರಿ, ಉಸ್ಮಾನ್ ಕಾಪು, ವಿಜಯ್ ಧೀರಜ್, ಶಬರೀಶ್ ಸುವರ್ಣ, ಸುಲಕ್ಷಣ್ ಪೂಜಾರಿ, ಯಶವಂತ ಪೂಜಾರಿ, ಲವ ಕರ್ಕೇರ, ದೇವರಾಜ್ ಕೋಟ್ಯಾನ್, ದೀಪಕ್ ಕೋಟ್ಯಾನ್, ನಯೇಶ್ ಕಾಪು, ಅಬ್ದುಲ್ಲ ಪಲಿಮಾರು, ಪ್ರಸಾದ್ ಬಂಗೇರ, ರೀನಾ ಡಿಸೋಜ, ರಾಧಿಕಾ, ವಿದ್ಯಾಲತ, ಯಾಕೂಬ್ ಮಜೂರ್ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ಕೃಷ್ಣಯ್ಯ ಮತ್ತು ಡಾ| ಗಣನಾಥ ಎಕ್ಕಾರು ತೀರ್ಪುಗಾರರಾಗಿ ಸಹಕರಿಸಿದ್ದರು. ರಕ್ಷಣಾಪುರ ಜವನೆರ್ನ ಕೂಟದ ಅಧ್ಯಕ್ಷರಾದ ನವೀನ್ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ರಮೀಝ್ ಹುಸೈನ್ ವಂದಿಸಿದರು.
ಕಾಪು : ಪ್ರಮೋದ್ ಮುತಾಲಿಕ್ ಭೇಟಿ ಮಾಡಿದ ಗಣೇಶ್ ಪಂಜಿಮಾರ್ ಹಾಗೂ ಸುಮಾ ಪಂಜಿಮಾರ್

Posted On: 04-10-2022 09:11PM
ಕಾಪು : ಸತ್ಯದ ತುಳುವೆರ್ (ರಿ.) ಉಡುಪಿ ಇವರ ಸಹಕಾರದೊಂದಿಗೆ ಶ್ರೀ ರಾಮ ಸೇನೆಯ ಪ್ರಮುಖರಾದ ಪ್ರಮೋದ್ ಮುತಾಲಿಕ್ ಅವರನ್ನು ಚಿತ್ರ ಕಲಾವಿದ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಪಂಜಿಮಾರು ಹಾಗೂ ಅವರ ಸಹೋದರಿ ಸುಮಾ ಪಂಜಿಮಾರ್ ಅಕ್ಟೋಬರ್ 3 ರಂದು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಗಣೇಶ್ ಪಂಜಿಮಾರ್ ಮಾತೃಶ್ರೀ ನಾಗಮಣಿ , ಸತ್ಯದ ತುಳುವೆರ್ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.