Updated News From Kaup
ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ಹರ್ಷಿತಾ ಇನ್ನಂಜೆ ಆಯ್ಕೆ

Posted On: 12-10-2022 05:54PM
ಕಾಪು : ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ಶಿವಮೊಗ್ಗದಲ್ಲಿ ಅಕ್ಟೋಬರ್ 10 ರಂದು ನಡೆಸಿದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುಮಾರಿ ಹರ್ಷಿತಾ ಇನ್ನಂಜೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ.
ಮುಂಬರುವ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಕತ್ತಲ ಚಿಗುರು ಮಕ್ಕಳ ಕಿರು ಚಿತ್ರ ಬಿಡುಗಡೆ

Posted On: 11-10-2022 07:25PM
ಉಡುಪಿ : ಕತ್ತಲ ಚಿಗುರು ಮಕ್ಕಳ ಕಿರು ಚಿತ್ರದ ಬಿಡುಗಡೆ ಕಾರ್ಯಕ್ರಮವು ಅಕ್ಟೋಬರ್ 9 ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬ್ರಹ್ಮಾವರ ವಲಯ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಹಾವಂಜೆ ಉದ್ಘಾಟಿಸಿದರು.

ಕಿರು ಚಿತ್ರವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಂದಾಪುರ ವಲಯ ಅಧ್ಯಕ್ಷರಾದ ಎಂ ಗಣೇಶ್ ಕುಮಾರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಅಧ್ಯಾಪಕರಾದ ಸಂಜೀವ ಮಡಿವಾಳ ಕುಕ್ಕಿಕಟ್ಟೆ ಬೆಳ್ಳಂಪಳ್ಳಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆದಿತ್ಯ ಭಾಸ್ಕರ್ ಕರಂಬಳ್ಳಿ, ಶಿಕ್ಷಣ ಸಂಯೋಜಕರು ಕುಂದಾಪುರ ವಲಯ ಶೇಖರ್ ಯು., ವಿ ಎಸ್ ಗ್ರೂಪ್ ಹಾಗೂ ನಮ್ಮ ಉಡುಪಿ ಟಿವಿ ನಿರ್ದೇಶಕರು ಹಾಗೂ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ( ರಿ ) ಉಡುಪಿ ಜಿಲ್ಲೆ ಇದರ ವಿನೋದ್ ಶೆಟ್ಟಿ, ಕಿರುತೆರೆ ನಟಿ ಪೂಜಾ ಶೆಟ್ಟಿ, ಹಾಲು ಉತ್ಪಾದಕರ ಸಹಕಾರಿ ಸಂಘ ಬೆಳ್ಳಂಪಳ್ಳಿ ಉಪಾಧ್ಯಕ್ಷ ಸದಾನಂದ ಶೆಟ್ಟಿ, ಭೂತರಾಜ ದೇವಸ್ಥಾನ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಜಿಲ್ಲಾಧ್ಯಕ್ಷರು ಹಾಲು ಉತ್ಪಾದಕರ ನೌಕರರ ಸಂಘ ಬ್ಯಾಂಕಿಂಗ್ ವಿಭಾಗದ ಓಂ ಪ್ರಕಾಶ್ ಕೆಮ್ಮಣ್ಣು, ನಿರ್ಮಾಪಕರಾದ ಮಮತಾ ಪಿ ಶೆಟ್ಟಿ ಶ್ರೀನಗರ, ಮಮತಾ ಸಂತೋಷ್ ಶೆಟ್ಟಿ, ರಮಣಿ ಹಾಗೂ ಚಿತ್ರತಂಡದ ಎಲ್ಲಾ ಸದಸ್ಯರು ಉಪಸ್ಥಿತಿಯಿದ್ದರು.
ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಂದಾಪುರ ಇದರ ಉಪಾಧ್ಯಕ್ಷರಾದ ಶಶಿಧರ್ ಶೆಟ್ಟಿ ಸ್ವಾಗತಿಸಿದರು. ಕಿರುಚಿತ್ರದ ಚಿತ್ರಕಥೆ ಸಾಹಿತ್ಯ ಸಂಗೀತ ನಿರ್ದೇಶಕ ದಿನೇಶ್ ಕೊಡವೂರು ವಂದಿಸಿದರು.
ಕಾಪು ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ ಪೂರ್ಣಾಹುತಿ ; ಅನ್ನಸಂತರ್ಪಣೆ

