Updated News From Kaup

ಪಡುಬಿದ್ರಿ : ರಾಜ್ಯಮಟ್ಟದ ಹೊರಾಂಗಣ ಬ್ಯಾಡ್ಮಿಂಟನ್ ಪಂದ್ಯಾಕೂಟ ಸ್ಮ್ಯಾಷಸ್೯ ಟ್ರೋಫಿ - 2021

Thumbnail
Posted On: 09 Dec 2021, 11:30 AM

ಪಡುಬಿದ್ರಿ : ಸ್ಮ್ಯಾಷರ್ಸ್ ವೆಲ್‌ಫೇರ್‌ ಹಾಗೂ ಸ್ಪೋರ್ಟ್ಸ್ ಕ್ಲಬ್‌ ಬೇಂಗ್ರೆ ಪಡುಬಿದ್ರಿ, ನ್ಯಾಷನಲ್ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ ಕಂಪನಿ ಲಿ. ಒಮನ್ ಪ್ರಾಯೋಜಕತ್ವದಲ್ಲಿ ಅಧ್ಯಕ್ಷರಾದ ರಮೀಝ್ ಹುಸೇನ್ ಸಾರಥ್ಯದಲ್ಲಿ, ಗೌರವಾಧ್ಯಕ್ಷರಾದ ಮಹಮ್ಮದ್ ಕೌಸರ್ ಮಾರ್ಗದರ್ಶನದಲ್ಲಿ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಬಡಕುಟುಂಬದ ವೈದ್ಯಕೀಯ ಸಹಾಯಾರ್ಥವಾಗಿ ರಾಜ್ಯಮಟ್ಟದ ಹೊರಾಂಗಣ ಬ್ಯಾಡ್ಮಿಂಟನ್ ಪಂದ್ಯಾಕೂಟ ಸ್ಮ್ಯಾಷಸ್೯ ಟ್ರೋಫಿ - 2021 ಡಿಸೆಂಬರ್ 11, ಶನಿವಾರ ಸಂಜೆ 8 ಗಂಟೆಗೆ ಪಡುಬಿದ್ರಿ ಬೇಂಗ್ರೆ ರಸ್ತೆಯ ಸ್ಮ್ಯಾಷರ್ಸ್ ಗೌಂಡ್ ಇಲ್ಲಿ ನಡೆಯಲಿದೆ. ಪಂದ್ಯಾಕೂಟವನ್ನು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದು, ಸನ್ಮಾನ, ಅಭಿನಂದನೆ ಕಾರ್ಯಕ್ರಮ ಜರಗಲಿದೆ ಎಂದು ಸ್ಮ್ಯಾಷರ್ಸ್ ವೆಲ್‌ಫೇರ್‌ ಹಾಗೂ ಸ್ಪೋರ್ಟ್ಸ್ ಕ್ಲಬ್‌ ಬೇಂಗ್ರೆ, ಪಡುಬಿದ್ರಿ ಇದರ ಅಧ್ಯಕ್ಷರಾದ ರಮೀಝ್ ಹುಸೇನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬೆಳದಿಂಗಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಮಿತಾಂಜಲಿ ಕಿರಣ್ ಆಯ್ಕೆ

Thumbnail
Posted On: 09 Dec 2021, 11:01 AM

ಉಡುಪಿ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಡೆಯುವ ಉಡುಪಿ ಜಿಲ್ಲೆಯ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಚಿನಂಪ-2021ರ ಸಮ್ಮೇಳನಾಧ್ಯಕ್ಷೆಯಾಗಿ ಅಮಿತಾಂಜಲಿ ಕಿರಣ್ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು ಉಡುಪಿ ಬೈಲೂರು ವಾಸುದೇವ ಕೃಪಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಸೂತಿ, ಬರವಣಿಗೆ, ಓದು, ರಂಗಭೂಮಿ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಡಿ.19ರಂದು ಸಂಜೆ 5ರಿಂದ 9 ಗಂಟೆ ತನಕ ಹೊರಾಂಗಣದ ಸಂಗೀತ ಕಾರಂಜಿಯ ವೀಕ್ಷಣಾ ಗ್ಯಾಲರಿಯಲ್ಲಿಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ 27 ಕವಿಗಳು ಭಾಗವಹಿಸಲಿದ್ದಾರೆ. ಅಲ್ಲದೇ ಗೋಪಾಲ ತ್ರಾಸಿ ಅವರ ಲಂಡನ್ ಟು ವ್ಯಾಟಿಕನ್ ಸಿಟಿ ಕೃತಿ ಬಿಡುಗಡೆಗೊಳ್ಳಲಿದೆ. ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನೀಲಾವರ ಸುರೇಂದ್ರ ಅಡಿಗ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಡಾ. ಅರುಣ್ ಉಳ್ಳಾಲ್ ಇವರಿಗೆ ನಾರಾಯಣಗುರು ಸಂಶೋಧನಾ ಪ್ರಶಸ್ತಿ

