Updated News From Kaup
ನಾಳೆ - ಆರ್ ಎಸ್ ಬಿ ಕೊಂಕಣಿ ಚಲನಚಿತ್ರ ಅಮ್ಚೆ ಸಂಸಾರ್ ಟ್ರೇಲರ್, ಧ್ವನಿಸುರುಳಿ ಹಾಡುಗಳು, ಪೋಸ್ಟರ್ ಬಿಡುಗಡೆ ಸಮಾರಂಭ

Posted On: 16-09-2021 06:38PM
ಉಡುಪಿ : ಬಹು ನಿರೀಕ್ಷಿತ ಆರ್ ಎಸ್ ಬಿ ಕೊಂಕಣಿ ಚಲನಚಿತ್ರ ಅಮ್ಚೆ ಸಂಸಾರ್ ಟ್ರೇಲರ್, ಧ್ವನಿಸುರುಳಿ ಹಾಡುಗಳು, ಪೋಸ್ಟರ್ ಬಿಡುಗಡೆ ಸಮಾರಂಭವು ನಾಳೆ (ಸೆಪ್ಟೆಂಬರ್ 17) ಶುಕ್ರವಾರ ಸಂಜೆ 6 ಗಂಟೆಗೆ ಆರ್ ಎಸ್ ಬಿ ಸಭಾಭವನ ಮಣಿಪಾಲದಲ್ಲಿ ಜರಗಲಿದೆ.
ಸಾಂಸಾರಿಕತೆಯ ಒಳನೋಟದ, ನಮ್ಮ ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಈ ಚಿತ್ರದ ಉದ್ದೇಶವಾಗಿದೆ.
ಸಂದೀಪ್ ಕಾಮತ್ ನಿರ್ದೇಶನ, ಭುವನೇಶ್ ಪ್ರಭು ಹಿರೇಬೆಟ್ಟು ಛಾಯಾಗ್ರಹಣ, ಪ್ರಜ್ವಲ್ ಸುವರ್ಣ ಛಾಯಾಗ್ರಹಣ/ಸಂಕಲನ, ಕಾರ್ತಿಕ್ ಮುಲ್ಕಿ ಸಂಗೀತವಿದೆ.
ಸೈಬರಕಟ್ಟೆ : ಇಂಜಿನಿಯರ್ಸ್ ಡೇ ಪ್ರಯುಕ್ತ ಹಿರಿಯ ನಿವೃತ್ತ ಇಂಜಿನಿಯರ್ ಕೆ. ವಿಜಯ ಹೆಗ್ಡೆ ಸಣ್ಗಲ್ ರಿಗೆ ಸನ್ಮಾನ

Posted On: 15-09-2021 10:57PM
ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಇಂಜಿನಿಯರ್ಸ್ ಡೇ ಪ್ರಯುಕ್ತ ಹಿರಿಯ ನಿವೃತ್ತ ಇಂಜಿನಿಯರ್ ಕೆ. ವಿಜಯ ಹೆಗ್ಡೆ ಸಣ್ಗಲ್ ಅವರನ್ನು ಆದರಣೀಯ ಗೌರವಗಳೊಂದಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ರೋಟರಿ ಸಂಸ್ಥೆ ಹಾಗೂ ಸೈಬರಕಟ್ಟೆ ರೋಟರಿ ಮಾಡುತ್ತಿರುವ ಸೇವಾ ಯೋಜನೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಲ್ಲದೆ ಮುಂದೆ ಕೂಡ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಿ ಅಂತ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಲಯ 3 ರ ಸೇನಾನಿ ವಿಜಯಕುಮಾರ್ ಶೆಟ್ಟಿ, ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ,ನಿಕಟ ಪೂರ್ವ ಅಧ್ಯಕ್ಷ ಹರೀಶ್ ಕಂದಾವರ ಕಾರ್ಯದರ್ಶಿ ಅಣ್ಣಯ್ಯ ದಾಸ್, ಸಂಕಯ್ಯ ಶೆಟ್ಟಿ, ಗಣೇಶ್ ನಾಯಕ್, ಕಿರಣ್, ರಾಜು, ರಾಮಪ್ರಕಾಶ್ ಉಪಸ್ಥಿತರಿದ್ದರು.
ಗೋ ಕಳ್ಳತನ, ಮತಾಂತರ ವಿರುದ್ಧ ನಡೆಯುವ ಬ್ರಹತ್ ಜನಜಾಗೃತಿ ಸಭೆಗೆ ಉಡುಪಿ ಜಿಲ್ಲಾ ರಾಮ್ ಸೇನಾ ಬೆಂಬಲ : ದೀಪಕ್ ಮೂಡುಬೆಳ್ಳೆ

