Updated News From Kaup

ಇನ್ನಂಜೆ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಉಮೇಶ್ ಆಚಾರ್ಯ

Posted On: 12-09-2021 10:26AM

ಕಾಪು : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆಯ ನೂತನ ಅಧ್ಯಕ್ಷರಾಗಿ ಉಮೇಶ್ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಫಿಟ್ ಇಂಡಿಯಾ ಫ್ರೀಡಂ ಓಟ - ಅಭಿಯಾನ

Posted On: 11-09-2021 12:27PM

ಶಿರ್ವ: ಸದೃಢ ಭಾರತ ಕಾರ್ಯಕ್ರಮವು ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು ಎಂಬುದು ಈ ಅಭಿಯಾನದ ಮೂಲ ಉದ್ದೇಶ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ರ ಅಭಿಯಾನಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದ್ದಾರೆ.

ಯುವ ಜನಾಂಗ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳದೇ ಇರುವ ಕಾರಣ ವಿವಿಧ ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ದೇಶವನ್ನು ಉತ್ತಮ ಆರೋಗ್ಯದತ್ತ ಕೊಂಡೊಯ್ಯಲು ಈ ಅಭಿಯಾನ ಇಂದಿನ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಅಕ್ಟೋಬರ್ 2 ರವರೆಗೆ, ಪ್ರತಿ ಜಿಲ್ಲೆ ಮತ್ತು ಪ್ರತಿ ಹಳ್ಳಿಯ ಜನರು ಈ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಪ್ರತಿಮನೆಯ ನಾಗರಿಕರನ್ನು ಸದೃಢವಾಗಿಡಲು 'ಆರೋಗ್ಯವೇ ಭಾಗ್ಯ' ಮಂತ್ರವನ್ನು ಸದಸ್ಯರು ತಪ್ಪದೇ ಪಾಲಿಸಿ, ದೈಹಿಕ ಚಟುವಟಿಕೆಯ ಮೂಲಕ ಯುವಕರು ಜನಾಂದೋಲನ ಮಾಡಬೇಕೆಂದು ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಹೇಳಿದರು. ಅವರು ಸೆಪ್ಟಂಬರ್ 11ರಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಎನ್.ಸಿ.ಸಿ ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿ ಜಂಟಿಯಾಗಿ ಏರ್ಪಡಿಸಿದ್ದ ಫಿಟ್ ಇಂಡಿಯ ಫ್ರೀಡಂ ಓಟ ಅಭಿಯಾನದಲ್ಲಿ ಭಾಗವಹಿಸಿ,ಪ್ರತಿಜ್ಞಾವಿಧಾನವನ್ನು ಭೋಧಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಫಿಟ್ ಇಂಡಿಯಾ ಫ್ರೀಡಂ ರನ್ 2.0 ನ ಪ್ರಮುಖ ಚಟುವಟಿಕೆಗಳಲ್ಲಿ ಪ್ರತಿಜ್ಞೆ, ರಾಷ್ಟ್ರಗೀತೆ, ಸ್ವಾತಂತ್ರ್ಯದ ಓಟ, ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯುವ ಸ್ವಯಂಸೇವಕರಲ್ಲಿ ಜಾಗೃತಿ ಮತ್ತು ಅವರ ಗ್ರಾಮಗಳಲ್ಲಿ ಇದೇ ರೀತಿಯ ಸ್ವಾತಂತ್ರ್ಯದ ಓಟಗಳನ್ನು ಆಯೋಜಿಸುವುದು. ಭಾರತ ಸೇನೆಯ ಶೌರ್ಯ ಪರಾಕ್ರಮರಾದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ವೀರ ಮರಣ ಹೊಂದಿರುವ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪರಮವೀರಚಕ್ರ ಅವರ ಸ್ಮರಣಾರ್ಥ ಈ ಓಟದ ಅಭಿಯಾನವನ್ನು ಆಯೋಜಿಸಲಾಯಿತು ಎಂದು ಕಂಪನಿ ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ, ಕಾರ್ಯಕ್ರಮದ ಮುಖ್ಯ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.ಬಳಿಕ ಕಾಲೇಜಿನಿಂದ ಹೊರಟ ಈ ಓಟ ಶಿರ್ವ ಕಾಪು ರಸ್ತೆಯ ಸುಮಾರು ಎರಡು ಕಿಲೋಮೀಟರ್ ಸಾಗಿದೆ ಹಾಗೂ 28 ಕ್ಯಾಡೆಟ್ ಗಳು ಭಾಗವಹಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀ ಕೆ.ಪ್ರವೀಣ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ಸಂಯೋಜಿಸಿದರು. ಕಂಪನಿ ಸಾರ್ಜೆಂಟ್ ಚನ್ನಬಸವಯ್ಯ,ಎಲ್ಲಾ ಕೆಡೆಟ್ ಗಳು,ಕಾಲೇಜಿನ ವಿದ್ಯಾರ್ಥಿಗಳು,ಎಲ್ಲಾ ಭೋಧಕ ಹಾಗು ಭೋಧಕೇತರ ವೃಂದದವರು ಉಪಸ್ಥಿತರಿದ್ದರು.ಎನ್.ಸಿ.ಸಿ ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್ ಸ್ವಾಗತಿಸಿ ಕ್ಯಾಡೆಟ್ ಜೂನಿಯರ್ ಅಂಡರ್ ಆಫೀಸರ್ ರಿಯಾನ್ ರಿಷಿ ಆಲ್ಫೋನ್ಸೋ ವಂದಿಸಿದರು.