Thumbnail
Posted On: 09 Dec 2021, 10:35 AM

ಮಂಗಳೂರು : ಇಲ್ಲಿನ ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ವತಿಯಿಂದ 2021ರಿಂದ ಆರಂಭಗೊಂಡ 'ನಾರಾಯಣ ಗುರು ಸಂಶೋಧನಾ ಪ್ರಶಸ್ತಿ'ಗೆ ಉಪನ್ಯಾಸಕ, ಸಂಶೋಧಕ, ತುಳು, ಕನ್ನಡ ವಾಗ್ಮಿ ಡಾ. ಅರುಣ್ ಉಳ್ಳಾಲ್ ಇವರು ಆಯ್ಕೆಯಾಗಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ 'ಭಗವತಿ ಆರಾಧನೆ-ಸಾಂಸ್ಕೃತಿಕ ಅಧ್ಯಯನ' ವಿಷಯಾಧಾರಿತ ಪಿಹೆಚ್.ಡಿ. ಸಂಶೋಧನೆಗಾಗಿ ಉನ್ನತ 'ಡಾಕ್ಟರೇಟ್ ಪದವಿ', ಹಂಪಿ ವಿಶ್ವವಿದ್ಯಾನಿಲಯದಿಂದ 'ತುಳುನಾಡಿನ ಚರಿತ್ರೆ' ವಿಷಯದ ಸಂಶೋಧನೆಗಾಗಿ ಎಂ.ಫಿಲ್ ಪದವಿ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ 'ಭಗವತಿ ಆರಾಧನೆ-ಸಾಂಸ್ಕೃತಿಕ ಅಧ್ಯಯನ' ವಿಷಯಾಧಾರಿತ ಪಿಹೆಚ್.ಡಿ. ಸಂಶೋಧನೆಗಾಗಿ ಉನ್ನತ 'ಡಾಕ್ಟರೇಟ್ ಪದವಿ', ಹಂಪಿ ವಿಶ್ವವಿದ್ಯಾನಿಲಯದಿಂದ 'ತುಳುನಾಡಿನ ಚರಿತ್ರೆ' ವಿಷಯದ ಸಂಶೋಧನೆಗಾಗಿ ಎಂ.ಫಿಲ್ ಪದವಿ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಸಂಶೋಧನಾ ಪ್ರಶಸ್ತಿಯು 10 ಸಾವಿರ ರೂಪಾಯಿಗಳ ನಗದು ಮೊತ್ತವನ್ನು ಒಳಗೊಂಡಿದ್ದು ಪುರಸ್ಕೃತ ಕೃತಿಯು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಮುದ್ರಣಗೊಂಡು ಪ್ರಶಸ್ತಿ ಪ್ರಧಾನ ಸಮಾರಂಭದಂದು ಬಿಡುಗಡೆಯಾಗಲಿದೆ ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

ಕುವೈಟ್‌ : ರಕ್ತದಾನ ಶಿಬಿರ

Thumbnail
Posted On: 09 Dec 2021, 09:47 AM

ಕುವೈಟ್ : ಕನ್ನಡ ನಟ ಹಾಗೂ ಸಮಾಜ ಸೇವಕ ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಕಾರ್ಯಗಳನ್ನು ಸ್ಮರಿಸಿ, ಗೌರವಿಸುವ ಸಲುವಾಗಿ ಕುವೈಟ್‌ನ ಭಾರತೀಯ ಪ್ರವಾಸಿ ಪರಿಷತ್ (ಬಿಪಿಪಿ) ಕರ್ನಾಟಕ ವಿಭಾಗ ಮತ್ತು ಬಿಡಿಕೆ ಕುವೈಟ್ ಜಂಟಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿತು. ಶಿಬಿರವನ್ನು ಭಾರತ-ಕುವೈಟ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 60 ನೇ ವಾರ್ಷಿಕೋತ್ಸವ ಮತ್ತು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವನ್ನು ಆಚರಿಸುವ ಸಲುವಾಗಿಯೂ ಆಯೋಜಿಸಲಾಗಿತ್ತು. ಆದಾನ್ ಕೊಅಪರೇಟಿವ್ ಬ್ಲಡ್ ಟ್ರಾನ್ಸ್‌ಫ್ಯೂಸನ್ ಸೆಂಟರ್‌ನಲ್ಲಿ ಡಿಸೆಂಬರ್ 3 ರಂದು ಮಧ್ಯಾಹ್ನ 1 ರಿಂದ 6 ರವರೆಗೆ ಶಿಬಿರ ನಡೆದಿದ್ದು, ಇದು ಕುವೈಟ್‌ನಲ್ಲಿರುವ ಭಾರತೀಯ ವಲಸಿಗರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ ಮತ್ತು ಸುಮಾರು 125 ದಾನಿಗಳು ರಕ್ತದಾನ ಮಾಡಿದ್ದಾರೆ.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಿಗೆ ಸನ್ಮಾನ

