Updated News From Kaup
ಶ್ರೀ ದೇವಿ ಸ್ಪೋರ್ಟ್ಸ್ & ಕಲ್ಚರ್ ಕ್ಲಬ್ ಕಾಪು ವತಿಯಿಂದ 'ಇ-ಶ್ರಮ' ಕಾರ್ಡ್ ನೋಂದಾವಣೆ

Posted On: 14-11-2021 01:52PM
ಕಾಪು : ಶ್ರೀ ದೇವಿ ಸ್ಪೋರ್ಟ್ಸ್ & ಕಲ್ಚರ್ ಕ್ಲಬ್ ಕಾಪು ಇವರ ವತಿಯಿಂದ ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಅಸಂಘಟಿತ ಕಾರ್ಮಿಕರ ನೋಂದಾವಣೆ ಪ್ರಕ್ರಿಯೆಯ 'ಇ-ಶ್ರಮ' ಕಾರ್ಡ್ ನೋಂದಾವಣೆಗೆ ಕಾಪು ಹೊಸ ಮಾರಿಗುಡಿ ಹಿಂದುಗಡೆಯ ಕಾಪು ಶ್ರೀ ದೂಮಾವತಿ ದೈವಸ್ಥಾನ ವಠಾರದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಕ್ಲಬ್ ನ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಶ್ರೀನಾಥ್ ಆಚಾರ್ಯ, ಕೋಶಾಧಿಕಾರಿ ಅನಿಲ್ ಪಾಡಿಮನೆ, ರಂಗ ಕೋಟ್ಯಾನ್, ರಾಜೇಶ್ ಅಂಚನ್, ಜಯಕರ್, ಸುಧಾಕರ್ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
ವರ್ಣ ವಿಹಾರ - 2021 : ಕಡಲ ಕಿನಾರೆಯಲ್ಲಿ ಜರಗಿದ ಚಿತ್ರಕಲಾ ಸ್ಪರ್ಧೆ

Posted On: 14-11-2021 01:21PM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ, ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್ ಜಂಟಿ ಸಹಯೋಗದೊಂದಿಗೆ ಉಜ್ವಲ್ ಪ್ರಿಂಟರ್ಸ್ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ವರ್ಣ ವಿಹಾರ - 2021 ಉಭಯ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯು ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ಜರಗಿತು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಥಮ, ದ್ವಿತೀಯ ಸ್ಥಾನಿಗಳಿಗೆ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ನಿಯಾಜ್ ವಹಿಸಿದ್ದರು. ಈ ಸಂದರ್ಭ ಗಣ್ಯರು, ರೋಟರಿ ಪದಾಧಿಕಾರಿಗಳು, ಸದಸ್ಯರು, ಮಕ್ಕಳ ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.
ಜಾನುವಾರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಉಚಿತ ರಕ್ತ ವರ್ಗೀಕರಣ ಶಿಬಿರ ಮತ್ತು ಪೌಷ್ಟಿಕತೆಯ ಮಾಹಿತಿ ಕಾರ್ಯಗಾರ

Posted On: 13-11-2021 03:21PM
ಕುಂದಾಪುರ : ರೋಟರಿ ಕ್ಲಬ್ ಸೈಬ್ರಕಟ್ಟೆ ಮತ್ತು ಇಂಟರ್ಯಾಕ್ಟ್ ಕ್ಲಬ್ ಜಾನುವಾರುಕಟ್ಟೆ ಹಾಗೂ ಶಿವಾನಿ ಡೈಗ್ನೋಸ್ಟಿಕ್ ಮತ್ತು ರೀಸರ್ಚ್ ಸೆಂಟರ್ ಉಡುಪಿ ,ನವ್ಯ ಚೇತನ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಜಾನುವಾರುಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಉಚಿತ ರಕ್ತ ವರ್ಗೀಕರಣ ಶಿಬಿರ ಮತ್ತು ಪೌಷ್ಟಿಕತೆಯ ಮಾಹಿತಿ ಕಾರ್ಯಗಾರ ನಡೆಸಲಾಯಿತು.