ಸೆಪ್ಟೆಂಬರ್ 12 : ಇನ್ನಂಜೆ ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದ ಪ್ರಧಾನ

Posted On: 11-09-2021 12:16PM

ಕಾಪು : ಇನ್ನಂಜೆ ಯುವಕ ಮಂಡಲದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಇನ್ನಂಜೆಯ ದಾಸ ಭವನದಲ್ಲಿ ಆದಿತ್ಯವಾರ (ಸೆಪ್ಟೆಂಬರ್ 12) ಬೆಳಿಗ್ಗೆ 10:30ಕ್ಕೆ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ನಿಟ್ಟೆ ಎಜುಕೇಶನ್ ಟ್ರಸ್ಟ್ ನಿವೃತ್ತ ಉಪಪ್ರಾಂಶುಪಾಲರಾದ ಡಾ| ರಮೇಶ್ ಮಿತ್ತಂತ್ತಾಯ, ಇನ್ನಂಜೆ ಎಸ್.ವಿ.ಹೆಚ್, ಪ.ಪೂ. ಕಾಲೇಜು ನಿವೃತ್ತ ಉಪನ್ಯಾಸಕರಾದ ನಂದನ್ ಕುಮಾರ್, ಇನ್ನಂಜೆ ಯುವಕ ಮಂಡಲದ ಗೌರವ ಸಲಹೆಗಾರಾದ ಚಂದ್ರಹಾಸ ಗುರುಸ್ವಾಮಿ, ನವೀನ್ ಅಮೀನ್, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿವರ್ಮ ಶೆಟ್ಟಿ, ಇನ್ನಂಜೆ ಯುವಕ ಮಂಡಲದ ಸಲಹಾ ಸಮಿತಿ ಸದಸ್ಯರಾದ ಶ್ರೀಶ ಭಟ್‌, ಸುರೇಶ್‌ ಎನ್‌. ಪೂಜಾರಿ ಭಾಗವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಗಣೇಶ ಚತುರ್ಥಿ ಆಚರಣೆ

Posted On: 11-09-2021 10:11AM

ಪಡುಬಿದ್ರಿ : ಧರ್ಮ ಮೀರಿ ಸೌಹಾರ್ದದತೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಅಂತಹ ಕಾರ್ಯವನ್ನು ಪಡುಬಿದ್ರಿ ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಮಾನವೀಯತೆ ಹಾಗೂ ಮನುಷ್ಯತ್ವದ ಸೇವೆಯಲ್ಲಿ ಭಗವಂತನನ್ನು ಕಾಣಬಹುದು. ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಮಾಡಿದ‌ ಕಾರ್ಯ ನಿರ್ವಿಘ್ನ ವಾಗಿ ನಡೆಯುವುದು ಎಂದು ರಾಜ ಪುರೋಹಿತರಾದ ನಂದ‌ ಕುಮಾರ್ ರವರು ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಇದರ ವತಿಯಿಂದ ರೋಟರಿ ಕಛೇರಿಯಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪಡುಬಿದ್ರಿ ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ರೋಟರಿ ವಲಯ ಸಂಯೋಜಕ ರಮೀಜ್ ಹುಸೇನ್ ,‌ ರೋಟರಿ ಪೂರ್ವ ಅಧ್ಯಕ್ಷ ರಿಯಾಜ್ ಮುದರಂಗಡಿ, ನಿಯೋಜಿತ ಅಧ್ಯಕ್ಷತೆ ಗೀತಾ ಅರುಣ್, ನಿಯೋಜಿತ ಕಾರ್ಯದರ್ಶಿ ತಸ್ನೀನ್ ಅರ್ಹ ಉಪಾಧ್ಯಕ್ಷ ‌ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿ ಪುಷ್ಪಲತಾ ಆಚಾರ್ಯ ಉಪಸ್ಥಿತರಿದ್ದರು.