Thumbnail
Posted On: 09 Dec 2021, 09:40 AM

ಮುಂಬಯಿ : ಮುಂಬಯಿ ಮಹಾನಗರ ಹಾಗೂ ಉಪನಗರಗಳ ಲ್ಲಿನ ಕರಾವಳಿ ಜಿಲ್ಲೆಗಳ ತುಳು ಕನ್ನಡಿಗರ ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಪ್ರಮುಖರು ಅಧಿಕ ಸಂಖ್ಯೆಯಲ್ಲಿ ಸೇರಿದ್ದು ಇವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ 4 ಗಣ್ಯರನ್ನು ಸನ್ಮಾನಿಸಲು ಸಂತೋಷವಾಗುತ್ತಿದೆ. ಈ ರೀತಿ ನಾವೆಲ್ಲರೂ ಒಂದಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂಲಕ ಹಿಂದಿನಂತೆ ಮುಂದೆಯೂ ಕರಾವಳಿಯ ನಮ್ಮ ಜಿಲ್ಲೆಗಳ ಅಭಿವೃದ್ದಿಗಾಗಿ ಮತ್ತಷ್ಟು ಕ್ರೀಯಾಶೀಲರಾಗೋಣ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನಿರ್ಗಮನ ಅಧ್ಯಕ್ಷರೂ, ಸಮಿತಿಯ ಸಂಸ್ಥಾಪಕರೂ ಆದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಅಭಿಪ್ರಾಯ ಪಟ್ಟರು. ನ. 5 ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಸಭಾಗೃಹದಲ್ಲಿ ನಡೆದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಸನ್ಮಾನ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬಳಿಕ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರಾದ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಮುಂಬಯಿಯ ಖ್ಯಾತ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ, ಸಮಾಜ ಸೇವಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಸುರೇಶ್ ರಾವ್ ಮತ್ತು ಜನಪ್ರಿಯ ಪತ್ರಕರ್ತ ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಯವರನ್ನು ಸನ್ಮಾನಿಸಿ ಮಾತನಾಡುತ್ತಾ ಸಮಿತಿಯ ಕಾರ್ಯದ ಬಗ್ಗೆ ಸಂಕ್ತಿಪ್ತವಾಗಿ ಮಾತನಾಡುತ್ತಾ ಸಮಿತಿಯ ಮಾರ್ಗದರ್ಶಕರಾಗಿದ್ದ ದಿ. ಜೋರ್ಜ ಫೆರ್ನಾಂಡಿಸ್ ಹಾಗೂ ಅಗಲಿನ ಇನ್ನಿತರ ಗಣ್ಯರ ಸಹಕಾರ ಹಾಗೂ ಪ್ರೋತ್ಸಾಹವನ್ನು ನೆನಪಿಸಿಕೊಂಡರು. ಈ ಸಲ ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಡಾ. ಬಿ. ಎಂ. ಹೆಗ್ದೆ ಇಂದು ಈ ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ಮುಂದೆ ಅವರನ್ನು ಸನ್ಮಾನಿಸಲಿರುವೆವು. ಎಲ್ಲಾ ಸಮುದಾಯದವರು ಒಂದು ಕೊಡೆಯಡಿಯಲ್ಲಿದ್ದಂತೆ ನೂತನ ಅಧ್ಯಕ್ಷರಾದ ಎಲ್. ವಿ. ಅಮೀನ್ ಹಾಗೂ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯು ಮುಂದೆಯೂ ಸರಿಯಾದ ಹಾದಿಯಲ್ಲಿ ಮುನ್ನಡೆಯುದರೊಂದಿಗೆ ಜಿಲ್ಲೆಗಳ ಅಭಿವೃದ್ದಿ ಕಾರ್ಯವು ಭರದಿಂದ ಸಾಗಲಿದೆ ಎಂದರು. ವೇದಿಕೆಯಲ್ಲಿದ್ದ ಉಪಸ್ಥಿತರಿದ್ದ ಗಣ್ಯರಾದ ಸಮಿತಿಯ ಸಂಸ್ಥಾಪಕ ಜಯಕೃಷ್ಣ ಶೆಟ್ಟಿ ತೋನ್ಸೆ. ನೂತನ ಅಧ್ಯಕ್ಷ ಎಲ್ ವಿ ಅಮೀನ್ .ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ , ಉಪಾಧ್ಯಕ್ಷ ಗಳಾದ. ಪಿ ಧನಂಜಯ ಶೆಟ್ಟಿ , ನಿತ್ಯಾನಂದ. ಡಿ ಕೋಟ್ಯಾನ್ ಸಿ ಎ. ಐ ಆರ್ ಶೆಟ್ಟಿ , ರಾಮಚಂದ್ರ ಗಾಣಿಗ , ಜಿ ಟಿ ಆಚಾರ್ಯ, ಜತೆ ಕಾರ್ಯದರ್ಶಿ ದೇವದಾಸ್ ಕುಲಾಲ್ , ಮಾತ್ರವಲ್ಲದೆ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರಾದ. ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ . ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ. ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಕಾರ್ಯಧ್ಯಕ್ಷ ಎನ್. ಟಿ. ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬೈಯ ಅಧ್ಯಕ್ಷ ಹರೀಶ್ ಜಿ.ಅಮೀನ್, ಬಿಲ್ಲವರ ಅಸೋಸಿಯೇಶನ್ ನ ಉಪಾಧ್ಯಕ್ಷ ಜಯಂತಿ ಉಳ್ಳಾಲ್. ಪರಿಸರ ಪ್ರೇಮಿ ಸಮಿತಿಯ ಜೊತೆ ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ . ಜೊತೆ ಕೋಶಾಧಿಕಾರಿ ಸಂಜೀವ ಪೂಜಾರಿ ತೋನ್ಸೆ ಹಾಗೂ ಇನ್ನಿತರ ಗಣ್ಯರು ಸನ್ಮಾನಿತರನ್ನು ಶಾಲು ಹೊದಿಸಿ, ಪೇಟಾ ಧರಿಸಿ, ಸ್ಮರಣಿಕೆ ನೀಡಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪರವಾಗಿ ಸನ್ಮಾನಿಸಿದರು. ಸಮಿತಿಯ ಉಪಾಧ್ಯಕ್ಷರುಗಳಾದ ನಿತ್ಯಾನಂದ ಕೋಟ್ಯಾನ್, ಜಿ. ಟಿ ಆಚಾರ್ಯ, ಸಿಎ. ಐ. ಆರ್ ಶೆಟ್ಟಿ ಮತ್ತು ಪರಿಸರಪ್ರೇಮಿ ಸಮಿತಿ ವಕ್ತಾರ ದಯಾಸಾಗರ ಚೌಟ ಸನ್ಮಾನಿತರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ವಿವಿಧ ಜಾತಿಯ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು. ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸದಸ್ಯರು. ಹಿತೈಷಿಗಳು. ಉಪಸ್ಥರಿದ್ದರು ಇದೇ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಬಿಲ್ಲವ ಸಮಾಜದ ಹಿರಿಯ ನಾಯಕ .ಭಾರತ್ ಬ್ಯಾಂಕಿನ ನಿರ್ದೇಶಕ .ಭಾರತೀಯ ಜನತಾ ಪಕ್ಷದ ಹಿರಿಯ .ನಾಯಕ ಎಲ್ ವಿ ಅಮೀನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಆಯ್ಕೆಗೊಂಡ ಎಲ್ ವಿ ಅಮೀನ್ ಅವರನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರ ಹೂಗುಚ್ಛ ನೀಡಿ ಅಭಿನಂದಿಸಿದರು. ಸನ್ಮಾನಿತರ ನುಡಿ : ರಾಮಚಂದ್ರ ಬೈಕಂಪಾಡಿ ಮಾತನಾಡಿ, ಮುಂಬಯಿಯ ಸ್ವರಾಜ್ಯವನ್ನು ಆಳಿದವರು ನೀವು. ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಐದು ಮಂದಿ ಕರಾವಳಿಯವರು ಎನ್ನಲು ಅಭಿಮಾನ ವಾಗುತ್ತಿದೆ. ಕರಾವಳಿಯ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಂಬಯಿ ತುಳು ಕನ್ನಡಿಗರ ಕೊಡುಗೆ ಇದ್ದೇ ಇದೆ. ತುಳುವರನ್ನು ಎಲ್ಲಿಯೂ ಗುರುತಿಸಬಹುದು. ಸಮಸ್ತ ಸಮುದಾಯದವರು ಸೇರಿ ತುಳು ನಾಡ ಅಭಿವೃದ್ದಿಗೊಳಿಸೋಣ. ಉಡುಪಿಯ ಶ್ರೀಕೃಷ್ಣ ನ ಆಶೀರ್ವಾದದಿಂದ ಪೇಜಾವರ ಶ್ರೀಗಳ ಹಸ್ತದಿಂದ ಸಮಿತಿ ಪ್ರಾರಂಭಗೊಂಡಿದೆ. ತೋನ್ಸೆ ಜಯಕೃಷ್ಣ ಶೆಟ್ಟಿಯವರ ನೇತ್ರುತ್ವದಲ್ಲಿ ನಡೆಯುತ್ತಾ ಬಂದಿರುವ ಹೋರಾಟದಿಂದ ಬಹಳ ಪ್ರಯೋಜನವಾಗಿದೆ. ನಾವು ಪರಿಸರ ವ್ಯಾದಿಗಳ ವಿರುದ್ದ ಹೋರಾಡುತ್ತೇವೆ. ಎಲ್ಲಾ ಸಮುದಾಯದವರು ಒಂದಾಗಿ ಮಾಡುತ್ತಿರುವ ಈ ಕೆಲಸ ನಿರಂತರವಾಗಿ ನಡೆಯಲಿ. ಇಂದು ಸನ್ಮಾನಿಸಿದ ಸಮಿತಿಯ ಎಲ್ಲರಿಗೂ ಕೃತಜ್ನತೆಗಳು ಎಂದರು. ಡಾ. ಸುನೀತಾ ಎಂ. ಶೆಟ್ಟಿ ಮಾತನಾಡಿ, ಇಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದಾರೆ. ನಾನು ಎಲ್ಲರ ಉಪಸ್ಥಿತಿಯಲ್ಲಿ ಸನ್ಮಾನ ಪಡೆಯುತ್ತಿರುವುದರಿಂದ ನನಗೆ ಇನ್ನ್ ಪ್ರತ್ಯೋಕ ಸನ್ಮಾನದ ಅಗತ್ಯವಿಲ್ಲ. ಈ ನಗರ ನನ್ನನ್ನು ಬೆಳೆಸಿದೆ. ಅದನ್ನು ನಾನು ಎಂದಿಗೂ ಮರೆಯಲಿಕ್ಕಿಲ್ಲ. ಈ ನಗರಕ್ಕೆ ಹಾಗೂ ಇಲ್ಲಿನ ಜನರಿಗೆ ನಾನು ಋಣಿ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಹೊಸ ಸಮಿತಿಗೆ ಅಭಿನಂದನೆಗಳು ಎಂದರು. ಡಾ. ಸುರೇಶ್ ರಾವ್ ಮಾತನಾಡಿ, ಗಣ್ಯರ ಮಧ್ಯೆ ಸನ್ಮಾನ ಸ್ವೀಕರಿಸಲು ಸಂತೋಷವಾಗಿತ್ತಿದೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಅಭಿನಂದನೆಗಳು. ತಾಯ್ನಾಡಲ್ಲಿ ವೈದ್ಯಕೀಯ ಸೇವೆಗೆ ಸೂಕ್ತ ಅವಕಾಶ ನೀಡಿದಕ್ಕಾಗಿ ನನಗೆ ಈ ಪ್ರಶಸ್ತಿ ಬಂದಿಗೆ ಎನ್ನಬಹುದು. ಕಟೀಲಿನ ಪ್ರೊಜೆಕ್ಟ್ ಇಡೀ ದೇಶದಲ್ಲಿ ಹರಡುವಂತಾಗಲಿ. ಕಟೀಲಿನ ಎಲ್ಲಾ ಗ್ರಾಮದವರಿಗೆ ಸರಿಯಾದ ವೈದ್ಯಕೀಯ ಸೇವೆ ಸಿಗದೇ ಇದ್ದು ಜನರು ಪರದಾಡುತ್ತಿದ್ದು 70 ವರ್ಷಕ್ಕಿಂತ ಮೇಲ್ಪಟ್ಟದವರಿಗೆ ಹಾಗೂ ಬಡತನದ ರೇಖೆಗಿಂತ ಕೆಳಗಿದ್ದವರಿಗೆ ಪ್ರಯೋಜನಕಾರಿಯಾಗಲು ಕಟೀಲಿನಲ್ಲಿ ಈ ನೂತನ ಪ್ರೊಜೆಕ್ಟನ್ನು ಕೇವಲ ಎರಡೇ ವರ್ಷಗಳಲ್ಲಿ ಪೂರ್ಣಗೊಳಿಸಿದ್ದೇವೆ. ಇದು ದೇಶದಲ್ಲೇ ಒಂದು ಮಾದರಿ ವೈದ್ಯಕೀಯ ಕೇಂದ್ರವಾಗಲಿ. ಮುಂಬಯಿಯ ಬಿ.ಎಸ್.ಕೆ.ಬಿ. ಅಸೋಷಿಯೇಶನ್ ನಲ್ಲಿ ನೂತನ ಕೃಷ್ನ ಮಂದಿರ ನಿರ್ಮಾಣಗೊಳ್ಳುತ್ತಿದ್ದು ಎಲ್ಲರೂ ಸಯಾನ್ ಗೋಕುಲಕ್ಕೆ ಆಗಮಿಸಿ ದರ್ಶನ ಪಡೆಯಬೇಕು. ಈ ಧಾರ್ಮಿಕ ಸ್ಥಳವು ಎಲ್ಲರಿಗೂ ಸೇರಿದೆ ಎಂದರು. ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ, ನನಗೆ ಸಿಕ್ಕಿದ ಸನ್ಮಾನ ಹಾಗೂ ಪ್ರಶಸ್ತಿಯನ್ನು ಮಹಾನಗರದ ಎಲ್ಲಾ ತುಳು ಕನ್ನಡಿಗರಿಗೆ ಅರ್ಪಿಸುತ್ತಿದ್ದೇನೆ. ಎಂದೂ ಪ್ರಶಸ್ತಿಗಾಗಿ ಯೋಚಿಸದೆ ಕರ್ನಾಟಕ ಮಲ್ಲ ಪತ್ರಿಕೆಯನ್ನು ಬೆಳೆಸಿದ್ದೇನೆ. ನನ್ನಾ ಧೋರಣೆಯನ್ನು ನಾನು ಮುಂದುವರಿಸುತ್ತೇನೆ. ಯಾರ ಮೇಲೆ ದ್ವೇಶದಿಂದ ನಾನು ಎಂದಿಗೂ ಬರೆದಿಲ್ಲ. ಸಚಿವರಾದ ಸುನಿಲ್ ಕುಮಾರ್ ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ನನ್ನನ್ನು ಆಯ್ಕೆಮಾಡಿದ್ದಾರೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬಹಳ ಸಾಧನೆ ಮಾಡಿದೆ ಎಂದರು.

ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕರಾಗಿ ಮಲ್ಪೆ ಎಮ್ ಮಹೇಶ್ ಕುಮಾರ್ ಆಯ್ಕೆ

Thumbnail
Posted On: 09 Dec 2021, 09:20 AM

ಉಡುಪಿ : ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ (ರಿ.) ಬೆಂಗಳೂರು ಇದರ ನೇತೃತ್ವ ದಲ್ಲಿ ರಾಜ್ಯ ದ 31 ಜಿಲ್ಲೆಗಳ ಎಲ್ಲಾ ಮುದ್ರಣ ಮಾಲಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚನೆ ಆಗಿದ್ದು ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಂಘದ ಅಧ್ಯಕ್ಷರು ಅಶೋಕ್ ಕುಮಾರ್ ಮತ್ತು ಮಾಜಿ ರಾಷ್ಟ್ರಧ್ಯಕ್ಷರು ಪ್ರಸ್ತುತ ಪ್ರಿಂಟ್ ಕ್ಲಸ್ಟರ್ ನ ಅಧ್ಯಕ್ಷರು ಆದ ಸಿ ಆರ್ ಜನಾರ್ಧನ್ ಹಾಗೂ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಅಧಿಕೃತವಾಗಿ ನೇಮಕ ಮಾಡಿದರು. ಸಭೆಯಲ್ಲಿ ಹೆಚ್ಚಿನ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಮಹಿಳೆಯರಿಗಾಗಿ ಉಚಿತ ಬ್ಯೂಟಿಪಾರ್ಲರ್ ಮತ್ತು ಟೈಲರಿಂಗ್ ತರಬೇತಿ

Thumbnail
Posted On: 08 Dec 2021, 10:31 AM

ಉಡುಪಿ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಮಣಿಪಾಲ- ಕೆನರಾ ಬ್ಯಾಂಕ್ ಆರ್ ಸೆಟಿ (ಸಿಂಡ್ಆರ್ ಸೆಟಿ) ಇವರ ವತಿಯಿಂದ ಉಚಿತ ಸ್ವ ಉದ್ಯೋಗ ತರಬೇತಿ ಡಿಸೆಂಬರ್‌ 27 ರಿಂದ ಜನವರಿ 25 ರವರೆಗೆ ಒಟ್ಟು 30 ದಿನಗಳ ಬ್ಯೂಟಿಪಾರ್ಲರ್ ತರಬೇತಿ ಹಾಗೂ ಡಿಸೆಂಬರ್ 30 ರಿಂದ ಜನವರಿ 28 ರವರೆಗೆ ಮಹಿಳೆಯರ ಟೈಲರಿಂಗ್ ತರಬೇತಿಯು ಪ್ರಾರಂಭವಾಗಲಿದೆ. ತರಬೇತಿಯಲ್ಲಿ ಪ್ರಾಯೋಗಿಕ ಕೌಶಲ್ಯದ ಜೊತೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾಗುವುದು. ತರಬೇತಿಯ ನಂತರ ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ ನೀಡಲಾಗುವುದು. ಸ್ವ ಉದ್ಯೋಗ ಪ್ರಾರಂಭಿಸಲು ಸಾಲ ಸೌಲಭ್ಯದ ಅವಶ್ಯಕತೆ ಇದ್ದಲ್ಲಿ ಬ್ಯಾಂಕ್ ಲಿಂಕೇಜ್ ಮಾಡಿ ಕೊಡಲಾಗುವುದು. ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ತರಬೇತಿ ನೀಡಲಿದ್ದು, ಒಬ್ಬರಿಗೆ ಯಾವುದಾದರು ಒಂದು ತರಬೇತಿಯನ್ನು ಪಡೆಯಲು ಅವಕಾಶವಿರುತ್ತದೆ. ಗ್ರಾಮೀಣ ಪ್ರದೇಶದ 18 ರಿಂದ 45 ರ ವಯೋಮಿತಿಯ ಯುವತಿಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಬಿ.ಪಿ.ಎಲ್ ಕುಟುಂಬದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಕೂಡಲೇ ಕರೆ ಮಾಡಿ ಅಥವಾ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸ ಬಹುದಾಗಿದೆ 0820- 2570455 9449862665 https://docs.google.com/forms/d/e/1FAIpQLSfdoGNiTcI4sZP2IbLJ1fsw_iTTmyj8nY4pcNTt5iYyrezhDQ/viewform