ಕಾರ್ಯಕ್ರಮವನ್ನು ಸರಕಾರಿ ಆಯುರ್ವೇದ ಆಸ್ಪತ್ರೆ ಗುಲ್ವಾಡಿಯ ವ್ಯೆದ್ಯಾಧಿಕಾರಿ ಡಾ.ಪ್ರದೀಪ್ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ತನ್ನ ರಕ್ತದ ಗುಂಪಿನ ಬಗ್ಗೆ ಮಾಹಿತಿ ಗೊತ್ತಿರಬೇಕು,ಇದರಿಂದ ತುರ್ತುಪರಿಸ್ಥಿತಿಯಲ್ಲಿ ರಕ್ತ ನೀಡಲು ತುಂಬಾ ಉಪಯುಕ್ತವಾಗುತ್ತದೆ. ಪೌಷ್ಟಿಕ ಆಹಾರ ಸೇವನೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಅಧಿಕವಾಗಿರಲು ಸಹಾಯಕ. ಬಹಳ ಉಪಯುಕ್ತ ಕಾರ್ಯಕ್ರಮ ಎಂದು ಹೇಳಿದರು.
ಇನ್ನೋರ್ವ ಅತಿಥಿ ಬಯೋಕೆಮಿಸ್ಟ್ರಿ ಪ್ರೊಫೆಸರ್ ಡಾ.ಶಿವಾನಂದ್ ನಾಯಕ್ ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿದರು. ಈಗೀಗ ನಮ್ಮ ದೇಶದ ಯೋಗ, ವ್ಯಾಯಾಮ ಇಂಥವುಗಳನ್ನು ವಿದೇಶದವರು ಹೆಚ್ಚೆಚ್ಚು ಪಾಲಿಸುತ್ತಿದ್ದು ನಾವು ಮಾತ್ರ ಪಾಶ್ಚಾತ್ಯ ಸಂಸ್ಕ್ರತಿ, ಆಹಾರ ಕ್ರಮಕ್ಕೆ ಮಾರು ಹೋಗಿದ್ದಲ್ಲದೆ ರೆಡಿಮೇಡ್ ಮತ್ತು ಜಂಕ್ ಫುಡ್ ಸೇವಿಸುವ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದು, ಇದರಿಂದ ಬಹಳ ಚಿಕ್ಕಪ್ರಾಯಯದಲ್ಲಿಯೇ ಬೊಜ್ಜು ಬೆಳೆದು ಸಕ್ಕರೆ ಕಾಯಿಲೆ, ಬಿ ಪಿ ಹೀಗೆ ಇನ್ನೂ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು ದುರದೃಷ್ಟಕರ ನಾವು ಹೆಚ್ಚೆಚ್ಚು ಪೌಷ್ಟಿಕ ಆಹಾರ ಸೇವನೆ ದಿನನಿತ್ಯ ವ್ಯಾಯಾಮ ಯೋಗ ಮಾಡುವುದರ ಮೂಲಕ ಹೆಚ್ಚು ಆರೋಗ್ಯವಾಗಿರಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ರೋಟರಿ ಸೈಬ್ರಕಟ್ಟೆಯ ಅಧ್ಯಕ್ಷ ಯು.ಪ್ರಸಾದ್ ಭಟ್ ವಹಿಸಿದ್ದರು , ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ನಾಯಕ್, ಇಂಟರ್ಯಾಕ್ಟ್ ಅಧ್ಯಕ್ಷ ಪ್ರಜ್ವಲ್, ರೋಟರಿ ಕಾರ್ಯದರ್ಶಿ ಅಣ್ಣಯ್ಯದಾಸ್, ಇಂಟರ್ಯಾಕ್ಟ್ ಕೋ ಆರ್ಡಿನೇಟರ್ ಕಿರಣ್ ಕಾಜ್ರಲ್ಲಿ, ಟೀಚರ್ಸ್ ಕೋ ಆರ್ಡಿನೇಟರ್ ಶಿವಪ್ಪ , ರೋಟರಿ ನಿಯೋಜಿತ ಕಾರ್ಯದರ್ಶಿ ನೀಲಕಂಠ ರಾವ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲಾ ವಿದ್ಯಾರ್ಥಿಗಳ ರಕ್ತ ವರ್ಗೀಕರಣದ ಪರೀಕ್ಷೆ ನಡೆಸಲಾಯಿತು.