Posted On: 15-09-2021 07:03PM
ಉಡುಪಿ : ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದ ನೇತೃತ್ವದಲ್ಲಿ ನಡೆಯುವ ಗೋ ಕಳ್ಳತನ ಹಾಗೂ ಮತಾಂತರ ವಿರುದ್ಧ ನಡೆಯುವ ಬ್ರಹತ್ ಜನಜಾಗೃತಿ ಸಭೆಗೆ ರಾಮ್ ಸೇನಾ ಉಡುಪಿ ಜಿಲ್ಲಾ ವತಿಯಿಂದ ಸಂಪೂರ್ಣ ಬೆಂಬಲ ಇದ್ದು ಇದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದ್ದು ಈ ಜನಜಾಗೃತಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ರಾಮ್ ಸೇನಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀಪಕ್ ಮೂಡುಬೆಳ್ಳೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಾರಾಯಣಗುರುಗಳ ಭಾವಚಿತ್ರದೊಂದಿಗೆ ಅಸಂವಿಧಾನಾತ್ಮಕ ಪದ ಬಳಸಿದ ವ್ಯಕ್ತಿಯ ವಿರುದ್ಧ ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿಗೆ ದೂರು

Posted On: 15-09-2021 01:17PM
ಉಡುಪಿ : ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವ ಚಿತ್ರದೊಂದಿಗೆ ಪತ್ರಿಕೆಯೊಂದರ ಸಂಪಾದಕ ಅಸಂವಿಧಾನಾತ್ಮಕ ಪದ ಬಳಸಿ ಫೇಸ್‍ಬುಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಂಖ್ಯಾತ ಬಿಲ್ಲವ ಸಮಾಜದ ಗುರುಗಳ ಅನುಯಾಯಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರರಾದ ಪ್ರಮೋದ್ ಉಚ್ಚಿಲ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮ್ಮದ್ ಉಡುಪಿ ಜಿಲ್ಲಾಧಿಕಾರಿಗಳಿಗೆ ಮತ್ತು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ದೇವರ ಮಕ್ಕಳು ದೇವರ ಸೃಷ್ಠಿಯಲ್ಲಿ ಮೇಲು-ಕೀಲುಗಳೆಂಬುದಿಲ್ಲ, ಸರ್ವ ಜನಾಂಗಕ್ಕೂ ದೇವರನ್ನು ಪೂಜಿಸುವ ಹಕ್ಕಿದೆ. "ಎಲ್ಲರಿಗೂ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು. ಜಾತಿಯನ್ನು ಕೇಳಬೇಡ, ಹೇಳಬೇಡ, ಮನಸ್ಸಿನಲ್ಲೂ ಯೋಚಿಸಬೇಡ" ಎಂದು ಸಾರಿ ಅದ್ವೈತಾಶ್ರಮ ಎಂಬ ಹೆಸರಿನ ಸಂಸ್ಕೃತ ಶಾಲೆಯನ್ನು ಆರಂಭಿಸಿ ಅಲ್ಲಿನ ತುಳಿತಕ್ಕೊಳಗಾಗಿದ್ದ ಪರಿಶಿಷ್ಟ ಜಾತಿ-ಪಂಗಡದ ಹುಡುಗರಿಗೂ ಆಧ್ಯಾತ್ಮಿಕೋನ್ನತಿ ಕೊಟ್ಟು ಸಮಾನತೆಯನ್ನು ಉಸಿರಾಗಿಸಿ, "ವಿದ್ಯೆಯನ್ನು ಪಡೆದು ಜ್ಞಾನ ಸಂಪಾದಿಸಿ ಸ್ವತಂತ್ರರಾಗಿರಿ, ಸಂಘಟಿತರಾಗಿ ಶಕ್ತಿಯನ್ನು ಪಡೆದು ಉನ್ನತಿಯೆಡೆಗೆ ಸಾಗಿರಿ" ಎಂಬ ದಿವ್ಯ ಸಂದೇಶದ ಮೂಲಕ ಗುರುಗಳು ಅಸ್ಪೃಶ್ಯ ಸಮಾಜದ ಶಾಪ ವಿಮೋಚನೆ ಮಾಡಿದವರು.
ಅವಹೇಳನಗೈದವ ಸಮುದಾಯದ ಗುರುಗಳಿಗೆ ಅವಹೇಳನ ಮಾಡಿ ಬಿಲ್ಲವ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ನೆಲೆಯಲ್ಲಿ ಸೆಕ್ಷನ್ 153 (ಎ) ಮತ್ತು ಸೆಕ್ಷನ್ 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕಟನೆ - ವ್ಯಕ್ತಿ ಕಾಣೆಯಾಗಿದ್ದಾರೆ