'ಸಟ್ಟಿ : ಸಂತಾನ ಸಂತೇಸಿಗ 'ನಾಗ - ಸುಬ್ರಾಯ ದೇವೆರೆ' ಸುಗಿಪು

Thumbnail
Posted On: 07 Dec 2021, 05:52 PM

ಕರಾವಳಿಯ ಆರಾಧನಾ ಮಾರ್ಗದಲ್ಲಿ ಕಂಡು ಬರುವ ರೋಚಕ ಅಷ್ಟೇ ಸಹಜ ಅನುಸಂಧಾನವೇ ನಾಗ-ಸುಬ್ರಹ್ಮಣ್ಯ ಅಭೇದ ಕಲ್ಪನೆ. ಮೂಲದ ನಾಗ ಶ್ರದ್ಧೆಯು ಹರಿದು ಬಂದ (ಕರೆನಾಡಿಗೆ) ಶಿಷ್ಟದ ಸುಬ್ರಹ್ಮಣ್ಯ ಚಿಂತನೆಯೊಂದಿಗೆ ಸಂಲಗ್ನಗೊಂಡ ವಿಧಾನ ಆಶ್ಚರ್ಯವನ್ನು ಉಂಟು ಮಾಡಿ ಯೋಚಿಸುವಂತೆ ಪ್ರೇರಿಸುತ್ತದೆ. ’ಸುಬ್ರಾಯ ದೇವೆರ್ ಅಜಿಪಕಾರ ಗದ್ದಿಗೆಡ್, ಮೂಜಿಕಾರ ಮುಂಡು ಮುಕ್ಕಾಳಿಗೆಡ್, ಮೊರಂಪಾಯಿ ಮಲ್ಲಿಗೆಡ್, ಕೇದಾಯಿ ಸಂಪಿಗೆಡ್, ಸರ್ಪಲಿಂಗೊಡು, ಮೈರ ಬಾಣೊಡು, ಒಡ್ಡುಪಾಡಿ ಒಲೆಗ ಆವೊಂದೆರ್ ’ಬಲೀಂದ್ರ ಸಂದಿ’ಯಲ್ಲಿ ಬಲೀಂದ್ರನನ್ನು ವಂಚಿಸಲು ಹೊರಟ ಬಾಲ ಬ್ರಹ್ಮಚಾರಿ ಮಾಣಿಗಳು ಸುಬ್ರಹ್ಮಣ್ಯ ದೇವರನ್ನು ಹೀಗೆಂದು ಸ್ತುತಿಸುತ್ತಾರೆ. ಅರುವತ್ತು ಕಾಲಗದ್ದುಗೆ, ಮೂರುಕಾಲಿನ ಸಣ್ಣಪೀಠ, ಮಲ್ಲಿಗೆ-ಸಂಪಿಗೆ ಹೂವುಗಳ ಪರಿಮಳಕ್ಕೆ ಹರಿದು ಬರುವ ಹಾವುಗಳ ಬಯಕೆ, ಸರ್ಪಲಿಂಗ ಲಾಂಛನ ಹಾಗೂ ನವಿಲುಗರಿಯ ಅಲಂಕಾರದಲ್ಲಿ ಒಡ್ಡೋಲಗಸ್ಥನಾದ ಸುಬ್ರಾಯ ದೇವರ ವರ್ಣನೆ ನಮ್ಮ ಪಾಡ್ದನಗಳ ಕವಿ ಚಮತ್ಕಾರದೊಂದಿಗೆ ಜನಪದವು ಸುಬ್ರಹ್ಮಣ್ಯ ದೇವರನ್ನು ಸ್ವೀಕರಿಸಿದ ವಿಧಾನವನ್ನೂ ಸೂಚಿಸುತ್ತದೆ. ಸಮಾನ ಅನುಗ್ರಹ ವಿಶೇಷಗಳಿಂದ ಈ ನಾಗ-ಸುಬ್ರಹ್ಮಣ್ಯ ಸಮೀಕರಣ ನಡೆದು ಹೋಯಿತು ಎನ್ನಲು ಪುರಾವೆಗಳಿವೆ. ಏನಿದ್ದರೂ ಸುಬ್ರಹ್ಮಣ್ಯ ನಮ್ಮ ಬಾಯಿಯಲ್ಲಿ ಸುಬ್ಬರಾಯನಾದ; ಸುಬ್ರಾಯನೆಂದು ಪ್ರಸಿದ್ಧನಾದ. ವಿದ್ವಾಂಸರು ಸಂಪಾದಿಸಿ ಪ್ರಕಟಿಸಿದ (೧೮೮೬-ರೆವರೆಂಡ್ ಮ್ಯಾನರ್; ಬಾಸೆಲ್ ಮಿಶನ್ ಪ್ರಕಟನೆ) ಪ್ರಾಚೀನ ಪಾಡ್ದನಗಳಲ್ಲಿ ಸುಬ್ರಹ್ಮಣ್ಯ ದೇವರ ಉಲ್ಲೇಖ ಅಲ್ಲಲ್ಲಿ ಕೇಳು ಬರುತ್ತದೆ. ವಿಶೇಷವಾಗಿ ’ಕುಕ್ಕೆ ಸುಬ್ರಾಯ ದೇವೆರ್ ಎಂಬ ನುಡಿ ಇದೆ. ಪಂಜುರ್ಲಿ ದೈವದ ಪಾಡ್ದನದಲ್ಲಿ ’ನನ ಸುಬ್ರಾಯ ದೇವೆರೆ ಗಟ್ಟಿ ಜಪ್ಪೊಡು; ಆರ್ ಬುಡುವೆರ್, ಆರೆ ಗಂಡ ಗಣಕುಳು ಬುಡಾಯೋ’ ಎಂಬ ವಿವರವೂ ಪಶ್ಚಿಮ ಘಟ್ಟ ಮತ್ತು ಕೆಳಗಿನ ವ್ಯಾಪ್ತಿ ಸುಬ್ರಾಯ ದೇವರಿಗೆ ಸಂದದ್ದು ಮತ್ತು ಅವರಿಗೆ ಪ್ರಬಲ ಶಕ್ತಿಗಳ ಪರಿವಾರ (ಗಂಡ ಗಣಕುಳು)ವಿತ್ತು ಎಂಬುದು ಹಾಗೂ ಸುಬ್ರಹ್ಮಣ್ಯ ಆರಾಧನೆ ನಮ್ಮ ತುಳು ಸೀಮೆಯಲ್ಲಿ - ಕರಾವಳಿಯಲ್ಲಿ ಎಷ್ಟು ಗಾಢವಾಗಿತ್ತೆಂಬುದನ್ನು ಅನಾವರಣಗೊಳಿಸುತ್ತದೆ. ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರಗಳೆಲ್ಲ ನಾಗ-ಸುಬ್ರಹ್ಮಣ್ಯ ಸನ್ನಿಧಾನಗಳೇ ಆಗಿರುವುದು ಈ ಎರಡು ಶಕ್ತಿ ವಿಶೇಷಗಳ ಪುರಾತನ ಸುಗಮ ಬೆಸುಗೆಯನ್ನು ದೃಢೀಕರಿಸುತ್ತವೆ. ’ಧರ್ಮರಸು’ ಸಂದಿಯಲ್ಲಿ ಮತ್ತು ’ಅತ್ತಾವರ ದೈಯ್ಯೊಂಗುಳು’ ಪಾಡ್ದನಗಳಲ್ಲೂ ’ಸುಬ್ರಾಯ ದೇವೆರ್ ಬರುತ್ತಾರೆ. ಪಾಣರಾಟದ ಸ್ವಾಮಿಯ ಹೊಗಳಿಕೆಯಲ್ಲಿ ’ಮುದ್ದು ಸ್ವಾಮಿ’ ಎಂಬ ಪ್ರಯೋಗ ಸುಬ್ರಹ್ಮಣ್ಯ ಸ್ವರೂಪದ ನಾಗನನ್ನೇ ಸೂಚಿಸುತ್ತದೆ ಎನ್ನುತ್ತಾರೆ ಸಂಶೋಧಕರು. ವೈದ್ಯರ (ನಾಗ ಮಂಡಲ, ಢಕ್ಕೆ ಬಲಿ ನಡೆಸುವ) ಹಾಡುಗಳಲ್ಲಿ (ನಾಂದಿಹಾಡು) ’ವಾಸುಕಿ ಸುಬ್ರಹ್ಮಣ್ಯ ತೆರಳಿ ಬಾ’ ಎಂಬ ಆಹ್ವಾನವಿದೆ. ಇಲ್ಲೂ ನಾಗ-ಸುಬ್ರಹ್ಮಣ್ಯ ಸಮಾಗಮದ ಸ್ಪಷ್ಟ ನಿರ್ದೇಶನವಿದೆ. [ಪಾಣರಾಟ : ಕುಂದಾಪುರದ ಕಡೆ ಮೂರು ನಾಲ್ಕು ದಿನಗಳ ಕಾಲ ನಡೆಯುವ ನಾಗ ಸಹಿತ ದೈವಗಳ ಆರಾಧನಾ ವಿಧಾನ.] ಯಕ್ಷಗಾನ ಸಭಾಲಕ್ಷಣ ಗ್ರಂಥವೂ ಪೂರ್ವ ರಂಗವನ್ನು ವಿವರಿಸುತ್ತಾ ’ಚಿನ್ಮಯ ಕಾಯ, ಭಕ್ತ ಸಹಾಯ, ಶಕ್ತಿ ಸಖಾಯ ಶ್ರೀ ಸುಬ್ಬರಾಯ’, ’ಕುಂಡಲ ಮಣಿ ಭೂಷಣ ಹೇ ಸುಬ್ಬರಾಯ’ ಮುಂತಾದ ಹಾಡುಗಳನ್ನು ದಾಖಲಿಸಿದೆ. ಸುಬ್ರಹ್ಮಣ್ಯ ವೇಷವನ್ನು ರಂಗಕ್ಕೆ ತಂದು ಕುಣಿಸುವ (ಈಹಾಡುಗಳನ್ನು ಹಾಡಿ) ಸಂಪ್ರದಾಯವಿದೆ. ಇದು ಸ್ಕಂದ ಆರಾಧನೆಯ ಪ್ರಭಾವವನ್ನು ಪ್ರತಿಪಾದಿಸುತ್ತದೆ. ’ಸಂತಾನ ಸಂತೇಸಿ, ಸುಖ ಸಂತೇಸಿ; ಕೊರ‍್ದು ಸೀಕ್ ಸಂಕಡ ಗುಣ ಮಲ್ತ್‌ದ್; ಕಣ್ಣ್, ಕೈಕಾರ್ ಸುಕ ಕೊರ‍್ಲೆ ಎಂಬ ಜನಸಾಮಾನ್ಯರ ಸುಬ್ರಹ್ಮಣ್ಯ ಪ್ರಾರ್ಥನೆಯು ಸಂತಾನ, ಮಾಂಗಲ್ಯ ಭಾಗ್ಯ, ಸಾಮರಸ್ಯದ ದಾಂಪತ್ಯ ಜೀವನ, ಸರ್ವ ವ್ಯಾದಿ ನಿವಾರಣೆ (ಚರ್ಮ-ನರ ಸಂಬಂಧಿ ವ್ಯಾಧಿಗಳು), ದೃಷ್ಟಿಯೋಗವನ್ನು ಕರುಣಿಸುವ ಕಾರ್ತಿಕೇಯನಿಗೆ ಸಂಬಂಧಪಟ್ಟ ವಿಸ್ತೃತ ಕಥೆಗಳು ದೇಶದಾದ್ಯಂತ ಪ್ರಚಲಿತವಿವೆ; ಇದನ್ನು ವಿವಿಧ ಪುರಾಣಗಳು ವಿಸ್ತೃತವಾಗಿ ವಿವರಿಸುತ್ತವೆ. ಷಷ್ಠಿ ತಿಥಿಯ ಅಧಿದೇವತೆಯೂ ಸ್ಕಂದನೇ. ಪಂಚಮಿಯು ನಾಗಗಳ ತಿಥಿ, ಪಂಚಮಿ-ಷಷ್ಠಿಗಳು ಪೂರ್ಣ-ಆನಂದವನ್ನು ಕೊಡುವಂತಹವು. ಉತ್ತರ ಭಾರತದಲ್ಲಿ ಸ್ಕಂದನಾಗಿ, ತಮಿಳುನಾಡಿನಲ್ಲಿ ಮುರುಗ, ಶೇಯೋನ್, ಆರ‍್ಮುಗ ಮುಂತಾದ ಹೆಸರುಳ್ಳ ಸುಬ್ರಹ್ಮಣ್ಯ ಸದಾ ಕೌಮಾರ‍್ಯ-ಪರಾಕ್ರಮದ ಸಂಕೇತ. ಇಂದ್ರ ಪುತ್ರಿಯನ್ನು ಮದುವೆಯಾಗುವ ದೇವ ಸೇನಾನಿಗೆ ವಡ್ಡರ ಜನಾಂಗದ ಶಿವಮುನಿಯ ಮಗಳಾದ ’ವಲ್ಲಿ' ಎಂಬವಳೊಂದಿಗೂ ವಿವಾಹವಾಗಿದೆ ಎನ್ನುತ್ತವೆ ತಮಿಳು ಕಥೆಗಳು. ಇದು ಸ್ಪಷ್ಟವಾಗಿ ಜನಪದ-ಶಿಷ್ಟ ಸಂಸ್ಕೃತಿಗಳ ಸಮಾಗಮವನ್ನು ಸಾಂಕೇತಿಸುತ್ತವೆ. ಕರಾವಳಿಯಲ್ಲಿ ಸುಬ್ರಹ್ಮಣ್ಯನ ಆರಾಧನೆ ನಾಗನೊಂದಿಗೆ, ಸಟ್ಟಿ (ಷಷ್ಠಿ) ಎಂಬುದು ನಮ್ಮವರ ಶ್ರದ್ಧೆಯ ಪರ್ವದಿನ. ಷಷ್ಠಿ ವ್ರತವಾಗಿ ಆಚರಿಸಲ್ಪಡುವಾಗ ’ಚಪ್ಪೆ ತಿನ್ನುವುದು ರೂಢಿ. ಮಳೆಗಾಲದ ವೇಳೆ ಎರವಲಾಗಿ ಪಡೆಯುವ ಅಕ್ಕಿಯನ್ನು ಹಿಂದಿರುಗಿಸಲು ಷಷ್ಠಿ ವಾಯಿದೆ. ಆರು ಅಥವಾ ಷಷ್ಠಿ-ಷಡಾನನ ಸುಬ್ರಹ್ಮಣ್ಯ ಸಂಬಂಧವೂ ವಿಸ್ತಾರವಾದುದು. ಭಿನ್ನ ಹಾಗೂ ಬಹು ವ್ಯಾಖ್ಯಾನಗಳನ್ನು ಹೊಂದಿರುವಂತಹುದು. ’ಕುಂಕುಮ ರಕ್ತವರ್ಣದವನಾಗಿ ಮಹಾಮತಿ ಎನಿಸಿ ಮಯೂರ ವಾಹನನಾದ ರುದ್ರಸೂನುವೇ ನೀನು ಸುರ ಸೈನ್ಯನಾಥನಾದ ಗುಹನು, ನಿನಗೆ ಶರಣು.’ ಸುಂದರ ದ್ವಿಬಾಹು ಅಥವಾ ಚತುರ್ಬಾಹು ಪ್ರತಿಮಾ ರೂಪದಲ್ಲಿ, ನಾಗಶಿಲಾ ಪ್ರತೀಕ ಸ್ವರೂಪದಲ್ಲಿ ಅಥವಾ ಹುತ್ತವೇ ಸಾನ್ನಿಧ್ಯವೆಂದು ಪೂಜಿಸಲಾಗುತ್ತದೆ ನಮ್ಮ ದೇವಳಗಳಲ್ಲಿ. ಷಷ್ಠಿ ಪರ್ವಕಾಲದಲ್ಲಿ ಸುಬ್ರಹ್ಮಣ್ಯ ದೇವಳಗಳಿಗೆ ತೆರಳಿ ಹರಕೆ ಸಲ್ಲಿಸುವುದು, ಉರುಳು ಸೇವೆ-ಮಡೆಸ್ನಾನ ಸೇವೆ ಅರ್ಪಿಸುವುದು ನಮ್ಮ ಸಂಪ್ರದಾಯ. ಇದನ್ನು ತಪ್ಪುವಂತಿಲ್ಲ ಇದು ನಮ್ಮ ಶ್ರದ್ಧೆ. ಅಡಿಪೋಯಿ ನಾಗೆ-ಕೊಡಿಪೋಯಿ ಬೆರ್ಮೆರ‍್ನ ಅನುಗೆತೊಂದು ’ಸುಬ್ರಾಯ’ ದೇವೆರೆನ್ ಸುಗಿಪುಗ. ಲೇಖನ : ಕೆ.ಎಲ್.ಕುಂಡಂತಾಯ