ನವಂಬರ್ 19ಕ್ಕೆ ವರ್ಷದ ಕೊನೆಯ ಚಂದ್ರಗ್ರಹಣ, 600 ವರ್ಷಗಳ ಬಳಿಕದ ಸುದೀರ್ಘ ಚಂದ್ರಗ್ರಹಣ

Posted On: 13-11-2021 02:08PM
ಬೆಂಗಳೂರು : ಶುಕ್ರವಾರ 19 ನವೆಂಬರ್ 2021 ರಂದು ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಹುಣ್ಣಿಮೆಯ ದಿನದಂದು ಸಂಭವಿಸಲಿದೆ. ಚಂದ್ರೋದಯದ ನಂತರ, ಗ್ರಹಣದ ಭಾಗಶಃ ಹಂತದ ಅಂತ್ಯವು ಭಾರತದಲ್ಲಿ ಈಶಾನ್ಯ ಭಾಗಗಳಿಂದ ಬಹಳ ಕಡಿಮೆ ಸಮಯದವರೆಗೆ ಗೋಚರಿಸುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಗೋಚರಿಸಲಿದೆ. 600 ವರ್ಷಗಳ ಬಳಿಕ ಈ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ.
ಮೇ 26 ರಂದು ಸಂಭವಿಸಿದ “ಸೂಪರ್ ಫ್ಲವರ್ ಬ್ಲಡ್ ಮೂನ್” ಕೊನೆಯ ಚಂದ್ರಗ್ರಹಣವಾಗಿದೆ. ಭಾರತದ ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರವನ್ನು ಒಳಗೊಂಡಿರುವ ಪ್ರದೇಶದಲ್ಲಿ ಗ್ರಹಣವು ಗೋಚರಿಸಲಿದೆ.
ಚಂದ್ರಗ್ರಹಣವು ಶುಕ್ರವಾರ, ಅಕ್ಟೋಬರ್ 19, 2021 ರಂದು ಬೆಳಗ್ಗೆ 11:34 ಪ್ರಾರಂಭವಾಗುತ್ತದೆ ಮತ್ತು ಸಂಜೆ 05:33 ಕ್ಕೆ ಕೊನೆಗೊಳ್ಳುತ್ತದೆ. ಕಳೆದ 600 ವರ್ಷಗಳ ನಂತರ ಇಂತಹ ಸುದೀರ್ಘ ಚಂದ್ರಗ್ರಹಣ ಸಂಭವಿಸುತ್ತಿದೆ ಎಂದು ಹೇಳಲಾಗುತ್ತಿದೆ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಪ್ರಕಾರ, ನವೆಂಬರ್ 18 ಮತ್ತು 19 ರಂದು ರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತಿದೆ. ಅರ್ಥ್ ಸ್ಕೈ ವೆಬ್‌ಸೈಟ್‌ನ ಪ್ರಕಾರ, ಕೊನೆಯ ಬಾರಿಗೆ ಫೆಬ್ರವರಿ 18, 1440 ರಂದು ಇಂತಹ ದೀರ್ಘ ಕಾಲದ ಭಾಗಶಃ ಚಂದ್ರಗ್ರಹಣ (Longest Lunar Eclipse 2021) ಸಂಭವಿಸಿತ್ತು ಮತ್ತು ಮುಂದೆ ಫೆಬ್ರವರಿ 8, 2669 ರಂದು ಇದನ್ನು ವಿಕ್ಷೀಸಲಾಗುವುದು ಎನ್ನಲಾಗಿದೆ.