ಮಹಮ್ಮದ್ ನಿಯಾಜ್ ಸ್ವಾಗತಿಸಿ, ಸುಧಾಕರ್ ಕೆ. ನಿರೂಪಿಸಿ, ಕಾರ್ಯದರ್ಶಿ ಬಿ. ಯಸ್. ಆಚಾರ್ಯ ವಂದಿಸಿದರು.

ಇನ್ನಂಜೆ : ಕಾಪು, ಶಂಕರಪುರ ಸಂಪರ್ಕ ರಸ್ತೆಯ ಸುಗಮ ಸಂಚಾರಕ್ಕೆ ಪೀನ ದರ್ಪಣ ಅಳವಡಿಕೆ

Posted On: 10-09-2021 07:46PM

ಶ್ರೀ ವಿಷ್ಣು ಫ್ರೆಂಡ್ಸ್ ಮಡುಂಬು ಅಜಿಲಕಾಡು ಇವರ ವತಿಯಿಂದ ಮಡುಂಬು ಜಂಕ್ಷನ್ ನಲ್ಲಿ ಕಾಪು - ಶಂಕರಪುರ - ಬಂಟಕಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ತಿರುವಿನಲ್ಲಿ ಸುಗಮ ಸಂಚಾರಕ್ಕೆ ಪೀನ ದರ್ಪಣ ಅಳವಡಿಕೆ ಮಾಡಿ ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾ. ಪಂ. ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ಸದಸ್ಯರುಗಳಾದ ದಿವೇಶ್ ಶೆಟ್ಟಿ ಕಲ್ಯಾಲು, ನಿತೇಶ್ ಸಾಲ್ಯಾನ್ ಕಲ್ಯಾಲು, ಸವಿತಾ ಸುರೇಶ್ ಶೆಟ್ಟಿ, ಸ್ಥಳೀಯರಾದ ಡಾ. ಗಣೇಶ್ ಶೆಟ್ಟಿ, ವಿಜಯ್.ಜಿ. ಉಂಡಾರು, ನಿರಂಜನ್ ಶೆಟ್ಟಿ ಮಡುಂಬು, ದೀಕ್ಷಾ ತಂತ್ರಿ ಮಡುಂಬು ಹಾಗೂ ಶ್ರೀ ವಿಷ್ಣು ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಶ್ರೀ ವಿಷ್ಣು ಫ್ರೆಂಡ್ಸ್ ನ ಅಧ್ಯಕ್ಷರಾದ ಸುಧಾಕರ್ ಪೂಜಾರಿ ಶಾಂತಿಕೆರೆ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು, ಮನೋಹರ್ ಕಲ್ಲುಗುಡ್ಡೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.

ಅದಮಾರು : ಪ್ರಾಂಶುಪಾಲ ಎ.ಎಸ್. ಭಟ್ ನೆನಪಿನಲ್ಲಿ ಗಿಡ ವಿತರಣೆ

Posted On: 10-09-2021 04:52PM

ಕಾಪು, ಸೆ.10 : ಇಲ್ಲಿಯ ಆದರ್ಶ ಸಂಘಗಳ ಒಕ್ಕೂಟವು ಆದರ್ಶ ಯುವಕ ಸಂಘದ ಸ್ಥಾಪಕ, ನಿವೃತ್ತ ಪ್ರಾಂಶುಪಾಲ ,ಶಿಕ್ಷಣ - ಶಿಷ್ಯ ಪ್ರೀತಿಯ ಕೀರ್ತಿಶೇಷ ಎ.ಎಸ್ .ಭಟ್ ಅವರ 101 ನೇ ಜನ್ಮದಿನಾಚರಣೆಯ ಪ್ರಯುಕ್ತ 101 ಸಂಖ್ಯೆಯ ವಿವಿಧ ಹೂ,ಹಣ್ಣು,ಕಂಗು ,ತೆಂಗು,ಬಾಳೆ ಗಿಡಗಳನ್ನು ವಿತರಿಸಲಾಯಿತು.