Posted On: 11-10-2022 07:07PM
ಕಾಪು : ಇಲ್ಲಿನ ಗೌಡ ಸಾರಸ್ವತ ಸಮಾಜದ ಆಡಳಿತಕ್ಕೆ ಒಳಪಟ್ಟಿರುವ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅಕ್ಟೋಬರ್ 11ರಂದು ಚಂಡಿಕಾಯಾಗ ಪೂರ್ಣಾಹುತಿ ಮತ್ತು ಅನ್ನಸಂತರ್ಪಣೆ ನಡೆಯಿತು.
ಹಳೇ ಮಾರಿಗುಡಿಯ ಅರ್ಚಕ ವೇ| ಮೂ| ಕಮಲಾಕ್ಷ ಭಟ್ ಅವರ ನೇತೃತ್ವದಲ್ಲಿ ವೈದಿಕ ವೃಂದದ ಸಹಭಾಗಿತ್ವದೊಂದಿಗೆ ಚಂಡಿಕಾಯಾಗ ಪೂರ್ಣಾಹುತಿಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಹಾಲು ಪಾಯಸ ಸಹಿತವಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಮಾರಿಯಮ್ಮ ದೇವಿಯ ದರ್ಶನ ಸೇವೆ ನಡೆದು ಭಕ್ತರಿಗೆ ಅನುಗ್ರಹ ಪ್ರಸಾದ ವಿತರಿಸಲಾಯಿತು.
ಕಾಪು ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಧ್ಯಕ್ಷ ಕೆ. ಪ್ರಸಾದ್ ಗೋಕುಲ್ದಾಸ್ ಶೆಣೈ, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್, ರಾಜೇಶ್ ಮಾಧವರಾಯ ಶೆಣೈ, ರಾಮ ಶಶಿಧರ ನಾಯಕ್, ಶ್ರೀಕಾಂತ ಲಕ್ಷ್ಮೀನಾರಾಯಣ ಭಟ್, ಆಡಳಿತ ಮಂಡಳಿಯ ಸದಸ್ಯರಾದ ಸುನೀಲ್ ಪೈ, ಚಂದ್ರಕಾಂತ್ ಕಾಮತ್, ಮೋಹನದಾಸ್ ಕಿಣಿ, ಕೃಷ್ಣಾನಂದ ನಾಯಕ್, ರಾಜೇಶ್ ಶೆಣೈ ಹಾಗೂ ವಿವಿಧ ಗಣ್ಯರು, ಕಾಪು ಪೇಟೆಯ ಹತ್ತು ಸಮಸ್ತರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.
ಅ.13 : ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಪುಣೆ ಸಮಿತಿ ಉದ್ಘಾಟನಾ ಸಮಾರಂಭ ; ಶ್ರೀದೇವಿ ಮಹಾತ್ಮೆ ಯಕ್ಷಗಾನ