ಚಂದ್ರಗ್ರಹಣವು ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಮೂರನ್ನೂ ಸರಳ ರೇಖೆಯಲ್ಲಿ ಜೋಡಿಸಿದಾಗ. ಸಂಪೂರ್ಣ ಚಂದ್ರಗ್ರಹಣವು ಭೂಮಿಯ ನೆರಳಿನ ಅಡಿಯಲ್ಲಿ ಬಂದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ ಮತ್ತು ಚಂದ್ರನ ಒಂದು ಭಾಗವು ಭೂಮಿಯ ನೆರಳಿನ ಅಡಿಯಲ್ಲಿದ್ದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.
ಕಟಪಾಡಿ: ಶ್ರೀ ಕಾಳಿಕಾಂಬಾ ವಿಶ್ವಕರ್ಮೆಶ್ವರ ಮಹಿಳಾ ಬಳಗದ ವತಿಯಿಂದ ದೀಪ ಪೂಜೆ, ಗಣ್ಯರಿಗೆ ಸಮ್ಮಾನ

Posted On: 13-11-2021 01:54PM
ಕಟಪಾಡಿ: ಕಾಳಿಕಾಂಬಾ ವಿಶ್ವಕರ್ಮೆಶ್ವರ ಮಹಿಳಾ ಬಳಗದ ವತಿಯಿಂದ ದೀಪ ಪೂಜೆ, ಗಣ್ಯರಿಗೆ ಸಮ್ಮಾನ ಸಮಾರಂಭವು ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೆಶ್ವರ ದೇವಸ್ಥಾನದಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಚನದೊಂದಿಗೆ ಶುಕ್ರವಾರ ಜರಗಿತು.

ದೀಪವು ಜ್ಞಾನದ ಸಂಕೇತ. ದೀಪ ಪೂಜೆಯ ಮೂಲಕ ಜ್ಞಾನದ ಸಂಕೇತವಾದ ಬೌದ್ಧಿಕ ದೀಪವು ಬೆಳಗಲ್ಪಟ್ಟಿದೆ. ಅದನ್ನು ನಿತ್ಯ ಆಚರಿಸುವ ಮೂಲಕ ಬದುಕನ್ನು ನಂದಾದೀಪವನ್ನಾಗಿಸಿಕೊಳ್ಳುವಂತೆ ಪೂಜ್ಯ ಸ್ವಾಮೀಜಿ ಅವರು ಕರೆ ನೀಡಿದರು. ಸಮಾರಂಭದಲ್ಲಿ ಪತ್ರಕರ್ತ ವಿಜಯ ಆಚಾರ್ಯ ಉಚ್ಚಿಲ, ಸಮಾಜ ಸೇವಕ ಕಟಪಾಡಿ ಶಶಿಧರ್ ಪುರೋಹಿತ್, ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಆಚಾರ್ಯ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಮಾರ್ಗದಶನದಲ್ಲಿ ದೀಪ ಪೂಜೆ ನೆರವೇರಿದ್ದು, ದೀಪ ಜ್ಞಾನವನ್ನು ಬೆಳಗಿಸಿ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಬೌದ್ಧಿಕ್ ನಡೆಸಿಕೊಟ್ಟರು.

ಈ ಸಂದರ್ಭ ಮಹಿಳಾ ಬಳಗದ ಅಧ್ಯಕ್ಷೆ ಶಾಲಿನೀ ಶಿವರಾಮ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದೀಪಾ ಸುರೇಶ್ ಆಚಾರ್ಯ, ಕೋಶಾಧಿಕಾರಿ ದೀಪಾ ಪ್ರಶಾಂತ್ ಆಚಾರ್ಯ, ಉಪಾಧ್ಯಕ್ಷೆ ಜ್ಯೋತೀ ರಮೇಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಶಕುಂತಳಾ ಪ್ರಭಾಕರ್, ಮಹಿಳಾ ಬಳಗದ ಸದಸ್ಯರು, ದೇಗುಲದ ಎರಡನೇ ಮೊಕ್ತೇಸರ ಬಾಲಕೃಷ್ಣ ಆಚಾರ್ಯ, ಮೂರನೇ ಮೊಕ್ತೇಸರ ದಾಮೋದರ ಎಲ್. ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಬಿಳಿಯಾರು ಗಣಪತಿ ಆಚಾರ್ಯ ಸ್ವಾಗತಿಸಿ, ಸುರೇಶ್ ಡಿ. ಆಚಾರ್ಯ ನಿರೂಪಿಸಿ, ಶಾಲಿನೀ ಶಿವರಾಮ ಆಚಾರ್ಯ ವಂದಿಸಿದರು.