Posted On: 14-09-2021 09:48AM
ಕಾಪು : ನಿಟ್ಟೆ ಗ್ರಾಮದ 65 ವರ್ಷ ಪ್ರಾಯದ ಶಾಮ ಕೋಟ್ಯಾನ್ ಕಾಣೆಯಾಗಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಹೊರಟಿದ್ದು, ಕ್ರೀಮ್ ಕಲರ್ ಶರ್ಟ್, ಕಪ್ಪು ಲುಂಗಿ, ಮುಖ ಬಣ್ಣ ಕಪ್ಪು, ಹಣೆಯಲ್ಲಿ ಚುಕ್ಕೆಯಿದ್ದು, ಇವರು ತುಳು, ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದಾರೆ.
ಕಂಡವರು ಕೂಡಲೇ ಸಂಪರ್ಕಿಸಿ : Mo number : 9768219432 Sunil Poojary: 7977228500
ವಿಳಾಸ : ಅಖಿಲ ನಿವಾಸ ಮಜಲು ಮನೆ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು
ವಿವಿಧ ಬೇಡಿಕೆಗಳ ಈಡೇರಿಕೆಗೆ ಸ್ವಿಗ್ಗಿ ಆಹಾರ ಪೂರೈಕೆ ನೌಕರರ ಪ್ರತಿಭಟನೆ

Posted On: 13-09-2021 05:54PM
ಉಡುಪಿ : ಆಹಾರ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಇಂದ್ರಾಳಿಯ ಸ್ವಿಗ್ಗಿ ಸಂಸ್ಥೆಯ ಬಳಿ ಪ್ರತಿಭಟಿಸಿದರು.
ತಮ್ಮ ಬೇಡಿಕೆಗಳಾದ ದೈನಂದಿನ ಪ್ರೋತ್ಸಾಹಧನ ಹೆಚ್ಚಳ, ಸಾಪ್ತಾಹಿಕ ಪ್ರೋತ್ಸಾಹಧನ ಹೆಚ್ಚಳ, ನಕಲಿ ಜಿಪಿಎಸ್ ಸ್ಥಳವನ್ನು ಸರಿಪಡಿಸಿ, ಗ್ರಾಹಕರ ರೇಟಿಂಗ್‌ಗಳ ಆಧಾರದ ಮೇಲೆ ನೀಡುವ ಪ್ರೋತ್ಸಾಹವನ್ನು ತೆಗೆದುಹಾಕಿ, ದೈನಂದಿನ ಪ್ರೋತ್ಸಾಹಕ್ಕಾಗಿ ಗುರಿಯನ್ನು ಸಾಧಿಸಲು ಯಾವುದೇ ಸಮಯದ ಮಿತಿಯಿಲ್ಲ, ಫ್ಲೋಟಿಂಗ್ ನಗದು ಮಿತಿ ಹೆಚ್ಚಳ ಇತ್ಯಾದಿ 13 ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.
ಎರ್ಮಾಳು : ಸಾಮೂಹಿಕ ಹೂವಿನ ಪೂಜೆ

Posted On: 13-09-2021 04:30PM
ಪಡುಬಿದ್ರಿ : ಸಂದು ದಾಂತಿ ಗರೋಡಿ ಎಂದು ಐತಿಹ್ಯವುಳ್ಳ ಎರ್ಮಾಳು ತೆಂಕ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಸಾಮೂಹಿಕ ಹೂವಿನ ಪೂಜೆಯು ಇಂದು ನೆರವೇರಿತು.
ಇನ್ನಂಜೆ : ಯುವಕ ಮಂಡಲದ 2021 -22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

Posted On: 13-09-2021 04:22PM
ಕಾಪು : ಕಾಪು ತಾಲೂಕಿನ ಇನ್ನಂಜೆ ಯುವಕ ಮಂಡಲದ 2021 -22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಇನ್ನಂಜೆ ಶಾಲಾ ದಾಸ ಭವನದಲ್ಲಿ ಜರಗಿತು.