ಎ.ಎಸ್.ಭಟ್ ಅವರು ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ,ಪ್ರಾಂಶುಪಾಲರಾಗಿ, ಶಿಕ್ಷಣದೊಂದಿಗೆ , ಶಿಸ್ತಿನ ಮಹತ್ವವನ್ನು ಬೋಧಿಸಿದ ಆದರ್ಶ ಶಿಕ್ಷಕ. ತೋಟಗಾರಿಕಾ ಅಭಿಯಾನವನ್ನು ಅಭೂತಪೂರ್ವವಾಗಿ ಸಾಧಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾ ಗಿಡಗಳನ್ನು ವಿತರಿಸಲಾಯಿತು. ಎರಡು ಸಂಪಿಗೆಯ ಗಿಡಗಳನ್ನು ಹಾಗೂ ಎರಡು ತೆಂಗಿನ ಸಸಿಗಳನ್ನು ಯುವಕ ಸಂಘ ಹಾಗೂ ಸಮುದಾಯ ಭವನದ ವಠಾರದಲ್ಲಿ ನೆಡಲಾಯಿತು.

ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ .ಶೆಟ್ಟಿ‌, ಪೋಷಕ ನಾರಾಯಣ ಕೆ.ಶೆಟ್ಟಿ ನೈಮಾಡಿ , ಸಮುದಾಯ ಭವನದ ಅಧ್ಯಕ್ಷ ಕೆ.ಎಲ್ ಕುಂಡಂತಾಯ, ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸುದರ್ಶನ ವೈ .ಎಸ್. ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ , ಕಾರ್ಯದರ್ಶಿ ಗಣೇಶ ಸಾಲಿಯಾನ್, ಅದರ್ಶ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಲತಾ ಆರ್. ಆಚಾರ್ಯ, ಯುವಕ ಸಂಘ ಹಾಗೂ ಮಹಿಳಾ ಮಂಡಲಗಳ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅದಮಾರಿನ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಪುಸ್ತಕಗಳನ್ನು ನಾರಾಯಣ ಕೆ.ಶೆಟ್ಟಿ ನೈಮಾಡಿ ಅವರ ವತಿಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ದೇವಿಕಾ ಹಾಗೂ ಶಿಕ್ಷಕಿ ಶ್ರೀಮತಿ ಸುಜಾತಾ ಅವರಿಗೆ ಹಸ್ತಾಂತರಿಸಲಾಯಿತು. ಶಾಲೆಯ ಅಧ್ಯಕ್ಷರಾದ ಎ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು‌. ಯುವಕ ಸಂಘದ ಆರನೇ ವರ್ಷದ ಗಣೇಶೋತ್ಸವ ನಡೆಯಿತು .

ಕಾಪುವಿನ ಹೂವಿನ ಅಂಗಡಿಯ ಹಿಂಗಾರದಲ್ಲಿ ಪ್ರಕೃತಿದತ್ತವಾಗಿ ಮೂಡಿದ ಗಣೇಶ

Posted On: 09-09-2021 11:55PM

ಕಾಪು : ಚೌತಿ ಹಬ್ಬಕ್ಕೂ ಸ್ವಲ್ಪ ದಿನ ಮುಂಚಿತವಾಗಿಯೇ ಅನೇಕ ಕಲಾವಿದರು ತಮ್ಮ ಕೈಚಳಕದಿಂದ ಗಣೇಶನ ಮೂರ್ತಿ ತಯಾರಿಸುವುದು ರೂಢಿಯಾಗಿದೆ, ಬೇಳೆ ಕಾಳು, ದವಸ ಧಾನ್ಯಗಳಲ್ಲಿ ಹಾಗೂ ತರಕಾರಿ, ಹಣ್ಣು ಹಂಪಲು ಸೇರಿದಂತೆ ಇತರೇ ಫಲವಸ್ತುಗಳಲ್ಲಿಯೂ ಗಣೇಶನ ಆಕೃತಿಗೆ ರೂಪು ಕೊಡುವ ಕೆಲಸವನ್ನು ಮಾಡುತ್ತಾರೆ. ಆದರೆ ಕಾಪುವಿನ ಶ್ರೀ ಲಕ್ಷ್ಮೀ ಜನಾರ್ದನ ಫ್ಲವರ್ ಸ್ಟಾಲ್ ನಲ್ಲಿ ಹಿಂಗಾರದಲ್ಲಿ ಪ್ರಕೃತಿದತ್ತವಾಗಿಯೇ ಗಣೇಶನ ಮೂರ್ತಿ ಮೂಡಿ ಬಂದಿದೆ.