ರೋಟರಿ ಸೈಬ್ರಕಟ್ಟೆಯಿಂದ ಆಸರೆ ವಿಶೇಷ ಮಕ್ಕಳ ಶಾಲೆಗೆ ಸೈಕಲ್ ಹಸ್ತಾಂತರ

Posted On: 13-11-2021 09:07AM
ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಸದಸ್ಯರು ಮಣಿಪಾಲದ 'ಆಸರೆ' ವಿಶೇಷ ಮಕ್ಕಳ ಶಾಲೆಗೆ ತೆರಳಿ, ಮಂಗಳೂರಿನಲ್ಲಿ ನಡೆಯುವ ವಿಶೇಷ ಮಕ್ಕಳ ಜಿಲ್ಲಾಮಟ್ಟದ ಸೈಕಲ್ ಸ್ಪರ್ಧೆಯಲ್ಲಿ ಆಸರೆಯ ಮಕ್ಕಳು ಭಾಗವಹಿಸುವುದರಿಂದ ಅವರ ಅನುಕೂಲಕ್ಕಾಗಿ ರೋಟರಿ ಸೈಬ್ರಕಟ್ಟೆಯಿಂದ ಅಧ್ಯಕ್ಷ ಯು. ಪ್ರಸಾದ್ ಭಟ್ ಆಸರೆ ಟ್ರಸ್ಟ್ ನ ಅಧ್ಯಕ್ಷ ಜೈವಿಠಲ್ ಅವರಿಗೆ ಸೈಕಲ್ ಹಸ್ತಾಂತರ ಮಾಡಿದರು.
ಒಂದು ದಿನದ ಬೆಳಿಗ್ಗಿನ ಉಪಾಹಾರ ರೋಟರಿ ವತಿಯಿಂದ ಪ್ರಯೋಜಿಸಿ ನಗದು ನೀಡಲಾಯಿತು. ವಲಯ ಸೇನಾನಿ ಬ್ರಾನ್ ಡಿ ಸೋಜ ಕಾರ್ಯದರ್ಶಿ ಅಣ್ಣಯ್ಯದಾಸ್ , ನೀಲಕಂಠ ರಾವ್, ಶ್ರೀ ಕೃಷ್ಣ ಶಾನುಭೋಗ ಮತ್ತು ವಿಶೇಷ ಮಕ್ಕಳ ಶಿಕ್ಷಕ ರಮೇಶ್ ನಾಯ್ಕ ಮತ್ತು ಆಸರೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನವೆಂಬರ್ 14 : “ ಗ್ರಾಮ ಒನ್” ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ

Posted On: 13-11-2021 08:57AM
ಉಡುಪಿ : ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ “ ಗ್ರಾಮ ಒನ್” ಆರಂಭಿಸಲಾಗಿದೆ. “ಗ್ರಾಮಒನ್” ಯೋಜನೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ ಅನುಷ್ಟಾನ ಮಾಡುವ ಸಂಬಂಧ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ತಯಾರಿ ನಡೆಸಿದೆ. ಅದರಂತೆ ಉಡುಪಿ ಜಿಲ್ಲೆಯ ನಗರ ಪ್ರದೇಶ ಹೊರತು ಪಡಿಸಿ ಉಳಿದ ಗ್ರಾಮಗಳಲ್ಲಿ ಪ್ರಾಂಚೈಂಸಿ ಆಧಾರದಲ್ಲಿ ಸೇವಾ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೇವಾಸಿಂದು ಯೋಜನೆಯಡಿಯಲ್ಲಿ ಸುಮಾರು 400 ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು ಈ ಕೇಂದ್ರಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಜಿಲ್ಲೆಗಳ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ “ ಗ್ರಾಮ ಒನ್” ಆರಂಭಿಸಲು ಪ್ರಾಂಚೈಂಸಿಗಳನ್ನು ಆಹ್ವಾನಿಸಲಾಗಿದ್ದು ಆಸಕ್ತರು ದಿನಾಂಕ: 11/11/2021 ರೊಳಗಾಗಿ ನೋಂದಾಯಿಸಲು ತಿಳಿಸಲಾಗಿತ್ತು, ಪ್ರಸ್ತುತ ನೋಂದಾವಣಿ ದಿನಾಂಕ: 14/11/2021 ರವರೆಗೆ ಮುಂದುವರಿಸಲಾಗಿದ್ದು ಆಸಕ್ತ ಅರ್ಜಿದಾರರು ಇದರ ಸದುಪಯೋಗವನ್ನು ಪಡೆದುಕೋಳ್ಳಬೇಕಾಗಿ ತಿಳಿಸಲಾಗಿದೆ.