'ತುಳುನಾಡಿನ ಪ್ರಾಣಿ ಜಾನಪದ' ಗ್ರಂಥ ಲೋಕಾರ್ಪಣೆ

Thumbnail
Posted On: 07 Dec 2021, 02:26 PM

ಪಡುಬಿದ್ರಿ : ಇಲ್ಲಿನ ಸಿರಿ ಕಮಲ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ ಡಾ.ಅಶೋಕ ಆಳ್ವ ಅವರ ಸಂಶೋಧನ ಗ್ರಂಥ 'ತುಳುನಾಡಿನ ಪ್ರಾಣಿ ಜಾನಪದ' ಡಿಸೆಂಬರ್ 11 ರಂದು ಸಂಜೆ 5 ರಿಂದ ಪಡುಬಿದ್ರಿಯ ಬಂಟರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಹಾವೇರಿಯ ಜಾನಪದ ವಿ.ವಿ.ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆಯ ಸಮಾರಂಭದಲ್ಲಿ‌ ವಿಶ್ರಾಂತ ಕುಲಪತಿ , ತುಳು - ಕನ್ನಡ ವಿದ್ವಾಂಸರಾದ ಪ್ರೊ ಬಿ.ಎ. ವಿವೇಕ ರೈ ಗಂಥ ಲೋಕಾರ್ಪಣೆ ಮಾಡಲಿರುವರು. ಲೇಖಕರು,ಹಿರಿಯ ವಿದ್ವಾಂಸರಾದ ಡಾ.ಪಾದೆಕಲ್ಲು ವಿಷ್ಣು ಭಟ್ಟ ಅವರು ಕೃತಿ ಪರಿಚಯಿಸುವರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ , ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ, ಪಡುಬಿದ್ರಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿರುವರು ಎಂದು ಗ್ರಂಥ ಪ್ರಕಾಶಕರಾದ , ವಿಶ್ವಸ್ಥರು ಕಮಲ ಶೆಡ್ತಿ ಚಾರಿಟೇಬಲ್ ಟ್ರಸ್ಟ್ ನ ಡಾ.ವೈ ಎನ್.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳತ್ತೂರು : ಮಹಾಚೌತಿ ಪ್ರಯುಕ್ತ 111 ತೆಂಗಿನಕಾಯಿಗಳ ಗಣಯಾಗ

Thumbnail
Posted On: 06 Dec 2021, 06:30 PM

ಕಾಪು : ಕಳತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 7, ಮಂಗಳವಾರದಂದು ಮಹಾಚೌತಿ ಪ್ರಯುಕ್ತ 111 ತೆಂಗಿನಕಾಯಿಗಳ ಗಣಯಾಗ ನೆರವೇರಲಿದ್ದು, 11 ಗಂಟೆಗೆ ಪೂರ್ಣಾಹುತಿ ಹಾಗೂ ಅನ್ನಸಂತರ್ಪಣೆಯೂ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.