Posted On: 10-10-2022 11:18PM
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿಗಾಗಿ ರಚಿಸಿದ ಪುಣೆ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಹಾವಂಜೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವು ಅಕ್ಟೋಬರ್ 13, ಗುರುವಾರ ಮಧ್ಯಾಹ್ನ ಗಂಟೆ 12:30 ರಿಂದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ನಡೆಯಲಿದೆ.
ಪುಣೆ ಬಂಟರ ಸಂಘದ ಅಧ್ಯಕ್ಷ ಹಾಗೂ ಕಾಪು ಮಾರಿಗುಡಿ ಅಭಿವೃದ್ಧಿ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯ ಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಎಂ ಆರ್ ಜಿ ಗ್ರೂಪ್ ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ, ಕಾಪು ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ , ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ , ಮುಂಬಯಿ ಸಮಿತಿಯ ಅಧ್ಯಕ್ಷರಾದ ಸುಧಾಕರ ಹೆಗ್ಡೆ , ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷರಾದ ರವಿ ಸುಂದರ್ ಶೆಟ್ಟಿ, ಕಾಪು ಮಾರಿಗುಡಿ ಅಭಿವೃದ್ಧಿ ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾದ ಯೋಗೀಶ್ ಶೆಟ್ಟಿ ಬಾಲಾಜಿ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾಗಿರುವ ಉದಯ್ ಸುಂದರ್ ಶೆಟ್ಟಿ, ಸಂದೀಪ್ ಶೆಟ್ಟಿ, ರವಿರಾಜ್ ಶೆಟ್ಟಿ ,ಮೋಹನ್ ಶೆಟ್ಟಿ ,ದಿವಾಕರ ಶೆಟ್ಟಿ, ದಯಾನಂದ್ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ , ನಾಗವ್ರುಜ ಕ್ಷೇತ್ರ ಪಾವಂಜೆಯ ಪ್ರಸಿದ್ಧ ಕಲಾವಿದರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಪು ಮಾರಿಯಮ್ಮನ ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಕಾರ್ಯಾಧ್ಯಕ್ಷರಾದ ಪಾದೂರು ಹೊಸಮನೆ ಮಾಧವ ಆರ್ ಶೆಟ್ಟಿ , ಉಪಾಧ್ಯಕ್ಷರಾದ ಎರ್ಮಾಳ್ ಚಂದ್ರಹಾಸ ಶೆಟ್ಟಿ, ವಿಶ್ವನಾಥ ಪೂಜಾರಿ ಕಡ್ತಲ, ಪ್ರವೀಣ್ ಶೆಟ್ಟಿ ಪುತ್ತೂರು, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ಇನ್ನಂಜೆ , ಕಾರ್ಯದರ್ಶಿ ಉದಯ್ ಶೆಟ್ಟಿ ಕಳತ್ತೂರು , ಗೌರವ ಕೋಶಾಧಿಕಾರಿ ದಿನೇಶ್ ಶೆಟ್ಟಿ ಕಳತ್ತೂರು, ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ವಿವಿಧ ವಲಯಗಳ ಕಾರ್ಯಾಧ್ಯಕ್ಷರಾದ ಗಣೇಶ್ ಹೆಗ್ಡೆ ಪುಂಚೂರು ,ರಾಕೇಶ್ ಶೆಟ್ಟಿ ಬೆಳ್ಳಾರೆ, ರವಿ ಕೆ ಶೆಟ್ಟಿ , ಗಣೇಶ್ ಪೂಂಜಾ, ರೋನಕ್ ಜಯ ಶೆಟ್ಟಿ, ಕಾರ್ಯಾಧ್ಯಕ್ಷೆ ಸುಲತಾ ಸತೀಶ್ ಶೆಟ್ಟಿ ವಿನಂತಿಸಿದ್ದಾರೆ .
ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು : ತಾಂಬೂಲ ಪ್ರಶ್ನೆಯ ಪರಿಹಾರ ಕ್ರಮ ; ಜೀರ್ಣೋದ್ಧಾರದ ಪೂರ್ವಭಾವಿ ಸಭೆ

Posted On: 10-10-2022 02:43PM
ಕಾಪು : ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು ಇಲ್ಲಿ ತಾಂಬೂಲ ಪ್ರಶ್ನೆಯ ಪರಿಹಾರ ಪ್ರಾರಂಭ ಕಾರ್ಯಕ್ರಮಗಳು ಮತ್ತು ಜೀರ್ಣೋದ್ಧಾರ ಮಾಡುವ ಬಗ್ಗೆ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ್ ಹೆಗ್ಡೆ ಯವರ ಮುಂದಾಳತ್ವದಲ್ಲಿ ಪ್ರಥಮ ಪೂರ್ವಭಾವಿ ಸಭೆ ಮೂಡು ಮಟ್ಟಾರು ಬಬ್ಬರ್ಯ ಸಾನಿಧ್ಯದಲ್ಲಿ ಅಕ್ಟೋಬರ್ 9ರಂದು ನಡೆಯಿತು.
ಕೇಂಜ ಶ್ರೀಧರ್ ತಂತ್ರಿ ಮತ್ತು ಗುಂಡು ಭಟ್ ಇವರ ತಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತಹ ಪರಿಹಾರ ಕಾರ್ಯಕ್ರಮಗಳನ್ನು ಮಾಡುವ ದಿನಾಂಕ ಮತ್ತು ವಿವಿಧ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಜಯಪ್ರಕಾಶ್ ಪ್ರಭು ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಕಾಪು ತಾಲೂಕು , ಸುರೇಶ ನಾಯಕ್ ಮಟ್ಟಾರು , ಗೋಪಾಲ್ ನಾಯ್ಕ್ ಮಟ್ಟಾರು , ಪ್ರಸಾದ್ ಶೆಟ್ಟಿ, ಮೂಡು ಮಟ್ಟಾರು ದೈವಸ್ಥಾನ ಆಡಳಿತ ಕಮಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಗೌರವಾ ಧ್ಯಕ್ಷ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.
ಕಮಿಟಿ ಕಾರ್ಯದರ್ಶಿ ಹರೀಶ್ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ರವಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಅಕ್ರಮ ಕಸಾಯಿಖಾನೆ - ಶಿರ್ವ ಪೋಲಿಸರ ದಾಳಿ