ಕಾಪುವಿನ ಕಲ್ಯಾಲು ನಿವಾಸಿ ರಾಜ್ ಸಾಲ್ಯಾನ್ ಗಣೇಶ ಹಬ್ಬದ ಪ್ರಯುಕ್ತ ಹೂ ಖರೀದಿಸಲು ಕಾಪುವಿನ ತೃಪ್ತಿ ಹೋಟೆಲ್ ಮುಂಭಾಗದಲ್ಲಿರುವ ಶ್ರೀ ಲಕ್ಷ್ಮೀ ಜನಾರ್ದನ ಪ್ಲವರ್ ಸ್ಟಾಲ್ಗೆ ಬಂದಾಗ ಹಿಂಗಾರದಲ್ಲಿ ಗಣೇಶ ಪ್ರತ್ಯಕ್ಷವಾಗಿದ್ದ.

ಈ ಬಗ್ಗೆ ಮಾತನಾಡಿದ ಫ್ಲವರ್ ಸ್ಟಾಲ್ ಮಾಲಕ ಪ್ರಕಾಶ್ ಗಾಣಿಗ ಇವರು, ಕಳೆದ 35 ವರ್ಷಗಳಿಂದ ಹೂವಿನ ವ್ಯಾಪಾರ ಮಾಡುವ ನನಗೆ ಇದೆ ಮೊದಲ ಬಾರಿಗೆ ಹಿಂಗಾರದಲ್ಲಿ ಗಣೇಶ ಕಾಣಿಸಿಕೊಂಡದ್ದು, ಬಹಳ ಸಂತೋಷವಾಗಿದೆ ಎಂದರು, ಆ ಹಿಂಗಾರವನ್ನು ಯಾರಿಗೂ ಕೊಡದೆ ಸ್ಟಾಲ್ ನಲ್ಲಿಯೇ ಇಟ್ಟುಕೊಂಡಿದ್ದಾರೆ.

ಸುದ್ದಿ ತಿಳಿದಾಗ ಒಂದಷ್ಟು ಜನ ಇಲ್ಲಿಗೆ ಆಗಮಿಸಿ ಹಿಂಗಾರದ ಗಣೇಶನ ದರ್ಶನ ಪಡೆದರು.

ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಒಂದನೇ ಮೂಲ್ಯಣ್ಣ ಅನುವಂಶೀಯ ಅರ್ಚಕರಿಗೆ ಸ್ವರ್ಣ ಬಳೆ ಸಮರ್ಪಣೆ

Posted On: 09-09-2021 05:51PM

ಮಂಗಳೂರು : ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಒಂದನೇ ಮೂಲ್ಯಣ್ಣ ಅನುವಂಶೀಯ ಅರ್ಚಕರಿಗೆ ಸ್ವರ್ಣ ಬಳೆ ಸಮರ್ಪಣೆಯು ಸಂಪ್ರದಾಯದಂತೆ ಪಣೋಲಿಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅನುವಂಶಿಕ ಪ್ರಧಾನ ಅರ್ಚಕರಾಗಿದ್ದ ದಿ. ಗುಡ್ಡ ಮೂಲ್ಯ ಯಾನೆ ಬಾಬು ಮೂಲ್ಯರ ಉತ್ತರಾಧಿಕಾರಿಯಾದ ದೈವಸ್ಥಾನದ ಸಂಪ್ರದಾಯದಂತೆ ಒಂದನೇ ಅರ್ಚಕ ಗುಡ್ಡ ಮೂಲ್ಯ ಯಾನೆ ವಾಸುದೇವ ಮೂಲ್ಯರಿಗೆ, ಶ್ರೀ ಧಾಮ‌ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಎರಡನೆ ಅರ್ಚಕರಾದ ಶ್ರೀ ನಾರಾಯಣ ಮೂಲ್ಯ, ಮೂರನೆ ಅರ್ಚಕ ಮೋನಪ್ಪ ಮೂಲ್ಯ, ಹಾಗೂ ಕುಟುಂಬದ ಹಿರಿಯ ಸದಸ್ಯರಾದ ಪೂವಪ್ಪ ಮೂಲ್ಯ ಕುಂಡಡ್ಕ, ಬೂಬ ಸಾಲ್ಯಾನ್ ಮತ್ತು ಕುಟುಂಬದ ಸದಸ್ಯರು ಹಾಗೂ ಭಂಡಾರದ ಮನೆಯ ನವೀನ್ ಕುಮಾರ್, ಉಮೇಶ್ ಕುಲಾಲ್ ಮಂಚಿ, ಮತ್ತು ಗ್ರಾಮಸ್ಥರು, ಭಕ್ತಾಧಿಗಳ ಸಮ್ಮುಖದಲ್ಲಿ ದೈವ ಕಲ್ಲುರ್ಟಿಯ ಮುಂಭಾಗದಲ್ಲಿ, ಕಟ್ಟು ಕಟ್ಟಳೆಯಂತೆ ದೈವದ ಪ್ರಧಾನ ಅರ್ಚಕರ ಸ್ವರ್ಣ ಬಳೆ ತೊಡಿಸಿ ದೈವ ಚಾಕರಿಗೆ ಜವಾಬ್ದಾರಿ ನೀಡಲಾಯಿತು.