ಆಸಕ್ತ ಅರ್ಜಿದಾರರು ಈ ಕೆಳಗಿನ ಲಿಂಕ್‌ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ https://www.karnatakaone.gov.in/Public/GramOneFranchiseeTerms ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಸಮಾಲೋಚಕರಾದ ನನೀಶ್ ಕುಮಾರ್, ಮೊಬೈಲ್ ಸಂಖ್ಯೆ: 8105467854 ಇವರನ್ನು ಸಂಪರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಇವರು ತಿಳಿಸಿದ್ದಾರೆ.
ಕಾಪು : ನವೆಂಬರ್ 14ರಂದು ಆರೋಗ್ಯ ಸೇವಾ ಶಿಬಿರ

Posted On: 12-11-2021 04:53PM
ಕಾಪು : ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ನವೆಂಬರ್ 14 ಭಾನುವಾರ ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ 'ಆರೋಗ್ಯ ಸೇವಾ -2021", ಆರೋಗ್ಯ ಶಿಬಿರ ನಡೆಯಲಿದೆ.
ನಾನಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆಯಲಿರುವ ಈ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಔಷಧಿ ವಿತರಣೆ ಹಾಗೂ ಕಣ್ಣಿನ ಸಮಗ್ರ ಉಚಿತ ತಪಾಸಣೆ ಹಾಗೂ ಸಲಹೆ, ಉಚಿತ ಬ್ಲಡ್ ಶುಗರ್, ಹಿಮೋಗ್ಲೋಬಿನ್ ತಪಾಸಣೆ ಸಹಿತ ನುರಿತ ವೈದ್ಯರಿಂದ ದೈಹಿಕ, ಮಾನಸಿಕ ವ್ಯಾಧಿ ಗಳ ತಪಾಸಣೆ, ಸಲಹೆ, ಔಷಧಿ ವಿತರಣೆ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಡಾ. ಶಿವಾನಂದ ನಾಯಕ್ ಇವರಿಂದ ಮದುಮೇಹ ಜಾಗೃತಿ ಮಾಹಿತಿ, ಮಣಿಪಾಲದ ನೇತ್ರ ಸಂಗಮದ ನೇತ್ರತಜ್ಞೆ ಡಾ. ಲಾವಣ್ಯಾ ರಾವ್ ಅವರಿಂದ ಕಣ್ಣಿನ ತಪಾಸಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೂತ್ ಫಾರ್ ಸೇವಾ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ಲೇಖನ ಪರಿಕರ ವಿತರಣೆ

Posted On: 12-11-2021 04:33PM
ಕಾರ್ಕಳ : ಸಾಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯೂತ್ ಫಾರ್ ಸೇವಾ ವತಿಯಿಂದ ಶಾಲೆಯ 6 ನೇ ಮತ್ತು 7ನೇ ತರಗತಿಯ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ಲೇಖನ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ತಮಂಕರ್ ಅವರು ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಪದಾಧಿಕಾರಿಗಳು ಆಗಿರುವ ಸಮಾಜ ಸೇವಕಿ ರಮಿತಾ ಶೈಲೇಂದ್ರ, ಗಣೇಶ್ ಸಾಲ್ಯಾನ್, ಸಾಣೂರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಕರುಣಾಕರ ಕೋಟ್ಯಾನ್, ಕಾರ್ಕಳ ಶಿಕ್ಷಣ ಇಲಾಖೆಯ ಬಿ. ಆರ್. ಪಿ. ಸಂತೋಷ್ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷೆ ಜಯಶ್ರೀ ದೇವಾಡಿಗ, ನಿಕಟಪೂರ್ವ ಅಧ್ಯಕ್ಷ ಸೋಮನಾಥ ಮತ್ತು ಶಿಕ್ಷಕ ವೃಂದ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ದ್ಯೇಯಗಳಲ್ಲಿ ಒಂದಾದ ಸಮಾಜಸೇವೆ ಮಾಡುವ ಮನೋಭಾವನೆಯನ್ನು ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಶಾಲೆಯ ಹಿರಿಯ ಶಿಕ್ಷಕಿ ನಿರ್ಮಲ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಕಂಪ್ಯೂಟರ್‌ಗಳ ಹಸ್ತಾಂತರ

Posted On: 12-11-2021 03:03PM
ಉದ್ಯಾವರ : ಇಂದು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳು ಆಂಗ್ಲ ಮಾಧ್ಯಮದ ಶಾಲೆಗಳ ಕಾರಣಗಳಿಂದಾಗಿ ಸವಾಲನ್ನು ಎದುರಿಸುತ್ತಿವೆ. ಇದನ್ನು ಸಶಕ್ತವಾಗಿ ಎದುರಿಸಲು ಕನ್ನಡ ಮಾಧ್ಯಮ ಶಾಲೆಗಳೂ ಆಧುನಿಕ ಶಿಕ್ಷಣದ ಆಯಾಮಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರು ಸಾಧನೆಗಳನ್ನು ಮಾಡಲು ಸಾಧ್ಯವಿಲ್ಲ ಎಂಬ ಹುಂಬತನವನ್ನು ಬಿಟ್ಟು ನಾವು ಸುತ್ತ ನೋಡಿದರೆ ನಮ್ಮ ಸುತ್ತಿರುವ ಸಾಧಕರು ಹೆಚ್ಚಿನವರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದುಕೊಂಡವರು. ಕನ್ನಡದ ವಿದ್ಯಾರ್ಥಿಗಳು ಹೆತ್ತವರು ಕೀಳರಿಮೆಯನ್ನು ತೊಡೆದು ಹಾಕಿ. ಆಧುನಿಕ ಶಿಕ್ಷಣ ವ್ಯವಸ್ಥೆಗಳನ್ನು ಈ ಶಾಲೆ ಅಳವಡಿಸಿಕೊಂಡದ್ದರಿಂದ ಆಂಗ್ಲ ಮಾಧ್ಯಮದ ಸವಾಲುಗಳ ಮತ್ತು ಸ್ಪರ್ಧೆಗಳ ನಡುವೆ ಕೂಡಾ ಆರೋಗ್ಯಕರವಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಈ ಶಾಲೆ ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಹೆತ್ತವರಿಗೆ ಈ ಶಾಲೆಯ ಶಿಕ್ಷಕರ ಮತ್ತು ಆಡಳಿತ ವರ್ಗದ ಮೇಲಿರುವ ನಂಬಿಕೆ, ಈ ನಂಬಿಕೆಯನ್ನು ಉಳಿಸಿಕೊಳ್ಳಲು ಈ ಶಾಲೆ ಸದಾ ಪ್ರಯತ್ನಿಸ ಬೇಕಾಗಿದೆ ಎಂದು ಕರ್ನಾಟಕ ಬ್ಯಾಂಕ್‌ನ ಉಡುಪಿ ರೀಜನಲ್ ಆಫೀಸ್‌ನ ಎ.ಜಿ.ಎಂ. ರಾಜಗೋಪಾಲ ಬಿ. ಹೇಳಿದರು. ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ಕೊಡಮಾಡಿದ ಕಂಪ್ಯೂಟರ್‌ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.