Posted On: 10-10-2022 01:14PM
ಕಾಪು : ತಾಲೂಕಿನ ಬೆಳಪು ಗ್ರಾಮದ ಹಾಜಿಗೇಟ್ ಬಳಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಯ ಮಾಹಿತಿಯ ಮೇರೆಗೆ ಶಿರ್ವ ಪೋಲಿಸರು ಮಿಂಚಿನ ದಾಳಿ ನಡೆಸಿ ಗೋಮಾಂಸ ಮತ್ತು ಕರುಗಳನ್ನು ವಶಪಡಿಸಿಕೊಂಡು ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಗೋಮಾಂಸ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳು, ಗೋಮಾಂಸ ವಶ ಪಡಿಸಿಕೊಂಡಿರುವ ಪೋಲಿಸರು ಒಂದು ಕರುವನ್ನು ರಕ್ಷಿಸಲಾಗಿದ್ದು 3 ದ್ವಿಚಕ್ರ ವಾಹನಗಳನ್ನು ವಶ ಪಡೆದುಕೊಂಡಿದ್ದಾರೆ.
ಆರೋಪಿಗಳು ದನದ ಮಾಂಸ ಮಾರಿ ಬಂದ ಹಣವನ್ನು ಹಬ್ಬಕ್ಕಾಗಿ ಖರ್ಚು ಮಾಡಿದ್ದೇವೆ ಎಂದು ಪೋಲಿಸರಿಗೆ ತಿಳಿಸಿದ್ದು, ಕದ್ದು ತಂದ ಸ್ಥಳದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ ತಂಡ ಭೇಟಿ

Posted On: 10-10-2022 12:42PM
ಪಡುಬಿದ್ರಿ : ಇಲ್ಲಿನ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.)ಗೆ ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ (ನಿ.) ಅಧ್ಯಕ್ಷರಾದ ಶಿವಾನಂದ ರಾಮಗೇರಿ ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಒಳಗೊಂಡ ಅಧ್ಯಯನ ತಂಡವು ಅಕ್ಟೋಬರ್ 7ರಂದು ಭೇಟಿ ನೀಡಿತು.
ಈ ಸಂದರ್ಭ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ ಹಾಗೂ ನಿರ್ದೇಶಕರಾದ ರಸೂಲ್ ವೈ.ಜಿ. ಸೊಸೈಟಿಯ ಕಾರ್ಯವೈಖರಿ ಬಗ್ಗೆ ಅಧ್ಯನ ತಂಡಕ್ಕೆ ಮಾಹಿತಿ ನೀಡಿದರು.
ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶಿವಾನಂದ ರಾಮಗೇರಿ ಯವರು ಸೊಸೈಟಿಯ ಅಭಿವೃದ್ಧಿ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ನಿರ್ದೇಶಕರಾದ ರಸೂಲ್ ವೈ.ಜಿ., ಗಿರೀಶ್ ಪಲಿಮಾರ್, ರಾಜಾರಾಮ್ ರಾವ್, ಯಶವಂತ್ ಪಿ.ಬಿ., ಮಾಧವ ಆಚಾರ್ಯ, ಸ್ಟೇನ್ನಿ ಕ್ವಾಡ್ರಸ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಿಶ್ಮಿತಾ ಪಿ.ಎಚ್ ಹಾಗೂ ಸಿಬಂದಿ ವೃಂದ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ (ಪ್ರಭಾರ) ಹರೀಶ್ ಬಿ., ಸಿಬಂದಿ ವಿಶ್ವನಾಥ್ ಉಪಸ್ಥಿತರಿದ್ದರು.
ಮೂಳೂರು : ಎಸ್ಡಿಪಿಐಯಿಂದ ಆಂಬುಲೆನ್ಸ್ ಲೋಕಾರ್ಪಣೆ ; ಪಕ್ಷ ಸೇರ್ಪಡೆ ಕಾರ್ಯಕ್ರಮ

Posted On: 10-10-2022 12:14PM
ಮೂಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಮೂಳೂರು ವಲಯ ಇದರ ವತಿಯಿಂದ ಅಂಬುಲೆನ್ಸ್ ಹಸ್ತಾಂತರ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ಅಕ್ಟೋಬರ್ 9 ರಂದು ಕಾಪು ತಾಲೂಕಿನ ಮೂಳೂರಿನಲ್ಲಿ ಜರಗಿತು.