ಕುಟುಂಬದ ಕಟ್ಟು ಪಾಡಿನ ಬಗ್ಗೆ ದೈವಸ್ಥಾನದ ಸಂಬಂಧಪಟ್ಟವರಿಗೆ ಹಾಗೂ ಕಾರ್ಯ ನಿರ್ವಹಣಾ ಅಧಿಕಾರಿಯವರಿಗೆ ಮೌಖಿಕವಾಗಿ ತಿಳಿಸಿ, ಸಂಪ್ರದಾಯದೊಂದಿಗೆ ನಡೆಸಲಾಯಿತು. ಈ ಸಂಧರಮೇಶ್ ಕುಲಾಲ್ ಪಣೋಲಿಬೈಲ್, ರಾಜು ಕುಲಾಲ್, ಲೋಹಿತ್ ಕುಮಾರ್ S, ಪಣೋಲಿಬೈಲ್, ಕುಕ್ಕುಟ ಸಮಿತಿಯ ಅಧ್ಯಕ್ಷ ದಯಾನಂದ ಅಡ್ಯಾರ್, ಯುವ ವೇದಿಕೆ ಪಣೋಲಿಬೈಲಿನ ರಮೇಶ್ ಎಂ, ಭಂಡಾರದ ಮನೆ, ಲಿಂಗಪ್ಪ ಬಂಗೇರ ಕಾರಜೆ, ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಕಾರ್ತಿಕ್ ಬಂಟ್ವಾಳ್, ಪುನೀತ್ ಕಾಮಾಜೆ, ಜಯರಾಮ ಶೆಟ್ಟಿ ನಗ್ರಿಗುತ್ತು, ನಾಗೇಶ್ ಬಂಗೇರ, ಮನೋಜ್ ಕುಮಾರ್, ಬಾಲಕ್ರಷ್ಣ ಕುಲಾಲ್, ಗೋಪಾಲ ಕುಲಾಲ್, ಹಾಗೂ ಹೆಚ್ಚಿನ ಭಕ್ತಾದಿಗಳು ಭಾಗವಹಿಸಿದ್ದರು.

ಯುವ ಜಾದೂಗಾರ ಪ್ರಥಮ್ ಕಾಮತ್ ಕಟಪಾಡಿ ಹಸ್ತದಿ ಮೂಡಿದ ಅರಿಶಿಣ ಗಣಪ

Posted On: 09-09-2021 03:39PM

ಕಾಪು : ಅರಿಶಿಣ ಗಣಪತಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆ ಯಂತೆ 10ಲಕ್ಷ ಅರಿಶಿಣ ಗಣಪತಿ ಅಭಿಯಾನದಲ್ಲಿ ಕಟಪಾಡಿ ಪ್ರಥಮ್ ಕಾಮತ್ ಇವರಿಂದ ಅರಶಿನ ಗಣಪತಿ ರಚಿಸಲ್ಪಟ್ಟಿದೆ.