ಅವರು ಮುಂದುವರಿಯುತ್ತಾ ಕಳೆದ 18 ತಿಂಗಳಲ್ಲಿ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೇ ದೇವರುಗಳು ಇಲ್ಲದ ದೇವಸ್ಥಾನಗಳ ಹಾಗೆ ಇದ್ದವು. ಈಗ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿದ್ದಾರೆ. ಈ ಕುಶಿ ಸದಾ ಮುಂದುವರಿಯಲಿ. ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಯಾದರೂ ಶಿಕ್ಷಣದ ಬಗ್ಗೆ ಈ ರೀತಿ ಕಾಳಜಿ ವಹಿಸುತ್ತಿರುವ ಈ ಶಾಲೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಒಂದು ಶಾಲೆ 160 ವರುಷ ಬಾಳಿ ಬದುಕ ಬೇಕಾದರೆ ಶಾಲೆಯ ಅಂತಸತ್ವ ಗಟ್ಟಿಯಾಗಿರಬೇಕು. ಮುಂದಿನ ದಿನಗಳಲ್ಲೂ ಈ ಶಾಲೆಗೆ ನೆರವಾಗಲು ನಮ್ಮ ಕರ್ನಾಟಕ ಬ್ಯಾಂಕ್ ಬದ್ಧವಾಗಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ಉಡುಪಿ ಕನ್ನರ್ಪಾಡಿ ಶಾಖೆಯ ಪ್ರಬಂಧಕರಾದ ಮಂಜುನಾಥರವರು ಮಾತನಾಡಿ ಡಿಜಿಟಲ್ ಇಂಡಿಯಾ ಚಾಲ್ತಿಯಲ್ಲಿರುವ ಈ ಹೊತ್ತು ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಕಲಿಯಬೇಕಾದ ಅನಿವಾರ್ಯತೆ ಇದೆ. ಅದನ್ನು ಕಲಿಯಲು ನಾವು ಮನ ಮಾಡದಿದ್ದರೆ ಬೆಳೆಯುತ್ತಿರುವ ಸಮಾಜದೊಂದಿಗೆ ನಮನ್ಮು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕಾಗಿ ಶಾಲೆಗಳಲ್ಲಿ ಕಂಪ್ಯೂಟರ್ ಕಲಿಕೆ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಆಲೋಚಿಸಿ ಯೋಜನೆಯನ್ನು ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಳವಡಿಸಿದ ಆಡಳಿತ ಮಂಡಳಿ ಅಭಿನಂದನಾರ್ಹರು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಗಣಪತಿ ಕಾರಂತ್‌ರವರು ಮಾತನಾಡಿ ಶಾಲಾ ಅಭಿವೃದ್ಧಿಗೆ ಸರ್ವರ ಕೊಡುಗೆಯನ್ನು ಸ್ಮರಿಸಿ, ಶಾಲಾಡಳಿತ ಮಂಡಳಿ ಹಾಕಿಕೊಂಡ ಮುಂದಿನ ಯೋಜನೆಗೂ ಸಹಕಾರವನ್ನು ಕೋರಿದರು.
ಶಾಲಾಡಳಿತ ಸಮಿತಿ ಸದಸ್ಯರಾದ ಯು.ಬಿ. ಶ್ರೀನಿವಾಸ್, ಯು. ಪ್ರತಾಪ್ ಕುಮಾರ್, ಯು. ರಾಜೇಂದ್ರ ಮಯ್ಯ, ಕೃಷ್ಣ ಕುಮಾರ್ ರಾವ್, ಡಾ. ತ್ರಿವೇಣಿ, ಉದ್ಯಾವರ ನಾಗೇಶ್ ಕುಮಾರ್ ಮತ್ತು ಉದ್ಯಾವರ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ರಶೀದ್ ರಹಮಾನಿಯವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲಾ ಸಂಚಾಲಕರಾದ ಸುರೇಶ್ ಶೆಣೈ ಯು. ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕಿ ಅನುರಾಧ ಕಾರ್ಯಕ್ರಮ ನಿರ್ವಹಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ ವಂದಿಸಿದರು.