ಪಕ್ಷದ ಸಮಾಜಸೇವೆಯನ್ನು ಗುರುತಿಸಿಕೊಂಡು ದಾನಿಗಳು ಜಾತಿ-ಮತ ಭೇದವಿಲ್ಲದೆ ಸಾರ್ವಜನಿಕರ ಸೇವೆಗಾಗಿ ಆಂಬುಲೆನ್ಸ್ ನ್ನು ಎಸ್ಡಿಪಿಐ ಮೂಳೂರು ವಲಯಕ್ಕೆ ಹಸ್ತಾಂತರಿಸಲಾಯಿತು. ಸಾರ್ವಜನಿಕ ಸೇವೆಗಾಗಿ ನೀಡಿದ ಆಂಬುಲೆನ್ಸ್ ಉದ್ಘಾಟನೆಯನ್ನು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರು ಹಾಗೂ ಎಸ್ಡಿಪಿಐ ಉಡುಪಿ ಜಿಲ್ಲಾ ಉಸ್ತುವಾರಿಯಾದ ಅಥಾವುಲ್ಲಾ ಜೋಕಟ್ಟೆ ನೆರವೇರಿಸಿದರು. ತದನಂತರ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡ 30 ಕ್ಕೂ ಅಧಿಕ ಜನರನ್ನು ಪಕ್ಷಕ್ಕೆ ಸೇರ್ಪಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫ್ ಹಸನಬ್ಬ ವಹಿಸಿದ್ದರು .ಮುಖ್ಯ ಅತಿಥಿಯಾಗಿ ಎಸ್ಡಿಪಿಐ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶಾಹಿದ್ ಆಲಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಶ್ರಫ್ ಬಾವ, ಪಕ್ಷದ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ಶಿರ್ವ: ಪಿಕಪ್ ವಾಹನ ಡಿಕ್ಕಿ- ಪಾದಾಚಾರಿ ಮೃತ್ಯು

Posted On: 10-10-2022 11:48AM
ಶಿರ್ವ : ಪಿಕಪ್ ವಾಹನ ಡಿಕ್ಕಿ ಹೊಡೆದು ಪಾದಾಚಾರಿಯೊಬ್ಬರು ಮೃತಪಟ್ಟ ಘಟನೆ ಶಿರ್ವದ ಮುಖ್ಯ ರಸ್ತೆಯ ನ್ಯಾರ್ಮ ಸೇತುವೆ ಬಳಿ ರವಿವಾರ ರಾತ್ರಿ ನಡೆದಿದೆ.
ಮೃತ ಪಾದಚಾರಿಯನ್ನು ಎವುಜಿನ್ ಬ್ರಿಟ್ಟೊ(50) ಎಂದು ಗುರುತಿಸಲಾಗಿದೆ.
ಎವುಜಿನ್ ಬ್ರಿಟ್ಟೊ ಅವರು ಶಿರ್ವ ಪೇಟೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಟಪಾಡಿ ಕಡೆಯಿಂದ ಬಂದ ಪಿಕಪ್ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ.ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಅವರನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಮಟ್ಟಾರುವಿನಲ್ಲಿ ಭಾರತ್ ಮಾತಾ ಪೂಜನಾ, ಸಾಮೂಹಿಕ ದೀಪ ಪ್ರಜ್ವಲನೆ

Posted On: 09-10-2022 10:21PM
ಉಡುಪಿ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ವತಿಯಿಂದ ದಶಮಾನೋತ್ಸವದ ಪ್ರಯುಕ್ತ ಭಾರತ್ ಮಾತಾ ಪೂಜನಾ,ಸಾಮೂಹಿಕ ದೀಪ ಪ್ರಜ್ವಲನೆ ಕಾರ್ಯಕ್ರಮ ಜರಗಿತು.

ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.