ಕಟಪಾಡಿಯ ಎಸ್ ವಿ ಎಸ್ ಆಂಗ್ಲ ಮಾದ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪ್ರಥಮ್ ಕಾಮತ್ 250ಗ್ರಾಂ ಅರಿಶಿಣ ಹಾಗೂ 250 ಗ್ರಾಂ ಮೈದಾ ಹಾಗೂ ನೀರು ಬೆರೆಸಿ 6 ಇಂಚಿನ ಪರಿಸರ ಸ್ನೇಹಿ ಗಣೇಶನನ್ನು ರಚಿಸಿದ್ದಾನೆ.

ಇದು ಕರ್ನಾಟಕ ಸರಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯನ್ನು ಪಾಲಿಸಿ ರಚಿಸಲಾಗಿದೆ. ಅಲ್ಲದೇ 10ಲಕ್ಷ ಅರಿಶಿಣ ಗಣಪತಿ ಅಭಿಯಾನದಲ್ಲಿ ಪ್ರಥಮ್ ಕಾಮತ್ ನ ಒಂದು ಕೊಡುಗೆಯಾಗಿದೆ.

ಎಳತ್ತೂರು : ಕಾಲಗರ್ಭದಲ್ಲಿ ಕಳೆದುಹೋಗಿರುವ ದೈವಗಳ ಸೊತ್ತುಗಳು ಪತ್ತೆ!

Posted On: 09-09-2021 03:18PM

ಮೂಲ್ಕಿ : ಮೂಲ್ಕಿ ಒಂಬತ್ತು ಮಾಗಣೆಯ ಎಳತ್ತೂರು ಗ್ರಾಮದಲ್ಲಿ ಕಾಲಗರ್ಭದಲ್ಲಿ ಮರೆಮಾಚಿರುವ ಎಳತ್ತೂರು ಕಾಪೇಡಿ ಗುತ್ತುವಿನ ಕುಟುಂಬವು ಹಲವಾರು ವಿಭಾಗಗಳಾಗಿ, ತದನಂತರ ಒಬ್ಬರಿಗೊಬ್ಬರಿಗೆ ಪರಿಚಯವಾಗಿ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯನ್ನು ಇಡಲಾಗಿತ್ತು.

ಅದರಲ್ಲಿ ಗೋಚರವಾದಂತೆ ಪ್ರಧಾನವಾಗಿ ಉಳ್ಳಾಯ, ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳು ಇರುವುದು ಕಂಡುಬದಿತ್ತು. ಅಲ್ಲದೆ ಕಾಂತೇರಿ ಜುಮಾದಿ ದೈವಕ್ಕೆ ಮೈಲೆಡ್ ಮಾನೆಚ್ಚಿಲ್ ಸೇವೆಯನ್ನು ನೀಡಲಾಗಿತ್ತು. ದೈವದ ನುಡಿ ಬಂದಂತೆ ಪುರಾತನದ ಗುತ್ತಿನ ಮನೆ ಇದ್ದ ಸ್ಥಳದಲ್ಲಿ ದೈವಕ್ಕೆ ಸಂಬಂದಿಸಿದ ಸೊತ್ತುಗಳು ಸಿಗುವುದೆಂದು ನುಡಿಯಾಗಿತ್ತು.ಅಂತೆಯೇ ಹುಡುಕಲು ಪ್ರಾರಂಭಿಸಿದ ದೈವಗಳ ಅವಶೇಷ ಇರುವುದು ಪತ್ತೆಯಾಗಿತ್ತು.

ಎಳತ್ತೂರು ಕಾಪೇಡಿ ಗುತ್ತು ಕಾಂತೇರಿ ಜುಮಾದಿ ದೈವವು ತನ್ನ ಕಾರ್ಣಿಕವನ್ನು ತೋರಿಸಿ ಕುಟುಂಬದವರನ್ನು ಮತ್ತು ಇಡೀ ತುಳುನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದೆ.

ಅಂತೆಯೇ ದೈವದ ಪ್ರೇರಣೆಯಂತೆ, ಕುಟುಂಬಸ್ಥರ ಸಂಕಲ್ಪದಂತೆ ಸೆಪ್ಟೆಂಬರ್ 11 ಕ್ಕೆ ಕಾಪೇಡಿ ಗುತ್ತು ಧರ್ಮ ಚಾವಡಿಯ ನೂತನ ಮನೆಗೆ ಶಿಲಾನ್ಯಾಸ ಮಾಡುವುದಾಗಿ ನಿಶ್ಚಯಿಸಲಾಗಿದೆ.