ಪದಪ್ರಧಾನ ಸಮಾರಂಭವನ್ನು ಡಾ. ರಮೇಶ್ ಮಿತ್ತಂತಾಯ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ, S V H ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ನಂದನ್ ಕುಮಾರ್, ಇನ್ನಂಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಮಲ್ಲಿಕ ಆಚಾರ್ಯ, ಇನ್ನಂಜೆ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷರಾದ ರವಿವರ್ಮ ಶೆಟ್ಟಿ ಇನ್ನಂಜೆ, ಯುವಕ ಮಂಡಲದ ಸಲಹಾ ಸಮಿತಿಯ ಸದಸ್ಯರಾದ ಶ್ರೀಶ ಭಟ್ ಮೊದಲಾದವರು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಉಮೇಶ್ ಆಚಾರ್ಯರಿಗೆ ನಿರ್ಗಮನ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಇವರು ಅಧಿಕಾರ ಹಸ್ತಾಂತರ ಮಾಡಿದರು. ಎಲ್ಲ ನೂತನ ಪದಾಧಿಕಾರಿಗಳಿಗೆ ಸಭೆಯಲ್ಲಿ ಯು. ನಂದನ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಸಂಘದ ಕಾರ್ಯದರ್ಶಿ ತರುಣ್ ಕುಮಾರ್ ಇವರು 2020-21 ನೇ ಸಾಲಿನ ವರದಿಯನ್ನು ಮಂಡಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಮಧುಸೂದನ ಆಚಾರ್ಯ ಇವರು ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಹರೀಶ್ ಪೂಜಾರಿ ವಂದಿಸಿದರು.
ಶಿರಿಯಾರ : ರೋಟರಿ ಕ್ಲಬ್ ವತಿಯಿಂದ ಸೋಲಾರ್ ಲೈಟ್ ಸೆಟ್ ಕೊಡುಗೆ

Posted On: 13-09-2021 10:33AM
ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆ (RI ಜಿಲ್ಲೆ 3182) ಮತ್ತು ರೋಟರಿ ಕ್ಲಬ್ ಸ್ಮಾರ್ಟ್ ಹೈದರ್ಬಾದ್ (RI Dist 3150) ಜಂಟಿ ಕ್ಲಬ್ ಅಂತರ ಜಿಲ್ಲಾ ಕಾರ್ಯಕ್ರಮದ ಅಡಿಯಲ್ಲಿ ರೋಟರಿ ಯೋಜನೆ "ರೋಶ್ನಿ" 3 ಬಲ್ಬ್ ನ ಸೋಲಾರ್ ಲೈಟ್ ಸೆಟ್ ನ್ನು ಪಡುಮುಂಡ್ ಶಿರಿಯಾರ ಗ್ರಾಮದಲ್ಲಿ ವೇದಾವತಿ ಎನ್ನುವ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬ್ರಾನ್ ಡಿ ಸೋಜಾ, ವಿಜಯಕುಮಾರ್ ಶೆಟ್ಟಿ, ಸೈಬರಕಟ್ಟೆ ಅಧ್ಯಕ್ಷ ಯು. ಪ್ರಸಾದ್ ಭಟ್, ಕಾರ್ಯದರ್ಶಿ ಅಣ್ಣಯ್ಯದಾಸ್, ಶಿರಿಯಾರ್ ಪಂಚಾಯತ್ PDO ಸತೀಶ್ ಮತ್ತು ಸೈಬರಕಟ್ಟೆ ಸದಸ್ಯರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.
ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಹೌರಾಲ್ ಶ್ರೀ ಮಹಾಲಿಂಗೇಶ್ವರ ದೇವಳದ ಬೀದಿಗೆ ಸೌರವಿದ್ಯುತ್ ದಾರಿ ದೀಪ ಅಳವಡಿಕೆ

Posted On: 12-09-2021 08:13PM
ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಹೌರಾಲ್ ಶ್ರೀ ಮಹಾಲಿಂಗೇಶ್ವರ ದೇವಳದ ಬೀದಿ ಯಲ್ಲಿ ರಾತ್ರಿ ಭಕ್ತರಿಗೆ ಬೆಳಕಿನ ಅನುಕೂಲತೆ ಮನಗಂಡು ಸೌರವಿದ್ಯುತ್ ದಾರಿ ದೀಪ ಅಳವಡಿಸಲಾಯಿತು.
ಅದರ ಉದ್ಘಾಟನೆಯನ್ನು ವಲಯ 3 ರ ಸಹಾಯಕ ಗವರ್ನರ್ ಕೆ. ಪದ್ಮನಾಭ್ ಕಾಂಚನ್ ನೆರವೇರಿಸಿದರು. ಈ ಸಂದರ್ಭ ರೋಟರಿ ಅಧ್ಯಕ್ಷ ಯು. ಪ್ರಸಾದ್ ಭಟ್, ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯ ದಾಸ್, ದೇವಸ್ಥಾನದ ಮೊಕ್ತೇಸರ ಉದಯಕುಮಾರ್ ಶೆಟ್ಟಿ, ಆಡಳಿತ ಸದಸ್ಯರು, ಸಾರ್ವಜನಿಕರು ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಸದಸ್ಯ ನೀಲಕಂಠ ರಾವ್ ಮನೆಯಲ್ಲಿ ಹೊರಾಂಗಣ ವಾರದ ಸಭೆ ಕೂಡ ಉಪಹಾರದ ಫೆಲೋಶಿಪ್ ನೊಂದಿಗೆ ನಡೆಸಲಾಯಿತು.